- Home
- Entertainment
- TV Talk
- ಲವ್ನೂ ಮಾಡ್ತಾರೆ, ಅಣ್ಣನೂ ಅಂತಾರೆ! ನಮ್ಗೆ ಬೆಲೆನೇ ಇಲ್ವಾ? Bigg Boss ಹೆಣ್ಮಕ್ಕಳ ವಿರುದ್ಧ ದೂರು
ಲವ್ನೂ ಮಾಡ್ತಾರೆ, ಅಣ್ಣನೂ ಅಂತಾರೆ! ನಮ್ಗೆ ಬೆಲೆನೇ ಇಲ್ವಾ? Bigg Boss ಹೆಣ್ಮಕ್ಕಳ ವಿರುದ್ಧ ದೂರು
ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ಸೂರಜ್-ರಾಶಿಕಾ ಮತ್ತು ಗಿಲ್ಲಿ ನಟ-ಕಾವ್ಯಾ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಆದರೆ, ಹುಡುಗಿಯರು ಕೆಲವೊಮ್ಮೆ ಪ್ರೇಮಿಗಳಂತೆ ಮತ್ತು ಕೆಲವೊಮ್ಮೆ 'ಅಣ್ಣ' ಎಂದು ಕರೆಯುತ್ತಿರುವುದು ವೀಕ್ಷಕರನ್ನು ಗೊಂದಲಕ್ಕೀಡುಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಎಲ್ಲವೂ ಕಾಮನ್ನು
ಬಿಗ್‌ಬಾಸ್ (Bigg Boss) ಎಂದ ಮೇಲೆ ಅಲ್ಲಿ ಲವ್ವು, ಗಿವ್ವು ಎಲ್ಲಾ ಕಾಮನ್. ಕೆಲವು ಭಾಷೆಗಳ ಬಿಗ್ಬಾಸ್ನಲ್ಲಿ ಇದು ಗಡಿ ದಾಟಿ ಹೋಗಿದ್ದೂ ಇದೆ. ಬೆಡ್ರೂಮ್ ದೃಶ್ಯಗಳನ್ನೂ ಪ್ರಸಾರ ಮಾಡಿದ್ದೂ ಇದೆ. ಮದುವೆ, ಮೊದಲ ರಾತ್ರಿ ಎನ್ನುವ ಹೆಸರಿನಲ್ಲಿ ಅದನ್ನೂ ನೇರವಾಗಿ ತೋರಿಸಿದ್ದೂ ನಡೆದಿದೆ!
ಗಡಿ ಮೀರಿಲ್ಲ ಎನ್ನೋ ಸಮಾಧಾನ
ಕನ್ನಡದ ಬಿಗ್ಬಾಸ್ನಲ್ಲಿ ಈ ಒಂದು ಗಡಿಯನ್ನು ಮೀರಿಲ್ಲ ಎನ್ನುವ ಸಮಾಧಾನ ಸದ್ಯದ ಮಟ್ಟಿಗೆ ಇದೆ. ಆದರೆ ಈ ಹಿಂದೆಯೂ ಜಗಳ, ಕಾದಾಟ, ಹಾರಾಟಗಳ ನಡುವೆ ಪ್ರೀತಿ-ಪ್ರೇಮವೇನೂ ಇಲ್ಲಿಯೂ ಕಡಿಮೆಯೇನೂ ಆಗಿಲ್ಲವೆನ್ನಿ. ಅದನ್ನು ನೋಡಿ ಬೈಯುತ್ತಲೇ ಖುಷಿಪಡುವ ದೊಡ್ಡ ವರ್ಗವೇ ಇರುವ ಕಾರಣ ಬಿಗ್‌ಬಾಸ್ ಇಂಥ ವಾತಾವರಣವನ್ನೂ ಸೃಷ್ಟಿಸುತ್ತದೆ ಎಂದು ಇದಾಗಲೇ ಹಲವಾರು ಸ್ಪರ್ಧಿಗಳು ಇರುವ ವಿಷಯವನ್ನು ಹೇಳಿದ್ದಾರೆ.
ಎರಡು ಜೋಡಿ!
ಅದೇನೇ ಆದರೂ ಸದ್ಯ ಈ ಬಾರಿಯ ಬಿಗ್ಬಾಸ್ನಲ್ಲಿ ಅತ್ತ ಸೂರಜ್ ಮತ್ತು ರಾಶಿಕಾ ಹಾಗೂ ಇತ್ತ ಗಿಲ್ಲಿ ನಟ ಮತ್ತು ಕಾವ್ಯಾ ನಡುವೆ ಕುಚುಕುಚು ನಡೆಯುತ್ತಿದೆ. ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Gilli Nata and Kavya Shaive) ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ರಾಶಿಕಾ ಸ್ವಲ್ಪ ಈ ನಿಟ್ಟಿನಲ್ಲಿ ಅಡ್ವಾನ್ಸ್ ಇದ್ದಾರೆ ಎನ್ನುವುದು ಇದಾಗಲೇ ವೀಕ್ಷಕರು ನೋಡಿದ್ದಾರೆ.
ಭಾರಿ ಚರ್ಚೆ
ಆದರೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ, ಮೊದಲಿನಿಂದಲೂ ಸೂರಜ್ ಕಂಡ್ರೆ ಲವರ್ ರೀತಿನೇ ನಡೆದುಕೊಳ್ತಿರೋ ರಾಶಿಕಾ ಒಮ್ಮೊಮ್ಮೆ ಅಣ್ಣ ಎಂದು ಕರೀತಾರೆ. ಇತ್ತ ಕಾವ್ಯಾದೂ ಅದೇ ಕಥೆ. ಒಮ್ಮೊಮ್ಮೆ ಗಿಲ್ಲಿಯನ್ನು ಇಷ್ಟಪಡುವ ರೀತಿ ಮಾಡಿದ್ರೆ, ಮತ್ತೆ ಕೆಲವೊಮ್ಮೆ ಅಣ್ಣ ಎಂದು ಕರೆಯುತ್ತಾರೆ.
ಅಣ್ಣ ಶಬ್ದಕ್ಕೆ ಬೆಲೆಯೇ ಇಲ್ವಾ?
ಅಣ್ಣ ಶಬ್ದಕ್ಕೆ ಬೆಲೆಯೇ ಇಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಒಂದೋ ಲವ್ವರ್ ಅನ್ನಿ, ಇಲ್ಲವೇ ಅಣ್ಣ ಎನ್ನಿ. ಊಸರವಳ್ಳಿ ರೀತಿ ಬಣ್ಣ ಬದಲಾಯಿಸೋದು ಯಾಕೆ ಎಂದು ಗಂಡು ಮಕ್ಕಳು ಸ್ವಲ್ಪ ಗರಂ ಆಗಿಯೇ ಬರೆಯುತ್ತಿದ್ದಾರೆ. ಹೀಗೆ ಬೇಕಾದಾಗ ಬಣ್ಣ ಬದಲಿಸಿದ್ರೆ ಗಂಡು ಮಕ್ಕಳಿಗೆ ಯಾವ ಪರಿ ನೋವಾಗತ್ತೆ ಎಂದು ನಿಮಗೇನು ಗೊತ್ತು ಎನ್ನುವುದು ಅವರ ಮಾತು.
ದೂರು ಸಲ್ಲಿಸೋ ಎಚ್ಚರಿಕೆ
ಒಟ್ಟಿನಲ್ಲಿ, ಅದನ್ನಾದರೂ ಒಪ್ಪಿಕೊಳ್ಳಿ, ಇದನ್ನಾದರೂ ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ ವೀಕ್ಷಕರು. ಪದೇ ಪದೇ ಮಾತು ಬದಲಿಸಬೇಡಿ ಎನ್ನುವುದು ಅವರ ಕಳಕಳಿ. ಇಲ್ಲದಿದ್ದರೆ, ನಾವೂ ನಿಮ್ಮ ವಿರುದ್ಧ ದೂರು ಸಲ್ಲಿಸಬೇಕಾಗುತ್ತದೆ ಎನ್ನುತ್ತಿದ್ದಾರೆ!

