Bigg Boss Kannada Season 12 Update: ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚ ಸುದೀಪ್‌ ಅವರು ಜಾಹ್ನವಿ, ಅಶ್ವಿನಿ ಗೌಡಗೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಮತ್ತೆ ಅದೇ ತಪ್ಪು ಮಾಡಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ದೊಡ್ಡ ಶಿಕ್ಷೆ ಕೊಟ್ಟಿದ್ದಾರೆ. ಹಾಗಾದರೆ ಏನದು? 

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ, ಜಾಹ್ನವಿ ಸೇರಿಕೊಂಡು ಈಗಾಗಲೇ ಸಾಕಷ್ಟು ತಪ್ಪುಗಳನ್ನು ಮಾಡಿದ್ದರು. ಕಿಚ್ಚ ಸುದೀಪ್‌ ಅವರಿಂದ ಕಿವಿ ಹಿಂಡಿಸಿಕೊಂಡಿದ್ದರು. ಈಗ ಮತ್ತೆ ಅವರು ತಪ್ಪು ಮಾಡಿ, ದೊಡ್ಡ ಶಿಕ್ಷೆಗೆ ಗುರಿಯಾಗಿದ್ದಾರೆ.

ಎರಡು ವಾರದ ಹಿಂದೆ ಮಾಡಿದ್ದ ತಪ್ಪು ಏನು?

ಜಾಹ್ನವಿ, ಅಶ್ವಿನಿ ಗೌಡ ಅವರು ಒಮ್ಮೆ ಸ್ನೇಹಿತರಾಗಿದ್ದರು, ಆಮೇಲೆ ಜಗಳ ಆಡಿಕೊಂಡಿದ್ದರು. ಹೀಗೊಂದು ಡ್ರಾಮಾ ಮಾಡೋಣ ಎಂದು ಚೇಂಜಿಂಗ್‌ ರೂಮ್‌ನಲ್ಲಿ ಮಾತನಾಡಿಕೊಂಡಿದ್ದರು. ಇದನ್ನು ಕಿಚ್ಚ ಸುದೀಪ್‌ ಅವರು ವೀಕೆಂಡ್‌ ಎಪಿಸೋಡ್‌ನಲ್ಲಿ ಚರ್ಚೆ ಮಾಡಿದ್ದರು. ಈಗ ಈ ವಿಚಾರವಾಗಿ ಕಿಚ್ಚ ಸುದೀಪ್‌ ಟಾಂಟ್‌ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್‌ ಎಚ್ಚರಿಕೆ ಕೊಟ್ಟಿದ್ದರು

“ಚೇಂಜಿಂಗ್‌ ರೂಮ್‌ ಎನ್ನೋದು ಹೆಣ್ಣು ಮಕ್ಕಳ ಪ್ರೈವೇಟ್‌ ಜಾಗ. ಗಂಡು ಮಕ್ಕಳು ಎಲ್ಲಾದರೂ ಬಟ್ಟೆ ಹಾಕಿಕೊಳ್ತಾರೆ. ಹೆಣ್ಣು ಮಕ್ಕಳಿಗೆ ಸಹಾಯ ಆಗಲಿ ಅಂತ ಅಲ್ಲಿ ಬೇರೆಯವರು ಕೂಡ ಹೋಗಿ ಸಹಾಯ ಮಾಡಬಹುದು ಎಂದು ಆಪ್ಶನ್‌ ಕೂಡ ನೀಡಿದ್ದೇವೆ. ಅಲ್ಲಿ ನೀವು ಪಿಸುದನಿಯಲ್ಲಿ ಮಾತನಾಡೋದು ತಪ್ಪು” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಖಂಡಿಸಿದ ಧನುಷ್‌ ಗೌಡ, ಸ್ಪಂದನಾ ಸೋಮಣ್ಣ

ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್‌ ಆಗಿದ್ದಾರೆ. ಆಮೇಲೆ ಚೇಂಜಿಂಗ್‌ ರೂಮ್‌ನಲ್ಲಿ ಅಶ್ವಿನಿ, ಜಾಹ್ನವಿ ಅವರು ಪಿಸುದನಿಯಲ್ಲಿ ಮಾತನಾಡಿರೋದನ್ನು ಸ್ಪಂದನಾ ಸೋಮಣ್ಣ, ಧನುಷ್‌ ಗೌಡ ಖಂಡಿಸಿದ್ದರು. ಕ್ಯಾಪ್ಟನ್‌ ರಘು ಕೂಡ ಇವರಿಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದರು. ಆಗಲೂ ನಾವು ಮಾತನಾಡಿಲ್ಲ ಎಂದು ಈ ಜೋಡಿ ಸುಳ್ಳು ಹೇಳಿತ್ತು. ರಘು ಅವರು ಎರಡು ಬಾರಿ ಎಚ್ಚರಿಕೆ ಕೊಟ್ಟರೂ ಕೂಡ ಜಾಹ್ನವಿ, ಅಶ್ವಿನಿ ನಗುತ್ತಲೇ ಇದ್ದರು.

ಉದ್ಧಟತನ ತೋರಿದ ಬಿಗ್‌ ಬಾಸ್

ಇವರು ಪಿಸುದನಿಯಲ್ಲಿ ಮಾತನಾಡಿರೋ ವಿಡಿಯೋವನ್ನು ಬಿಗ್‌ ಬಾಸ್‌ ಪ್ರಸಾರ ಮಾಡಿದ್ದರು. ಇದನ್ನು ನೋಡಿಯೂ ಕೂಡ ಇವರು ನಕ್ಕಿತ್ತು. ಬಿಗ್‌ ಬಾಸ್‌ ಶೋನ ಮೂಲ ನಿಯಮದ ಉಲ್ಲಂಘನೆ ಮಾಡಿದ್ದಲ್ಲದೆ, ಉದ್ಧಟತನ ತೋರಿದ್ದಕ್ಕೆ ಬಿಗ್‌ ಬಾಸ್‌ ಇವರಿಬ್ಬರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಮಿನೇಟೆಡ್‌ ಎಂದು ಪಟ್ಟಿಯನ್ನು ಕೊಟ್ಟು, ಪರಸ್ಪರ ಹಣೆಗೆ ಅಂಟಿಸಿಕೊಳ್ಳಿ ಎಂದು ಹೇಳಲಾಗಿತ್ತು.

ಬೈಯ್ಯುವಾಗಲೂ ನಕ್ಕ ಅಶ್ವಿನಿ, ಜಾಹ್ನವಿ

ಜಾಹ್ನವಿ, ಅಶ್ವಿನಿ ಗೌಡ ಅವರಿಗೆ ನಾಮಿನೇಶನ್‌ ಭಯ ಇಲ್ಲ, ಜಗಳ ಮಾಡ್ತೀನಿ, ಉಳಿದುಕೊಳ್ತೀನಿ ಎಂಬ ನಂಬಿಕೆ ಇದೆ, ಕಿಚ್ಚ ಸುದೀಪ್‌ ಅವರು ಎಚ್ಚರಿಕೆ ಕೊಟ್ಟಿದ್ದರು ಎಂದು ಬಿಗ್‌ ಬಾಸ್‌ ಹೇಳುವಾಗ ಹೇಗೆ ನಗು ಬರುತ್ತದೆ? ಎಂದು ಸ್ಪಂದನಾ ಹೇಳಿದ್ದಾರೆ. “ಬೇಕು ಅಂತಲೇ ಮಾಡಿರೋದು, ಆದರೂ ನಗುತ್ತಾರೆ. ಮುಂದೆ ಈ ರೀತಿ ಮಾಡಿದರೆ ದೊಡ್ಡ ಶಿಕ್ಷೆ ಕೊಡಬೇಕು” ಎಂದು ಗಿಲ್ಲಿ ನಟ ಹೇಳಿದ್ದಾರೆ. ಅಶ್ವಿನಿ ಗೌಡ ಅವರು ಎಲ್ಲರ ಬಳಿ ಹೋಗಿ ಬಸ್ಕಿ ಹೊಡೆದು ಕೂಡ ಕ್ಷಮೆ ಕೇಳಬೇಕಿತ್ತು.