- Home
- Karnataka Districts
- Namma Metro Breaking: ನಿತ್ಯ ಜನಸಂದಣಿಯಲ್ಲಿ ಓಡಾಡೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
Namma Metro Breaking: ನಿತ್ಯ ಜನಸಂದಣಿಯಲ್ಲಿ ಓಡಾಡೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
Bengaluru Namma Metro News: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ.ಹಳದಿ ಮಾರ್ಗದ ಮೆಟ್ರೋಗೆ ನಿನ್ನೆ ( ಜೂನ್ 15 ) 13ನೇ ಹೊಸ ರೈಲು ಸೇರ್ಪಡೆಯಾಗಿದೆ.

13ನೇ ಹೊಸ ರೈಲು ಆಗಮನ
ಹೆಬ್ಬಗೋಡಿ ಡಿಪೋಗೆ 13ನೇ ಹೊಸ ರೈಲು ಆಗಮಿಸಿದೆ. ಪೀಕ್ ಅವರ್‌ನಲ್ಲಿ 5 ನಿಮಿಷಕ್ಕೊಂದು ರೈಲು ಸಂಚಾರ ಆಗಲಿದೆ. ಈ ಹೊಸ ಮೆಟ್ರೋ ರೈಲು 6 ಕೋಚ್‌ಗಳನ್ನು ಒಳಗೊಂಡಿದೆ.
ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಮುನ್ನ ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಮೀ ಪರೀಕ್ಷಾರ್ಥ ಸಂಚಾರ ಮಾಡಲಿದೆ.
ರೈಲು ಪರೀಕ್ಷೆ
ಮೆಟ್ರೋ ಸಂಚಾರಕ್ಕೆ ತೊಂದರೆಯಾಗದಂತೆ ಕೇವಲ ರಾತ್ರಿ ವೇಳೆ ಪರೀಕ್ಷಾರ್ಥ ಸಂಚಾರ ಮಾಡಲಿದೆ. ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಸಂಚಾರ ಆಗಲಿದೆ.
7 ನಿಮಿಷಕ್ಕೊಮ್ಮೆ ಮೆಟ್ರೋ
ಪೀಕ್ ಅವರ್‌ನಲ್ಲಿ ಸದ್ಯ ಪ್ರತಿ 7 ನಿಮಿಷಕ್ಕೊಮ್ಮೆ ಮೆಟ್ರೋ ಸೌಲಭ್ಯ ಇರಲಿದೆ. ಈಗ 2 ಹೊಸ ರೈಲುಗಳು ಪರೀಕ್ಷಾ ಹಂತದಲ್ಲಿದ್ದು ಮುಂದಿನ ಕೆಲವೇ ವಾರಗಳಲ್ಲಿ ಸಂಚಾರಕ್ಕೆ ಲಭ್ಯ ಆಗಲಿದೆ. ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು 14 ಮತ್ತು 15ನೇ ರೈಲುಗಳ ನಿರ್ಮಾಣ ಆಗಲಿದೆ.
ಬೆಂಗಳೂರಿಗೆ ರವಾನೆ
ಜುಲೈ ಆರಂಭದ ವೇಳೆಗೆ ಅವು ಬೆಂಗಳೂರಿಗೆ ರವಾನೆಯಾಗಲಿದೆ. ಆಗಸ್ಟ್ 11ಕ್ಕೆ ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಇದರಿಂದಾಗಿ ಪೀಕ್ ಅವರ್‌ನ ಕಾಯುವಿಕೆ ಅವಧಿ 5 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆ ನಿರೀಕ್ಷೆ ಇದೆ. 2027ರ ವೇಳೆಗೆ BEMLಸಂಸ್ಥೆಯಿಂದ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ 6 ರೈಲುಗಳು ಪೂರೈಕೆ ಆಗಲಿವೆ.

