ದಾವಣೆಗೆರೆ ಶಿಕ್ಷಕ ಮನೆ ಮುಂದೆ ನಿಂತಿದ್ದಂತೆ ಬಡಿದ ಸಿಡಿಲಿನ ಅಬ್ಬರಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಾಲೆ ಮುಖ್ಯೋಪಾದ್ಯಯರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನ ಸಾವು ಇಡೀ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. 

ದಾವಣೆಗೆರೆ (ಮೇ.28) ಕರ್ನಾಟಕದ ಹಲೆವೆಡೆ ಭಾರಿ ಗಾಳಿ ಮಳೆ, ಸಿಡಿಲು ಅಬ್ಬರಿಸುತ್ತಿದೆ. ಹೆಲೆವೆಡೆ ಈಗಾಗಲೇ ಆಲಿಕಲ್ಲು ಮಳೆ ಸುರಿದಿದೆ. ಇತ್ತ ಭಾರಿ ಸಿಡಿಲಿಗೆ ಜಾನುವಾರುಗಳು ಮೃತಪಟ್ಟಿದೆ. ಇದೀಗ ದಾವಣೆಗರೆಯಲ್ಲಿ ಶಾಲೆಯ ಮುಖ್ಯೋಪಾದ್ಯಾಯ ಸಿಡಿಲಿನ ಅಬ್ಬರಕ್ಕೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಲೆಕುಂಬಳೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್‌ಮಾಸ್ಟರ್ ಆಗಿದ್ದ ನಾಗರಾಜಪ್ಪ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆ ಮುಂದೆ ನಿಂತಿದ್ದಾಗ ಸಿಡಿಲು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಂಬಳೂರು ಗ್ರಾಮದಲ್ಲಿ ಹೆಡ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜಪ್ಪ ಭಾನುವಾರ ರಜೆ ಕಾರಣ ತಮ್ಮ ವೈಯುಕ್ತಿಕ ಕೆಲಸ ಕಾರ್ಯ ಮುಗಿಸಲು ಪಟ್ಟಣಕ್ಕೆ ತೆರಳಿದ್ದರು. ಎಲ್ಲಾ ಕೆಲಸಗಳನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ಮಳೆ ಶುರುವಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ನಾಗರಾಜಪ್ಪ ಮನೆ ಸೇರಿಕೊಂಡಿದ್ದಾರೆ.

ಮಳೆ ಜೊತೆ ಸಿಡಿಲು ಕೂಡ ಆರಂಭಗೊಂಡಿದೆ. ಮನೆಯ ಮುಂದೆ ನಿಂತು ಗಾಳಿ ಮಳೆ ಹಾಗೂ ಪರಿಸ್ಥಿತಿ ಅವಲೋಕಿಸುತ್ತಿದ್ದರು. ಇದೇ ವೇಳೆ ಭಾರಿ ಸಿಡಿಲು ಶಬ್ದ ಕೇಳಿದೆ. ಒಮ್ಮೆಲೆ ಸಿಡಿಲಿನ ಶಬ್ಬಕ್ಕೆ ನಾಗರಾಜಪ್ಪ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ನಾಗರಾಜಪ್ಪ ಕುಸಿದು ಬಿದ್ದ ಬೆನ್ನಲ್ಲೇ ಕುಟುಂಬಸ್ಥರು ಮನೆ ಒಳಗಿನಿಂದ ಓಡಿ ಬಂದಿದ್ದಾರೆ.

ನಾಗರಾಜಪ್ಪಗೆ ತೀವ್ರ ಹೃದಯಾಘಾತವಾಗಿದೆ. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ನಾಗರಾಜಪ್ಪ ಮೃತಪಟ್ಟಿದ್ದಾರೆ. ವೈದ್ಯರು ಪರಿಶೀಲಿಸಿ ನಾಗರಾದಪ್ಪ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. 55 ವರ್ಷದ ನಾಗರಾಜಪ್ಪ ಸಿಡಿಲಿನ ಅಬ್ಬರದಲ್ಲಿ ಕುಸಿದು ಬಿದ್ದು ಹೃದಾಯಾಘಾತಕ್ಕೆ ನಿಧನರಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ರಾಯಚೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

ರಾಯಚೂರು ಜಿಲ್ಲೆ ಲಿಂಗಸೂಗೂರು ತಾ‌. ಕೋಮಲಾಪುರ್ ಗ್ರಾಮದಲ್ಲಿ ಸಿಡಿಲು ಬಡಿದು ಕರಿಯಪ್ಪ ಗೆನ್ನಾಕಿಹಾಳ್ (45) ಮೃತಪಟ್ಟ ಘಟನೆ ನಡೆದಿದೆ. ಇದೇ ವೇಳೆ ಪಕ್ಕದಲ್ಲಿದ್ದ ಮತ್ತೊಬ್ಬ ಬಸವರಾಜ್‌ಗೆ ಗಂಭೀರ ಗಾಯವಾಗಿದೆ. ಗ್ರಾಮದಲ್ಲಿ ಟ್ರಾಕ್ಟರ್ ಗೆ ಗೊಬ್ಬರ ತುಂಬುತ್ತಿದ್ದಾಗ ಕರಿಯಪ್ಪ ಹಾಗೂ ಬಸವರಾಜ್‌ಗೆ ಸಿಡಿಲು ಬಡಿದಿದೆ. ಈ ವೇಳೆ ಸಿಡಿಲು ಬಡಿದು ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿರೆ, ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರವಾರದಲ್ಲಿ ಸಿಡಿಲು ಬಡಿದು ಜಾನುವಾರು ಸಾವು

ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಸಿಡಿಲು ಬಡಿದು ಜಾನುವಾರುಗಳು ಸಾವುಕಂಡಿದೆ. ರೋಮನ್ ಬಾವಟಿಸ್ ದಾಲ್ಮೆತ್ ಅವರಿಗೆ ಸೇರಿದ ಮೂರು ಜಾನುವಾರು ಸಾವು ಕಂಡಿದೆ. ಸಿಡಿಲಿನ ಅಬ್ಬರಕ್ಕೆ ಪಶುಸಂಗೋಪನೆಯನ್ನೇ ಅವಲಂಬಿತವಾದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತಕ್ಷಣ ಪರಿಹಾರ ಒದಗಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.