'ಜವಾನ್' ಖ್ಯಾತಿಯ ನಟಿ ಗಿರಿಜಾ ಓಕ್, ಪಾಡ್‌ಕಾಸ್ಟ್‌ವೊಂದರಲ್ಲಿ ಕಾಣಿಸಿಕೊಂಡ ಬಳಿಕ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದಾರೆ. ಇದೇ ಸಂದರ್ಶನದಲ್ಲಿ, ಅವರು ತಮ್ಮ ಬಾಲ್ಯದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ಅಪರಿಚಿತನೊಬ್ಬ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿ ಪರಾರಿಯಾದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ನ.18): ತಾರೇ ಜಮೀನ್ ಪರ್, ಶೋರ್ ಇನ್ ದ ಸಿಟಿ ಹಾಗೂ ಜವಾನ್ ಸಿನಿಮಾಗಳ ಮೂಲಕ ಸಿನಿಮಾ ರಂಗಕ್ಕೆ ಪರಿಚಯವಿರುವ ಮರಾಠಿ ನಟಿ ಗಿರಿಜಾ ಓಕ್, ಇತ್ತೀಚೆಗೆ ಮತ್ತು ಸುದ್ದಿಯಲ್ಲಿದ್ದರು. ಇತ್ತೀಚೆಗೆ ಅವರು ಮತ್ತೊಮ್ಮೆ ವ್ಯಾಪಕವಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಸಿನಿಮಾವಲ್ಲ. ಪಾಡ್‌ಕಾಸ್ಟ್‌ವೊಂದರಲ್ಲಿ ಅವರ ಲುಕ್. ನೀಲಿ ಸೀರೆಯಲ್ಲಿ ಸಿಂಪಲ್ ಆಗಿ ಸುಂದರವಾಗಿ ಕಂಡಿದ್ದ ಗಿರಿಜಾ ಓಕ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ನ್ಯಾಷನಲ್ ಕ್ರಶ್ ಆಗಿ ಬಿಟ್ಟಿದ್ದರು.
ಅವರ ಸರಳತೆ, ಸೊಬಗು ಮತ್ತು ನೈಸರ್ಗಿಕ ಮೋಡಿಗೆ ಬೆರಗಾದ ಅಭಿಮಾನಿಗಳು ಅವರನ್ನು ಹೊಸ 'ನ್ಯಾಷನಲ್ ಕ್ರಶ್' ಎಂದು ಕರೆಯುತ್ತಿದ್ದಾರೆ. ಈ ಗಮನ ಸೆಳೆಯುವ ಮಧ್ಯೆ, ಗಿರಿಜಾ ತಮ್ಮ ಬಾಲ್ಯದ ದಿನಗಳಲ್ಲಿ ಆದ ಕೆಟ್ಟ ಘಟನೆಯ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
ನನ್ನ ಪೃಷ್ಠ ಮುಟ್ಟಿ ಪರಾರಿಯಾಗಿದ್ದ
ಲಲ್ಲನ್‌ಟೋಪ್‌ನಲ್ಲಿನ ಸಂದರ್ಶನದಲ್ಲಿ ಮಾತನಾಡಿದ ಗಿರಿಜಾ ಓಕ್, ಕೆಲ ವರ್ಷಗಳ ಹಿಂದೆ ತಮ್ಮ ಜೀವನದಲ್ಲಿ ಆದ ಅಹಿತಕರ ಘಟನೆಯ ಬಗ್ಗೆ ಮಾತನಾಡಿದ್ದಾರೆ. ರೈಲಿನಲ್ಲಿ ನಡೆದ ಅಂಥ ಒಂದು ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.
ಮುಂಬೈನ ಲೋಕಲ್ ಟ್ರೇಲ್‌ನಲ್ಲಿ ಮೈಮುಟ್ಟಿಕೊಂಡು ನಡೆದುಕೊಂಡು ಹೋಗುವುದು ಸಾಮಾನ್ಯ. ಸುಮ್ಮಸುಮ್ಮನೆ ಮೈಮೇಳೆ ಬೀಳುವುದು. ದುರಗುಟ್ಟಿಕೊಂಡು ನೋಡುವುದು ಬಹಳ ಸಾಮಾನ್ಯವಾಗಿರುವುದು ಬೇಸರದ ವಿಚಾರ. ಆದರೆ, ಇವುಗಳ ಬಗ್ಗೆ ನಾವು ಅಲರ್ಟ್ ಆಗಿರಬೇಕು ಎಂದಿದ್ದಾರೆ. ಇದೇ ವೇಳೆ ಅವರು ಒಬ್ಬ ವ್ಯಕ್ತಿ ರೈಲಿನಲ್ಲಿ ತಮ್ಮನ್ನು ಅಹಿತಕರವಾಗಿ ಮುಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ.
ರೈಲಿನಲ್ಲಿ ಒಮ್ಮೆ ನಾನು ಪ್ರಯಾಣ ಮಾಡುವ ವೇಳೆ ಒಬ್ಬ ಹುಡುಗ ನನ್ನ ಹಿಂದೆ ಬಂದು ನಿಂತಿದ್ದ. ಆತ ಎಲ್ಲಿಂದ ಬಂದ ಅನ್ನೋದು ಗೊತ್ತಿರಲಿಲ್ಲ. ಆ ರಶ್‌ನಲ್ಲಿ ನನಗೆ ಏನೂ ಕೂಡ ಗೊತ್ತಾಗುತ್ತಿರಲಿಲ್ಲ. ಈ ಹಂತದಲ್ಲಿ ಆತ ನನ್ನನ್ನು ಒಂದು ಕಡೆಯಿಂದ ಮುಟ್ಟಲು ಆರಂಭಿಸಿದ್ದ ಎಂದಿದ್ದಾರೆ.
ಅಂದಿನ ಘಟನೆಯ ಬಗ್ಗೆ ಮತ್ತಷ್ಟು ವಿವರಣೆ ನೀಡಿದ ಗಿರಿಜಾ, 'ನನ್ನ ಕುತ್ತಿಗೆಯಿಂದ ಹಿಡಿದು ಬೆನ್ನಿನವರೆಗೂ ಆತ ಕೈಯ್ಯಾಡಿಸಿ ಕೊನೆಗೆ ನನ್ನ ಪೃಷ್ಠ ಮುಟ್ಟಿ ನೋಡುನೋಡುತ್ತದ್ದಂತೆ ಪರಾರಿಯಾಗಿದ್ದ ಎಂದು ಹೇಳಿದ್ದಾರೆ.
ಏನಾಯಿತು ಅನ್ನೋದಕ್ಕೆ ನಾನು ಪ್ರತಿಕ್ರಿಯೆ ನೀಡಬೇಕು ಎನ್ನುವ ಹಂತದಲ್ಲಿ ಆ ಹುಡುಗ ನಾಪತ್ತೆಯಾಗಿದ್ದ. ಆತನನ್ನು ರಶ್‌ನಲ್ಲಿ ಹುಡುಕುವುದು ಕೂಡ ಸಾಧ್ಯವಾಗಿರಲಿಲ್ಲ. ಆತ ಯಾರು ಅನ್ನೋದು ಕೂಡ ಇವತ್ತಿಗೂ ಗೊತ್ತಾಗಿಲ್ಲ ಎಂದಿದ್ದಾರೆ.


