- Home
- News
- State
- ವಿಐಪಿ ಕಾರು ಬಿಟ್ಟು ಮೆಟ್ರೋ ಏರಿದ ವಿಜಯೇಂದ್ರ; ಮೋದಿ ಕರೆಗೆ ಸ್ಪಂದನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ!
ವಿಐಪಿ ಕಾರು ಬಿಟ್ಟು ಮೆಟ್ರೋ ಏರಿದ ವಿಜಯೇಂದ್ರ; ಮೋದಿ ಕರೆಗೆ ಸ್ಪಂದನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ!
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಮೆಜೆಸ್ಟಿಕ್‌ನಿಂದ ಕೆಂಗೇರಿ ತನಕ ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನ ಸೆಳೆದರು. ಸಾಮಾನ್ಯ ಪ್ರಯಾಣಿಕರ ಜೊತೆಯಲ್ಲೇ ಮೆಟ್ರೋದಲ್ಲಿ ತೆರಳಿದ ವಿಜಯೇಂದ್ರ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಮ್ಮ ಮೆಟ್ರೋದಲ್ಲಿ ಸಾಮಾನ್ಯರಂತೆ ಸರತಿ ಸಾಲಲ್ಲಿ ನಿಂತ ವಿಜಯೇಂದ್ರ!
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಮೆಜೆಸ್ಟಿಕ್‌ನಿಂದ ಕೆಂಗೇರಿ ತನಕ ಮೆಟ್ರೋದಲ್ಲಿ ಪ್ರಯಾಣ ಮಾಡಿ ಗಮನ ಸೆಳೆದರು. ಸಾಮಾನ್ಯರಂತೆ ಮೆಟ್ರೋ ಒಳಗೆ ಪ್ರವೇಶಿಸಿದ ವಿಜಯೇಂದ್ರ ಟ್ರೈನ್ ಬರುವವರೆಗೆ ಪ್ರಯಾಣಿಕರ ಹಿಂದೆಯೇ ಸರತಿ ಸಾಲಿನಲ್ಲಿ ನಿಂತರು, ಮೆಟ್ರೋ ಬಂದ ಬಳಿಕ ಸಾಮಾನ್ಯ ಪ್ರಯಾಣಿಕರ ಜೊತೆಯಲ್ಲೇ ಮೆಟ್ರೋದಲ್ಲಿ ತೆರಳಿದರು.

ಮೋದಿ ಕರೆಗೂ ಸ್ಪಂದನೆ… ಅದಕ್ಕಾಗಿ ಮೆಟ್ರೋ ಬಳಕೆ: ವಿಜಯೇಂದ್ರ
ವಿಜಯೇಂದ್ರ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯದ ಕರೆಗೆ ಸ್ಪಂದಿಸಿರುವುದಾಗಿ ಹೇಳಿದ ವಿಜಯೇಂದ್ರ, 'ಅನಗತ್ಯ ಇಂಧನ ಬಳಕೆ ಕಡಿಮೆ ಮಾಡಬೇಕು ಎಂಬ ಸಂದೇಶದ ಭಾಗವಾಗಿ ನಾನು ಮೆಟ್ರೋ ಬಳಸುತ್ತಿದ್ದೇನೆ” ಎಂದರು.
ಕುಂಬಳಗೋಡಿನ ಕಾರ್ಯಕ್ರಮಕ್ಕೆ ಮೆಟ್ರೋದಲ್ಲೇ ವಿಜಯೇಂದ್ರ ಪ್ರಯಾಣ
ಇದೇ ವೇಳೆ, ಕುಂಬಳಗೋಡಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೆಟ್ರೋ ಮೂಲಕ ತೆರಳುತ್ತಿರುವುದಾಗಿ ತಿಳಿಸಿದರು. ಕುಂಬಳಗೋಡಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ಹೀಗಾಗಿ ನಾನು ಮೆಟ್ರೋ ಬಳಕೆ ಮಾಡುತ್ತಿದ್ದೇನೆ ಎಂದರು.
ಪೆಟ್ರೋಲ್ ದರ ಹೆಚ್ಚಳ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ವಿಜಯೇಂದ್ರ, ‘ ಪೆಟ್ರೋಲ್ ಡೀಸೆಲ್ ದರ ಏಕೆ ಏರಿಕೆಯಾಗಿದೆ ಅನ್ನೋದು ಸಾಮಾನ್ಯ ಜನರಿಗೂ ಗೊತ್ತಿದೆ, ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿದೆ. ಆದರೆ ವಿರೋಧಕ್ಕಾಗಿ ವಿರೋಧ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಮೋದಿ ರಾಜೀನಾಮೆ ಕೇಳಿದ ಕಾಂಗ್ರೆಸ್‌ಗೆ ವಿಜಯೇಂದ್ರ ತಿರುಗೇಟು
ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, 'ಹಾಗಾದರೆ ಎರಡು ವರ್ಷಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡಬೇಕಾಗಿತ್ತು. ರಾಜ್ಯದಲ್ಲೇ ಇಂಧನ ದರ ಏರಿಕೆ ಮಾಡಿರಲಿಲ್ಲವೇ?” ಎಂದು ಪ್ರಶ್ನಿಸಿದರು.
ಚುನಾವಣೆಗಾಗಿ ಮೋದಿ ದರ ಇಳಿಕೆ-ಏರಿಕೆ ಮಾಡುವವರಲ್ಲ: ವಿಜಯೇಂದ್ರ
ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್ ದರ ಏರಿಸಲಾಗಿದೆ ಎಂಬ ಆರೋಪವೂ ತಪ್ಪು. ಪ್ರಧಾನಿ ಮೋದಿ ಚುನಾವಣೆ ಗಮನದಲ್ಲಿಟ್ಟು ಇಂಧನ ದರ ಇಳಿಕೆ ಅಥವಾ ಏರಿಕೆ ಮಾಡುವವರಲ್ಲ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಇಂಧನ ಮಿತವ್ಯಯದ ಬಗ್ಗೆ ಕರೆ ನೀಡಿದ್ದಾರೆ. ಅನಗತ್ಯ ವಾಹನ ಬಳಕೆ ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು, ಕಾರ್‌ಪೂಲಿಂಗ್ ಮಾಡುವುದು ಮತ್ತು ಇಂಧನ ಉಳಿಸುವ ಜೀವನಶೈಲಿ ಅಳವಡಿಸಿಕೊಳ್ಳುವುದು ದೇಶದ ಆರ್ಥಿಕತೆಗೆ ಸಹಾಯಕ ಎಂದು ಮೋದಿ ಹೇಳಿದ್ದರು. ಇಂಧನ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ಈ ಕರೆ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

