ಯುವತಿ ವಿಚಾರವಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಕರಣದಲ್ಲಿ ಯುವತಿ ವಿಚಾರ ಮುನ್ನಲೆಗೆ ಬಂದಿದ್ದು, ಪೊಲೀಸ್ ತನಿಖೆ ಆರಂಭಗೊಂಡಿದೆ.
ದಾವಣಗೆರೆ (ಮೇ.16) ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್ ಬಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆಯಾಗಿದೆ. ತಡ ರಾತ್ರಿ ಅಪ್ಪ ಹಾಗೂ ಮಗ ಇಬ್ಬರು ಸೇರಿ 43ರ ಹರೆಯದ ಆತಾಉಲ್ಲಾ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಯುವಚಿ ವಿಚಾರವಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ನಲ್ಲೂರ್ ಕ್ಯಾಂಪ್‌ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.

ಆತಾಉಲ್ಲಾ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ದಸ್ತಗಿರ್ ಹಾಗೂ ಜಬಿಉಲ್ಲಾ ಹಲವು ಆತಾಉಲ್ಲಾಗೆ ವಾರ್ನಿಂಗ್ ಮಾಡಿದ್ದರು ಎನ್ನಲಾಗಿದೆ. ಯುವತಿ ವಿಚಾರವಾಗಿ ಜಗಳವೂ ನಡೆದಿತ್ತು ಅನ್ನೋ ಮಾತುಗಳು ಕೇಳಿಬಂದಿದೆ. ಎಚ್ಚರಿಕೆ ಬಳಿಕವೂ ಆತಾಉಲ್ಲಾ ತನ್ನ ಬುದ್ದಿ ಬಿಟ್ಟಿರಲಿಲ್ಲ. ಹೀಗಾಗಿ ನಿನ್ನೆ (ಮೇ.15) ತಡ ರಾತ್ರಿ ದಸ್ತಗಿರ್ ಹಾಗೂ ಜಬಿಉಲ್ಲಾ ಇಬ್ಬರು ಸೇರಿ ಮಾರಾಕಾಸ್ತ್ರಗಳ ಮೂಲಕ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಹಿಂಬದಿಯಿಂದ ಬಂದು ದಾಳಿ
ನಲ್ಲೂರ್ ಕ್ಯಾಂಪ್ ಬಳಿ ಇರುವ ಬೇಕರಿ ಬಳಿ ಆತಾಉಲ್ಲಾ ನಿಂತಿದ್ದ. ರಾತ್ರಿ ವೇಳೆ ಕೆಲ ಸ್ನೇಹಿತರು, ಆಪ್ತರ ಜೊತೆ ಮಾತುಕತೆ ನಡೆಸಿದ್ದ ಅತಾಉಲ್ಲಾ ಬಳಿಕ ಬೇಕರಿ ಬಳಿ ಬಂದಿು ನಿಂತಿದ್ದ. ಬೇಕರಿಯಿಂದ ಮನೆಗೆ ತೆರಳಲು ಸಿದ್ಧವಾಗುತ್ತಿದ್ದಂತೆ ದಸ್ತಗಿರ್ ಹಾಗೂ ಜಬಿಉಲ್ಲಾ ಹಿಂಬದಿಯಿಂದ ದಾಳಿ ಮಾಡಿದ್ದಾರೆ. ಮಚ್ಚಿನಿಂದ ದಾಳಿ ಮಾಡಿದ್ದಾರೆ, ಭೀಕರ ದಾಳಿಯಲ್ಲಿ ಆತಾಉಲ್ಲಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


