MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ

ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ

ಬಿಗ್‌ಬಾಸ್‌ ಖ್ಯಾತಿಯ ನಟ ಧ್ರುವಂತ್ ತಮ್ಮ ಬೈಕ್ ಕಳ್ಳತನವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಒಂದು ವರ್ಷವಾದರೂ ತಮಗೆ ನ್ಯಾಯ ಸಿಗದೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

2 Min read
Author : Suchethana D
Published : May 18 2026, 07:34 PM IST
Share this Photo Gallery
  • FB
  • TW
  • Linkdin
  • Whatsapp
16
ಅಹಸ್ಯ ಪೊಲೀಸ್‌ ವ್ಯವಸ್ಥೆ
Image Credit : social media

ಅಹಸ್ಯ ಪೊಲೀಸ್‌ ವ್ಯವಸ್ಥೆ

ನಮ್ಮ ಪೊಲೀಸ್‌ ವ್ಯವಸ್ಥೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನ ತಮಗಾಗಿರುವ ಅನ್ಯಾಯದ ಬಗ್ಗೆ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇಂಥ ಪೋಸ್ಟ್‌ ಮಾಡಿದಾಗಲೆಲ್ಲಾ ಅದಕ್ಕೆ ಕಮೆಂಟ್‌ ಹಾಕುವವರು ತಮಗಾಗಿರುವ ಅನ್ಯಾಯದ ಬಗ್ಗೆ ಕೋಪ ವ್ಯಕ್ತಪಡಿಸುತ್ತಾರೆ. ಆದರೆ ಬಡವನ ಕೋಪ ದವಡೆಗೆ ಮೂಲ ಎನ್ನುವ ಸ್ಥಿತಿ.

Add Asianetnews Kannada as a Preferred SourcegooglePreferred
26
ಕಳ್ಳ ಗೊತ್ತಿದ್ರೂ ಪೊಲೀಸರ ಮೌನ
Image Credit : social media

ಕಳ್ಳ ಗೊತ್ತಿದ್ರೂ ಪೊಲೀಸರ ಮೌನ

ಅದರಲ್ಲಿಯೂ ವಾಹನ ಕಳ್ಳತನವಾದಾಗ, ಒಂದು ಪ್ರದೇಶದಲ್ಲಿ ಇಂಥವರೇ ಕಳ್ಳರು ಎನ್ನುವುದು ಆ ವ್ಯಾಪ್ತಿಯ ಪೊಲೀಸರಿಗೆ ತಿಳಿಯದೇ ಇರುವ ವಿಷ್ಯವೇ ಅಲ್ಲ. ಬೈಕ್ ಕಳ್ಳತನವಾದರಂತೂ ಅದನ್ನು ಕಳುವು ಮಾಡಿ ಅದರ ಪಾರ್ಟ್ಸ್‌ಗಳು ಇಂಥದ್ದೇ ಗ್ಯಾರೇಜ್‌ಗೆ ಹೋಗಿರುತ್ತವೆ ಎನ್ನುವ ಸಂಪೂರ್ಣ ಡಿಟೇಲ್ಸ್‌ ಪೊಲೀಸರಿಗೆ ಗೊತ್ತಿರುತ್ತದೆ. ಆದರೆ ಸಾಮಾನ್ಯ ಜನರು ಕಂಪ್ಲೇಂಟ್‌ ಕೊಟ್ಟರೆ ಮಾತ್ರ ದೂರುದಾರರ ಚಪ್ಪಲಿ ಸವೆಯಬೇಕೇ ವಿನಾ ಇಂಥವರೇ ಕಳ್ಳರು ಎಂದು ತಿಳಿದಿದ್ದರೂ, ಪೊಲೀಸರು ಮೌನವಾಗಿರುವ ಬಗ್ಗೆ ಇದಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸುವುದು ಇದ್ದೇ ಇದೆ.

Related Articles

Related image1
ರೇ*ಪಿಸ್ಟ್​ಗೆ ಪೊಲೀಸರ ರಕ್ಷಣೆ; ಪದೇ ಪದೇ ಜಾಮೀನು- ಕೋರ್ಟ್​ನಲ್ಲಿಯೇ ಇರಿದು ಕೊಂದ ಮಹಿಳೆಯರು
Related image2
ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ
36
ದೊಡ್ಡವರ ಬಳಿ ಹೇಳಿಸಿದ್ರೆ ದಿಢೀರ್‌ ಸಿಗುತ್ತೆ ವಸ್ತುಗಳು!
Image Credit : social media

ದೊಡ್ಡವರ ಬಳಿ ಹೇಳಿಸಿದ್ರೆ ದಿಢೀರ್‌ ಸಿಗುತ್ತೆ ವಸ್ತುಗಳು!

ಎಲ್ಲಿಯಾದರೂ ಏನಾದರೂ ವಸ್ತುಗಳು ಕಳುವಾದರೂ ಇದೇ ಸ್ಥಿತಿ. ಸೆಲೆಬ್ರಿಟಿಗಳ ವಸ್ತುವಾದರೆ ಬೇಗನೇ ಸಿಕ್ಕಿಬಿಡುತ್ತದೆ ಅಥವಾ ಇನ್ನಾರಿಂದಲೋ ಫೋನ್‌ ಮಾಡಿಸಿದ್ರೆ ವರ್ಷವಾದರೂ ಸಿಗದ ವಸ್ತುಗಳ ಕ್ಷಣ ಮಾತ್ರದಲ್ಲಿ ಸಿಕ್ಕಿಬಿಟ್ಟಿರುವ ಉದಾಹರಣೆಗಳು ಇವೆ. ಹೀಗೆ ಹೇಳುತ್ತಾ ಹೋದರೆ ಈ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡುವಷ್ಟು ಘಟನೆಗಳು ದಿನನಿತ್ಯ ನಡೆಯುತ್ತಿವೆ. ದಕ್ಷರಾಗಿದ್ದು, ಎಂಜಲು ಕಾಸಿಗೆ ಆಸೆ ಪಡದೇ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪೊಲೀಸರು ಇದ್ದರೂ, ಜನರ ಅನುಭವ ಕೇಳುತ್ತಿದ್ದರೆ ಇಂಥವರ ಸಂಖ್ಯೆ ಅತಿ ವಿರಳ ಎನ್ನಿಸುವುದು ಉಂಟು.

46
ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ ಈ ವ್ಯವಸ್ಥೆ
Image Credit : Asianet News

ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ ಈ ವ್ಯವಸ್ಥೆ

ಸಾಮಾನ್ಯ ಜನರ ಬದುಕೇ ದುಸ್ತರ ಎನ್ನುವ ಮಾತು ಸುಳ್ಳು. ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗುತ್ತದೆ. ಕಳ್ಳನನ್ನು ಹಿಡಿದುಕೊಟ್ಟರೂ ಪೊಲೀಸರು ಮೌನವಾಗಿರುವ ಬಗ್ಗೆ ನೋವಿನ ಘಟನೆ ತೆರೆದಿಟ್ಟಿದ್ದಾರೆ Bigg Boss ಖ್ಯಾತಿಯ ಧ್ರುವಂತ್‌. ಪಿಯುಸಿಯಲ್ಲಿ ಅಪ್ಪ ಕೊಡಿಸಿದ ಬೈಕ್‌, ತಮ್ಮ ಪ್ರೀತಿಯ, ತಮ್ಮ ಲಕ್ಕಿಯ ಬೈಕ್‌ ಕಳ್ಳತನದ ಪ್ರಕರಣದ ಬಗ್ಗೆ, ಅಸಹ್ಯ ಪೊಲೀಸ್‌ ವ್ಯವಸ್ಥೆಯ ಬಗ್ಗೆ ನೊಂದು ನುಡಿದಿದ್ದಾರೆ ಧ್ರುವಂತ್‌.

56
ಬಿಗ್‌ಬಾಸ್‌ ಧ್ರುವಂತ್‌ ಕಿಡಿ
Image Credit : Asianet News

ಬಿಗ್‌ಬಾಸ್‌ ಧ್ರುವಂತ್‌ ಕಿಡಿ

ಬಾಸ್‌ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಕಾರ್ಯ ನಿಮಿತ್ತ ಎಲ್ಲಿಗೋ ಹೋಗಬೇಕಾದಾಗ ತಮ್ಮ ಈ ಲಕ್ಕಿ ಬೈಕ್‌ ಅನ್ನು ಸ್ನೇಹಿತನ ಮನೆಯ ಎದುರು ನಿಲ್ಲಿಸಿ ಹೋಗಿದ್ದೆ. ಅಲ್ಲಿಂದ ಅದನ್ನು ಯಾರೋ ಕಳುವು ಮಾಡಿಕೊಂಡು ಹೋದ. ಅವನು ಯಾರು ಎನ್ನುವುದು ನನಗೆ ಗೊತ್ತಾಯ್ತು.

66
ಕಳ್ಳನ ಹಿಡಿದುಕೊಟ್ರೂ ಏನೂ ಆಗಿಲ್ಲ ಎಂದ ನಟ
Image Credit : Instagram

ಕಳ್ಳನ ಹಿಡಿದುಕೊಟ್ರೂ ಏನೂ ಆಗಿಲ್ಲ ಎಂದ ನಟ

ಈ ಬಗ್ಗೆ ಪೊಲೀಸರಲ್ಲಿ ದೂರು ಕೊಟ್ಟೆ. ಅವನನ್ನು ಕರೆಸಿ ವಿಚಾರಣೆ ಕೂಡ ಮಾಡಿದ್ರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಒಂದು ವರ್ಷವಾದ್ರೂಇದುವರೆಗೆ ಅವನೇ ಕಳ್ಳ ಎಂದು ಹೇಳಿದರೂ ಪೊಲೀಸರು ಬೈಕ್‌ ನನಗೆ ಕೊಟ್ಟಿಲ್ಲ. ಇದು ನಮ್ಮ ಪೊಲೀಸ್‌ ವ್ಯವಸ್ಥೆ ಎಂದು ಕಿಡಿ ಕಾರಿದ್ದಾರೆ ಧ್ರುವಂತ್‌. ಇವರ ಈ ಮಾತಿಗೆ ಹಲವರು ಕಮೆಂಟ್‌ ಮಾಡಿದ್ದು, ಕಳ್ಳರ ಜೊತೆ ಪೊಲೀಸರು ಶಾಮೀಲಾಗ್ತಾರೆ, ಅವರಿಂದ ವಸೂಲಿ ಮಾಡ್ತಾರೆ ಅದಕ್ಕಾಗಿಯೇ ಹೀಗೆ ಮಾಡ್ತಾರೆ ಎಂದೆಲ್ಲಾ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಕ್ರೈಮ್ ನ್ಯೂಸ್
ಮನರಂಜನಾ ಸುದ್ದಿ
ಟಿವಿ ಶೋ
ಪೊಲೀಸ್
ಕರ್ನಾಟಕ ಸರ್ಕಾರ
ಭ್ರಷ್ಟಾಚಾರ

Latest Videos
Recommended Stories
Recommended image1
ಜಡ್ಜ್ ಅತ್ತೆಗೆ ಸೊಸೆಯಾದ ಮಾಜಿ 'ಮಿಸ್ ಪುಣೆ ಟ್ವಿಶಾ ಶರ್ಮಾ'; ಮದುವೆಯಾಗಿ 5 ತಿಂಗಳಿಗೆ ನಿಗೂಢ ಸಾವು!
Recommended image2
ದೆವ್ವ-ಗಾಳಿ ಅಂತ ದೇವಸ್ಥಾನ ಸುತ್ತಾಡ್ತಿದ್ದಾಗಲೇ ಅಪ್ರಾಪ್ತೆಗೆ ಹೆರಿಗೆ; ಟ್ರ್ಯಾಕ್ಟರ್ ಮಂಜಣ್ಣ ಅರೆಸ್ಟ್!
Recommended image3
Bengaluru: ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ
Related Stories
Recommended image1
ರೇ*ಪಿಸ್ಟ್​ಗೆ ಪೊಲೀಸರ ರಕ್ಷಣೆ; ಪದೇ ಪದೇ ಜಾಮೀನು- ಕೋರ್ಟ್​ನಲ್ಲಿಯೇ ಇರಿದು ಕೊಂದ ಮಹಿಳೆಯರು
Recommended image2
ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved