MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

ಮೋದಿ ಭೇಟಿ ಸಮಯದ ಜಿಲಿಟಿನ್ ಪತ್ತೆ ಪ್ರಕರಣ; ತನಿಖೆಯಲ್ಲಿ ಅಚ್ಚರಿ ವಿಷಯ ಬಹಿರಂಗ!

ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕನಕಪುರ ರಸ್ತೆ ಬಳಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯದ್ದಾಗಿದ್ದು, ಅವುಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ ಎಂಬ ಮಹತ್ವದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಗಿರೀಶ್ ಮಾದೇನಹಳ್ಳಿ  

2 Min read
Author : Kannadaprabha News| Kannada Prabha
Published : May 16 2026, 08:48 AM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಧಾನಿ ಭೇಟಿ ವೇಳೆ ಭಯ ಹುಟ್ಟಿಸುವ ಸಂಚು
Image Credit : X-Dr Vinod Sharma

ಪ್ರಧಾನಿ ಭೇಟಿ ವೇಳೆ ಭಯ ಹುಟ್ಟಿಸುವ ಸಂಚು

ಜಿಲಿಟಿನ್ ಕಡ್ಡಿಗಳ ಜತೆ ಟೈಮರ್ ಮಾತ್ರ ಪತ್ತೆಯಾಗಿದೆ. ಆದರೆ ಇತರೆ ಯಾವುದೇ ಸ್ಫೋಟಕ ವಸ್ತುಗಳು (ಡಿಟೋನೆಟೇರ್) ಸಿಕ್ಕಿಲ್ಲ. ಅಲ್ಲದೆ ಟೈಮರ್‌ ಕೂಡ ಜೋಡಣೆಯಾಗಿರಲಿಲ್ಲ. ಈ ಸಾಂದರ್ಭಿಕ ಪುರಾವೆಗಳನ್ನು ಅವಲೋಕಿಸಿದಾಗ ಆರ್ಟ್‌ ಆಫ್ ಲಿವಿಂಗ್‌ ಆಶ್ರಮದ ರವಿಶಂಕರ್ ಗುರೂಜಿ ಅವರಿಗೆ ಅಥವಾ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸುವ ದುರುದ್ದೇಶ ಈ ಕೃತ್ಯದ ಹಿಂದೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ

Add Asianetnews Kannada as a Preferred SourcegooglePreferred
26
ಆರ್ಟ್ ಆಫ್ ಲಿವಿಂಗ್‌ಗೆ ಆಗಮಿಸಿದ್ದ ಪ್ರಧಾನಿ ಮೋದಿ
Image Credit : X

ಆರ್ಟ್ ಆಫ್ ಲಿವಿಂಗ್‌ಗೆ ಆಗಮಿಸಿದ್ದ ಪ್ರಧಾನಿ ಮೋದಿ

ಕಗ್ಗಲಿಪುರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮೇ.9 ರಂದು ನಡೆದ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೂ ಕೆಲವೇ ತಾಸುಗಳ ಮುನ್ನ ಕನಕಪುರ ರಸ್ತೆಯ ವಡೇರಹಳ್ಳಿ ಸೇತುವೆ ಬಳಿ ಎರಡು ಜಿಲಿಟಿನ್‌ ಕಡ್ಡಿಗಳು ಹಾಗೂ ಟೈಮರ್ ಪತ್ತೆಯಾಗಿ ಆತಂಕ ಸೃಷ್ಟಿಸಿತು. ಈ ಪ್ರಕರಣದ ಸೃಷ್ಟಿಕರ್ತನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Related image1
ಜಿಲೆಟಿನ್ ಕಡ್ಡಿ ಮಾತ್ರವಲ್ಲ, ಮೋದಿ ಬರುವ ಮಾರ್ಗದಲ್ಲೇ ಟೈಮರ್ ಪತ್ತೆ! ಉಗ್ರ ಸಂಚಿನ ಬಗ್ಗೆ ಗೃಹ ಸಚಿವ ಅಚ್ಚರಿ ಹೇಳಿಕೆ!
Related image2
Exclusive Breaking: ಜಿಲೆಟಿನ್ ಕಡ್ಡಿ ಮಾತ್ರವಲ್ಲ, ಮೋದಿ ಮಾರ್ಗದಲ್ಲಿ ಸಿಕ್ಕಿದ್ದು ಸ್ಪೋಟಕ!
36
ಯಾವ ಕಂಪನಿಯದ್ದು ಜಿಲೆಟಿನ್ ?
Image Credit : Asianet News

ಯಾವ ಕಂಪನಿಯದ್ದು ಜಿಲೆಟಿನ್ ?

ಜಿಲಿಟನ್‌ ಕಡ್ಡಿಗಳಲ್ಲಿ ದಿನಾಂಕ ಹಾಗೂ ತಯಾರಿಕ ಕಂಪನಿ ಹೆಸರು ನಮೂದಾಗಿರುತ್ತದೆ. ಆದರೆ ಕನಕಪುರ ರಸ್ತೆಯಲ್ಲಿ ಪತ್ತೆಯಾದ ಜಿಲಿಟಿನ್‌ ಕಡ್ಡಿಗಳಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಿಸಿದ ತಜ್ಞರು ಆ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯವು. ಅವುಗಳ ಸಿಡಿಯುವ ಸಾಮರ್ಥ್ಯವೇ ಕೇವಲ 1 ಅಡಿ ವಿಸ್ತೀರ್ಣ ಮಾತ್ರಕ್ಕೆ ಸಿಮೀತವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅಂತಿಮ ವರದಿಗೆ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

46
ರಸ್ತೆಗೂ ಜಿಲೆಟಿನ್ ಪತ್ತೆಯಾದ ಸ್ಥಳಕ್ಕೂ ಎಷ್ಟು ಅಂತರ?
Image Credit : Asianet News

ರಸ್ತೆಗೂ ಜಿಲೆಟಿನ್ ಪತ್ತೆಯಾದ ಸ್ಥಳಕ್ಕೂ ಎಷ್ಟು ಅಂತರ?

ಪ್ರಧಾನ ಮಂತ್ರಿ ಅವರು ಸಂಚರಿಸಲಿದ್ದ ರಸ್ತೆಗೂ ಜಿಲಿಟಿನ್ ಕಡ್ಡಿ ಪತ್ತೆಯಾದ ಸ್ಥಳಕ್ಕೂ ಸುಮಾರು 20 ಅಡಿಯಷ್ಟು ಅಂತರವಿತ್ತು. ಅವುಗಳಿಗೆ ಸಿಡಿಯುವ ಸಾಮರ್ಥ್ಯವೇ ಒಂದು ಅಡಿ ವಿಸ್ತೀರ್ಣ ಇತ್ತು. ಅಲ್ಲದೆ ಜಿಲಿಟಿನ್ ಕಡ್ಡಿಗಳ ಜತೆ ಟೈಮರ್ ಸಿಕ್ಕಿದೆ. ಅವುಗಳು ಜೋಡಣೆಯಾಗದೆ ಬಿಡಿ ಬಿಡಿಯಾಗಿದ್ದವು. ಡಿಟೋನೆಟರ್‌ ಸಹ ಇರಲಿಲ್ಲ. ಇವುಗಳನ್ನು ವಿಶ್ಲೇಷಿಸಿದಾಗ ಜಿಲಿಟಿನ್ ತಂದಿಟ್ಟವನಿಗೆ ಬೆದರಿಸುವ ದುರುದ್ದೇಶವಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

56
ಉಗ್ರರ ಪಾತ್ರ ಖಚಿತವಿಲ್ಲ: ಪೊಲೀಸರು
Image Credit : Getty

ಉಗ್ರರ ಪಾತ್ರ ಖಚಿತವಿಲ್ಲ: ಪೊಲೀಸರು

ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಮಾಹಿತಿ ಪರಾಮರ್ಶಿಸಿದಾಗ ಜಿಲಿಟಿನ್ ಪತ್ತೆ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆಗಳ ಪಾತ್ರದ ಬಗ್ಗೆ ಸ್ಪಷ್ಟವಾಗಿಲ್ಲ. ಹೀಗಾಗಿಯೇ ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಮುಂದುವರೆಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಆರೋಪಿ ಬಂಧನದ ಬಳಿಕವೇ ಕೃತ್ಯದ ಹಿಂದಿರುವ ಸಂಚು ಬಯಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

66
15 ಕ್ವಾರೆಗಳ ತಪಾಸಣೆ
Image Credit : Asianet News

15 ಕ್ವಾರೆಗಳ ತಪಾಸಣೆ

ಜಿಲಿಟಿನ್ ಕಡ್ಡಿಗಳ ಸಲುವಾಗಿ ಕನಕಪುರ, ಮಾಗಡಿ ಹಾಗೂ ರಾಮನಗರ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚಿನ ಕ್ವಾರೆಗಳಲ್ಲಿ ಶೋಧಿಸಲಾಗಿದೆ. ಆದರೆ ಎಲ್ಲೂ ಸಹ ಜಿಲಿಟಿನ್ ಕಡ್ಡಿಗಳ ಪೂರೈಕೆ ಬಗ್ಗೆ ಸುಳಿವು ಸಿಕ್ಕಿಲ್ಲ. ಇನ್ನು ತಮಿಳುನಾಡಿನ ರಾಜ್ಯಕ್ಕೆ ತೆರಳಿ ಸಹ ಅಲ್ಲಿನ ಕ್ವಾರೆಗಳಲ್ಲಿ ತನಿಖಾ ತಂಡಗಳು ತಪಾಸಣೆ ನಡೆಸುತ್ತಿವೆ ಎಂದು ಉನ್ನತ ಮೂಲಗಳು ಹೇಳಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬೆಂಗಳೂರು
ಕರ್ನಾಟಕ ಸುದ್ದಿ
ನರೇಂದ್ರ ಮೋದಿ

Latest Videos
Recommended Stories
Recommended image1
ಸ್ವ ಕ್ಷೇತ್ರದಲ್ಲೇ ಎಸಿ ಕೋರ್ಟ್ ಕೇಸ್‌ ಬಾಕಿಗೆ ಕೃಷ್ಣ ಬೈರೇಗೌಡ ಗರಂ, ಸಚಿವರಿಗೆ ತಲೆನೋವಾದ ಆ ಅಧಿಕಾರಿ!
Recommended image2
ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?
Recommended image3
ಶಿವಾನಂದ ನೀಲಣ್ಣವರ್ ಅರೆಸ್ಟ್: ಬಂಧಿಸಿ ಜಡ್ಜ್ ಮನೆಗೆ ಕರೆದೊಯ್ಯುವಾಗಲೂ 'ಓಂ ನಮಃ ಶಿವಾಯ' ಎಂದ ಆಸಾಮಿ!
Related Stories
Recommended image1
ಜಿಲೆಟಿನ್ ಕಡ್ಡಿ ಮಾತ್ರವಲ್ಲ, ಮೋದಿ ಬರುವ ಮಾರ್ಗದಲ್ಲೇ ಟೈಮರ್ ಪತ್ತೆ! ಉಗ್ರ ಸಂಚಿನ ಬಗ್ಗೆ ಗೃಹ ಸಚಿವ ಅಚ್ಚರಿ ಹೇಳಿಕೆ!
Recommended image2
Exclusive Breaking: ಜಿಲೆಟಿನ್ ಕಡ್ಡಿ ಮಾತ್ರವಲ್ಲ, ಮೋದಿ ಮಾರ್ಗದಲ್ಲಿ ಸಿಕ್ಕಿದ್ದು ಸ್ಪೋಟಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved