ವಿಜಯಪುರ: ಯತ್ನಾಳ್ ಅವರು ಹೊಸ ಪಕ್ಷ ಮಾಡಲಿ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ಮಾಡಿದರೆ ನಾನು ಬೆಂಬಲ ಕೊಡುತ್ತೇನೆ. ತಮಿಳುನಾಡಿನ ವಿಜಯ್ ರೀತಿ ಅವರು ಸಿಎಂ ಆಗುತ್ತಾರೆ. ಆದರೆ ಅವರು ಹೊಸ ಪಕ್ಷ ಮಾಡುವುದಿಲ್ಲ. ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ಬಿಜೆಪಿಗೆ ವಾಪಸ್ ತೆಗೆದುಕೊಳ್ಳಿ, ನನಗೆ ವಿಜಯಪುರ ಟಿಕೆಟ್ ಕೊಡಿ ಅಂತಾರಷ್ಟೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಬಿಜೆಪಿಯಿಂದ ಉಚ್ಛಾಟಿತರಿದ್ದಾರೆ. ಆದರೂ ಬಿಜೆಪಿ ವ್ಯಾಮೋಹ ಇವರಿಗೆ ಹೋಗಿಲ್ಲ. ತಾಕತ್ತಿದ್ದರೆ ಇವರು ಜೆಸಿಬಿ ಪಾರ್ಟಿ ಮಾಡಲಿ. ವಿಜಯಪುರದವರು ಮುಖ್ಯಮಂತ್ರಿಯಾಗಲಿ. ವಿಜಯಪುರದವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷವಿದೆ. ಆದರೆ ಇವರು ಹಾಗೆ ಮಾಡುವುದಿಲ್ಲ. ಇವರು ಸುಮ್ಮನೆ ಜೆಸಿಬಿ ತೋರಿಸಿ ಹೆದರಿಸಿ ವಿಜಯಪುರ ನಗರ ಟಿಕೆಟ್ ಪಡೆಯುವುದಷ್ಟೆ ಅವರ ಬೇಡಿಕೆ ಎಂದರು.
09:04 PM (IST) May 16
ಈ ಪರಿಸ್ಥಿತಿ ದೇಶಕ್ಕೆ ಬರುತ್ತದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ವರ್ಷದ ಹಿಂದೆಯೇ ಹೇಳಿದ್ದರು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
08:20 PM (IST) May 16
ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್ಗೆ ಹೈಕೋರ್ಟ್ ನೀಡಿದ್ದ ಬೇಲ್ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸದ್ಯಕ್ಕೆ ನಟ ದರ್ಶನ್ ಮುಂದೆ ಬೇರೆ ಯಾವ ದಾರಿ ಇದೆ? ಈ ಸ್ಟೋರಿ ನೋಡಿ..
07:55 PM (IST) May 16
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ (KPYCC) ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್ ಹೈಕಮಾಂಡ್ ಅಮಾನತುಗೊಳಿಸಿದೆ. ಕರ್ತವ್ಯ ಲೋಪ ಮತ್ತು ನಿಷ್ಕ್ರಿಯತೆಯ ಕಾರಣ ನೀಡಿ ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ ರಾಜ್ಯ ಸಮಿತಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
07:08 PM (IST) May 16
06:45 PM (IST) May 16
ಸಾಮಾನ್ಯವಾಗಿ ಮನೆಗಳಲ್ಲಿ ಟವೆಲ್‌ಗಳು ಬೇಗನೆ ಹಾಳಾಗುತ್ತವೆ. ಒಂದೆರಡು ಬಾರಿ ತೊಳೆದ ತಕ್ಷಣ ಗಟ್ಟಿಯಾಗಿ, ಹಳೆಯದರಂತೆ ಕಾಣಿಸುತ್ತವೆ. ಅವುಗಳನ್ನು ಹೊಸದರಂತೆ ಮೃದುವಾಗಿ ಇಟ್ಟುಕೊಳ್ಳಲು ಏನು ಮಾಡಬೇಕು ಗೊತ್ತಾ?
06:30 PM (IST) May 16
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ದೇಶದಲ್ಲಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಹೇಳಿದ್ದಾರೆ.
06:15 PM (IST) May 16
06:08 PM (IST) May 16
ತಮಿಳುನಾಡಿನಲ್ಲಿ ಚುನಾವಣೆ ಗೆದ್ದು ವಿಜಯ್ ಸಿಎಂ ಆದ ಮೇಲೆ ತ್ರಿಷಾ ಕೃಷ್ಣನ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇಬ್ಬರ ನಂಟಿನ ಬಗ್ಗೆ ಫುಲ್ ಗುಲ್ಲೋ ಗುಲ್ಲು. ಈ ನಡುವೆ ದಳಪತಿ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊರೆೆಯನ್ನೇ ಕೊಟ್ಟುಬಿದ್ದಾರೆ
05:55 PM (IST) May 16
ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಆದರೆ ಈ ಸಿನಿಮಾಗಳ ಸಕ್ಸಸ್, ಎರಡು ಭಾಗಗಳಲ್ಲಿ ಅವು ಮಾಡಿದ ಹಣವನ್ನು ನೋಡಿ ಕಥೆ ಇರಲಿ ಇಲ್ಲದಿರಲಿ ಹೆಚ್ಚಿನ ಚಿತ್ರತಂಡಗಳು ಸಿನಿಮಾವನ್ನು ಎರಡು ಭಾಗಗಳಲ್ಲಿ ತರಲು ಶುರು ಮಾಡಿದರು.
05:54 PM (IST) May 16
05:27 PM (IST) May 16
ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಗೌರ ನಾಯ್ಡು ಪಾತ್ರದ ಶಿವರಾಜ್‌ಕುಮಾರ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಿಭಿನ್ನ ಗೆಟಪ್‌ಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.
05:01 PM (IST) May 16
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಸರ್ಕಾರ ವಿರುದ್ಧ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದ್ದು, CET ಮಾದರಿ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
04:58 PM (IST) May 16
ಇತ್ತೀಚೆಗೆ ಸಲ್ಮಾನ್ ಅವರು ನೀಡಿರುವ ಒಂದು ಹೇಳಿಕೆ ಇಡೀ ಚಿತ್ರರಂಗವೇ ಬೆರಗಾಗುವಂತೆ ಮಾಡಿದೆ. ಸುಮಾರು ಮೂರು ದಶಕಗಳಿಂದ ಬಾಲಿವುಡ್ ಆಳುತ್ತಿರುವ ಈ ನಟ, ತಮ್ಮ ಸಿನಿಮಾಗಳ ಸ್ಕ್ರಿಪ್ಟ್ (Script) ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನು ನೋಡಿ..
04:47 PM (IST) May 16
04:30 PM (IST) May 16
ಹಳ್ಳಿಯಿಂದ ನಗರಕ್ಕೆ ಹೋಗುವ ತರುಣನೊಬ್ಬನ ಆತ್ಮಕತೆ ಈ ಸಿನಿಮಾ. ಮುಗ್ಧತೆ ನಿಧಾನಕ್ಕೆ ಮಾಯವಾಗಿ ಪ್ರಬುದ್ಧತೆ ಆವರಿಸಿಕೊಳ್ಳುವ ಕಥನ. ಮಂಡ್ಯ ಭಾಗದ ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಅಲ್ಲೊಬ್ಬ ತರುಣ.
04:15 PM (IST) May 16
ಮಾರ್ಕೆಟ್‌ನಲ್ಲಿ ಮೂಟೆ ಹೊರುವ ನಾಯಕನ ತಂಡ, ಅನಾಥರಿಗೆ ನೆರಳಾಗುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುತ್ತ ಒಂದು ನಾರ್ಮಲ್ ಕತೆಯಾಗಿ ಸಾಗುವ ಚಿತ್ರದಲ್ಲಿ ಅಚ್ಚರಿಯ ತಿರುವೊಂದು ಬರುತ್ತದೆ.
03:43 PM (IST) May 16
ಮೇ 17ರ ಭಾನುವಾರದಂದು, ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ನಿರ್ವಹಣಾ ಕಾಮಗಾರಿಯಿಂದಾಗಿ ಮೆಟ್ರೋ ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸೇವೆ ಸ್ಥಗಿತಗೊಳ್ಳಲಿದೆ.
03:18 PM (IST) May 16
03:04 PM (IST) May 16
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಗಂಭೀರವಾಗಿದ್ದು, ಕೆಲವರು ಜೆಪಿ ಪಾರ್ಕ್ ಬಳಿಯ ಫ್ಲೈಓವರ್‌ಗಳ ಕೆಳಗೆ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿದ್ದಾರೆ. ಸ್ವಚ್ಛ ನಗರಕ್ಕಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯವಾಗಿದೆ.
02:16 PM (IST) May 16
ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
01:37 PM (IST) May 16
ಪ್ರಧಾನಿ ಮೋದಿಯವರ ಇಂಧನ ಉಳಿತಾಯದ ಕರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಸ್ಪಂದಿಸಿದ್ದಾರೆ. ದೇಶ ಮೊದಲು, ಪಕ್ಷ ನಂತರ ಎಂಬಂತೆ ಅವರು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸುವಂತೆ ಪತ್ರ ಬರೆದಿದ್ದು, ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
01:17 PM (IST) May 16
ಆಹಾರ ಪದಾರ್ಥಗಳಲ್ಲಿ ಅಶ್ವಗಂಧದ ಅಥವಾ ಬೇರುಗಳ ಸಾರ ಬಳಕೆಗೆ ನಿಷೇಧಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಫಾಸಿ) ನೀಡಿದ್ದ ಸಲಹೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅಶ್ವಗಂಧದಲ್ಲಿನ 'ವಿಥಾಫೆರಿನ್-ಎ' ಅಂಶವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣ ನೀಡಿತ್ತು.
01:02 PM (IST) May 16
12:36 PM (IST) May 16
ಯುವಕರನ್ನೇ ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಐವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳಿಂದ ಪೊಲೀಸರು 10.20 ಲಕ್ಷ ಮೌಲ್ಯದ ಚಿನ್ನ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಿಂದ ಇನ್ನಷ್ಟು ಮಂದಿ ಮೋಸ ಹೋಗಿರುವ ಶಂಕೆ ವ್ಯಕ್ತವಾಗಿದೆ.
12:21 PM (IST) May 16
12:02 PM (IST) May 16
ಕ್ಷೇತ್ರದಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಯಲ್ಲಿ ನಡೆದ ಅಪೂರ್ವ 'ಭೀಮೋತ್ಸವ' ಅಭಿಯಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ನಿವಾಸದಲ್ಲಿ ಭಕ್ತಿಪೂರ್ವಕ ತೆರೆ ಬಿದ್ದಿದೆ. ಈ ಐತಿಹಾಸಿಕ ಸಮಾರೋಪ ಸಮಾರಂಭದ ವಿಶೇಷ ಕ್ಷಣಗಳ ಫೋಟೋ ಝಲಕ್ ಇಲ್ಲಿದೆ:
11:26 AM (IST) May 16
ಬೆಳಗಾವಿಯಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಹೂಡಿಕೆ ಮಾಡಿ ಬರೋಬ್ಬರಿ 4500 ಕೋಟಿ ರೂ ವಂಚನೆ ಪ್ರಕರಣದಲ್ಲಿ ನೀಲಣ್ಣವರ್ ಸಿಲುಕಿದ್ದಾರೆ. ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ.
11:09 AM (IST) May 16
10:47 AM (IST) May 16
ಅಂತಾರಾಷ್ಟ್ರೀಯ ಬಿಕಟ್ಟಿನ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ವಿಫಲ, ದೇಶದಲ್ಲಿ ಬೆಲೆ ಏರಿಕೆ ಮೋದಿ ಕೊಡುಗೆ, ಎಸ್‌ಐಆರ್ ಕುರಿತು ಎಲ್ಲಾ ಪಕ್ಷದ ನಾಯಕರೂ ಜಾಗೃತರಾಗಬೇಕು.
10:24 AM (IST) May 16
ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಹೊಚ್ಚ ಹೊಸ ಯೆಜ್ಡಿ ಬೈಕ್ ಉಡುಗೊರೆಯಾಗಿ ನೀಡಲಾಗಿತ್ತು. ಇದೀಗ ಡಿಕೆಶಿ ಹೊಸ ಬೈಕ್ ಏರಿ ಸಂಭ್ರಮಿಸಿದ್ದಾರೆ. ಡಿಕೆಶಿ ಮೊದಲ ಬೈಕ್ ಕೂಡ ಯೆಜ್ಡಿ ಆಗಿದ್ದು, ಇದೀಗ 2ನೇ ಅವರನ್ನು ಬಾಲ್ಯದ ದಿನಗಳಿಗೆ ಕೊಂಡೊಯ್ದಿದೆ.
10:16 AM (IST) May 16
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ತುಮಕೂರಿನಲ್ಲಿ ಆಯೋಜನೆ. ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಮೇ 20ರಂದು ನಡೆಯಬೇಕಿದ್ದ 'ಸಾರ್ಥಕ ಸೇವೆಗಳ ಸಮರ್ಪಣೆ' ಕಾರ್ಯಕ್ರಮ ಮೇ 19ಕ್ಕೆ ಬದಲಾಯಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
09:49 AM (IST) May 16
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಮೆಜೆಸ್ಟಿಕ್‌ನಿಂದ ಕೆಂಗೇರಿ ತನಕ ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನ ಸೆಳೆದರು. ಸಾಮಾನ್ಯ ಪ್ರಯಾಣಿಕರ ಜೊತೆಯಲ್ಲೇ ಮೆಟ್ರೋದಲ್ಲಿ ತೆರಳಿದ ವಿಜಯೇಂದ್ರ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
09:20 AM (IST) May 16
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಾಗರ ಹಾವು ಕಡಿದು ಮೃತಪಟ್ಟ ದುರಂತ ಘಟನೆ ನಡೆದಿದೆ.ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
09:04 AM (IST) May 16
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಸಾಧು ವೇಷಧಾರಿಸಾಧು ವೇಷಧಾರಿಯೊಬ್ಬ ಮೆಡಿಕಲ್ ಶಾಪ್ ಮಾಲೀಕನಿಗೆ ಹೂವು ನೀಡಿ ಮಂಪರು ಬರಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ದೋಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
08:48 AM (IST) May 16
ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕನಕಪುರ ರಸ್ತೆ ಬಳಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯದ್ದಾಗಿದ್ದು, ಅವುಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ ಎಂಬ ಮಹತ್ವದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗಿರೀಶ್ ಮಾದೇನಹಳ್ಳಿ
08:47 AM (IST) May 16
ಯುವತಿ ವಿಚಾರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಕರಣದಲ್ಲಿ ಯುವತಿ ವಿಚಾರ ಮುನ್ನಲೆಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭಗೊಂಡಿದೆ.
08:32 AM (IST) May 16
ಪುತ್ತೂರಿನ ಬನ್ನೂರು ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ಹಸಿ ತ್ಯಾಜ್ಯದಿಂದ ಬಯೋ-ಸಿಎನ್‌ಜಿ ಇಂಧನ ಉತ್ಪಾದಿಸುವ ನೂತನ ಘಟಕ ಆರಂಭವಾಗಿದೆ. ಉದ್ಯಮಿ ಕೃಷ್ಣನಾರಾಯಣ ಮುಳಿಯ ಅವರ ನೇತೃತ್ವದ ಈ ಯೋಜನೆ, ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಿದೆ.
08:23 AM (IST) May 16
ರಾಜ್ಯದ ಎಸಿ ನ್ಯಾಯಾಲಯಗಳಲ್ಲಿ ಶೇ.90ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಇತ್ಯರ್ಥವಾಗಿದ್ದರೂ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಅಧಿಕಾರಿಯ ಕಾರ್ಯವೈಖರಿಯಿಂದ ತಮಗೆ ಮುಜುಗರವಾಗುತ್ತಿದೆ..
08:17 AM (IST) May 16
ಕೆಂಪೇಗೌಡ ಬಸ್ ನಿಲ್ದಾಣದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ಹೆಬ್ಬಾಳ, ಯಲಹಂಕ, ಎನ್‌ಇಎಸ್, ದೊಡ್ಡಬಳ್ಳಾಪುರ ಮೂಲಕ ಹಾಗೂ ದೇವಹಳ್ಳಿಯಿಂದ ನಂದಿ ಕ್ರಾಸ್ ಮಾರ್ಗದ ಬಸ್ ಆವತಿ, ವೆಂಕಟಗಿರಿ ಕೋಟೆ ಮೂಲಕ ಸೇವೆ ನೀಡಲಿವೆ.
08:10 AM (IST) May 16
ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್’ನಿಂದ ಇ.ಡಿ ಬಯಲು ಮಾಡಿದೆ.