ನೀರು ಕೇಳ್ತಾರೆ, ಹೂವಿನ ಆಶೀರ್ವಾದ ಮಾಡ್ತಾರೆ; ಮಾಯವಾಗುತ್ತೆ ನಿಮ್ಮಲ್ಲಿರೋ ಚಿನ್ನ-ಹಣ!
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ, ಸಾಧು ವೇಷಧಾರಿಸಾಧು ವೇಷಧಾರಿಯೊಬ್ಬ ಮೆಡಿಕಲ್ ಶಾಪ್ ಮಾಲೀಕನಿಗೆ ಹೂವು ನೀಡಿ ಮಂಪರು ಬರಿಸಿ, ನಗದು ಹಾಗೂ ಚಿನ್ನದ ಉಂಗುರವನ್ನು ದೋಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಆತಂಕ ಸೃಷ್ಟಿಸಿದ ಸಾಧು ವೇಷಧಾರಿಗಳು
ರಾಯಚೂರು: ಮೆಡಿಕಲ್ ಶಾಪ್‌ನಲ್ಲಿದ್ದ ವ್ಯಕ್ತಿಗೆ ಸಾಧು ವೇಷಧಾರಿಯೋರ್ವ ಮೋಸ ಮಾಡಿ ಚಿನ್ನ ಮತ್ತು ಹಣ ದೋಚಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಶ್ರೀ ಸಾಯಿ ಮೆಡಿಕಲ್ ಶಾಪ್ ಮಾಲೀಕ ವಿಷ್ಣು ದತ್ತ ಎಂಬವರಿಗೆ ವಂಚನೆ ಮಾಡಲಾಗಿದೆ.

ಏನಿದು ಘಟನೆ?
ಸಾಧು ವೇಷಧಾರಿಯೋರ್ವ ಮೆಡಿಕಲ್ ಶಾಪ್ ಮುಂದೆ ಇರಿಸಲಾಗಿದ್ದ ನೀರು ಕುಡಿಯಲು ಬರುತ್ತಾನೆ. ಇದನ್ನು ನೋಡಿದ ವಿಷ್ಣು ದತ್ತ ಅವರು ಕನಿಕರದಿಂದ ಸಾಧುಗೆ ಕುಡಿಯಲು ಫ್ರಿಡ್ಕ್‌ನಲ್ಲಿದ್ದ ತಣ್ಣೀರು ಕೊಡುತ್ತಾರೆ. ನೀರು ಕುಡಿದ ಬಳಿಕ ಸಾಧು, ಆಶೀರ್ವಾದ ರೂಪದಲ್ಲಿ ಎರಡು ಹೂಗಳನ್ನು ನೀಡುತ್ತಾರೆ.
ಹೂವಿನ ವಾಸನೆ
ಹೂವಿನ ವಾಸನೆಯಿಂದ ವಿಷ್ಣು ದತ್ತಾ ಮಂಪರು ಬಂದಂತಾಗಿದೆ. ಈ ವೇಳೆ ಸಾಧು ವೇಷಧಾರಿ ಕಳ್ಳ, ಅಂಗಡಿಯಲ್ಲಿದ್ದ 10,500 ರೂಪಾಯಿ ನಗದು, ವಿಷ್ಣು ದತ್ತ್ ಕೈಯಲ್ಲಿದ್ದ 5 ಗ್ರಾಂ ಚಿನ್ನದುಂಗರ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ. ಸಾಧು ಹೋದ ಕೆಲ ನಿಮಿಷಗಳ ಬಳಿಕ ವಿಷ್ಣು ದತ್ತ ಎಚ್ಚರಗೊಂಡಿದ್ದಾರೆ.
ಗೋಲ್ಡ್ ರಿಂಗ್ ಮತ್ತು ಅಂಗಡಿಯಲ್ಲಿದ್ದ ಹಣ
ಕೈಯಲ್ಲಿದ್ದ ಗೋಲ್ಡ್ ರಿಂಗ್ ಮತ್ತು ಅಂಗಡಿಯಲ್ಲಿದ್ದ ಹಣ ಇಲ್ಲದಿರೋದನ್ನು ನೋಡಿ ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೆಡಿಕಲ್ ಶಾಪ್ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್ ಬಾಕಿಗೆ ಕೃಷ್ಣ ಬೈರೇಗೌಡ ಗರಂ, ಸಚಿವರಿಗೆ ತಲೆನೋವಾದ ಆ ಅಧಿಕಾರಿ!
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಸಾಧು ವೇಷಧಾರಿಯಾಗಿ ಸಿಂಧನೂರು ಪಟ್ಟಣದಲ್ಲಿ ಮೂವರು ಸುತ್ತಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಥಳೀಯವಾಗಿ ಸಾಧುಗಳ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

