ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು, ಓರ್ವನ ಸ್ಥಿತಿ ಗಂಭೀರ, ಚಳಿ ಕಾರಣ ಕಿಟಕಿ, ಬಾಗಿಲು ಎಲ್ಲಾ ಮುಚ್ಚಿ ಮಲಗಿದ್ದಾರೆ. ಬೆಚ್ಚಗಿರಲು ಇದ್ದಿಲು ಬೆಂಕಿ ಇಟ್ಟು ಮಲಗಿದ್ದಾರೆ. ಪರಿಣಾಮ ಘೋರ ದುರಂತವೇ ನಡೆದುಹೋಗಿದೆ.
ಬೆಳಗಾವಿ (ನ.18) ಚಳಿಯಿಂದ ಪಾರಾಗಲು ಕೋಣೆಯ ಬಾಗಿಲು ಕಿಟಕಿ ಮುಚ್ಚಿ, ಇದ್ದಿಲು ಪಕ್ಕದಲ್ಲಿಟ್ಟು ಮಲಗಿದ ಯುವಕರ ಗುಂಪು ಆಮ್ಮಜನಕ ಕೊರತೆಯಿಂದ ದಾರುಣ ಅಂತ್ಯವಾಗಿದೆ. ಮೂವರು ಯುವಕರು ಉಸಿರುಗಟ್ಟಿ ಮೃತಪಟ್ಟಿದ್ದರೆ, ಮತ್ತೊರ್ವನ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ಕಾರ್ಯಕ್ರಮಕ್ಕೆ ತೆರಳಿದ್ದ ಈ ಯುವಕರು ಮರಳಿ ಬಂದು ತಮ್ಮ ಕೋಣೆಯಲ್ಲಿ ನಿದ್ದಿಗೆ ಜಾರಿದ್ದರು. ಕೋಣೆಯಲ್ಲಿ ಆಮ್ಲಜನಕ ಕೊರತೆಯಿಂದ ಯುವಕರು ಮೃತಪಟ್ಟಿರುವ ಶಂಕೆ ಇದೆ.
ಬೆಳಗಾವಿ ವಿಪರೀತ ಚಳಿಯಿಂದ ಪಾರಾಗಲು ಹೋಗಿ ಅಂತ್ಯ
ಬೆಳಗಾವಿ ನಗರದ ಅಮನ್ ನಗರದ ನಿವಾಸಿ ರಿಹಾನ್ ಮತ್ತೆ( 22), ಮೋಹಿನ್ ನಾಲಬಂದ(23), ಸರ್ಫರಾಜ್ ಹರಪ್ಪನಹಳ್ಳಿ,(22) ಮೃತ ದುರ್ದೈವಿಗಳು. ಮತ್ತೊರ್ವ 19ರ ಹರೆಯದ ಯುವಕ ಶಾಹನಾವಾಜ್ ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯಲ್ಲಿ ವಿಪರೀತ ಚಳಿ ಶುರುವಾಗಿದೆ. ನಾಲ್ವರು ಯುವಕರು ಕಾರ್ಯಕ್ರಮಕ್ಕೆ ತೆರಳಿ ಮರಳಿ ಬಂದ ಬಳಿ ಚಳಿಯಿಂದ ಪಾರಾಗಲು ಮಲುಗುವಾಗ ಇದ್ದಿಲಿನ ಬೆಂಕಿ ಇಟ್ಟಿದ್ದಾರೆ. ಕೋಣೆಯೊಳಗೆ ಬೆಚ್ಚಗಿರಲಿ ಎಂದು ಈ ರೀತಿ ಮಾಡಿದ್ದಾರೆ. ಜೊತೆಗೆ ಕಿಟಕಿ, ಬಾಗಿಲು ಕೂಡ ಮುಚ್ಚಿದ್ದಾರೆ. ಸುಸ್ತಾಗಿದ್ದ ಯುವಕರು ಬೇಗನೆ ನಿದ್ದೆಗೆ ಜಾರಿದ್ದಾರೆ. ಆದರೆ ನಿದ್ದೆಗೆ ಜಾರುತ್ತಿದ್ದಂತೆ ಇದ್ದಿಲಿನ ಬೆಂಕಿ ಹೊಗೆಯಾಡಿದೆ. ಈ ಹೊಗೆ ಕೋಣೆ ತುಂಬಿಕೊಂಡಿದೆ. ಹೊಗೆಯಿಂದ ಯುವಕರಿಗೆ ಆಮ್ಲಜನಕ ಕೊರತೆಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಾಳ ಮಾರುತಿ ಪೊಲೀಸರು ದೌಡು
ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಸ್ಥಳಕ್ಕೆ ಮಾಳ ಮಾರುತಿ ಪೊಲೀಸರು ದೌಡಾಯಿಸಿದ್ದಾರೆ. ಶಾಸಕ ಆಸೀಫ್ ಸೇಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಶವಗಳು ಶವಾಗಾರಕ್ಕೆ ಶಿಪ್ಟ್ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಇಂದು ರಾತ್ರಿಯೇ ಶವಸಂಸ್ಕಾರ ಸಾಧ್ಯತೆ ಇದೆ. ಪೊಲೀಸರು ಕೋಣೆಯ ಇದ್ದಿಲು, ಅದರ ಬೂದಿಯ ಸ್ಯಾಂಪಲ್ ತೆಗೆದುಕೊಂಡಿದ್ದಾರೆ.
ಚಳಿ ತೀವ್ರತೆ ತಡೆಯಲು ಇದ್ದಿಲ ಬೆಂಕಿಯ ಮೊರೆ ಹೋದ ಮೂವರು ಯುವಕರು ದಾರುಣ ಅಂತ್ಯಕಂಡಿದ್ದಾರೆ. ಚಳಿಗಾಲದಲ್ಲಿ ಕೋಣೆಯೊಳಗೆ ಇದ್ದಿಲ ಬೆಂಕಿ ಹಾಕುವುದು ಅಪಾಯಕಾರಿಯಾಗಿದೆ. ಹೆಚ್ಚು ಗಾಳಿಯಾದ ಕೋಣೆಯಲ್ಲಿ ಇದ್ದಿಲ ಬೆಂಕಿಯಿಂದ ಆಮ್ಲಜನಕ ಕೊರತೆ ಎದುರಾಗಲಿದೆ. ಇನ್ನೋ ಗಾಳಿಯಾಡುವ ಕೋಣೆಯಾಗಿದ್ದರೆ, ಇದ್ದಿಲ ಬೆಂಕಿ ಕಿಡಿಗಳು ಹಾರಿ ಕೋಣೆಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ.ಹೀಗಾಗಿ ಮಲಗುವಾಗ ಇದ್ದಿಲ ಬೆಂಕಿ ಪ್ರಯೋಗ ಅತ್ಯಂತ ಅಪಾಯಕಾರಿಯಾಗಿದೆ.


