Published : Jun 16, 2026, 05:05 AM ISTUpdated : Jun 16, 2026, 10:43 PM IST

Karnataka News Live ರಾಜ್ಯದಲ್ಲಿ ಈವರೆಗೆ ಶೇ.21ರಷ್ಟು ಭಾರೀ ಮುಂಗಾರು ಕೊರತೆ: ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಜೂನ್ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಶೇ.21ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಪೂರ್ವ ಮುಂಗಾರು ಮಳೆ ಕೂಡ ಕಡಿಮೆ ಬಿದ್ದಿರುವುದರಿಂದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಕಡಿಮೆಯಿರುವುದು ಆತಂಕ ಮೂಡಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.36ರಷ್ಟು ಕಡಿಮೆ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಕರಾವಳಿಯಲ್ಲೂ ಶೇ.41ರಷ್ಟು ಕಡಿಮೆ ಮಳೆಯಾಗಿದೆ. ಇನ್ನು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಕ್ರಮವಾಗಿ ಶೇ.2 ಮತ್ತು ಶೇ.1ರಷ್ಟು ಕಡಿಮೆ ಮಳೆಯಾಗಿದೆ.

10:43 PM (IST) Jun 16

ಬೆಂಗಳೂರಲ್ಲಿ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಮತ್ತೊಂದು ಬಲಿ, 20ರ ಯುವತಿ ಕತ್ತು ಹಿಸುಕಿ ಕೊಂದ ಪಾರ್ಟ್ನರ್

ಇನ್‌ಸ್ಟಾದಲ್ಲಿ ಪರಿಚಯವಾಗಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಯಿತು. ಇಬ್ಬರದ್ದೂ ಒಂದೇ ಊರು. ಹೀಗಾಗಿ ಬೇಗನೆ ಆತ್ಮೀಯರಾಗಿದ್ದಾರೆ. 6 ತಿಂಗಳಿನಿಂದ ಒಟ್ಟಿಗೆ ವಾಸವಿದ್ದಾರೆ. ಇದೀಗ 20ರ ಹರೆಯದ ಯುವತಿಯನ್ನು ಕೊಲೆ ಮಾಡಲಾಗಿದೆ.

Read Full Story

09:45 PM (IST) Jun 16

Chanakya Niti - ಸ್ಮಶಾನ ಮಾತ್ರವಲ್ಲ, ಈ ಸ್ಥಳಗಳಿಂದ ವಾಪಸ್ ಬರುವಾಗ ತಿರುಗಿ ನೋಡಲೇಬಾರದು ಅಂತಾರೆ ಚಾಣಕ್ಯ!

Chanakya Wisdom: ಚಾಣಕ್ಯ ನೀತಿಯ ಪ್ರಕಾರ, ಕೆಲವು ಸ್ಥಳಗಳಿಗೆ ಭೇಟಿ ನೀಡಿ ಹಿಂತಿರುಗುವಾಗ ನಾವು ಮತ್ತೆ ತಿರುಗಿ ನೋಡಬಾರದು. ಹಾಗೆ ನೋಡಿದರೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಆ ಸ್ಥಳಗಳು ಯಾವುವು ಎಂದು ಈಗ ನೋಡೋಣ…

Read Full Story

08:36 PM (IST) Jun 16

Escalator Facts - ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಯಾಕಿರುತ್ತೆ? ಖಂಡಿತ ಧೂಳು ಒರೆಸೋಕೆ ಅಲ್ಲ!

Escalator Safety: ಎಸ್ಕಲೇಟರ್‌ನಲ್ಲಿ ಹೋಗುವಾಗ ಅದರ ಬದಿಯಲ್ಲಿರುವ ಬ್ರಷ್‌ಗಳನ್ನು ನೀವು ನೋಡಿರಬಹುದು. ಹೆಚ್ಚಿನವರು ಇದನ್ನು ಶೂ ಕ್ಲೀನ್ ಮಾಡಲು ಅಥವಾ ಧೂಳು ತೆಗೆಯಲು ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ.

Read Full Story

07:13 PM (IST) Jun 16

ಮಳೆ ಕೊರತೆ - ಕರಾವಳಿ ರೈತರಿಗೆ ಆತಂಕ, ಭತ್ತ ಉತ್ಪಾದನೆ ಕುಸಿತ ಭೀತಿ, ಮುಗಿಲು ನೋಡುತ್ತಾ ಕುಳಿತ ರೈತ!

ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ. ಸಕಾಲಿಕ ಮಳೆಯಾಗದ ಕಾರಣ ಗದ್ದೆ ಉಳುಮೆ, ಬಿತ್ತನೆ ಹಾಗೂ ನಾಟಿ ಕಾರ್ಯಗಳು ಸ್ಥಗಿತಗೊಂಡಿದ್ದು, ಇದು ಭತ್ತದ ಇಳುವರಿ ಮತ್ತು ಕೃಷಿ ವೆಚ್ಚದ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.
Read Full Story

07:04 PM (IST) Jun 16

ಬ್ಯಾಲೆನ್ಸ್‌ ಕಳೆದುಕೊಂಡ Rapido Bike Pink ಲೇಡಿ ರೈಡರ್‌, ಪ್ರಾಣ ಕಳೆದುಕೊಂಡ ಹಿಂಬದಿ ಕುಳಿತಿದ್ದ ಟೀಚರ್‌!

ಬೆಂಗಳೂರಿನ ಜೆ.ಪಿ. ನಗರದಲ್ಲಿ ರಾಪಿಡೋ ಬೈಕ್‌ನಿಂದ ಕೆಳಗೆ ಬಿದ್ದು 54 ವರ್ಷದ ಶಾಲಾ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಒಂದೇ ಬದಿಗೆ ಕಾಲು ಹಾಕಿ ಕುಳಿತಿದ್ದ ಅವರು, ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.
Read Full Story

06:55 PM (IST) Jun 16

Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!

Darshan Case: ಸೋಮವಾರ ಸಿಸಿಹೆಚ್-59 ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆ ನಡೆದಿದೆ. ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ.

Read Full Story

06:48 PM (IST) Jun 16

CM ಡಿಕೆಶಿ ಸರ್ಕಾರದ ಮೊದಲ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ? ರಾಜಧಾನಿಯಾಚೆ ಆಡಳಿತ

ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರವು ತನ್ನ ಮೊದಲ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಪಡೀಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಭೆ ನಡೆಯುವ ಸಾಧ್ಯತೆಗಳಿದ್ದು, ರಾಜಧಾನಿಯಾಚೆ ಆಡಳಿತ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ.
Read Full Story

06:20 PM (IST) Jun 16

ಮುಂಗಾರಿಗೂ ಮುನ್ನವೇ ರೈತರಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್, ತುಂಗಭದ್ರಾ ಡ್ಯಾಂ ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆಗೆ ದಿನಾಂಕ ಫಿಕ್ಸ್

ಕಳೆದ ವರ್ಷದ ದುರಂತದ ಬಳಿಕ ತುಂಗಭದ್ರಾ ಜಲಾಶಯಕ್ಕೆ 51 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಮುಂಗಾರು ಆರಂಭದ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 25ರಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.
Read Full Story

06:17 PM (IST) Jun 16

RSS ದಾಖಲೆ ಕೇಳಿದ್ವಿ, ಸುನೀಲ್ ಅಣ್ಣ, ಅಶೋಕಣ್ಣ ಬಾಯಿಗೆ ಬಂದಾಗೆ ಮಾತಾಡ್ತಾರೆ - ಶಾಸಕ ಪ್ರದೀಪ್ ಈಶ್ವರ್

ಶಾಸಕ ಪ್ರದೀಪ್ ಈಶ್ವರ್ ಅವರು ಆರ್‌ಎಸ್‌ಎಸ್ ನೋಂದಣಿ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ. ನೋಂದಣಿಯಾಗದ ಸಂಘಟನೆಗೆ ಝೆಡ್ ಪ್ಲಸ್ ಭದ್ರತೆ ನೀಡಿರುವುದನ್ನು ಪ್ರಶ್ನಿಸಿರುವ ಅವರು, ಜೆಡಿಎಸ್ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದ್ದಾರೆ.
Read Full Story

05:53 PM (IST) Jun 16

ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ 121 ಕೋಟಿಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ನೈಕಿ ಇಂಡಿಯಾ

ಜಾಗತಿಕ ಕ್ರೀಡಾ ದೈತ್ಯ ನೈಕಿ ಇಂಡಿಯಾ, ಬೆಂಗಳೂರಿನ ಪ್ರತಿಷ್ಠಿತ ಬಾಗ್ಮನೆ ಟೆಕ್ ಪಾರ್ಕ್‌ನಲ್ಲಿ 1.25 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದಿದೆ. 5 ವರ್ಷಗಳ ಅವಧಿಯ ಈ ಬೃಹತ್ ಒಪ್ಪಂದದ ಒಟ್ಟು ಮೌಲ್ಯ 121 ಕೋಟಿ ರೂಪಾಯಿಗಳಾಗಿದೆ.

Read Full Story

05:47 PM (IST) Jun 16

Baby Names - ನಿಮ್ಮ ಮುದ್ದಿನ ಕಂದನಿಗೆ ಕಾರ್ತಿಕೇಯನ ಈ 40 ಹೆಸರುಗಳನ್ನಿಡಿ - ಎಲ್ಲರೂ ಮೆಚ್ಚಿಕೊಳ್ತಾರೆ!

Baby Names: 2026ರಲ್ಲಿ ಟ್ರೆಂಡಿಂಗ್‌ನಲ್ಲಿರುವ, ಶಿವ-ಪಾರ್ವತಿಯ ಪುತ್ರ ಕಾರ್ತಿಕೇಯನಿಗೆ ಸಂಬಂಧಿಸಿದ ಮಾಡರ್ನ್ ಮತ್ತು ಯೂನಿಕ್ ಹೆಸರುಗಳ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಅರ್ಥಪೂರ್ಣ ಹೆಸರುಗಳ ಲಿಸ್ಟ್. 

Read Full Story

05:47 PM (IST) Jun 16

Cp Yogeshwara Son - 'ಸೈನಿಕ 2' ಮಾಡಲು ರೆಡಿಯಾದ ಶಾಸಕ ಸಿಪಿ ಯೋಗೇಶ್ವರ ಪುತ್ರ ಧ್ಯಾನ್!

cp yogeshwar son dhyan: ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್ ಹೊಸ ಸಿನಿಮಾದಲ್ಲಿ ನಟಿಸುವ ನಿರ್ಧಾರ ಕೈಗೊಂಡಿದ್ದು, ಎರಡೂ ಸಿನಿಮಾಗಳ ಮುಹೂರ್ತ ಜು.5ರಂದು ನಡೆಯಲಿದೆ.

Read Full Story

05:32 PM (IST) Jun 16

Chanakya Niti - ಪತ್ನಿಯನ್ನು ಈ 4 ಜಾಗಕ್ಕೆ ಅಪ್ಪಿತಪ್ಪಿಯೂ ಕರೆದುಕೊಂಡು ಹೋಗಬೇಡಿ ಅಂತಾರೆ ಚಾಣಕ್ಯ!

Chanakya Niti For Married Life: ಚಾಣಕ್ಯ ನೀತಿಯ ಪ್ರಕಾರ, ಗಂಡ ತನ್ನ ಹೆಂಡತಿಯನ್ನು ಯಾವ 4 ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು? ಕುಟುಂಬದ ಸುರಕ್ಷತೆ ಮತ್ತು ಗೌರವದ ಬಗ್ಗೆ ಚಾಣಕ್ಯರು ನೀಡಿದ ಸಲಹೆಗಳೇನು? 

Read Full Story

05:23 PM (IST) Jun 16

ದಶಕದ ಕನಸಿಗೆ ಜೀವ - ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆಗೆ ಬಿಗ್‌ ಬೂಸ್ಟ್‌, 3348 ಕೋಟಿ ಟೆಂಡರ್ ಒಪ್ಪಿಕೊಂಡ SNC!

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಮೊದಲ ಪ್ಯಾಕೇಜ್ ಅಡಿಯಲ್ಲಿ ಮಾದಾವರದಿಂದ ಬಳ್ಳಾರಿ ರಸ್ತೆವರೆಗಿನ 21 ಕಿ.ಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಗುತ್ತಿಗೆಯನ್ನು ಶಂಕರ ನಾರಾಯಣ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗೆ  ಬಿಡಿಎ ನೀಡಿದೆ. ಈ ಮಹತ್ವದ ಒಪ್ಪಂದವು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ.

Read Full Story

04:34 PM (IST) Jun 16

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬಾಂಬ್ ಆತಂಕ - ಬೆಂಗಳೂರಿನ ಬಹುತೇಕ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇಮೇಲ್!

ಬೆಂಗಳೂರಿನ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆಪ್ರಾದೇಶಿಕ ಸಾರಿಗೆ ಕಚೇರಿಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ತೀವ್ರ ಆತಂಕ ಸೃಷ್ಟಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ, ಇದು ಹುಸಿ ಬೆದರಿಕೆ ಎಂದು ಖಚಿತಪಡಿಸಿದ್ದಾರೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಇಮೇಲ್ ಕಳುಹಿಸಿದವರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

Read Full Story

04:16 PM (IST) Jun 16

ರಸ್ತೆ ನಿರ್ಮಾಣ ವೆಚ್ಚಕ್ಕೆ ಐಐಟಿ ರೂರ್ಕಿ ಬಿಗ್ ಬ್ರೇಕ್ - ಕರ್ನಾಟಕದಲ್ಲಿ ಭಾರೀ ಖರ್ಚು ತಗ್ಗಿಸಬಲ್ಲ ‘ಬಯೋ-ಡಾಂಬರು’ ಮ್ಯಾಜಿಕ್!

ಐಐಟಿ ರೂರ್ಕಿಯ ಸಂಶೋಧಕರು ಕರ್ನಾಟಕದಲ್ಲಿ 'ಬಯೋ-ಬಿಟುಮೆನ್' ಬಳಸಿ ರಸ್ತೆ ನಿರ್ಮಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕಬ್ಬಿನ ಕಾಕಂಬಿ ಬಳಸಿ ತಯಾರಿಸುವ ಈ ಜೈವಿಕ ಡಾಂಬರು, ರಸ್ತೆ ನಿರ್ಮಾಣ ವೆಚ್ಚವನ್ನು ಶೇ. 20ರಷ್ಟು ಕಡಿಮೆ ಮಾಡಲಿದ್ದು, ಇದು ಪರಿಸರ ಸ್ನೇಹಿಯೂ ಆಗಿದೆ.
Read Full Story

03:58 PM (IST) Jun 16

KSR Bengaluru ಕಾಮಗಾರಿ - 2 ತಿಂಗಳು ರೈಲು ಸಂಚಾರದಲ್ಲಿ ಭಾರಿ ಏರುಪೇರು, 58 ರೈಲು ರದ್ದು! ವಂದೇ ಭಾರತ್ ಕೂಡ ವ್ಯತ್ಯಯ!

ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿಯಿಂದಾಗಿ, ಮುಂದಿನ 2 ತಿಂಗಳ ಕಾಲ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. 

Read Full Story

03:08 PM (IST) Jun 16

ಬೆಳಗಾವಿ - ಕಸದ ರಾಶಿಯಲ್ಲಿ 59 ಗುಂಡುಗಳು ಪತ್ತೆ! ತನಿಖೆ ವೇಳೆ ಶಾಕಿಂಗ್ ಮಾಹಿತಿ ಬಯಲು!

ಬೆಳಗಾವಿಯ ಉದ್ಯಮಭಾಗದಲ್ಲಿ ಕಸ ವಿಂಗಡಣೆ ಮಾಡುವಾಗ ಪೌರಕಾರ್ಮಿಕರಿಗೆ 59 ಬಳಕೆಯಾದ ಗುಂಡುಗಳು ಪತ್ತೆಯಾಗಿವೆ. ಪೊಲೀಸರ ತನಿಖೆಯಿಂದ, ವಿಜಯಪುರದ ಮಾಜಿ ಸೈನಿಕನೊಬ್ಬ ಸಂಬಂಧಿಕರ ಮನೆಯಲ್ಲಿ ಬಿಟ್ಟುಹೋಗಿದ್ದ ಈ ಗುಂಡುಗಳನ್ನು, ಮನೆ ಖಾಲಿ ಮಾಡುವಾಗ ಕಸಕ್ಕೆ ಎಸೆಯಲಾಗಿತ್ತು ಎಂಬುದು ತಿಳಿದುಬಂದಿದೆ.
Read Full Story

02:59 PM (IST) Jun 16

ಲಾಂಚ್ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ Hero MotoCorp - ಫ್ಲೆಕ್ಸ್-ಫ್ಯುಯೆಲ್ ಬೈಕ್ ಮತ್ತಷ್ಟು ಅಗ್ಗ!

ಹೀರೋ ಮೋಟೋಕಾರ್ಪ್ ತನ್ನ ಹೊಸ ಇಥೆನಾಲ್ ಚಾಲಿತ ಸ್ಪ್ಲೆಂಡರ್+ ಮತ್ತು ಎಚ್‌ಎಫ್ ಡಿಲಕ್ಸ್ ಫ್ಲೆಕ್ಸ್-ಫ್ಯುಯೆಲ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇಂಧನ ವೆಚ್ಚ ಉಳಿತಾಯದ ಗುರಿಯೊಂದಿಗೆ, ಕಂಪನಿಯು ಈ ಬೈಕ್‌ಗಳ ಮೇಲೆ ₹4,000 ಭರ್ಜರಿ ರಿಯಾಯಿತಿ ಘೋಷಿಸಿದ್ದು, ಇದು ಗ್ರಾಹಕರಿಗೆ ದೊಡ್ಡ ಅವಕಾಶವಾಗಿದೆ.
Read Full Story

01:52 PM (IST) Jun 16

ಶಿವಮೊಗ್ಗದಲ್ಲಿ ಮನಕಲುಕುವ ಘಟನೆ - ಹೃದಯಾಘಾತದಿಂದ ಒಂದನೇ ತರಗತಿ ವಿದ್ಯಾರ್ಥಿ ಸಾವು!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಸರ್ಕಾರಿ ಶಾಲೆಯಲ್ಲಿ ಆರು ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಒಂದನೇ ತರಗತಿ ವಿದ್ಯಾರ್ಥಿ ತ್ರಿಲೋಕ್ ಜೈನ್, ಸಂಜೆ ಶಾಲಾ ಆವರಣದಲ್ಲಿ ಆಟವಾಡುವಾಗ ಕುಸಿದುಬಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
Read Full Story

01:46 PM (IST) Jun 16

Farmers - ಶುಂಠಿ, ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ದಾಖಲೆ ಸಲ್ಲಿಸಲು ಸರ್ಕಾರದಿಂದ ಸೂಚನೆ

ಶುಂಠಿ ಮತ್ತು ಹಸಿಮೆಣಸಿನಕಾಯಿ ಬೆಳೆಗಾರರು ಬೆಳೆ ವಿಮೆ ಪಡೆಯಲು ದಾಖಲೆಗಳನ್ನು ಸಲ್ಲಿಸಬೇಕಿದೆ. ಹಾಗೆಯೇ, 2026-27ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದ್ದು, ಈಗಾಗಲೇ ಶುಲ್ಕ ಪಾವತಿಸಿದವರಿಗೆ ಮರುಪಾವತಿ ಮಾಡಲಾಗುವುದು.

Read Full Story

01:46 PM (IST) Jun 16

ಬೆಂಗಳೂರು ಆಡಳಿತಕ್ಕೆ ನೂತನ ಸಾರಥಿ - ಕೊನೆಗೂ ಮುನಿಸು ಬಿಟ್ಟು ಜಿಬಿಎ ಅಂಗಳಕ್ಕೆ ಬಂದ ಸಚಿವ ಕೃಷ್ಣಬೈರೆಗೌಡ!

ಖಾತೆ ಹಂಚಿಕೆಯ ಅಸಮಾಧಾನದಿಂದ 13 ದಿನಗಳ ಕಾಲ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ದೂರವಿದ್ದ ಸಚಿವ ಕೃಷ್ಣಬೈರೆಗೌಡರು, ಹೈಕಮಾಂಡ್ ಸಂಧಾನದ ಬಳಿಕ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ.

Read Full Story

12:34 PM (IST) Jun 16

RSS ಅನ್ನ ಹಿಂದೂ ಧರ್ಮಕ್ಕೆ ಹೋಲಿಕೆ ಖಂಡನೀಯ, ಹಿಂದೂ ಧರ್ಮವು ಸಂಘಟನೆ ಸ್ವತ್ತಲ್ಲ - ಭಾಗವತ್‌ಗೆ ಹರಿಪ್ರಸಾದ್ ತಿರುಗೇಟು

ಆರ್‌ಎಸ್‌ಎಸ್‌ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ತೀವ್ರವಾಗಿ ಖಂಡಿಸಿದ್ದಾರೆ. ಹಿಂದೂ ಧರ್ಮವು ಯಾವುದೇ ಸಂಘಟನೆಯ ಸ್ವತ್ತಲ್ಲ ಮತ್ತು ಈ ಹೋಲಿಕೆಯು ಕೋಟ್ಯಂತರ ಹಿಂದೂಗಳ ಭಾವನೆಗೆ ಮಾಡಿದ ಅವಮಾನ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
Read Full Story

11:59 AM (IST) Jun 16

Gilli Nata - ಮದುವೆಯೋ? ಸಿನಿಮಾ ಡೈರೆಕ್ಷನ್ನೋ? ಸ್ಪೆಷಲ್‌ ಅನೌನ್ಸ್‌ಮೆಂಟ್‌ಗೆ ರೆಡಿಯಾದ ಬಿಗ್‌ಬಾಸ್‌ ವಿನ್ನರ್‌

ಬಿಗ್ ಬಾಸ್ ಸೀಸನ್-12ರ ವಿಜೇತ ಗಿಲ್ಲಿ ನಟ, ಇಂದು ಸಂಜೆ 6.15ಕ್ಕೆ ಒಂದು 'ವಿಶೇಷ ಘೋಷಣೆ' ಮಾಡುವುದಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಈ ಘೋಷಣೆಯು ಹೊಸ ಸಿನಿಮಾ ನಿರ್ದೇಶನ, ನಾಯಕನಾಗಿ ಹೊಸ ಚಿತ್ರ ಅಥವಾ ಅವರ ಮದುವೆಯ ಕುರಿತಾಗಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Read Full Story

11:47 AM (IST) Jun 16

ಕರಾವಳಿ ರೈಲ್ವೆಗೆ ಕಾಯಕಲ್ಪ - ಕೇಂದ್ರದಿಂದ ಮಂಗಳೂರು ರೈಲು ನಿಲ್ದಾಣ ಪುನರಾಭಿವೃದ್ಧಿ ಮಾಸ್ಟರ್‌ ಪ್ಲಾನ್‌

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಸೆಂಟ್ರಲ್, ಅಂಬಾಲಾ ಕಂಟೋನ್ಮಂಟ್ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮಾಸ್ಟರ್ ಪ್ಲಾನ್ ಪರಿಶೀಲಿಸಿದ್ದಾರೆ. ಈ ಯೋಜನೆಯಡಿ, ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೊಸ ಪ್ಲಾಟ್‌ಫಾರ್ಮ್‌ಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ಕಾಮಗಾರಿ ವೇಳೆ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸಚಿವರು ಸೂಚಿಸಿದ್ದಾರೆ.
Read Full Story

11:18 AM (IST) Jun 16

Namma Metro Breaking - ‌ ನಿತ್ಯ ಜನಸಂದಣಿಯಲ್ಲಿ ಓಡಾಡೋ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್!

Bengaluru Namma Metro News: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ.ಹಳದಿ ಮಾರ್ಗದ ಮೆಟ್ರೋಗೆ ನಿನ್ನೆ ( ಜೂನ್‌ 15 ) 13ನೇ ಹೊಸ ರೈಲು ಸೇರ್ಪಡೆಯಾಗಿದೆ.

 

Read Full Story

10:27 AM (IST) Jun 16

ಹುಬ್ಬಳ್ಳಿಯ NWKRTC ಚೀಫ್ ಮೆಕ್ಯಾನಿಕ್ ಮನೆಯಲ್ಲಿ 40 ಲಕ್ಷ ನಗದು, ಚಿನ್ನಾಭರಣ ಪತ್ತೆ

ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆಯ NWKRTC ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ ನಿವಾಸದಲ್ಲಿ ಲಕ್ಷಾಂತರ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದ್ದು, ಹಲವು ಅಧಿಕಾರಿಗಳ ವಿರುದ್ಧ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.
Read Full Story

10:12 AM (IST) Jun 16

ಇಂದಿನಿಂದ ಒಂದು ವಾರ ಕಾಲ ಭಾರೀ ಮಳೆ; ಬೆಂಗಳೂರು ಸೇರಿ ಈ ಪ್ರದೇಶಗಳ ಮೇಲೆ ಹವಾಮಾನ ಇಲಾಖೆಯ ಎಚ್ಚರಿಕೆ ಏನು?

ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಜೂ.22ರ ವರೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗಗಳಿಗೆ ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ಘೋಷಿಸಿದ್ದು, ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ.
Read Full Story

09:39 AM (IST) Jun 16

ಎಷ್ಟು ಕಾಲ ದರ್ಪ ತೋರಿಸ್ತಾರೋ ನೋಡೋಣ - ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿ ಎಂದ ಸಿಟಿ ರವಿ

ಬಳ್ಳಾರಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಭಯೋತ್ಪಾದಕರಿಗೆ ಬಿರಿಯಾನಿ ಹಾಕುವ ಸರ್ಕಾರ ಈಗಿಲ್ಲ, ಅವರನ್ನು ಮಟ್ಟ ಹಾಕುವ ಸರ್ಕಾರವಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆ 'ಮಿನಿ ಸರ್ವಾಧಿಕಾರಿ' ಎಂದು ಕರೆದಿದ್ದೇಕೆ ಸಿಟಿ ರವಿ?

Read Full Story

09:32 AM (IST) Jun 16

ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿಗೆ ಮಾತೃವಿಯೋಗ; ಜಯಮ್ಮ ಚಿನ್ನೇಗೌಡ ನಿಧನ

Jayamma Chinnegowda No More: ವಯೋಸಹಜ ಕಾಯಿಲೆಗಳು ಮತ್ತು ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದೂ ವಿಧಿವಶರಾಗಿದ್ದಾರೆ.

Read Full Story

09:02 AM (IST) Jun 16

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್ - ಕೋಟಿ ಕೋಟಿ ಆಸ್ತಿ ಪತ್ತೆ, ಎಲ್ಲೆಲ್ಲಿ ದಾಳಿ?

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮತ್ತು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.
Read Full Story

09:01 AM (IST) Jun 16

ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ತನಿಖೆ CBI ಗೆ ವಹಿಸಿ; ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆದ ಸಿ.ಟಿ ರವಿ

ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆದಿದೆ ಎನ್ನಲಾದ ₹200 ಕೋಟಿ ವೆಚ್ಚದ ಷಡ್ಯಂತ್ರದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ಸಂಚಿನ ಹಿಂದೆ ದೊಡ್ಡ ಜಾಲವಿದ್ದು, ಹಣದ ಮೂಲ ಮತ್ತು ಇದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲು ಕೇಂದ್ರ ತನಿಖಾ ಸಂಸ್ಥೆಯಿಂದಲೇ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
Read Full Story

08:22 AM (IST) Jun 16

ಬುರುಡೆ ಗ್ಯಾಂಗ್‌ನಿಂದ ಜೀವ ಬೆದರಿಕೆಯಿದೆ - ಮಾಸ್ಕ್‌ಮ್ಯಾನ್ ಚಿನ್ನಯ್ಯ ಆರೋಪ! ಅಷ್ಟಕ್ಕೂ SIT ಗೆ ಸಲ್ಲಿಸಿದ ದೂರಿನಲ್ಲಿ ಏನಿದೆ?

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಸಾಕ್ಷಿಯಿಂದ ಆರೋಪಿಯಾಗಿರುವ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇದೆ ಎಂದು ಎಸ್ಐಟಿಗೆ ದೂರು ನೀಡಿದ್ದಾನೆ. ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ಗಿರೀಶ್ ಮಟ್ಟಣ್ಣನವರ್ ಮತ್ತು ಇತರರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ.
Read Full Story

07:13 AM (IST) Jun 16

ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು, ಪುತ್ತೂರು ಗೆಲ್ಲಲು ಬಿಜೆಪಿಯಿಂದ ರಹಸ್ಯ ಟಾಸ್ಕ್!

ಮುಂದಿನ ಅಸೆಂಬ್ಲಿ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ, ಬಿಜೆಪಿ ಮಂಗಳೂರು ಮತ್ತು ಪುತ್ತೂರು ಕ್ಷೇತ್ರಗಳನ್ನು ಗೆಲ್ಲಲು ಸಿದ್ಧತೆ ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ ದಾಸ್ ಅಗರ್‌ವಾಲ್ ರಹಸ್ಯ ಸಭೆ ನಡೆಸಿ, ಪಕ್ಷದ ಚಿಹ್ನೆಗೆ ಮಹತ್ವ ನೀಡುವುದು ಮತ್ತು ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವಂತಹ ತಂತ್ರಗಾರಿಕೆಯ ಟಾಸ್ಕ್ ನೀಡಿದ್ದಾರೆ.
Read Full Story

06:56 AM (IST) Jun 16

ವಿಜಯಪುರ To ಬೇನಾಳ RS - ಕೊನೆಗೂ ಆರಂಭವಾದ ಬಹುನಿರೀಕ್ಷಿತ ಸೇವೆ, ಈಡೇರಿತು ಗ್ರಾಮಸ್ಥರ ಬೇಡಿಕೆ

ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ ಸಂಚಾರ ಆರಂಭವಾಗಿದೆ. ಈ ಬಸ್ ಪ್ರತಿದಿನ ನಾಲ್ಕು ಟ್ರಿಪ್‌ಗಳ ಮೂಲಕ ಆಲಮಟ್ಟಿ ಉದ್ಯಾನದವರೆಗೆ ಸಂಚರಿಸಲಿದ್ದು, ವಿದ್ಯಾರ್ಥಿಗಳು, ರೈತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

Read Full Story

06:41 AM (IST) Jun 16

4 ದಶಕಗಳ ಬಳಿಕ ಒಂದೆಡೆ ಸೇರಿದ 1983-84ನೇ ಸಾಲಿನ ವಿದ್ಯಾರ್ಥಿಗಳು; ಮೃತ ಗೆಳೆಯರಿಗೆ ಕಂಬನಿ

ಹರಪನಹಳ್ಳಿಯ ಎಚ್.ಎಂ. ಏಕೋರಾಮರಾಧ್ಯ ಪ್ರೌಢಶಾಲೆಯ 1983-84ನೇ ಸಾಲಿನ ವಿದ್ಯಾರ್ಥಿಗಳು 'ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ' ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಗುರುಗಳನ್ನು ಸನ್ಮಾನಿಸಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದರು. ತೆಗ್ಗಿನಮಠದ ಶ್ರೀಗಳು ಗುರುವಿನ ಮಹತ್ವವನ್ನು ಸಾರಿದರು.
Read Full Story

06:10 AM (IST) Jun 16

ಫ್ರಿ ಬಸ್ ಸ್ಮಾರ್ಟ್‌ಕಾರ್ಡ್‌ ವಿತರಣೆಗೆ ಸಿದ್ಧವಾಯ್ತು ಹೊಸ ಸೂತ್ರ - ಸಚಿವ ಬೈರತಿ ಸುರೇಶ್‌

ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲು ವಿಶೇಷ ಉದ್ದೇಶಿತ ವಾಹಕ (ಎಸ್‌ಪಿವಿ) ರಚಿಸಲು ಸಾರಿಗೆ ಸಚಿವ ಬೈರತಿ ಸುರೇಶ್‌ ಸೂಚಿಸಿದ್ದಾರೆ. ಪಿಪಿಪಿ ಮಾದರಿಯಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಕಾರ್ಡ್‌ ನೀಡಲಾಗುವುದು ಮತ್ತು ಪುರುಷರು ಹಣ ನೀಡಿ ಖರೀದಿಸಬೇಕಾಗುತ್ತದೆ.
Read Full Story

06:00 AM (IST) Jun 16

ವಾರದಲ್ಲಿ 4 ದಿನ ದರ್ಶನ್‌ ಕೇಸ್‌ ವಿಚಾರಣೆ ಫಾಸ್ಟ್‌ ಟ್ರ್ಯಾಕ್‌; 60 ಪ್ರಮುಖ ಸಾಕ್ಷಿಗಳ ವಿಚಾರಣೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ವಾರದಲ್ಲಿ ನಾಲ್ಕು ದಿನಗಳ ಕಾಲ ಪ್ರತಿದಿನ ನಡೆಸಲು ಸೆಷನ್ಸ್ ನ್ಯಾಯಾಲಯ ನಿರ್ಧರಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವ ಗುರಿಯೊಂದಿಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ನ್ಯಾಯಾಲಯವು ಇಬ್ಬರು ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
Read Full Story

05:50 AM (IST) Jun 16

ವೋಟ್ ಇರೋರಿಗೆ ಕಾಂಗ್ರೆಸ್ ಗ್ಯಾರಂಟಿ - SIRನಲ್ಲಿ ಹೆಸ್ರು ರದ್ದಾಗದಂತೆ ನೋಡಿಕೊಳ್ಳೋ ಅನಿವಾರ್ಯ

ರಾಜ್ಯದ ಗ್ಯಾರಂಟಿ ಯೋಜನೆಗಳು ಕೇವಲ ಕರ್ನಾಟಕದ ಮತದಾರರಿಗೆ ಮಾತ್ರ ಸೀಮಿತವಾಗಲಿದ್ದು, ಶೀಘ್ರದಲ್ಲೇ ವೋಟರ್ ಐಡಿ ಕಡ್ಡಾಯವಾಗುವ ಸಾಧ್ಯತೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ. ಯೋಜನೆಗಳ ದುರ್ಬಳಕೆ ತಡೆದು, ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

05:42 AM (IST) Jun 16

RSS ನೋಂದಾಯಿಸಿ, ಆಸ್ತಿಮೂಲ ತಿಳಿಸಿ, ಭಾಗವತ್‌ಗೆ 8 ಪ್ರಶ್ನೆಗಳ ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಆರೆಸ್ಸೆಸ್‌ ಅನ್ನು ನೋಂದಾಯಿಸದಿರುವ ಕಾನೂನಾತ್ಮಕ ಕಾರಣಗಳು, ಅದರ ಆಸ್ತಿ, ದೇಣಿಗೆ ಮತ್ತು ತೆರಿಗೆ ಪಾವತಿ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಪಾರದರ್ಶಕತೆ ಮೆರೆಯುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

Read Full Story

More Trending News