ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಯಭೇರಿ ಬಾರಿಸಿದೆ. 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ, 2ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು, ಒಟ್ಟು 10 ಮಂದಿ ಕಣದಲ್ಲಿದ್ದರು. ಆ ಪೈಕಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ, ಜೆಡಿಎಸ್ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಜಯಗಳಿಸಿದರು. ಚಿಕ್ಕಮಗಳೂರು ಕೃಷಿ ಪತ್ತಿನ ಸಂಘದ 2 ಸ್ಥಾನ ಬಗ್ಗೆ ಕುತೂಹಲವಿತ್ತು. ಇಲ್ಲಿ ರವಿ, ಭೋಜೇಗೌಡ ಸ್ಪರ್ಧಿಸಿದ್ದರು. 28 ಮತದಾರರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ರವಿ, ಭೋಜೇಗೌಡ ಅವರುಗಳನ್ನು ಶನಿವಾರ ಬೆಳಗ್ಗೆ ನೇರವಾಗಿ ಮತದಾನ ಕೇಂದ್ರಕ್ಕೆ ಕರೆ ತಂದರು. ಅಂತಿಮವಾಗಿ ರವಿ 27, ಭೋಜೇಗೌಡ 30 ಮತ ಪಡೆದು ಜಯಗಳಿಸಿದರು.

10:00 AM (IST) Jan 18
ಬಿಗ್‌ಬಾಸ್ ಸೀಸನ್ 12ರ ಮಾಜಿ ಸ್ಪರ್ಧಿ ಮಂಜುಭಾಷಿಣಿ ಅವರು ಫೈನಲ್‌ನಲ್ಲಿ ತಾವು ಯಾರಿಗೆ ಮತ ಹಾಕಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ತಮ್ಮ 99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಸಮಾನವಾಗಿ ಹಂಚಿದ್ದು, ಇವರಲ್ಲಿ ಯಾರು ಗೆದ್ದರೂ ಸಂತೋಷ ಎಂದಿದ್ದಾರೆ.
09:22 AM (IST) Jan 18
ದೊಡ್ಡ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕೆಲಸ ಮಾಡುತ್ತಿದ್ದೇವೆ. ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಸಿದರು.
08:49 AM (IST) Jan 18
08:35 AM (IST) Jan 18
Land acquisition and compensation distribution: ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಪುರಸಭೆ ಸಭಾಭವನದಲ್ಲಿ ಭೂಮಾಲೀಕರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ.
08:12 AM (IST) Jan 18
ರಾಜ್ಯ ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ನಡುವೆ ಮಹತ್ವದ ಒಡಂಬಡಿಕೆ ನಡೆದಿದ್ದು, ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರು. ವೆಚ್ಚದಲ್ಲಿ ಒಂದು ಸಾವಿರ ಹಾಸಿಗೆಗಳ ಸಾಮರ್ಥ್ಯದ ಮಾನವ ಬಹು ಅಂಗಾಂಗ ಕಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ.
08:00 AM (IST) Jan 18
ತುಮಕೂರು ಜಿಲ್ಲೆಯ ವೈ.ಎನ್.ಹೊಸಕೋಟೆಯಲ್ಲಿ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕೋಟ್ಯಂತರ ಮೌಲ್ಯದ ಭೂಮಿ ದಾನ ಮಾಡಿದ್ದ ಸಾದಿಕ್ ಸಾಬ್ ಅವರ ಪುತ್ರ ಸೈಯ್ಯದ್ ಅಕ್ರಂ, ಅದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್ ಸೌಲಭ್ಯ ಸಿಗದೆ ಕೊನೆಯುಸಿರೆಳೆದಿದ್ದಾರೆ.
07:54 AM (IST) Jan 18
ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷವು ತನ್ನ ಮೊದಲ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ಗೃಹಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮನೆಯೊಡತಿಗೆ ತಲಾ 2 ಸಾವಿರ ರು., ಮಹಿಳೆಯರ ರೀತಿ ಪುರುಷರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭಾಗ್ಯ ಸೇರಿ ಐದು ಭರವಸೆ
07:45 AM (IST) Jan 18
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, 2028ರ ವರೆಗೆ ಸಿಎಂ ಕುರ್ಚಿ ಖಾಲಿ ಇಲ್ಲ ಮತ್ತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಕೊಳೆಗೇರಿ ಮಂಡಳಿಯಿಂದ ಒಂದು ಮನೆಯನ್ನೂ ನಿರ್ಮಿಸಿಲ್ಲ ಎಂದು ಆರೋಪಿಸಿದ್ದಾರೆ.
07:43 AM (IST) Jan 18
ಆನ್‌ಲೈನ್‌ನಲ್ಲಿ ಮೂಲಭೂತವಾದವನ್ನು ಹರಡುತ್ತಿದ್ದ ಆರೋಪದಲ್ಲಿ ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ಬಂಧಿತಳಾಗಿದ್ದ ಅಲ್‌ಖೈದಾ ಉಗ್ರಸಂಘಟನೆಯ ಸದಸ್ಯೆ ಶಮಾ ಪರ್ವೀನ್, ಸಶಸ್ತ್ರ ದಂಗೆಯ ಮೂಲಕ ಚುನಾಯಿತ ಸರ್ಕಾರ ಬೀಳಿಸಿ, ದೇಶದಲ್ಲಿ ಷರಿಯಾ ಕಾನೂನು ಜಾರಿಯ ಉದ್ದೇಶ ಹೊಂದಿದ್ದಳು
07:33 AM (IST) Jan 18
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಶಿವಲಿಂಗದ ಪೀಠ ಮತ್ತು ಪಾನಿಬಟ್ಟಲು ಮಾದರಿಯ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಈ ಐತಿಹಾಸಿಕ ಶೋಧವು ಕುತೂಹಲ ಕೆರಳಿಸಿದೆ.
07:22 AM (IST) Jan 18
ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಅಸ್ತಿತ್ವದಲ್ಲಿ ಇಲ್ಲದ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ₹20 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರ ಅಭಿಮಾನಿಗಳ ಒಕ್ಕೂಟ ತಿಳಿಸಿದೆ.
07:11 AM (IST) Jan 18
MLA Srinivas Mane: ವರದಾ-ಬೇಡ್ತಿ ನದಿ ಜೋಡಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಯೋಜನೆ ಜಾರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಿದ್ಧವಿವೆ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.