- Home
- Entertainment
- TV Talk
- Karna and Annayya: ಪಾರುಗೆ ಗೊತ್ತಾಯ್ತು ನಿಧಿಯ ಸತ್ಯ! ಅಕ್ಕ ಗರ್ಭಿಣಿ ಎಂದು ತಿಳಿಯುತ್ತಲೇ ನಿಧಿ ಬರಸಿಡಿಲು
Karna and Annayya: ಪಾರುಗೆ ಗೊತ್ತಾಯ್ತು ನಿಧಿಯ ಸತ್ಯ! ಅಕ್ಕ ಗರ್ಭಿಣಿ ಎಂದು ತಿಳಿಯುತ್ತಲೇ ನಿಧಿ ಬರಸಿಡಿಲು
ಅಣ್ಣಯ್ಯ ಮತ್ತು ಕರ್ಣ ಧಾರಾವಾಹಿಗಳ ಮಹಾಸಂಗಮದಲ್ಲಿ, ಸೀನನ ತಮಾಷೆಯಿಂದ ನಿತ್ಯಾ ಗರ್ಭಿಣಿ ಎಂಬ ವಿಷಯ ಚರ್ಚೆಗೆ ಬಂದರೂ, ವೈದ್ಯೆಯಾದ ಪಾರುಗೆ ನಾಡಿಮಿಡಿತದಿಂದ ಸತ್ಯದ ಅರಿವಾಗುತ್ತದೆ. ನಂತರ ಕರ್ಣನನ್ನು ಪ್ರಶ್ನಿಸಿದಾಗ, ತನಗೂ ನಿತ್ಯಾಳಿಗೂ ಮದುವೆಯಾಗಿಲ್ಲ ಎಂಬ ಸತ್ಯವನ್ನು ಆತ ಬಾಯಿಬಿಡುತ್ತಾನೆ.

ಮಹಾಸಂಗಮ
ಸದ್ಯ ಅಣ್ಣಯ್ಯ ಮತ್ತು ಕರ್ಣ ಸೀರಿಯಲ್ ಮಹಾಸಂಗಮ (Annayya and Karna Mahasangama) ನಡೆಯುತ್ತಿದೆ. ಸೀನ ಮಾಡಿದ ಕಿತಾಪತಿಯಿಂದ ಈಗ ಎಲ್ಲರಿಗೂ ನಿಧಿಯ ಒಡಲ ಸತ್ಯ ಗೊತ್ತಾಗಿ ಬಿಟ್ಟಿದೆ.
ನಿತ್ಯಾಳ ಸತ್ಯ
ಸೀನ ಸ್ಮಾರ್ಟ್ ವಾಚ್ ಒಂದನ್ನು ತಂದಿದ್ದಾನೆ. ಅದರಲ್ಲಿ ಎಲ್ಲವನ್ನೂ ತಿಳಿಯಬಹುದು ಎಂದಿದ್ದಾನೆ. ಆ ವಾಚ್ ಅನ್ನು ನಿತ್ಯಾ ಕೈಗೆ ಕಟ್ಟಿದ್ದಾನೆ. ಅದು ನಿತ್ಯಾ ಗರ್ಭಿಣಿ ಎಂದು ಹೇಳಿದೆ.
ಎಲ್ಲರೂ ಶಾಕ್
ಇದನ್ನು ಕೇಳಿ ನಿಧಿ ಅಷ್ಟೇ ಅಲ್ಲದೇ ಮನೆಯಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ. ನಿಧಿ ಅಂತೂ ಬೆವರಿಳಿದು ಹೋಗಿದ್ದಾಳೆ. ಇದನ್ನು ಕೇಳುತ್ತಿದ್ದಂತೆಯೇ ಸತ್ಯ ಎಲ್ಲರಿಗೂ ತಿಳಿದುಹೋಯಿತಲ್ಲ ಎಂದು ನಿತ್ಯಾ ಮತ್ತು ಕರ್ಣ ಕೂಡ ಶಾಕ್ ಆಗಿ ಏನು ಹೇಳಬೇಕು ಎನ್ನೋದು ತಿಳಿಯದೇ ತಲ್ಲಣಗೊಂಡಿದ್ದಾರೆ.
ಜೋಕ್ ಆಯ್ತು
ಈ ವಾಚ್ ಕಟ್ಟಿ, ಸೀನ ಹಿಂದೊಮ್ಮೆ ಪಾರು ಕೂಡ ಗರ್ಭಿಣಿ ಎಂದಿದ್ದ. ಇದೇ ಕಾರಣಕ್ಕೆ ಎಲ್ಲರೂ ಸೀನನ್ನು ಬೈದು ಇದು ಸೀನನ ತಲೆ. ನಿತ್ಯಾ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದಾಗ ನಿತ್ಯಾ ನಿಟ್ಟುಸಿರು ಬಿಟ್ಟಿದ್ದಾಳೆ.
ಪಾರುಗೆ ಸತ್ಯದ ಅರಿವು
ಆ ವಾಚ್ ಅನ್ನು ತೆಗೆಯಲು ಪಾರು ಹೋದಾಗ, ಅವರು ಆಕಸ್ಮಿಕವಾಗಿ ನಿತ್ಯಾಳ ಪಲ್ಸ್ ಮೇಲೆ ಕೈಯಿಟ್ಟಿದ್ದಾಳೆ. ವೈದ್ಯೆಯಾಗಿರುವ ಆಕೆಗೆ ನಿತ್ಯಾ ಗರ್ಭಿಣಿ ಎನ್ನುವ ವಿಷಯ ತಿಳಿದು ಶಾಕ್ ಆಗಿದೆ.
ನಿಧಿ ಉಪಚಾರ
ಇದಕ್ಕೂ ಮೊದಲು ಕರ್ಣನಿಗೆ ಏಟಾದಾಗ ನಿಧಿ ಓಡಿ ಹೋಗಿ ಅವನಿಗೆ ಉಪಚಾರ ಮಾಡಿದ್ದನ್ನು ಪಾರು ನೋಡಿದ್ದಳು. ಅಲ್ಲಿಗೆ ಕರ್ಣ ಮತ್ತು ನಿಧಿ ಲವ್ ಮಾಡ್ತಿರೋ ಬಗ್ಗೆ ಅವಳಿಗೆ ಡೌಟ್ ಇತ್ತು.
ಸತ್ಯ ಹೇಳಿದ ಕರ್ಣ
ಇದೀಗ ಆ ಬಗ್ಗೆ ಕರ್ಣನಲ್ಲಿಯೇ ಕೇಳಿದ್ದಾಳೆ. ತಂಗಿಯಾಗಿ ಕೇಳುತ್ತಿರುವುದಾಗಿ ಹೇಳಿದಾಗ ಕರ್ಣ ಎಲ್ಲ ವಿಷಯ ಹೇಳಿದ್ದಾನೆ. ತನ್ನ ಮತ್ತು ನಿತ್ಯಾಳ ಮದುವೆಯಾಗಿಲ್ಲ, ಆದರೆ ಈ ವಿಷಯವನ್ನು ನಿಧಿಗೆ ಹೇಗೆ ಹೇಳುವುದೋ ಗೊತ್ತಾಗ್ತಿಲ್ಲ ಎಂದಿದ್ದಾನೆ.
ಪಾರು ಮುಂದಿನ ನಡೆ ಏನು?
ಹಾಗಿದ್ದರೆ ಪಾರುವಿನ ಮುಂದಿನ ನಡೆ ಏನು? ಈ ಎರಡೂ ಸೀರಿಯಲ್ಗಳ ಮಹಾಸಂಗಮ ಮುಗಿಯುವ ಹೊತ್ತಿನಲ್ಲಿ ನಿಧಿಗೆ ಸತ್ಯದ ಅರಿವು ಆಗತ್ತಾ? ಪಾರು ನಿಧಿಗೆ ಕನ್ವಿನ್ಸ್ ಮಾಡ್ತಾಳಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

