- Home
- Entertainment
- TV Talk
- ಗಿಲ್ಲಿ ಬಿಗ್ ಬಾಸ್‌ಗೆ ಬರೋಕೆ ಇವರೇ ಕಾರಣ! ಇದರ ಹಿಂದೆ ಯಾರ ಕೈವಾಡವಿದೆ ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗೋದು ಗ್ಯಾರಂಟಿ!
ಗಿಲ್ಲಿ ಬಿಗ್ ಬಾಸ್‌ಗೆ ಬರೋಕೆ ಇವರೇ ಕಾರಣ! ಇದರ ಹಿಂದೆ ಯಾರ ಕೈವಾಡವಿದೆ ಅಂತ ಗೊತ್ತಾದ್ರೆ ನಿಮಗೂ ಅಚ್ಚರಿಯಾಗೋದು ಗ್ಯಾರಂಟಿ!
12ನೇ ಸೀಸನ್ ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆರು ಸ್ಪರ್ಧಿಗಳ ಪೈಕಿ ಚಾಂಪಿಯನ್ ಪಟ್ಟ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಚಾಂಪಿಯನ್ ಪಟ್ಟದ ರೇಸ್‌ನಲ್ಲಿರುವ ಗಿಲ್ಲಿ ತಾವು ಬಿಗ್ ಬಾಸ್‌ಗೆ ಬರಲು ಕಾರಣ ಯಾರು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

ಗಿಲ್ಲಿ ಚಾಂಪಿಯನ್ ರೇಸ್‌ನ ಪ್ರಮುಖ ಸ್ಪರ್ಧಿ
ಗಿಲಿ ನಟ ಇಂದು ಬಿಗ್ ಬಾಸ್‌ನಲ್ಲಿ ತನ್ನ ಸಹಜ ನಡೆನುಡಿ ಹಾಗೂ ಡಿಫರೆಂಟ್ ಮ್ಯಾನರಿಸಂನಿಂದಾಗಿಯೇ ಕರುನಾಡಿನ ಮನೆಮಾತಾಗಿದ್ದಾರೆ. ಇದರ ಜತೆಗೆ ಈ ಬಾರಿ ಬಿಗ್ ಬಾಸ್ ಗೆಲ್ಲಬಲ್ಲ ನೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಗಿಲ್ಲಿ ಇಂದು ಕನ್ನಡಿಗರ ಮನೆಮಾತಾಗಿರುವ ಕಲಾವಿದ
ತನ್ನ ಪಂಚಿಂಗ್ ಡೈಲಾಗ್ ಮೂಲಕವೇ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸುತ್ತಾ ಬಂದಿರುವ ಗಿಲ್ಲಿ ನಟನಿಗೆ ಅದ್ಭುತ ಅಭಿಮಾನಿಗಳ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಗಿಲ್ಲಿ ಫ್ಯಾನ್ಸ್ ಕೂಡಾ ಈ ಹಳ್ಳಿ ಹೈದ ಚಾಂಪಿಯನ್ ಆಗಲಿ ಎಂದು ಹಾರೈಸುತ್ತಿದ್ದಾರೆ.
ಗಿಲ್ಲಿ ಬಿಗ್ ಬಾಸ್‌ಗೆ ಸೆಲೆಕ್ಟ್ ಆಗಿದ್ದು ಹೇಗೆ?
ಇನ್ನು ಇದೆಲ್ಲದರ ನಡುವೆ ಈ ಬಾರಿಯ ಬಿಗ್ ಬಾಸ್‌ನಲ್ಲಿ ಗಿಲ್ಲಿ ನಟ ಸೆಲೆಕ್ಟ್ ಆಗಿದ್ದು ಹೇಗೆ? ಇದರ ಹಿಂದೆ ಯಾರ ಕೈವಾಡವಿದೆ ಎನ್ನುವ ಇಂಟ್ರೆಸ್ಟಿಂಗ್ ವಿಚಾರ ಇದೀಗ ಬಯಲಾಗಿದೆ.
ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟ ಗಿಚ್ಚಿ ಗಿಲಿಗಿಲಿ ಸೀನಿಯರ್ಸ್
ಹೌದು, ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆಯೇ ಆ ಸಮಯದಿಂದ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಶೋ ಪ್ರಸಾರವಾಗಲಿದೆ. ಹೀಗಾಗಿ ಈ ಶೋದ ಪ್ರಚಾರಕ್ಕಾಗಿ ಗಿಚ್ಚಿ ಗಿಲಿಗಿಲಿ ಸೀನಿಯರ್ ಕಾಮಿಡಿ ಕಿಲಾಡಿಗಳು ಬಿಗ್ ಬಾಸ್ ಮನೆಗೆ ಬಂದು, ಫಿನಾಲೆ ಸ್ಪರ್ಧಿಗಳನ್ನು ಭೇಟಿಯಾಗಿ ಮಾತನಾಡಿದ್ದರು.
ಗಿಚ್ಚಿಗಿಲಿಗಿಲಿ ಕಾಮಿಡಿ ಕಿಲಾಡಿಗಳ ಜತೆ ಗಿಲ್ಲಿ ನಂಟು
ಇನ್ನು ಈ ಸಂದರ್ಭದಲ್ಲಿ ಗಿಲ್ಲಿ, ನಾನು ಇಲ್ಲಿರುವ ಎಲ್ಲರ ಜತೆಯೂ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾರೆ. ಈ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್ ಹಾಗಿದ್ರೆ ನಾನು ಎಂದು ಕೇಳುತ್ತಾರೆ.
ಗಿಲ್ಲಿ ಬಿಗ್ ಬಾಸ್‌ಗೆ ಬರಲು ತುಕಾಲಿ ಸಂತೋಷ್ ಕಾರಣ
ಆಗ ಗಿಲ್ಲಿ ನಿಮ್ಮನ್ನು ಮರೆಯೋಕೆ ಆಗುತ್ತಾ? ನಾನು ಈ ಶೋಗೆ ಬರೋಕೆ ಕಾರಣನೇ ನೀವು ಎಂದು ತುಕಾಲಿ ಸಂತೋಷ್‌ಗೆ ಗಿಲ್ಲಿ ಹೇಳುತ್ತಾರೆ. ಈ ಮೂಲಕ ಗಿಲ್ಲಿ ಬಿಗ್ ಬಾಸ್‌ಗೆ ಬರಲು ನಿಜವಾದ ಕಾರಣವೇ ಇವರು ಎನ್ನುವುದು ಗೊತ್ತಾಗಿದೆ.
ಬಿಗ್ ಬಾಸ್‌ಗೂ ಮುನ್ನ ಕ್ವಾಟ್ಲೆ ಕಿಚನ್‌ನಲ್ಲಿ ಭಾಗವಹಿಸಿದ್ದ ಗಿಲ್ಲಿ
ಅಂದಹಾಗೆ ಗಿಲ್ಲಿ ಬಿಗ್ ಬಾಸ್ ಶೋಗೆ ಬರುವ ಮುನ್ನ ಕ್ವಾಟ್ಲೆ ಕಿಚನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಆದ್ರೆ ಅಲ್ಲಿ ಕೇವಲ ನಾಲ್ಕು ವಾರ ಭಾಗವಹಿಸಿ, ಆ ಬಳಿಕ ನೇರವಾಗಿ ಗಿಲ್ಲಿ ಬಿಗ್ ಬಾಸ್‌ಗೆ ಎಂಟ್ರಿಕೊಟ್ಟಿದ್ದರು.
ಗಿಲ್ಲಿ ಬಿಗ್ ಬಾಸ್ ಚಾಂಪಿಯನ್ ಆಗ್ತಾರಾ?
ಹಳ್ಳಿಯಿಂದ ಹಿಡಿದು ಸಿಟಿಯ ಗಲ್ಲಿಗಲ್ಲಿಯಲ್ಲೂ ಸದ್ಯ ಗಿಲ್ಲಿಯದ್ದೇ ಮಾತು. ಇಂದು ಗಿಲ್ಲಿ ಚಾಂಪಿಯನ್ ಆಗ್ತಾರಾ? ಅಥವಾ ಅಚ್ಚರಿ ಫಲಿತಾಂಶ ಹೊರಬೀಳುತ್ತಾ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

