ಮಾರ್ಕೆಟ್‌ನಲ್ಲಿ ಮೂಟೆ ಹೊರುವ ನಾಯಕನ ತಂಡ, ಅನಾಥರಿಗೆ ನೆರಳಾಗುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುತ್ತ ಒಂದು ನಾರ್ಮಲ್‌ ಕತೆಯಾಗಿ ಸಾಗುವ ಚಿತ್ರದಲ್ಲಿ ಅಚ್ಚರಿಯ ತಿರುವೊಂದು ಬರುತ್ತದೆ.

- ಕೇಶವ

ಒಬ್ಬ ಸೈಕೋ, ಮತ್ತೊಬ್ಬ ರಾಜಕಾರಣಿ, ಇನ್ನೊಬ್ಬ ಪಾತಕಿ, ಮಗದೊಬ್ಬ ಒಳ್ಳೆತನದ ಮುಖವಾಡ ಹೊತ್ತವ, ಇವರ ನಡುವೆ ಒಬ್ಬ ವೈದ್ಯ ಮತ್ತು ಅವನೊಬ್ಬ ಅನಾಥ. ಇವಿಷ್ಟು ಪಾತ್ರಗಳನ್ನು ಹೊತ್ತು ಸಾಗುವ ‘ಶೇರ್‌’, ಕೊನೆಗೆ ಎಲ್ಲಿಂದ ಶುರುವಾಗುತ್ತದೋ ಅಲ್ಲಿಗೆ ಬರುವ ಹೊತ್ತಿಗೆ ಕತೆಯ ಪೂರ್ಣ ತಿರುಳು ಪ್ರೇಕ್ಷಕನಿಗೆ ದಾಟಿಸಿರುತ್ತಾರೆ ನಿರ್ದೇಶಕ ಪ್ರಸಿದ್ಧ್‌ ಅವರು. ಇಲ್ಲಿ ಅನಾಥ ಪಾತ್ರಧಾರಿ ನಾಯಕ ಕಿರಣ್‌ ರಾಜ್‌. ಉಳಿದವರು ಖಳ ನಟರ ಗ್ಯಾಂಗು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರೇಮ ಕತೆ, ಫ್ಯಾಮಿಲಿ ಡ್ರಾಮಾ, ಮಾರ್ಕೆಟ್‌ನಲ್ಲಿ ಮೂಟೆ ಹೊರುವ ನಾಯಕನ ತಂಡ, ಅನಾಥರಿಗೆ ನೆರಳಾಗುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುತ್ತ ಒಂದು ನಾರ್ಮಲ್‌ ಕತೆಯಾಗಿ ಸಾಗುವ ಚಿತ್ರದಲ್ಲಿ ಅಚ್ಚರಿಯ ತಿರುವೊಂದು ಬರುತ್ತದೆ. ಅದೇ ಚಿತ್ರದ ಕೇಂದ್ರ ಬಿಂದು ಕೂಡ. ಈ ತಿರುವಿನ ಪಾಯಿಂಟ್‌ಗೆ ಸರಣಿ ಸಾವುಗಳು, ಸಾವುಗಳ ಹಿಂದಿರುವ ಕಾಣದ ಮಾಫಿಯಾ, ಕಾಣುವ ವ್ಯಕ್ತಿಗಳ ಕೈವಾಡಗಳನ್ನು ನಾಯಕ ಮತ್ತು ನಾಯಕಿ ಸೇರಿಕೊಂಡು ಹೇಗೆ ಬಯಲು ಮಾಡುತ್ತಾರೆ ಎಂಬುದು ಚಿತ್ರದಲ್ಲಿ ನೋಡಬೇಕು.

ಚಿತ್ರ: ಶೇರ್‌
ತಾರಾಗಣ: ಕಿರಣ್‌ ರಾಜ್‌, ಸುರೇಖಾ, ತನಿಷಾ ಕುಪ್ಪಂಡ, ನಮೃತಾ, ಕ್ರಿಸ್, ಬಲರಾಜವಾಡಿ, ಶೋಭಾ ರಾಜ್‌, ಯಶ್‌ ಶೆಟ್ಟಿ, ಅಮೃತಾ ವಿ ರಾಜ್‌
ನಿರ್ದೇಶನ: ಪ್ರಸಿದ್ಧ್‌
ರೇಟಿಂಗ್‌: 3

ಕಿರಣ್‌ ರಾಜ್‌ ಮಾಸ್‌, ಆ್ಯಕ್ಷನ್‌ ಇಮೇಜ್‌ ಅಂದರೆ ಬಲು ಪ್ರೀತಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪೊಲೀಸ್‌ ಪಾತ್ರದಲ್ಲಿ ತನಿಷಾ ಕುಪ್ಪಂಡ, ರಾಜಕಾರಣಿಯಾಗಿ ಶೋಭರಾಜ್‌, ಖಳನಾಯಕನಾಗಿ ಕ್ರಿಸ್‌, ಗ್ರಾ.ಪಂ. ಅಧ್ಯಕ್ಷನಾಗಿ ಯಶ್‌ ಶೆಟ್ಟಿ ಸೊಗಸಾಗಿ ನಟಿಸಿದ್ದಾರೆ.