- Home
- Entertainment
- Cine World
- ಪಕ್ಕಾ ಎಕ್ಸ್‌ಪೀರಿಯನ್ಸ್ ಇರುವ 3 ಬ್ರೇಕಪ್ ಆಗಿರೋ ಗಂಡ ಬೇಕು, 100 ಎಕರೆ ಜಮೀನ್ದಾರ ಆಗಿರಬೇಕು: ನಟಿ ಮೀನಾಕ್ಷಿ!
ಪಕ್ಕಾ ಎಕ್ಸ್‌ಪೀರಿಯನ್ಸ್ ಇರುವ 3 ಬ್ರೇಕಪ್ ಆಗಿರೋ ಗಂಡ ಬೇಕು, 100 ಎಕರೆ ಜಮೀನ್ದಾರ ಆಗಿರಬೇಕು: ನಟಿ ಮೀನಾಕ್ಷಿ!
ಸ್ಟಾರ್ ನಟಿ ಮೀನಾಕ್ಷಿ ಚೌಧರಿ ಸದ್ಯ ಸಖತ್ ಹಾಟ್ ಟಾಪಿಕ್ ಆಗಿದ್ದಾರೆ. ಒಂದೆಡೆ ಸತತ ಯಶಸ್ಸು, ಇನ್ನೊಂದೆಡೆ ಮದುವೆ ಸುದ್ದಿಯಿಂದ ಚರ್ಚೆಯಲ್ಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ.

ಸಂಕ್ರಾಂತಿ ಕ್ವೀನ್ ಆಗಿ ಮೀನಾಕ್ಷಿ ಚೌಧರಿ
ಕಳೆದ ವರ್ಷ ಸಂಕ್ರಾಂತಿಗೆ ಹಿಟ್ ಕೊಟ್ಟಿದ್ದ ಮೀನಾಕ್ಷಿ, ಈಗ 'ಅನಗನಗಾ ಒಕ ರಾಜು' ಚಿತ್ರದ ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ. ನವೀನ್ ಪೋಲಿಶೆಟ್ಟಿ ಜೊತೆಗಿನ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಮೀನಾಕ್ಷಿ 'ಸಂಕ್ರಾಂತಿ ಕ್ವೀನ್' ಆಗಿ ಮಿಂಚುತ್ತಿದ್ದಾರೆ.
ಮದುವೆ ವದಂತಿಗಳಿಗೆ ಮೀನಾಕ್ಷಿ ಸ್ಪಷ್ಟನೆ
ಇತ್ತೀಚೆಗೆ ಮೀನಾಕ್ಷಿ ಚೌಧರಿ ಮದುವೆ ವಿಚಾರ ಚರ್ಚೆಗೆ ಬಂದಿತ್ತು. ನಟ ಸುಶಾಂತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅದೆಲ್ಲಾ ಸುಳ್ಳು, ಸುಶಾಂತ್ ನನ್ನ ಒಳ್ಳೆಯ ಸ್ನೇಹಿತ, ನಾನೀಗ ಸಿಂಗಲ್ ಎಂದಿದ್ದಾರೆ.
ಮೀನಾಕ್ಷಿ ಚೌಧರಿ ಮೊದಲ ಕ್ರಶ್
ಈ ನಡುವೆ ಮೀನಾಕ್ಷಿ ತಮ್ಮ ಮೊದಲ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. 9ನೇ ಕ್ಲಾಸ್‌ನಲ್ಲಿದ್ದಾಗ ಶಾಲೆಯ ಟೀಚರ್ ಮೇಲೆ ಕ್ರಶ್ ಆಗಿತ್ತಂತೆ. ಈ ವಿಷಯ ಸ್ನೇಹಿತರಿಗೆ ಗೊತ್ತಾಗಿ ಎಲ್ಲರೂ ತನ್ನನ್ನು ಕಾಡಿಸುತ್ತಿದ್ದರು, ಅದು ಸ್ವೀಟ್ ಮೆಮೊರಿ ಎಂದಿದ್ದಾರೆ.
ಪ್ರಭಾಸ್ ತರಹ ಗಂಡ ಬೇಕು
ಸಿನಿಮಾಕ್ಕೆ ಬಂದ ಮೇಲೆ ಡಾರ್ಲಿಂಗ್ ಪ್ರಭಾಸ್ ಮೇಲೆ ಕ್ರಶ್ ಇರುವುದಾಗಿ ಮೀನಾಕ್ಷಿ ಹೇಳಿದ್ದಾರೆ. ಪ್ರಭಾಸ್ ರೀತಿ ಎತ್ತರ, ಒಳ್ಳೆಯ ಮನಸ್ಸು ಹಾಗೂ ಬುದ್ಧಿವಂತಿಕೆ ಇರಬೇಕು. ಪ್ರಭಾಸ್‌ನಂತಹ ಹುಡುಗನೇ ಗಂಡನಾಗಿ ಬರಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಗಂಡನಿಗೆ ಈ ಕ್ವಾಲಿಟಿ ಇರಬೇಕು
ಆದರೆ ಇತ್ತೀಚೆಗೆ ಮೀನಾಕ್ಷಿ ತಮ್ಮ ಬೇಡಿಕೆ ಬದಲಿಸಿದ್ದಾರೆ. ಗಂಡನಿಗೆ 100 ಎಕರೆ ಜಮೀನು ಇರಬೇಕು, 3 ಬ್ರೇಕಪ್ ಆಗಿರಬೇಕು, ಮನೆಗೆಲಸ, ಅಡುಗೆ, ಬಟ್ಟೆ ತೊಳೆಯಲು ಬರಬೇಕು ಎಂದಿದ್ದಾರೆ. ದಿನಕ್ಕೆ 3 ಗಿಫ್ಟ್ ಕೊಡಬೇಕು, ಆದರೆ ಸಿನಿಮಾ, ಮಾಡೆಲಿಂಗ್‌ನವರನ್ನು ಮದುವೆಯಾಗಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

