- Home
- Karnataka Districts
- ಉಪಚುನಾವಣೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹಾವು ಕಡಿದು ಸಾವು, ಉತ್ತರ ಕನ್ನಡದಲ್ಲಿ ದುರಂತ ಘಟನೆ
ಉಪಚುನಾವಣೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹಾವು ಕಡಿದು ಸಾವು, ಉತ್ತರ ಕನ್ನಡದಲ್ಲಿ ದುರಂತ ಘಟನೆ
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಾಗರ ಹಾವು ಕಡಿದು ಮೃತಪಟ್ಟ ದುರಂತ ಘಟನೆ ನಡೆದಿದೆ.ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಕಾಂಗ್ರೆಸ್ ಮುಖಂಡ ಹಾವು ಕಡಿದು ಸಾವು
ಪಂಚ ರಾಜ್ಯಗಳ ಚುನಾವಣೆ ವೇಳೆ ಕರ್ನಾಟಕ, ಗೋವಾ ಸೇರಿದಂತೆ ಹಲವೆಡೆ ಉಪ ಚುನಾವಣೆಗಳು ನಡೆದಿತ್ತು. ಈ ಉಪಚುನಾವಣೆಯಲ್ಲಿ ಗೋವಾದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖಂಡ ಕೇತನ್ ಬಾಟಿಕರ್ ನಾಗರ ಹಾವು ಕಡಿದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಬಳಿ ನಡೆದಿದೆ.

ಘಟನೆ ನಡೆದಿದ್ದು ಹೇಗೆ?
ಗೋವಾದ ಉಪ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೇತನ್ ಬಾಟಿಕರ್ ಚುನಾವಣೆ ಒತ್ತಡ ಮುಗಿದ ಬೆನ್ನಲ್ಲೇ ಸ್ನೇಹಿತರ ಜೊತೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾಗೆ ಆಗಮಿಸಿದ್ದರು. ಕಾರಿನಲ್ಲಿ ಆಗಮಿಸುವಾಗ ಅನಮೋಡ್ ಘಟ್ಟ ಭಾಗದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗಾಗಿ ಇಳಿದಿದ್ದಾರೆ. ಮೂತ್ರ ವಿಸರ್ಜನೆ ಮಾಡುವಾಗ ನಾಗರ ಹಾವು ಕಚ್ಚಿದೆ.
ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಫಲಿಸದ ಚಿಕಿತ್ಸೆ
ಮೂತ್ರ ವಿಸರ್ಜನೆ ಮಾಡುತ್ತಿದ್ದಂತೆ ನಾಗರ ಹಾವು ಏಕಾಏಕಿ ದಾಳಿ ಮಾಡಿ ಕಚ್ಚಿದೆ. ತಕ್ಷಣವೇ ಸ್ನೇಹಿತರು ಕೇತನ್ ಬಾಟಿಕರ್‌ನ್ನು ಗೋವಾದ ಜಿ.ಎಮ್ .ಸಿ ಮೆಡಿಕಲ್ ಕಾಲೇಜು ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಕೇತನ್ ಬಾಟಿಕರ್ ಚಿಕಿತ್ಸೆ ಫಲಿಸದ ಸಾವು ಕಂಡಿದ್ದಾರೆ.
ಜನಸಂಪರ್ಕದ ಮೂಲಕ ನಾಯಕನಾದ ಕೇತನ್
ಗೋವಾದ ಪೋಂಡಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೇತನ್ ಬಾಟಿಕರ್ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಗೆಲುವು ಕಂಡಿರಲಿಲ್ಲ. ಕೇತನ್ ಬಾಟಿಕರ್ ಸಾಮಾಜಿಕವಾಗಿ ಸಕ್ರಿಯವಾಗಿದ್ದಾರೆ. ಹಲವು ಕಾರ್ಯಕ್ರಮಗಳು, ಜನಸಂಪರ್ಕದ ಮೂಲಕ ನಾಯಕನಾಗಿ ಬೆಳೆದಿದ್ದಾರೆ.
ಸಚಿವ ರವಿ ನಾಯ್ಕ್ ಸಾವಿನಿಂದ ನಡೆದ ಉಪಚುನಾವಣೆ
ಗೋವಾದ ಕೃಷಿ ಸಚಿವ ರವಿ ನಾಯ್ಕ ಅಕಾಲಿಕ ನಿಧನದಿಂದ ತೆರವಾಗಿದ್ದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಉಪಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಕೇತನ್ ಬಾಟಿಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಕೇತನ್ ಬಾಟಿಕರ್ ಸಾವು ಹಲವರಿಗೆ ಆಘಾತ ನೀಡಿದೆ. ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

