ಮತ್ತೆ ಶೆಲ್ ಪೆಟ್ರೋಲ್ ದರ ಏರಿಕೆ, ಲೀಟರ್‌ಗೆ 135.51 ರೂ ಹೆಚ್ಚಳದಿಂದ ಕಂಗಾಲಾದ ಜನ
ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಶೆಲ್ ಪೆಟ್ರೋಲ್ ಇದೀಗ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬಲು ದುಬಾರಿಯಾಗಿದೆ.

ಪೆಟ್ರೋಲ್ ದುಬಾರಿ ದುಬಾರಿ
ಮದ್ಯಪ್ರಾಚ್ಯದ ಯುದ್ಧದಿಂದ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಯ ಕೊರತೆ ಸೇರಿದಂತೆ ಆರ್ಥಿಕ ಸಮಸ್ಯೆಗಳಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ ಮೂರು ರೂಪಾಯಿ ಏರಿಕೆ ಮಾಡಲಾಗಿದೆ. ದೇಶದ ಎಲ್ಲೆಡೆ ಬೆಲೆ ಏರಿಕೆಯಾಗಿದೆ. ಇದೀಗ ಶೆಲ್ ಪೆಟ್ರೋಲ್ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಶೆಲ್ ಪೆಟ್ರೋಲ್ 2ನೇ ಬಾರಿಗೆ ಇಂಧನ ದರ ಏರಿಸಿದೆ.

122.8 ರೂಪಾಯಿಗೆ ಏರಿಕೆಯಾದ ಪೆಟ್ರೋಲ್
ಬೆಂಗಳೂರಿನಲ್ಲಿ ಶೆಲ್ ಪೆಟ್ರೋಲ್ ದರ ಮತ್ತೆ ಏರಿಕೆಯಾಗಿದೆ. 128 ರೂಪಾಯಿ ಇದ್ದ ಪೆಟ್ರೋಲ್ ದರ ಇದೀಗ136.5 ರೂಪಾಯಿಗೆ ಏರಿಕೆಯಾಗಿದೆ. ಮತ್ತೆ ಮೂರು ರೂಪಾಯಿ ಏರಿಕೆಯಾಗಿದೆ. ಇದರಿಂದ ಶೆಲ್ ಪೆಟ್ರೋಲ್ ಬಲು ದುಬಾರಿಯಾಗಿದ್ದು, ಜನರು ಕಂಗಾಲಾಗಿದ್ದಾರೆ.
- ಶಲ್ ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್ ಗೆ 136.51 ಪೈಸೆ
- ವಿ ಪವರ್ ಪೆಟ್ರೋಲ್ ಪ್ರತಿ ಲೀಟರ್ - 132. 85 ಪೈಸೆ
- ಶಲ್ ಪ್ರೀಮಿಯಂ ಡಿಸೇಲ್ ಪ್ರತಿ ಲೀಟರ್ - 136.51 ಪೈಸೆ
ಡೀಸೆಲ್ ಬೆಲೆ ಮತ್ತಷ್ಟು ದುಬಾರಿ
ಬೆಂಗಳೂರಿನ ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 123 ರೂಪಾಯಿಯಿಂದ 126 ರೂಪಾಯಿಗೆ ಏರಿಕೆಯಾಗಿದೆ. ಈಗಾಗಲೇ ಜನಸಾಮಾನ್ಯರ ಬದುಕಿಗೆ ಇಂಧನ ದರ ಏರಿಕೆ ಹೊಡೆತ ನೀಡಿದೆ. ಇದರ ಬೆನ್ನಲ್ಲೇ ಹಲವರು ಶೆಲ್ ಪೆಟ್ರೋಲ್ ಗ್ರಾಹಕರಾಗಿದ್ದು, ದಿಢೀಕರ್ ಮತ್ತೆ ಏರಿಕೆಯಿಂದ ಕಂಗಾಲಾಗಿದ್ದಾರೆ.
ಎಲ್ಲಾ ವಸ್ತುಗಳ ಬೆಲೆ ಏರಿಕೆ
ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಾರಿಗೆ, ಅಗತ್ಯ ವಸ್ತುಗಳು ಬೆಲೆಯೂ ಏರಿಕೆಯಾಗಿದೆ. ರಾಜ್ಯದಲ್ಲಿ ಇದೀಗ ಅಕ್ಕಿ ದರದಲ್ಲಿ ಭಾರಿ ಏರಿಕೆಯಾಗಿದೆ. ತೊಗರಿಬೇಳೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಮಿತ ಬಳಕೆಗೆ ಮೋದಿ ಕರೆ
ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ ಮೊದಲೇ ದೇಶದ ಜನತೆಗೆ ಮನವಿ ಮಾಡಿದ್ದರು. ಪೆಟ್ರೋಲ್ ಡೀಸೆಲ್ ಮಿತಿ ಬಳಕೆ, ಅನಗತ್ಯ ಪ್ರಯಾಣ ಕಡಿತ, ಸಾರಿಗೆ ವಾಹನ ಬಳಕೆ, ಎಲೆಕ್ಟ್ರಿಕ್ ವಾಹನ ಬಳಕೆಗೆ ಮನವಿ ಮಾಡಿದ್ದಾರೆ. ಈ ಮೂಲಕ ವಿದೇಶಿ ಅವಲಂಬನೆ ಕಡಿಮೆ ಮಾಡಲು ಸೂಚಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

