Bengaluru: ಈ ಬೆಂಗಳೂರಿಗರಿಗೆ ಬುದ್ಧಿಯೇ ಇಲ್ವಾ? ಇಲ್ಲೂ ಕಸ ಹಾಕೋದು ಬಿಟ್ಟಿಲ್ಲ ನೋಡಿ
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಗಂಭೀರವಾಗಿದ್ದು, ಕೆಲವರು ಜೆಪಿ ಪಾರ್ಕ್ ಬಳಿಯ ಫ್ಲೈಓವರ್‌ಗಳ ಕೆಳಗೆ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿದ್ದಾರೆ. ಸ್ವಚ್ಛ ನಗರಕ್ಕಾಗಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯವಾಗಿದೆ.

ಬೆಂಗಳೂರಿನ ಕಸದ ಸಮಸ್ಯೆ
ಬೆಂಗಳೂರಿನ ಕಸದ ಸಮಸ್ಯೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗುತ್ತದೆ. ಕಸದ ಸಮಸ್ಯೆ ನಿವಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಮನೆ ಮುಂದೆ ಕಸದ ಗಾಡಿ ಬರೋದು ಒಂದು ದಿನ ತಡವಾದ್ರೂ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ. ಒಂದಿಷ್ಟು ಜನರು, ರಾತ್ರಿಯಾಗ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಕಸ ಎಸೆಯುತ್ತಾರೆ.

ಫ್ಲೈಓವರ್ ಅಡಿಯಲ್ಲಿ ಕಸ
ಬೆಂಗಳೂರಿನ ವಾಸಿಗಳು ಪಾಲಿಕೆ ಸೂಚಿಸುವ ನಿಯಮಗಳನ್ನು ಪಾಲನೆ ಮಾಡಿದ್ರೆ ಸಿಲಿಕಾನ್ ಸಿಟಿ ಸ್ವಚ್ಛ ಮತ್ತು ಸುಂದರವಾಗುತ್ತದೆ. ಆದ್ರೆ ಕೆಲವರು ಮಾತ್ರ ನಿಯಮ ಪಾಲನೆ ಮಾಡದೇ ಬ್ರೇಕ್ ಮಾಡ್ತಾರೆ. ಜೆಪಿ ಪಾರ್ಕ್ ಹಿಂಭಾಗದ ಎಂಇಎಸ್ ರಸ್ತೆಯ ಬಳಿಯ ಈ ಫ್ಲೈಓವರ್ ಅಡಿಯಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಪೌರ ಕಾರ್ಮಿಕರು ಫ್ಲೈಒವರ್ ಅಡಿಯಲ್ಲಿ ಹಾಕಲಾಗಿರುವ ಕಸ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಡಂಪಿಂಗ್ ಯಾರ್ಡ್
ಜನರು ಯಾವುದೇ ಭಯ ಮತ್ತು ನಾಗರಿಕ ಜವಾಬ್ದಾರಿ ಮರೆತು ಎಲ್ಲೆಂದರಲ್ಲಿ ಕಸ ಹಾಕುವ ಮೂಲಕ ಸ್ಥಳಗಳನ್ನು ಅಕ್ರಮ ಡಂಪಿಂಗ್ ಯಾರ್ಡ್ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಾ ಕಾಣಿಸುತ್ತದೆ. ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳು ಡಂಪಿಂಗ್ ಯಾರ್ಡ್‌ಗಳಲ್ಲ ಎಂಬುದನ್ನು ಬೆಂಗಳೂರಿಗರು ತಿಳಿದುಕೊಳ್ಳಬೇಕಿದೆ.
ಸರ್ಕಾರ ಅಥವಾ ಅಧಿಕಾರಿಗಳು
ಈ ರೀತಿಯ ವರ್ತನೆ ಪರಿಸರಕ್ಕೂ ಹಾನಿ ಮಾಡೋದರ ಜೊತೆಗೆ ಬೆಂಗಳೂರಿನ ಗೌರವಕ್ಕೂ ಧಕ್ಕೆಯನ್ನುಂಟು ಮಾಡುತ್ತದೆ. ಪ್ರತಿ ಸಮಸ್ಯೆಗೂ ಸರ್ಕಾರ ಅಥವಾ ಅಧಿಕಾರಿಗಳನ್ನು ದೂಷಿಸೋದು ಸರಿಯಲ್ಲ. ಪ್ರಜೆಗಳಾಗಿ ಸುತ್ತಲಿನ ವಾತಾವರಣ ಶುಚಿಯಾಗಿಟ್ಟುಕೊಳ್ಳೋದು ನಮ್ಮೆಲ್ಲರ ಕರ್ತವ್ಯ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ.
ಸಿಸಿಟಿವಿ ಕ್ಯಾಮೆರಾ
ಕಸ ಎಸೆಯುವ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ರೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಜನರು ಮತ್ತು ಅಧಿಕಾರಿಗಳು ಇಬ್ಬರೂ ಜವಾಬ್ದಾರಿಯುತವಾಗಿ ವರ್ತಿಸಿದಾಗ ಮಾತ್ರ ಸ್ವಚ್ಛ ನಗರ ಸಾಧ್ಯವಾಗುತ್ತದೆ.

