- Home
- Entertainment
- TV Talk
- Bhagyalakshmi Serial: ಆದೀಶ್ವರ್ ಬಾಳಲ್ಲಿ ಹೊಸ ಹುಡುಗಿ; ಪಾಸ್ಟ್ ಲೈಫ್ ಗುಟ್ಟು ಭಾಗ್ಯ ಮುಂದೆ ಬಯಲು
Bhagyalakshmi Serial: ಆದೀಶ್ವರ್ ಬಾಳಲ್ಲಿ ಹೊಸ ಹುಡುಗಿ; ಪಾಸ್ಟ್ ಲೈಫ್ ಗುಟ್ಟು ಭಾಗ್ಯ ಮುಂದೆ ಬಯಲು
Bhagyalakshmi Serial Episode: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿ ಮೇಘಶ್ರೀ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರೇಕ್ಷಕರಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ. ಹಳೆಯ ಕಥೆಗಳು ತೆರೆದುಕೊಂಡಿವೆ. ಹಾಗಾದರೆ ಏನಾಗಲಿದೆ?

ಮೇಘಶ್ರೀ ಎಂಟ್ರಿಯಾಗಿದೆ
ಮುಂದೆ ಬರಲಿರುವ ಎಪಿಸೋಡ್‌ಗಳಲ್ಲಿ ಆದೀಶ್ವರ್ ಕಾಮತ್ ಮನೆಯವರು ಮದುವೆ ಆಗಿ ಎಂದು ಒತ್ತಡ ಹೇರುತ್ತಾರೆ. ಆಗ ಮನೆಯವರು ಹುಡುಗಿ ನೋಡಲು ಹೋಗುತ್ತಾರೆ. ಅವರೇ ಮೇಘಶ್ರೀ. ಬಿಗ್ ಬಾಸ್ ಶೋ ಸೇರಿದಂತೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ಮೇಘಶ್ರೀ ಅವರು ಈಗ ಭಾಗ್ಯಲಕ್ಷ್ಮೀಗೆ ಎಂಟ್ರಿ ಕೊಟ್ಟಿದ್ದಾರೆ.
ಭಾಗ್ಯಳನ್ನು ಕಂಡರೆ ಆದಿಗೆ ಇಷ್ಟ
ಆದೀಶ್ವರ್‌ಗೆ ಮದುವೆ ಆಸಕ್ತಿ ಇಲ್ಲ. ಅವನು ಆ ಹುಡುಗಿಯನ್ನು ರಿಜೆಕ್ಟ್ ಮಾಡಲಿ, ಭಾಗ್ಯಳನ್ನು ಮದುವೆ ಆಗಲಿ ಎಂದು ಕುಸುಮ ಬಯಸುತ್ತಿದ್ದಾಳೆ. ಇನ್ನೊಂದು ಕಡೆ ಭಾಗ್ಯಳನ್ನು ಕಂಡರೆ ಆದಿಗೆ ತುಂಬ ಇಷ್ಟ. ಅದನ್ನು ಅವನು ಇನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ.
ಎಚ್ಚರಿಕೆ ಕೊಟ್ಟ ಭಾಗ್ಯ
ಇನ್ನೊಂದು ಕಡೆ ಆದಿ ಹಾಗೂ ಭಾಗ್ಯ ಸ್ನೇಹವನ್ನು ಹಾಳು ಮಾಡಬೇಕು ಎಂದು ತಾಂಡವ್, ಶ್ರೇಷ್ಠ ಪ್ರಯತ್ನಪಡುತ್ತಿದ್ದಾರೆ. ಇವರ ಸ್ನೇಹ ಏನಾಗಲಿದೆಯೋ ಏನೋ. ನಮ್ಮಿಬ್ಬರ ಸ್ನೇಹವನ್ನು ಏನು ಮಾಡೋಕೆ ಆಗದು ಎಂದು ಭಾಗ್ಯ ಎಚ್ಚರಿಕೆ ಕೊಟ್ಟಿದ್ದಾಳೆ.
ಭಾಗ್ಯ ಕಿವಿಗೆ ಸತ್ಯ ಬಿತ್ತು
ಇನ್ನು ಹುಡುಗಿ ಜೊತೆ ಮಾತನಾಡಿದ ಆದಿ, “ನನಗೆ ಪಾಸ್ಟ್ ಲೈಫ್ ಇದೆ, ದಯವಿಟ್ಟು ನೀವು ಎಲ್ಲರ ಮುಂದೆ, ಈ ಮದುವೆ ಇಷ್ಟ ಇಲ್ಲ ಎಂದು ಹೇಳಿ” ಎಂದು ಮನವಿ ಮಾಡಿದ್ದಾರೆ. ಅದೀಗ ಭಾಗ್ಯ ಕಿವಿಗೂ ಬಿದ್ದಿದೆ.
ಆದೀಶ್ವರ್ ಪಾಸ್ಟ್ ಲೈಫ್‌ನಲ್ಲಿ ಏನಾಯ್ತು?
ಆದೀಶ್ವರ್ ಜೀವನದಲ್ಲಿ ಏನಾಗಿದೆ? ಅವನಿಗೆ ಈಗ ಯಾಕೆ ಮದುವೆ ಬೇಡ? ನಿಜಕ್ಕೂ ಏನಾಗಿದೆ ಎನ್ನೋದು ರಿವೀಲ್ ಆಗಬೇಕಿದೆ. ಆದೀಶ್ವರ್ ಮದುವೆ ಆಗಬೇಕು ಎಂದು ಭಾಗ್ಯ ಒಪ್ಪಿಸುತ್ತಾಳಾ ಎಂದು ಕಾದು ನೋಡಬೇಕಿದೆ.
ಮುಂದೆ ಏನಾಗುವುದು?
ತಾಂಡವ್ ಮೊದಲ ಪತ್ನಿ ಭಾಗ್ಯ ಎನ್ನೋದು ಆದಿಗೆ ಗೊತ್ತಾಗಿದೆ. ಇಷ್ಟುದಿನಗಳ ಕಾಲ ವಿಷಯವನ್ನು ಮುಚ್ಚಿಟ್ಟರು ಎಂದು ಆದಿ ಬೇಸರ ಮಾಡಿಕೊಂಡಿದ್ದನು. ಈಗ ಮೇಘಶ್ರೀ ಎಂಟ್ರಿಯಿಂದ ಈ ಸೀರಿಯಲ್‌ಗೆ ಏನಾದರೂ ಟ್ವಿಸ್ಟ್ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ. ಇನ್ನೊಂದು ಕಡೆ ಭಾಗ್ಯ, ಆದಿ ಮದುವೆ ಆಗಬೇಕು ಎಂದು ಕೂಡ ಕೆಲ ವೀಕ್ಷಕರು ಬಯಸುತ್ತಿದ್ದಾರೆ. ಮೇಘಶ್ರೀಯಿಂದ ಆದಿ, ಭಾಗ್ಯ ಒಂದಾದರೂ ಕೂಡ ಆಶ್ಚರ್ಯವಿಲ್ಲ.