BBK 12: ಫಸ್ಟ್ ಟೈಮ್ ರಕ್ಷಿತಾ ಶೆಟ್ಟಿ ಅಸಲಿಯತ್ತೇನು? ನಾಟಕ ಬಯಲು ಮಾಡಿದ ಧ್ರುವಂತ್
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಕಂಡರೆ ಧ್ರುವಂತ್‌ಗೆ ಆಗೋದಿಲ್ಲ. ಭಾಷೆ ಬರೋದಿಲ್ಲ ಎಂದು ಅವಳು ನಾಟಕ ಮಾಡ್ತಾಳೆ ಎಂದು ಧ್ರುವಂತ್ ಹೇಳಿದ್ದರು. ಈಗ ಮತ್ತೊಂದು ಆರೋಪ ಮಾಡಿದ್ದಾರೆ.

ಟೀಂ ಆಗಿರುವ ಅಶ್ವಿನಿ
ಜಾಹ್ನವಿ, ಅಶ್ವಿನಿ ಗೌಡ, ಧ್ರುವಂತ್ ಅವರು ಟೀಂ ಆಗಿದ್ದಾರೆ. ಈ ಮೂವರು ರಕ್ಷಿತಾ ಬಗ್ಗೆ ಮಾತನಾಡಿಕೊಂಡಿದ್ದಾರೆ. ಆ ವೇಳೆ ರಕ್ಷಿತಾ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಗಟ್ಟಿ ಕಾಳು ಇಲ್ಲ
“ದೈಹಿಕವಾಗಿ, ಮಾನಸಿಕವಾಗಿ ನಾನು, ಜಾಹ್ನವಿ, ಧುವಂತ್ ಗಟ್ಟಿಯಾಗಿದ್ದೇವೆ. ನಾಮಿನೇಶನ್ ಆದರೆ ಅವರ ಕಡೆಯೇ ಆಗಬೇಕು, ಅಲ್ಲಿ ಗಟ್ಟಿ ಕಾಳು ಇಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಎಲ್ಲ ಬಾಣ ನಮ್ಮ ಕಡೆಗೆ ಬರುತ್ತದೆ
“ಅಲ್ಲಿರುವ 11 ಜನರಿದ್ದರೂ ಒಂದಷ್ಟು ಜನರು ರಕ್ಷಿತಾ ಕಡೆಗೆ ಹೋಗುತ್ತಾರೆ. ಎಲ್ಲ ಬಾಣಗಳು ಈ ಕಡೆಗೆ ಬರುತ್ತವೆ. ಇದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು” ಎಂದು ಜಾಹ್ನವಿ ಹೇಳಿದ್ದಾರೆ.
ನನಗೆ ಅವಳ ವೀಕ್ಷಕರನ್ನು ಕೊಟ್ಟಳು
“ಏನೇ ಮಾಡಲಿ, ಚಾಕು ತಲೆಗೆ ಹಾಕಲೀ, ಉಗಿದರೂ ರಕ್ಷಿತಾ ಅಲ್ಲಿಯೇ ಇರಬೇಕು, ಅವರನ್ನು ಓಲೈಸುವ ಪ್ರಯತ್ನ ಮಾಡಬೇಕು. ಆರು ತಿಂಗಳಿಂದ ಬಂದ್ಬಿಟ್ಟೆ. ಹೀಗೆ ಮಾಡಿ ಅವಳ ವೀಕ್ಷಕರನ್ನು ನನಗೆ ಕೊಟ್ಟಿದ್ದಾಳೆ” ಎಂದು ಧ್ರುವಂತ್ ಹೇಳಿದ್ದಾರೆ.
ನಾವು ಮೀನು ನೋಡಿಲ್ವಾ?
"ಎಂಥ ಗೊತ್ತುಂಟ ಗಾಯ್ಸ್, ನಾನು ಮುದ್ದಾಗಿ, ಚೆನ್ನಾಗಿದ್ದೀನಿ. 25-26 ವರ್ಷದವರು ಮಕ್ಕಳ ಥರ ಆಡಿದಾಗ, ಜನರು ಏನೋ ವಿಚಿತ್ರ ಇರಬೇಕು ಎಂದು ವಿಡಿಯೋ ನೋಡುತ್ತಾರೆ. ಎಲ್ಲರೂ ನನ್ನ ನೋಡ್ತಾರೆ ಎಂದು ರಕ್ಷಿತಾ ಅಂದುಕೊಳ್ತಾಳೆ. ಮಾರ್ಕೆಟ್ ಹೋಗಿ, ಬೀಚ್ ಹೋಗಿ ಇದು ಮೀನು ಗೊತ್ತುಂಟ ಅಂತ ಹೇಳುತ್ತಾಳೆ, ನಾವು ಮೀನು ನೋಡಿಲ್ವಾ? ಎಂದು ಧ್ರುವಂತ್ ಹೇಳಿದ್ದಾರೆ.
ರಕ್ಷಿತಾ ಕಚ್ಚಿದೋರೆಲ್ಲ ಔಟ್
“ರಕ್ಷಿತಾಗೆ ಈಗ ಕಚ್ಚೋಕೆ ಇರೋದು ಮಾಳು ಮಾತ್ರ. ಈ ಹುಡುಗಿ ಯಾರನ್ನು ಕಚ್ಚುತ್ತಾಳೆ ಅವರೆಲ್ಲ ಟಿಕೆಟ್ ತಗೊಂಡಿದ್ದಾರೆ. ಮಾಳು ನಿಪನಾಳ ತುಂಬ ನೇರವಾಗಿ ಇರುತ್ತಾರೆ, ಕ್ಲೀನ್ ಆಗಿ ಇರುತ್ತಾರೆ. ರಕ್ಷಿತಾ ಜಗತ್ ಕಿಲಾಡಿ” ಎಂದು ಧ್ರುವಂತ್ ಹೇಳಿದ್ದಾರೆ.