ಆ ಪವರ್‌ಫುಲ್ ಪಾತ್ರದಲ್ಲಿ ಶಿವಣ್ಣ: ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರುವಾದ ಹ್ಯಾಟ್ರಿಕ್ ಹೀರೋ!
ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿ ಗೌರ ನಾಯ್ಡು ಪಾತ್ರದ ಶಿವರಾಜ್‌ಕುಮಾರ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಿಭಿನ್ನ ಗೆಟಪ್‌ಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.

ಪವರ್‌ಫುಲ್ ಪಾತ್ರದಲ್ಲಿ ಶಿವಣ್ಣ
ರಾಮ್ ಚರಣ್ ತೇಜ ನಟನೆಯ ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪವರ್‌ಫುಲ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಗೌರ ನಾಯ್ಡು ಎಂಬ ಅವರ ಪಾತ್ರ ಫಸ್ಟ್‌ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ದೊಡ್ಡ ಹೆಸರಾಗುವ ಸಾಧ್ಯತೆ
ಕಳೆದ ವರ್ಷ ‘ಜೈಲರ್’ ಮೂಲಕ ತಮಿಳಿನಲ್ಲಿ ಹವಾ ಎಬ್ಬಿಸಿದ್ದ ಶಿವಣ್ಣ ಈ ಬಾರಿ ತೆಲುಗಿನ ಚಿತ್ರರಂಗದಲ್ಲಿ ದೊಡ್ಡ ಹೆಸರಾಗುವ ಸಾಧ್ಯತೆ ಕಾಣಿಸುತ್ತಿದೆ.
ಮಣ್ಣುಮುಕ್ಕಿಸುವ ದೃಶ್ಯ
ಚಿತ್ರತಂಡ ಅವರ ಪಾತ್ರದ ತುಣುಕನ್ನು ಬಿಡುಗಡೆ ಮಾಡಿದ್ದು ಕುಸ್ತಿ ಅಖಾಡದಲ್ಲಿ ಸಹ ಸ್ಪರ್ಧಿಯನ್ನು ಮಣ್ಣುಮುಕ್ಕಿಸುವ ದೃಶ್ಯದಲ್ಲಿ ಶಿವಣ್ಣ ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರು
ತೆರೆ ಹಿಂದಿನ ದೃಶ್ಯವೂ ಇದರಲ್ಲಿದ್ದು ರಾಮ್ ಚರಣ್ ಜೊತೆಗೆ ಶಿವಣ್ಣ ಮಾತುಕತೆಯಲ್ಲಿ ನಿರತರಾಗಿದ್ದಾರೆ. ರಾಮ್‌ಚರಣ್‌ಗೆ ಕುಸ್ತಿಯ ಪಟ್ಟುಗಳನ್ನು ಕಲಿಸುವ ಗುರುವಿನ ಪಾತ್ರದಲ್ಲಿ ಶಿವಣ್ಣ ನಟಿಸಿರುವ ಸಂಗತಿಯನ್ನು ಚಿತ್ರತಂಡ ಈ ಮೂಲಕ ರಿವೀಲ್ ಮಾಡಿದೆ.
ನಿಮ್ಮೆದುರು ಬರುತ್ತೇನೆ
ಈ ಬಗ್ಗೆ ಶಿವಣ್ಣ, ‘ಪೆದ್ದಿಯ ಕಚ್ಚಾ ಜಗತ್ತಿಗೆ ಅಡಿ ಇಟ್ಟಿದ್ದೇನೆ. ಜೂ.4ಕ್ಕೆ ಗೌರ ನಾಯ್ಡು ಪಾತ್ರದಲ್ಲಿ ನಿಮ್ಮೆದುರು ಬರುತ್ತೇನೆ’ ಎಂದಿದ್ದಾರೆ.
ಭಿನ್ನ ಲುಕ್‌ನಲ್ಲಿ ಶಿವಣ್ಣ
ಶಿವಣ್ಣ ಗೆಟಪ್ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಭಿನ್ನ ಲುಕ್‌ನಲ್ಲಿ ಶಿವಣ್ಣ ಅವರನ್ನು ಕಣ್ತುಂಬಿಸಿಕೊಳ್ಳಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

