ವಿಜಯಪುರ: ಬಿಜೆಪಿ ಟಿಕೆಟ್‌ಗಾಗಿ ಬ್ಲ್ಯಾಕ್‌ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ. ಬ್ಲ್ಯಾಕ್‌ಮೇಲ್ ಮಾಡಿದ್ದರೆ ಸಚಿವನಾಗಿ ಇರುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ‘ಯತ್ನಾಳ್ ಬ್ಲ್ಯಾಕ್‌ಮೇಲ್ ಮಾಡಿ ಬಿಜೆಪಿಗೆ ಹೋಗಲು ಯತ್ನಿಸುತ್ತಿದ್ದಾರೆಂದು ಸಚಿವ ಎಂ.ಬಿ.ಪಾಟೀಲ್’ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳು ನನ್ನ ಬಳಿ ಇದ್ದವು. ಪಕ್ಷದ ಹಿತದೃಷ್ಟಿಯಿಂದ ನಾನು ಬಿಡುಗಡೆ ಮಾಡಲಿಲ್ಲ. ಅವುಗಳನ್ನು ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನಿಸಿದೆ. ಅವರು ಕೇಳಲಿಲ್ಲ. ಭ್ರಷ್ಟನನ್ನು ಇಟ್ಟುಕೊಂಡು ನನ್ನನ್ನು ಉಚ್ಛಾಟನೆ ಮಾಡಿದರು ಎಂದು ತಿಳಿಸಿದರು. ನಾನು ಹೊಸ ಪಕ್ಷ ಕಟ್ಟಿದರೆ ಹಿಂದೂಗಳ ವೋಟು ವಿಭಜನೆ ಆಗುತ್ತವೆ ಎಂಬುವುದು ಎಂ.ಬಿ.ಪಾಟೀಲ ಹಾಗೂ ಕಾಂಗ್ರೆಸ್ ಅವರ ಲೆಕ್ಕಾಚಾರವಿದೆ. ಹಿಂದೂಗಳ ವೋಟು ಒಡೆದರೆ ಮತ್ತೆ ಮುಸ್ಲಿಂ ಮತಗಳ ಮೇಲೆ ಸರ್ಕಾರ ಮಾಡುವ ಉದ್ದೇಶ ಕಾಂಗ್ರೆಸ್‌ನವರಿಗಿದೆ ಎಂದು ಲೇವಡಿ ಮಾಡಿದರು.
09:36 PM (IST) May 18
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದೇನು?
08:48 PM (IST) May 18
07:55 PM (IST) May 18
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ, ಮೇ 19 ರಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಆಚರಿಸಲು ಅವಕಾಶ ನೀಡುವಂತೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಾಗೃಹ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.
07:34 PM (IST) May 18
ಬಿಗ್‌ಬಾಸ್ ಖ್ಯಾತಿಯ ನಟ ಧ್ರುವಂತ್ ತಮ್ಮ ಬೈಕ್ ಕಳ್ಳತನವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಒಂದು ವರ್ಷವಾದರೂ ತಮಗೆ ನ್ಯಾಯ ಸಿಗದೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
07:31 PM (IST) May 18
07:06 PM (IST) May 18
06:03 PM (IST) May 18
ಮಂಡ್ಯದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ವತಿಯಿಂದ ಆಯೋಜಿಸಲಾದ ‘ವಿಪ್ರೋತ್ಸವ-2026’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಮಾಜದ ಏಕತೆ, ಸಂಸ್ಕೃತಿ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಲಾಯಿತು.
05:42 PM (IST) May 18
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಪ್ರಧಾನಿ ಮೋದಿ ಹೇಳಿಕೆ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
05:32 PM (IST) May 18
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶಕ್ಕಿಂತ ಗಾಂಧಿ ಕುಟುಂಬಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮಿತವ್ಯಯದ ಕರೆ ಕುರಿತೂ ಪ್ರತಿಕ್ರಿಯೆ ನೀಡಿದ್ದಾರೆ.
05:27 PM (IST) May 18
ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.
05:16 PM (IST) May 18
ಸನಾತನ ಹಿಂದೂ ಧರ್ಮಕ್ಕೆ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವಮಾನ ಮಾಡಿರುವದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.
04:41 PM (IST) May 18
ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗಲಿದೆ. ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಬುಲೆಟ್ ಟ್ರೈನ್ ಕಾರಿಡಾರ್‌ಗಳನ್ನು ಘೋಷಿಸಲಾಗಿದ್ದು, ಇದು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಮಂಗಳೂರಿಗೂ ವಂದೇ ಭಾರತ್ ರೈಲು ಆರಂಭಿಸಲು ಯೋಜಿಸಲಾಗಿದೆ.
04:37 PM (IST) May 18
ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ, ಒಬ್ಬ ನಟಿಯ ಹೆಸರು ಸುವರ್ಣಾಕ್ಷರಗಳಲ್ಲಿ ಮಿನುಗುತ್ತದೆ. ಅವರೇ ಅಭಿಮಾನಿಗಳ ಪಾಲಿನ ‘ಕನಸಿನ ರಾಣಿ’, ಚಿತ್ರರಂಗದ ‘ಆಕ್ಷನ್ ಕ್ವೀನ್’ ಮಾಲಾಶ್ರೀ. 90ರ ದಶಕದಲ್ಲಿ ಮಾಲಾಶ್ರೀ ಎಂದರೆ ಕೇವಲ ಒಬ್ಬ ನಟಿಯಲ್ಲ, ಅದೊಂದು ಸಂಚಲನ!
04:36 PM (IST) May 18
ಟಾಕ್ಸಿಕ್ ಸಿನಿಮಾದ ಬಗ್ಗೆ ನಟಿ ತಾರಾ ಸುತಾರಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರನ್ನು ಹೊಗಳಿದ್ದಾರೆ. ಸಿನಿಮಾ ಕಾಯುವಿಕೆ ವ್ಯರ್ಥವಾಗದು ಎಂದಿದ್ದಾರೆ.
04:14 PM (IST) May 18
ನಟಿ ರಚಿತಾ ರಾಮ್ ದಕ್ಷಿಣ ಕನ್ನಡದ ಬೆಂಜನಪದವು ಕೊರಗಜ್ಜ ದೈವ ಸನ್ನಿಧಿಯಲ್ಲಿ ಕುಟುಂಬದೊಂದಿಗೆ ಕೋಲ ಸೇವೆ ನೆರವೇರಿಸಿದ್ದಾರೆ. ‘ಸ್ವಾಮಿ ಕೊರಗಜ್ಜ ಕಾಪುಲೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
04:03 PM (IST) May 18
ಯುವ ಕಾಂಗ್ರೆಸ್‌ನಲ್ಲಿ ತಮ್ಮ ಹುದ್ದೆಯನ್ನು ತಡೆಹಿಡಿದಿರುವುದನ್ನು ವೈಯಕ್ತಿಕ ಸೇಡಿನ ಕ್ರಮ ಎಂದು ದೀಪಿಕಾ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.
02:30 PM (IST) May 18
01:30 PM (IST) May 18
01:26 PM (IST) May 18
01:26 PM (IST) May 18
ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಬೆಳವಣಿಗೆ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ..
01:12 PM (IST) May 18
ದಾವಣೆಗೆರೆ ಶಿಕ್ಷಕ ಮನೆ ಮುಂದೆ ನಿಂತಿದ್ದಂತೆ ಬಡಿದ ಸಿಡಿಲಿನ ಅಬ್ಬರಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಾಲೆ ಮುಖ್ಯೋಪಾದ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನ ಸಾವು ಇಡೀ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
01:00 PM (IST) May 18
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಪ್ರಸಿದ್ಧ ಸೀರಿಯಲ್ ಭಾಗ್ಯಲಕ್ಷ್ಮಿ ಮುಕ್ತಾಯ ಹಂತಕ್ಕೆ ಬಂದಿದ್ಯಾ? ಸೀರಿಯಲ್ ಮುಕ್ತಾಐ ಆಗೋದು ಯಾವಾಗ? ಈ ಟೈಂನಲ್ಲಿ ಇನ್ಮುಂದೆ ಯಾವ ಸೀರಿಯಲ್ ಪ್ರಸಾರ ಆಗುತ್ತೆ? ಗೊಒ
12:39 PM (IST) May 18
11:36 AM (IST) May 18
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯು ರೈತರ ಜಮೀನು ಕಬಳಿಸುವ ಭೂ ದಂಧೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ಘೋಷಿಸಿರುವ ಅವರು, ಕಾಂಗ್ರೆಸ್ ವರಿಷ್ಠರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.
10:50 AM (IST) May 18
10:25 AM (IST) May 18
ಮದುವೆ ಆಮಿಷವೊಡ್ಡಿ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರವೆಸಗಿದ ಟ್ರ್ಯಾಕ್ಟರ್ ಚಾಲಕನನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಪೋಷಕರು ಮೂಢನಂಬಿಕೆಯಿಂದ ದೆವ್ವದ ಕಾಟವೆಂದು ಭಾವಿಸಿದ್ದರೆ, ದೇವಸ್ಥಾನದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಸತ್ಯ ಬಯಲಾಗಿದೆ.
10:19 AM (IST) May 18
ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿದೆ. ಪರಿಣಾಮ ಇನ್ನೊಂದು ವರ್ಷ ಜೈಲಿನಿಂದ ಅಲುಗಾಡುವಂತಿಲ್ಲ. ಇದೀಗ ಪತ್ನಿ ವಿಜಯಲಕ್ಷ್ಮಿ ತೀವ್ರವಾಗಿ ನೊಂದಿದ್ದಾರೆ. ಭಾವುಕ ಪೋಸ್ಟ್ ಮಾಡಿದ್ದಾರೆ.
10:05 AM (IST) May 18
09:17 AM (IST) May 18
ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಶೆಲ್ ಪೆಟ್ರೋಲ್ ಇದೀಗ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬಲು ದುಬಾರಿಯಾಗಿದೆ.
09:02 AM (IST) May 18
08:43 AM (IST) May 18
ಹಲಸೂರು ಠಾಣೆಯಲ್ಲಿ ಆರೋಪಿ ಕೃಪಲಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಲಂಗ್ಲಿಂಗ್ ಆರೋಪಿಯಾಗಿದ್ದ ಕೃಪಲಾನಿ ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದೆ ಆರೋಪ ಕೇಳಿಬಂದಿದೆ
07:56 AM (IST) May 18
ಹೊಸಕೋಟೆ ಬಳಿ ಆನೆ ಬೈಕ್ ಸವಾರನ ಮೇಲೆ ದಾಳಿಗೆ ಯತ್ನಿಸಿದೆ. ಬೈಕ್ ತಿರುಗಿಸುವಷ್ಟರಲ್ಲೇ ದಾಳಿಗೆ ಮುಂದಾಗಿದೆ. ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
07:17 AM (IST) May 18
07:11 AM (IST) May 18
06:46 AM (IST) May 18
06:37 AM (IST) May 18
06:04 AM (IST) May 18
ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೀದರ್‌ನ ಭಾಲ್ಕಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳಿಗಾಗಿ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್‌ಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.
05:59 AM (IST) May 18
05:51 AM (IST) May 18
05:45 AM (IST) May 18
ಚಿಕ್ಕಮಗಳೂರು ತಾಲೂಕಿನ ಅರೆನೂರು ಹಕ್ಕಿಮಕ್ಕಿಯಲ್ಲಿ ರೈತರ ಜಮೀನುಗಳಿಗೆ ಹಾನಿ ಮಾಡುತ್ತಿದ್ದ ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಕಾರ್ಯಾಚರಣೆಯ ಬಳಿಕ, ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತಿದೆ.