ಬೆಳಗಾವಿಯಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಹೂಡಿಕೆ ಮಾಡಿ ಬರೋಬ್ಬರಿ 4500 ಕೋಟಿ ರೂ ವಂಚನೆ ಪ್ರಕರಣದಲ್ಲಿ ನೀಲಣ್ಣವರ್ ಸಿಲುಕಿದ್ದಾರೆ. ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ.
ಬೆಳಗಾವಿ (ಮೇ.16) ಹೆಚ್ಚಿನ ಬಡ್ಡಿ ನೀಡುವುದಾಗಿ ಜನಸಾಮಾನ್ಯರಿಂದ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಶಿವಂ ಅಸೋಸಿಯೇಟ್ ಮುಖ್ಯಸ್ಥ ನೀಲಣ್ಣವರ್ ಅರೆಸ್ಟ್ ಆಗಿದ್ದಾರೆ. ಬೆಳಗಾವಿಯಲ್ಲಿ ಕೋಲಾಹಲ ಸೃಷ್ಟಿಸಿದ ಈ ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಶಿವಂ ಅಸೋಸಿಯೇಟ್, ಮುಖ್ಯಸ್ಥ ಶಿವಾನಂದ್ ನೀಲಣ್ಣವರ್ (Shivanand Neelannavar) ಕಚೇರಿ, ಮನೆ, ಅಪಾರ್ಟ್‌ಮೆಂಟ್ ಮೇಲೆ ಎಸಿ, ಸಹಕಾರ ಇಲಾಕೆ ಅಧಿಕಾರಿಗಳ ದಾಳಿ ನಡೆಸಿ ಪ್ರರಕರಣ ಬಯಲಿಗೆಳೆದಿದ್ದಾರೆ. ಇದೀಗ ಬಂಧಿತ ನೀಲಣ್ಣವರ್ ಆಡಿಯೋ ರಿಲೀಸ್ ಮಾಡಿದ್ದಾರೆ.

ನೀಲಣ್ಣನವರ್ ಬಂಧನ ಬಳಿಕ ಬೆಳಗಾವಿಯಲ್ಲಿ (Belagavi) ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಹಲವರು ಹೆಚ್ಚಿನ ಬಡ್ಡಿ ಆಸೆಗೆ ಸಾಲ ಮಾಡಿ ಹೂಡಿಕೆ ಮಾಡಿದ್ದಾರೆ. ಬಂಧನದಿಂದ ಹೂಡಿಕೆದಾರು ತಮ್ಮ ಹೂಡಿಕೆ ಹಣದ ಬಗ್ಗೆ ತೀವ್ರ ಕಳವಳ ವ್ಯಕ್ಕಪಡಿಸಿದ್ದಾರೆ.
ನೀಲಣ್ಣವರ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?
ನೀಲಣ್ಣವರ್ ಕಚೇರಿ ಮೇಲೆ ದಾಳಿ ಬಳಿಕ ಖುದ್ದು ಶಿವಾನಂದ್ ನೀಲಣ್ಣವರ್ ಆಡಿಯೋ (Shivanand Neelannavar Audio) ರಿಲೀಸ್ ಮಾಡಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಶಿವಾನಂದ್ ನೀಲಣ್ಣವರ್ ಮನೆಯಲ್ಲಿ ನಾನು ಅರಾಮ ಇದೀನಿ ಎಂದಿದ್ದಾರೆ. ಮೊದಲು ಹೇಗಿತ್ತು ಇನ್ನೆರಡು ದಿನದಲ್ಲಿ ಹಾಗೇ ಇರುತ್ತೆ. ಯಾರು ಕೂಡ ತಲೆ ಕೆಡಸಿಕೊಳ್ಳಬೇಡಿ, ಭಯಪಡುವ ಅಗತ್ಯವಿಲ್ಲ, ಅರಾಮಗಿರಿ. ನಾನು ಇದ್ದೇನೆ, ಯಾರು ಒತ್ತಡ ತೆಗೆದುಕೊಳ್ಳಬೇಡಿ. ಮುಖ್ಯವಾಗಿ ಹೆದರಬೇಡಿ ಗಟ್ಟಿಯಾಗಿರಿ ಎಂದು ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮವಾಗಿ ಸಂಸ್ಥೆ ನಡೆಸುತ್ತೇವೆ ಎಂದು ನೀಲಣ್ಣನವರ್ ತಮ್ಮ ಹೂಡಿಕೆದಾರರಿಗೆ ಸಂದೇಶ ರವಾನಿಸಿದ್ದಾರೆ.
ಶಿವಾನಂದ ಕಚೇರಿಯಲ್ಲಿ ಪೊಲೀಸರಿಂದ ಇಂಚಿಂಚೂ ಶೋಧ
ಬೆಳಗಾವಿ ವಂಚನೆ ಪ್ರಕರಣ ಸಂಬಂಧ ಶಿವಾನಂದ ಕಚೇರಿಯಲ್ಲಿ ಪೊಲೀಸರಿಂದ ಇಂಚಿಂಚೂ ಶೋಧ ನಡೆಸಿದ್ದಾರೆ. ಕಚೇರಿಯಲ್ಲಿ ಬಾಂಡ್ ಪೇಪರ್, ಚೆಕ್ ಕಂಡು ಪೊಲೀಸರು ದಂಗಾಗಿದ್ದಾರೆ. ಒಂದೇ ವಾರದಲ್ಲಿ 50 ಕೋಟಿ ರೂಪಾಯಿ ಹೂಡಿಕೆ ಆಗಬೇಕಿತ್ತು. ಹೂಡಿಕೆ ಮಾಡುವವರಿಗೆ ನೀಡಬೇಕಿದ್ದ ಚೆಕ್, ಬಾಂಡ್ ಪೇಪರ್ ಪತ್ತೆಯಾಗಿದೆ. 3700 ಚೆಕ್ ಮತ್ತು ಬಾಂಡ್ ಪೇಪರ್ ಪತ್ತೆಯಾಗಿದೆ. ಹೊಸದಾಗಿ ಹೂಡಿಕೆ ಮಾಡೋರಿಗೆ ಸಹಿ ಮಾಡಿ ರೆಡಿ ಇಟ್ಟಿದ್ದ ಚೆಕ್ ಮತ್ತು ಬಾಂಡ್ ಪೇಪರ್ ಶೋಧ ಕಾರ್ಯದಲ್ಲಿ ಪತ್ತೆಯಾಗಿದೆ.
ಪೊಲೀಸ್ ವಶದಲ್ಲಿ ನೀಲಣ್ಣವರ್ ಹೇಳಿದ್ದೇನು
ಪೊಲೀಸ್ ವಶದಲ್ಲಿರುವಾಗ ನೀಲಣ್ಣವರ್ ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರಿಗೂ ಖುಷಿ ಸಿಗಲಿ.ಭಾರತದ ಜನತೆಗೆ ಒಳ್ಳೆಯದಾಗಲಿ , ಓಂನಮಃ ಶಿವಾಯ ಎಂದು ನೀಲಣ್ಣವರ್ ಕೈಮುಗಿದಿದ್ದಾರೆ.


