- Home
- Entertainment
- TV Talk
- ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?
ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ವೊಂದರ ವೇಳೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿ ನಟನ ಮಾತುಗಳಿಂದ ನೊಂದ ಅಶ್ವಿನಿ, ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಗಳದಿಂದಲೇ ಫೇಮಸ್
ಬಿಗ್ಬಾಸ್ (Bigg Boss) ಮನೆಯಲ್ಲಿ ಸದ್ಯ ಅಶ್ವಿನಿ ಗೌಡ ಅವರು ಜಗಳದಿಂದಲೇ ಫೇಮಸ್ ಆದವರು. ಇದೇ ಕಾರಣಕ್ಕೆ ಇವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಟ್ರೋಲ್ ಆಗುತ್ತಿದೆ ಎನ್ನಿ. ಆದರೂ ಅದನ್ನು ವೀಕ್ಷಕರು ಎಂಜಾಯ್ ಮಾಡುವ ಕಾರಣದಿಂದಲೋ, ಇನ್ನೇನೋ ಕಾರಣದಿಂದಲೋ ಸದ್ಯ ಅಶ್ವಿನಿ ಅವರಂತೂ ಇನ್ನಷ್ಟು ವಾರ ಮನೆಯ ಒಳಗೆ ಇರುವುದು ಕನ್ಫರ್ಮ್.
ಅಶ್ವಿನಿ- ಗಿಲ್ಲಿ ಜಟಾಪಟಿ
ಆದರೆ ಇದರ ನಡುವೆಯೇ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಭಾರಿ ಕೋಲಾಹಲವೇ ಸೃಷ್ಟಿಯಾಗಿ ಹೋಗಿದೆ. ಮೊದಲಿನಿಂದಲೂ ಇವರಿಬ್ಬರೂ ಹಾವು ಮುಂಗುಸಿ ರೀತಿಯೇ ನಡೆದುಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಇವರಿಬ್ಬರ ನಡುವಿನ ಸ್ಥಿತಿ ಒಂದು ಹಂತ ಮೀರಿದೆ.
ಭಾರಿ ಗಲಾಟೆ
ಮತ್ತೊಮ್ಮೆ ಅಶ್ವಿನಿ ಗೌಡ (Bigg Boss Ashwini Gowda) ಮತ್ತು ಗಿಲ್ಲಿ ನಟನ ನಡುವೆ ಭಾರಿ ಗಲಾಟೆ ನಡೆದಿದೆ. ಅಶ್ವಿನಿ ಅವರು ಮಾತನಾಡುವ ಪ್ರತಿ ಮಾತಿಗೆ ಗಿಲ್ಲಿ ನಟ ಟಾಂಗ್ ಕೊಡುತ್ತಲೇ ಇದ್ದಾರೆ. ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ ಅಶ್ವಿನಿ ಗಳಗಳನೆ ಕಣ್ಣೀರು ಇಟ್ಟಿದ್ದಾರೆ.
ಟಾಸ್ಕ್ನಿಂದ ಜಗಳ
ಅಷ್ಟಕ್ಕೂ ಆಗಿದ್ದೇನೆಂದರೆ, ಟಾಸ್ಕ್ ಒಂದು ನಡೆದಿದೆ. ಅದರಲ್ಲಿ ಇವರಿಬ್ಬರೂ ಉಸ್ತುವಾರಿಯಾಗಿದ್ದಾರೆ. ಟಾಸ್ಕ್ ನಡುವೆಯೇ ಜಗಳ ಶುರುವಾಗಿದೆ. ʻನಿನ್ ಯೋಗ್ಯತೆಗಿಷ್ಟುʼ ಎಂದು ಅಶ್ವಿನಿ ಗೌಡ ಬೈದಿದ್ದಾರೆ. ಆಗ ಗಿಲ್ಲಿ ನಟನೂ ತಿರುಗೇಟು ನೀಡಿದ್ದಾರೆ.
ತೇಜೋವಧೆ ಮಾಡುವುದು ಎಷ್ಟು ಸರಿ
“ಇವನು ಯಾರು ಮಾತನಾಡೋಕೆ. ಒಬ್ಬ ಕಾಮಿಡಿಯನ್ ಅಂದ್ರೆ ನೀನು ಏನು ಮಾಡಿದ್ರು ಓಕೆ ನಾ? ಒಬ್ಬರನ್ನ ತೇಜೋವಧೆ ಮಾಡುವುದು ಎಷ್ಟು ಸರಿ? ನಮ್ಮನ್ನ ಒಬ್ಬರು ಅಷ್ಟು ಅಗೌರವ ತೋರಿಸ್ತಿದ್ದಾರೆ ಎಂದೆಲ್ಲಾ ಅಶ್ವಿನಿ ಗೌಡ ಹೇಳಿದ್ದಾರೆ. ಇಂಥ ಜಾಗದಲ್ಲಿ ಒಂದು ಸೆಕೆಂಡ್ ಕೂಡ ಇರಬೇಕು ಅಂತ ಅನಿಸಲ್ಲ. ನಾವು ಬದುಕ್ತಾ ಇರೋದೆ ಮರ್ಯಾದೆಗೋಸ್ಕರ ಎಂದು ಅಶ್ವಿನಿ ಗೌಡ ಅವರು ಜೋರಾಗಿ ಅತ್ತಿದ್ದಾರೆ.
ಭಾರಿ ಚರ್ಚೆ
ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಅಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದಾದರೆ ಬೇಗ ಮನೆಯಿಂದ ಹೊರಗೆ ಬಾ ಎನ್ನುತ್ತಿದ್ದಾರೆ. ಎಷ್ಟೆಂದರೂ ಬಹುತೇಕ ಮಂದಿ ಅವರ ವಿರುದ್ಧವಾಗಿಯೇ ಇದ್ದು, ಗಿಲ್ಲಿ ನಟನ ಪರವಾಗಿ ಇರುವ ಕಾರಣ, ಅಶ್ವಿನಿ ಅವರನ್ನು ಬಿಗ್ಬಾಸ್ ಹೊರಗೆ ಕಳಿಸುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

