MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಸಬರ್ಬನ್ ರೈಲು 4 ಕಾರಿಡಾರ್ ಯೋಜನೆ, ನಗರದಲ್ಲಿ ಇನ್ನು ಲೆವೆಲ್ ಕ್ರಾಸಿಂಗ್ ಇರಲ್ಲ: ಅಶ್ವಿನಿ ವೈಷ್ಣವ್‌

ಬೆಂಗಳೂರು ಸಬರ್ಬನ್ ರೈಲು 4 ಕಾರಿಡಾರ್ ಯೋಜನೆ, ನಗರದಲ್ಲಿ ಇನ್ನು ಲೆವೆಲ್ ಕ್ರಾಸಿಂಗ್ ಇರಲ್ಲ: ಅಶ್ವಿನಿ ವೈಷ್ಣವ್‌

ಬೆಂಗಳೂರಿನಾದ್ಯಂತ ರೈಲು ಸಂಪರ್ಕವನ್ನು ಸುಧಾರಿಸಲು 4 ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಭೂಸ್ವಾಧೀನ, ನಿಲ್ದಾಣ ನಿರ್ಮಾಣ, ವಿದ್ಯುದೀಕರಣ ಮತ್ತು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವಂತಹ ಪ್ರಮುಖ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.

1 Min read
Author : Gowthami K
Published : May 18 2026, 02:30 PM IST
Share this Photo Gallery
  • FB
  • TW
  • Linkdin
  • Whatsapp
15
ನಗರಾದ್ಯಂತ ರೈಲು ಸಂಪರ್ಕ, 4 ಕಾರಿಡಾರ್ ಯೋಜನೆ
Image Credit : Asianet News

ನಗರಾದ್ಯಂತ ರೈಲು ಸಂಪರ್ಕ, 4 ಕಾರಿಡಾರ್ ಯೋಜನೆ

ಬೆಂಗಳೂರು: ನಗರಾದ್ಯಂತ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ 4 ಕಾರಿಡಾರ್ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರಗತಿಯಲ್ಲಿವೆ‌ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಬೆಂಗಳೂರು ಎಸ್ಎಂವಿಟಿ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ ನಡುವೆ ನೂತನ ದ್ವಿಸಾಪ್ತಾಹಿಕ ರೈಲಿಗೆ ಭಾನುವಾರ ವರ್ಚುವಲ್‌ ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred
25
ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣ
Image Credit : Asianet News

ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣ

ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣದ ಕೆಲಸ ನಡೆಯುತ್ತಿದೆ. ಕೆಎಸ್ಆರ್ ಬೆಂಗಳೂರು- ದೇವನಹಳ್ಳಿ ಕಾರಿಡಾರ್‌ ವಿನ್ಯಾಸವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಅನುಮೋದಿಸಿ, ಭೂತಾಂತ್ರಿಕ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಕೆಂಗೇರಿ- ವೈಟ್‌ಫೀಲ್ಡ್ ಕಾರಿಡಾರ್‌ ಯೋಜನೆಯನ್ನು ಇತ್ತೀಚೆಗೆ ಅನುಮೋದಿಸಲಾಗಿದ್ದು, ಶೀಘ್ರ ಸರ್ವೇ ಕಾರ್ಯ ಆರಂಭವಾಗಲಿದೆ ಎಂದರು.

Related Articles

Related image1
ರಾಜಧಾನಿ ಬೆಂಗ್ಳೂರಿನ ಪಕ್ಕದ ನಗರಗಳಿಗೂ ಸಬರ್ಬನ್ ರೈಲು?
Related image2
L&T ಜೊತೆಗಿನ ಹಳೆ ಒಪ್ಪಂದಕ್ಕಿಂತ ಭಾರೀ ಏರಿಕೆ ಕಂಡ ಟೆಂಡರ್ ಮೊತ್ತ; ಸಬರ್ಬನ್ ರೈಲು ಪೂರ್ಣಗೊಳ್ಳೋದು ಯಾವಾಗ?
35
ಶೇ.97 ವಿದ್ಯುದೀಕರಣ ಪೂರ್ಣ
Image Credit : Asianet News

ಶೇ.97 ವಿದ್ಯುದೀಕರಣ ಪೂರ್ಣ

ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 3840 ಕಿ.ಮೀ. ಉದ್ದದ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಶೇ.97ರಷ್ಟು (3747 ಕಿ.ಮೀ.) ಮುಗಿದಿದೆ. 707ರಷ್ಟು ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿವೆ. 2,160 ಕೋಟಿ ರು. ವೆಚ್ಚದಲ್ಲಿ 62 ರೈಲು ನಿಲ್ದಾಣಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು. 

45
ಲೆವೆಲ್ ಕ್ರಾಸಿಂಗ್‌ಗೆ ಗುಡ್‌ಬೈ:
Image Credit : Asianet News

ಲೆವೆಲ್ ಕ್ರಾಸಿಂಗ್‌ಗೆ ಗುಡ್‌ಬೈ:

ಮುಂದಿನ ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್ ಇರಬಾರದೆಂಬ ಪ್ರಧಾನಿ ಮೋದಿ ಸೂಚನೆಯಂತೆ ಕಾರ್ಯೋನ್ಮುಖರಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ನೆರಡು ವರ್ಷಗಳಲ್ಲಿ ಯಾವುದೇ ಲೆವೆಲ್‌ ಕ್ರಾಸಿಂಗ್‌ ಇರಲ್ಲ. ಪ್ರಸ್ತುತ 47 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದೆಡೆ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.

55
ಯಾರೆಲ್ಲ ಇದ್ದರು
Image Credit : Asianet News

ಯಾರೆಲ್ಲ ಇದ್ದರು

ಬೆಂಗಳೂರು ಸೆಂಟ್ರಲ್‌ ಸಂಸದ ಪಿ.ಸಿ. ಮೋಹನ್, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ಇದ್ದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಇದ್ದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಭಾರತೀಯ ರೈಲ್ವೆ
ಸುದ್ದಿ
ರೈಲು
ಕರ್ನಾಟಕ ಸುದ್ದಿ
ಅಶ್ವಿನಿ ವೈಷ್ಣವ್

Latest Videos
Recommended Stories
Recommended image1
BREAKING: ಕೊಡಗಿನ ದುಬಾರೆ ಶಿಬಿರದಲ್ಲಿ ಸಾಕಾನೆಗಳ ನಡುವೆ ಕಾಳಗ; ಆನೆ ಕೆಳಗೆ ಸಿಲುಕಿ ಪ್ರವಾಸಿ ಮಹಿಳೆ ಬಲಿ!
Recommended image2
ಬೆಟ್ಟದ ನಲ್ಲಿಕಾಯಿ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವು: ಹೃದಯವಿದ್ರಾವಕ ಘಟನೆ
Recommended image3
Davanagere: RSI ಮೋಸ ಆರೋಪಕ್ಕೆ ಟ್ಚಿಸ್ಟ್, ಖಾಕಿ ಜೊತೆಯೇ ಯುವತಿಯ ರಂಗಿನಾಟ! ಪೊಲೀಸರೇ ಇವಳ ಟಾರ್ಗೆಟ್?
Related Stories
Recommended image1
ರಾಜಧಾನಿ ಬೆಂಗ್ಳೂರಿನ ಪಕ್ಕದ ನಗರಗಳಿಗೂ ಸಬರ್ಬನ್ ರೈಲು?
Recommended image2
L&T ಜೊತೆಗಿನ ಹಳೆ ಒಪ್ಪಂದಕ್ಕಿಂತ ಭಾರೀ ಏರಿಕೆ ಕಂಡ ಟೆಂಡರ್ ಮೊತ್ತ; ಸಬರ್ಬನ್ ರೈಲು ಪೂರ್ಣಗೊಳ್ಳೋದು ಯಾವಾಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved