Bengaluru: ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ
ಹೊಸಕೋಟೆ ಬಿರಿಯಾನಿ ತಿನ್ನಲು ಬೆಳಗಿನ ಜಾವ ಹೊರಟಿದ್ದ ವಿದ್ಯಾರ್ಥಿ ಧೀರಜ್ ಮೇಲೆ ರಾಮಮೂರ್ತಿ ನಗರದಲ್ಲಿ ಚಾಕು ಇರಿತ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಪೊಲೀಸರು ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
14

Image Credit : Gemini
ವಿದ್ಯಾರ್ಥಿಗೆ ಚಾಕು ಇರಿತ
ಬೆಳಗಿನ ಜಾವ ಹೊಸಕೋಟೆಯ ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು 21 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : Gemini
ಬೆಳಗಿನ ಜಾವ ನಡೆದ ಘಟನೆ
ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ಧೀರಜ್ ಮತ್ತು ಆರೋಪಗಳ ನಡುವೆ ಗಲಾಟೆ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಆರೋಪಿಗಳು ಧೀರಜ್‌ಗೆ ಚಾಕು ಇರಿದಿದ್ದಾರೆ.
34
Image Credit : AI Image
ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ
ಧೀರಜ್‌ನ ಬೆನ್ನಿಗೆ ಹಾಗೂ ತೊಡೆ ಭಾಗಕ್ಕೆ ಚಾಕು ಇರಿಯಲಾಗಿದೆ. ಧೀರಜ್ ಬಿಬಿಎ ಓದುತ್ತಾ ಫ್ಲಿಫ್ಕಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಘಟನೆ ಸಂಬಂಧ ಪೊಲೀಸರು ಭುವನ್, ಮಿಥುನ್ ಸೇರಿ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
44
Image Credit : Getty
ಪ್ರಾಣಾಪಾಯದಿಂದ ಪಾರು, ಚಿಕಿತ್ಸೆ ಪಡೆಯುತ್ತಿರುವ ಧೀರಜ್
ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಹಿನ್ನಲೆ ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.
Latest Videos

