MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?

ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?

ತಮ್ಮ ಮೋಜು ಮಸ್ತಿ ಜೀವನಕ್ಕೆ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಳಸಿಕೊಂಡು ರಾಜ್ಯದ ಪ್ರತಿಷ್ಠಿತ ರಾಜಕಾರಣಿ ಪುತ್ರರು ಸೇರಿ ಶ್ರೀಮಂತ ಕುಟುಂಬದ ಮಕ್ಕಳು ನಡೆಸುತ್ತಿದ್ದ ‘ಹವಾಲಾ ದಂಧೆ’ಯನ್ನು ‘ಗೂಗಲ್ ಚಾಟ್‌’ನಿಂದ ಇ.ಡಿ ಬಯಲು ಮಾಡಿದೆ. 

3 Min read
Author : Ravi Janekal| Kannada Prabha
Published : May 16 2026, 08:10 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಟ್ ಕಾಯಿನ್ ಹಗರಣ ಮುಂದಿಟ್ಟು ಶ್ರೀಮಂತರ ಹವಾಲಾ ದಂಧೆ
Image Credit : Asianet News

ಬಿಟ್ ಕಾಯಿನ್ ಹಗರಣ ಮುಂದಿಟ್ಟು ಶ್ರೀಮಂತರ ಹವಾಲಾ ದಂಧೆ

ಬಿಟ್ ಕಾಯಿನ್ ಹಗರಣ ಮುಂದಿಟ್ಟು ಶ್ರೀಮಂತರ ಹವಾಲಾ ದಂಧೆ ಜಾಲ ಬೇಧಿಸಿರುವ ಇ.ಡಿ, ಈಗ ಶ್ರೀಕಿ ಸ್ನೇಹ ಬಳಗದಲ್ಲಿದ್ದ ರಾಜಕಾರಣಿಯ ಇಬ್ಬರು ಪುತ್ರರು, ಅಪರಾಧ ಜಗತ್ತಿನ ನಂಟು ಹೊಂದಿರುವ ಪರಿವಾರದ ಪುತ್ರ ಹಾಗೂ ಹಿರಿಯ ಸರ್ಕಾರಿ ಅಧಿಕಾರಿ ಮಗನ ಎದೆಯಲ್ಲಿ ನಡುಕು ಹುಟ್ಟಿಸಿದೆ. ಇನ್ನು ಶ್ರೀಕಿ ಬಂಧನ ಬಳಿಕ ಈ ಸಿರಿವಂತರ ಮಕ್ಕಳಿಗೆ ಮತ್ತಷ್ಟು ಭೀತಿ ಹೆಚ್ಚಾಗಿದೆ ಎನ್ನಲಾಗಿದೆ.

ಹತ್ತು ವರ್ಷಗಳ ಹಿಂದೆ ಶ್ರೀಕಿ ಹಾಗೂ ಆತನ ಸ್ನೇಹಿತರ ಮಧ್ಯೆ ನಡೆದಿದ್ದ ಜಿ.ಮೇಲ್‌ (ಗೂಗಲ್‌) ಚಾಟಿಂಗ್ ಹಿಸ್ಟರಿಯನ್ನು ಇ.ಡಿ. ಸಂಗ್ರಹಿಸಿತು. ಈ ವಿವರ ಶೋಧಿಸಿದಾಗ ಬಿಟ್ ಕಾಯಿನ್ ನಗದೀಕರಣಗೊಳಿಸುತ್ತಿದ್ದ ಬ್ಲ್ಯಾಕ್ ಆ್ಯಂಡ್ ವೈಟ್ (ಕಪ್ಪು-ಬಿಳುಪು) ಜಾಲದ ಸುಳಿವು ಲಭಿಸಿದೆ. ಈ ಮಾಹಿತಿ ಆಧರಿಸಿ ಮತ್ತಷ್ಟು ಶೋಧಿಸಿದಾಗ ಬೆಂಗಳೂರು ಮಾತ್ರವಲ್ಲದೆ ಮಹಾರಾಷ್ಟ್ರದ ಮುಂಬೈ, ಪಂಜಾಬ್‌ ಹಾಗೂ ದೆಹಲಿಯಲ್ಲಿ ಹರಡಿರುವ ಹವಾಲಾ ದಂಧೆಯ ಕೊಂಡಿಗಳು ಬೆಳಕಿಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ದಿಢೀರ್ ಬೆಂಗಳೂರು ಸೇರಿ ಇತರೆಡೆ ಇ.ಡಿ. ಕಾರ್ಯಾಚರಣೆ ನಡೆಸಿತು. ಬಳಿಕ ಹ್ಯಾಕರ್ ಶ್ರೀಕಿ ಜತೆ ಆತನ ಇಬ್ಬರು ಶ್ರೀಮಂತ ಕುಟುಂಬದ ಸ್ನೇಹಿತರನ್ನು ಇ.ಡಿ. ಬಂಧಿಸಿತು ಎಂದು ಉನ್ನತ ಮೂಲಗಳು ‘ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿವೆ.

Add Asianetnews Kannada as a Preferred SourcegooglePreferred
25
ಮೋಜು ಮಸ್ತಿಗೆ ದಂಧೆ ಶ್ರೀಕಿ ಗ್ಯಾಂಗ್
Image Credit : Asianet News

ಮೋಜು ಮಸ್ತಿಗೆ ದಂಧೆ ಶ್ರೀಕಿ ಗ್ಯಾಂಗ್

ಮೋಜು ಮಸ್ತಿಗೆ ದಂಧೆ:

ಪೋಕರ್ ಕಂಪನಿ, ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ಮೆಂಟ್‌ ಹಾಗೂ ತುಮಕೂರಿನ ಬಿಟ್‌ ಕಾಯಿನ್ ಏಜೆನ್ಸಿ ಯೂನಿ ಕಾರ್ನ್ ಸೇರಿ ಕೆಲ ವೆಬ್‌ಸೈಟ್‌ಗಳಿಗೆ ಶ್ರೀಕಿ ಕನ್ನ ಹಾಕಿದ್ದ. 2016ರಲ್ಲಿ ಯೂನಿ ಕಾರ್ನ್ ಕಂಪನಿಯ 66 ಬಿಟ್ ಕಾಯಿನ್ ಗಳನ್ನು ಕಳವು ಮಾಡಲಾಗಿತ್ತು. ಅದಾದ ಬಳಿಕ ಸರ್ಕಾರದ ವೆಬ್‌ಸೈಟ್‌ ಹ್ಯಾಕ್ ಮಾಡಿ 18 ಕೋಟಿ ರು ಹಣ ದೋಚಿದ್ದರು. ಈ ಹಣ ಬಳಸಿಕೊಂಡು ಶ್ರೀಕಿ ಹಾಗೂ ಆತನ ಸ್ನೇಹಿತರು ಮೋಜು ಮಾಡಿದ್ದರು.

ನಮಗೆ ದೊಡ್ಡಮಟ್ಟದ ನಷ್ಟವಾಗಲಿಲ್ಲ. ಆಗ ಬಿಟ್‌ ಕಾಯಿನ್ ಮೌಲ್ಯವೂ ಕಡಿಮೆ ಇತ್ತು. ಈ ದಂಧೆಯಿಂದ ಶ್ರೀಕಿ ಹಾಗೂ ಆತನ ಸ್ನೇಹಿತರು ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾತು ಒಪ್ಪಲ್ಲ. ಆದರೆ ಅವರು ಮೋಜು ಮಸ್ತಿ ಮಾಡಿದ್ದಾರೆ. ತಮ್ಮ ಐಷರಾಮಿ ಜೀವನಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿದ್ದಾರೆ ಎಂದು ಶ್ರೀಕಿ ಬಳಗದಿಂದ ಹಣ ಕಳೆದುಕೊಂಡಿರುವ ಸಂತ್ರಸ್ತರೊಬ್ಬರು ‘ಕನ್ನಡಪ್ರಭ’ಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Articles

Related image1
ಬಿಟ್‌ಕಾಯಿನ್ ಹಗರಣದಲ್ಲಿ ಮಹತ್ವದ ಬೆಳವಣಿಗೆ, ತಡರಾತ್ರಿ ಪ್ರಮುಖ ಆರೋಪಿ ಶ್ರೀಕಿ ಸೇರಿ ಇಬ್ಬರ ಬಂಧನ
Related image2
ಬಿಟ್ ಕಾಯಿನ್: ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್
35
ಏನಿದು ಬಿಟ್ ಕಾಯಿನ್ ಪ್ರಕರಣ?:
Image Credit : Asianet News

ಏನಿದು ಬಿಟ್ ಕಾಯಿನ್ ಪ್ರಕರಣ?:

ಜಾಗತಿಕ ಮಟ್ಟದಲ್ಲಿ 2015ರಲ್ಲಿ ಬಿಟ್ ಕಾಯಿನ್ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿತ್ತು. ತಾಂತ್ರಿಕವಾಗಿ ನಿಪುಣನಾಗಿದ್ದ ಶ್ರೀಕಿಯನ್ನು ಬಳಸಿಕೊಂಡು ಸರ್ಕಾರ ಹಾಗೂ ಕೆಲ ಖಾಸಗಿ ಕಂಪನಿಗಳ ವೆಬ್‌ಸೈಟ್‌ಗಳಿಗೆ ಕನ್ನ ಹಾಕಲಾಗಿತ್ತು. ಹೀಗೆ ವೆಬ್‌ ಸೈಟ್‌ಗಳನ್ನು ಹ್ಯಾಕ್ ಮಾಡಿ ದೋಚಿದ ಹಣವನ್ನು ಬಿಟ್‌ ಕಾಯಿನ್‌ಗೆ ವರ್ಗಾಯಿಸಲಾಗಿತ್ತು. ಬಳಿಕ ಅದನ್ನು ಹವಾಲಾ ಮೂಲಕ ನಗದು ಮಾಡಿಕೊಂಡು ಶ್ರೀಕಿ ಹಾಗೂ ಆತನ ಬಳಗ ಬಳಸಿದೆ ಎಂಬ ಆರೋಪವಿದೆ. ಈ ಸಂಬಂಧ ತುಮಕೂರು ಹಾಗೂ ಬೆಂಗಳೂರಿನ ವಿವಿಧೆಡೆ 6 ಪ್ರಕರಣಗಳು ದಾಖಲಾಗಿವೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಟ್ ಕಾಯಿನ್ ಹಗರಣ ದೊಡ್ಡಮಟ್ಟದ ಸದ್ದು ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದ ಬಳಿಕ ಬಿಟ್ ಕಾಯಿನ್ ಹಗರಣದ ತನಿಖೆಗೆ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು.

45
ಇಡಿ ಇಕ್ಕಳಕ್ಕೆ ಸಿಲುಕಿದ್ದು ಹೇಗೆ?
Image Credit : Asianet News

ಇಡಿ ಇಕ್ಕಳಕ್ಕೆ ಸಿಲುಕಿದ್ದು ಹೇಗೆ?

ಬಿಟ್ ಕಾಯಿನ್ ಹಗರಣದ ಕುರಿತು ಸಿಐಡಿ, ಸಿಸಿಬಿ ಹಾಗೂ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ನಡೆಸಿದ್ದರು. ಈ ಹಗರಣದ ಹಿಂದೆ ಅಂತಾರಾಜ್ಯ ಹವಾಲಾ ಜಾಲವಿದೆ ಎಂದು ಮೂರು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಆದರೆ ಹೊರ ರಾಜ್ಯಗಳಲ್ಲಿ ತನಿಖೆಗೆ ತಾಂತ್ರಿಕ ಸಮಸ್ಯೆ ಹಾಗೂ ಕೆಲ ಪ್ರಭಾವಿಗಳ ಲಾಬಿ ಸಹ ಅಡ್ಡಿಯಾಯಿತು. ಶ್ರೀಮಂತರ ಮಕ್ಕಳು ಹಣ ಪಡೆದಿರುವ ಬಗ್ಗೆ ಖಚಿತ ಮಾಹಿತಿ ಇತ್ತು. ಆದರೆ ಅದನ್ನು ರುಜುವಾತುಪಡಿಸುವಷ್ಟು ಪುರಾವೆ ಸಿಗಲಿಲ್ಲ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇ.ಡಿ.ಗೆ ಪತ್ರ ಬರೆದು ಮಾಹಿತಿ ನೀಡಲಾಯಿತು. ಈ ಮಾಹಿತಿ ಮೇರೆಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಇ.ಡಿ. ತನಿಖೆಗಿಳಿದಿದೆ. 2012ರಿಂದ 2020 ವರೆಗೆ ಶ್ರೀಕಿ ಹಾಗೂ ಆತನ ಬಳಗದ ಗೂಗಲ್ ಚಾಟ್‌ ಸೇರಿ ಇತರೆ ಸಂವಹನ ಸಂಪರ್ಕ ಜಾಲವನ್ನು ಇ.ಡಿ. ಜಾಲಾಡಿದಾಗ ಹವಾಲ ದಂಧೆ ಪುರಾವೆ ಸಿಕ್ಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

55
ದಿಲ್ಲಿಯಲ್ಲಿ ₹2 ಕೋಟಿ, ಬಾಂಬೆಯಲ್ಲಿ ₹10 ಲಕ್ಷ
Image Credit : Asianet News

ದಿಲ್ಲಿಯಲ್ಲಿ ₹2 ಕೋಟಿ, ಬಾಂಬೆಯಲ್ಲಿ ₹10 ಲಕ್ಷ

ಬಿಟ್ ಕಾಯಿನ್ ಅನ್ನು ಹವಾಲಾ ನೆಟ್‌ವರ್ಕ್‌ ಬಳಸಿ ಸಿರಿವಂತರ ಮಕ್ಕಳು ನಗದು ಮಾಡಿದ್ದರು. ದೆಹಲಿಗೆ ತನ್ನ ಕಾರು ಚಾಲಕನ್ನು ಕಳುಹಿಸಿ 2 ಕೋಟಿ ರು.ಅನ್ನು ಅಪರಾಧ ಜಗತ್ತಿನ ನಂಟು ಹೊಂದಿದ್ದ ವ್ಯಕ್ತಿಯ ಪುತ್ರ ಪಡೆದಿದ್ದ. ಮುಂಬೈನ ತನ್ನ ಸ್ನೇಹಿತನ ಮೂಲಕ ಬೆಂಗಳೂರಿನ ಪ್ರಭಾವಿ ರಾಜಕಾರಣಿ ಪುತ್ರನಿಗೆ ₹10 ಲಕ್ಷ ಸಂದಾಯವಾಗಿತ್ತು. ಅದೇ ಹಿರಿಯ ಸರ್ಕಾರಿ ಅಧಿಕಾರಿ ಪುತ್ರನ ಐಷಾರಾಮಿ ಕಾರು ಖರೀದಿಗೆ ಹವಾಲಾ ಹಣ ಬಳಕೆಯಾಗಿತ್ತು ಎಂದು ಮೂಲಗಳು ಲೆಕ್ಕ ಕೊಟ್ಟಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬಿಟ್‌ಕಾಯಿನ್
ಇಡಿ ದಾಳಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಶಿವಾನಂದ ನೀಲಣ್ಣವರ್ ಅರೆಸ್ಟ್: ಬಂಧಿಸಿ ಜಡ್ಜ್ ಮನೆಗೆ ಕರೆದೊಯ್ಯುವಾಗಲೂ 'ಓಂ ನಮಃ ಶಿವಾಯ' ಎಂದ ಆಸಾಮಿ!
Recommended image2
Karnataka News Live: ಹ್ಯಾಕರ್ ಶ್ರೀಕಿ ಮೂಲಕ ಹವಾಲಾ ದಂಧೆ! ಶ್ರೀಮಂತ ರಾಜಕಾರಣಿ ಪುತ್ರರ ಹೆಸರು ಕೇಳಿ ಬೆಚ್ಚಿಬಿದ್ದ ಇ.ಡಿ ಗೂಗಲ್ ಚಾಟ್’ನಲ್ಲಿ ಸಿಕ್ಕ ರಹಸ್ಯ ಏನು?
Recommended image3
ಶಿವಾನಂದ ನೀಲಣ್ಣವರ: ಅಂದು ಐಸ್‌ಕ್ರೀಮ್‌ ಮಾರುತ್ತಿದ್ದವ ಸಾಮ್ರಾಜ್ಯ ಕಟ್ಟಿದ!
Related Stories
Recommended image1
ಬಿಟ್‌ಕಾಯಿನ್ ಹಗರಣದಲ್ಲಿ ಮಹತ್ವದ ಬೆಳವಣಿಗೆ, ತಡರಾತ್ರಿ ಪ್ರಮುಖ ಆರೋಪಿ ಶ್ರೀಕಿ ಸೇರಿ ಇಬ್ಬರ ಬಂಧನ
Recommended image2
ಬಿಟ್ ಕಾಯಿನ್: ಇಷ್ಟೆಲ್ಲಾ ಆದ್ರೂ ಬುದ್ಧಿ ಕಲಿಯದ ಶ್ರೀಕಿ, ಇಡಿ ಬಂಧನದ ಹಿಂದಿನ ದಿನ ಅಮೆರಿಕ ಕಂಪನಿಯ ಸರ್ವರ್ ಹ್ಯಾಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved