MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಆಡಳಿತಕ್ಕೆ ನೂತನ ಸಾರಥಿ: ಕೊನೆಗೂ ಮುನಿಸು ಬಿಟ್ಟು ಜಿಬಿಎ ಅಂಗಳಕ್ಕೆ ಬಂದ ಸಚಿವ ಕೃಷ್ಣಬೈರೆಗೌಡ!

ಬೆಂಗಳೂರು ಆಡಳಿತಕ್ಕೆ ನೂತನ ಸಾರಥಿ: ಕೊನೆಗೂ ಮುನಿಸು ಬಿಟ್ಟು ಜಿಬಿಎ ಅಂಗಳಕ್ಕೆ ಬಂದ ಸಚಿವ ಕೃಷ್ಣಬೈರೆಗೌಡ!

ಖಾತೆ ಹಂಚಿಕೆಯ ಅಸಮಾಧಾನದಿಂದ 13 ದಿನಗಳ ಕಾಲ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ದೂರವಿದ್ದ ಸಚಿವ ಕೃಷ್ಣಬೈರೆಗೌಡರು, ಹೈಕಮಾಂಡ್ ಸಂಧಾನದ ಬಳಿಕ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ.

3 Min read
Author : Gowthami K
Published : Jun 16 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
17
ಇಲಾಖೆಯಿಂದ ದೂರವೇ ಉಳಿದಿದ್ದ ಸಚಿವ ಕೃಷ್ಣಬೈರೆಗೌಡ
Image Credit : Asianet News

ಇಲಾಖೆಯಿಂದ ದೂರವೇ ಉಳಿದಿದ್ದ ಸಚಿವ ಕೃಷ್ಣಬೈರೆಗೌಡ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ಮತ್ತು ನಗರಾಭಿವೃದ್ಧಿಗೆ ಕೊನೆಗೂ ಹೊಸ ನಾಯಕರೊಬ್ಬರು ಅಧಿಕೃತವಾಗಿ ಸಾರಥ್ಯ ವಹಿಸಿಕೊಂಡಿದ್ದಾರೆ. ತೀವ್ರ ರಾಜಕೀಯ ಕುತೂಹಲ, ಆಂತರಿಕ ಅಸಮಾಧಾನ ಹಾಗೂ ಖಾತೆ ಹಂಚಿಕೆಯ ಬಿಕ್ಕಟ್ಟಿನ ಕಾರಣದಿಂದಾಗಿ ಸುಮಾರು 13 ದಿನಗಳ ಕಾಲ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಿಂದ ದೂರವೇ ಉಳಿದಿದ್ದ ಸಚಿವ ಕೃಷ್ಣಬೈರೆಗೌಡ ಅವರು ಕೊನೆಗೂ ಅಧಿಕಾರ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ರಾಜೀ ಸಂಧಾನ ಯಶಸ್ವಿಯಾದ ಬೆನ್ನಲ್ಲೇ, ಸಚಿವರು ತಮ್ಮ ಖಾಸಗಿ ಕಾರಿನಲ್ಲೇ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕೇಂದ್ರ ಕಚೇರಿಗೆ ಆಗಮಿಸಿ ಜಿಬಿಎ ವ್ಯಾಪ್ತಿಯ ಉನ್ನತ ಅಧಿಕಾರಿಗಳ ಮೊದಲ ಮಹತ್ವದ ಸಭೆ ನಡೆಸುವ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಬಿಡಿಎ ಮತ್ತು ಬಿಎಂಆರ್‌ಡಿಎಗಾಗಿ ಪಟ್ಟು ಹಿಡಿದಿದ್ದ ಸಚಿವರು
Image Credit : Asianet News

ಬಿಡಿಎ ಮತ್ತು ಬಿಎಂಆರ್‌ಡಿಎಗಾಗಿ ಪಟ್ಟು ಹಿಡಿದಿದ್ದ ಸಚಿವರು

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಖಾತೆ ಹಂಚಿಕೆಯಾದ ಎರಡು ವಾರಗಳ ನಂತರವೂ ಕೃಷ್ಣಬೈರೆಗೌಡ ಅವರು ಜಿಬಿಎ ಕಚೇರಿಗೆ ಎಂಟ್ರಿ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅವರಿಗೆ ಪೂರ್ಣ ಪ್ರಮಾಣದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡಿರಲಿಲ್ಲ ಎಂಬ ಅಸಮಾಧಾನವಾಗಿತ್ತು. ಬೆಂಗಳೂರು ಅಭಿವೃದ್ಧಿಯ ಅತ್ಯಂತ ಪ್ರಮುಖ ಅಂಗಗಳಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು (ಬಿಎಂಆರ್‌ಡಿಎ) ಹೊರತುಪಡಿಸಿ ಕೇವಲ ಜಿಬಿಎ ವ್ಯಾಪ್ತಿಯನ್ನು ಮಾತ್ರ ನೀಡಿದ್ದಕ್ಕೆ ಅವರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಎರಡು ಇಲಾಖೆಗಳನ್ನು ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದ ಸಚಿವರು, ಸಂಪೂರ್ಣ ಅಧಿಕಾರ ಸಿಗುವವರೆಗೂ ಕಚೇರಿಗೆ ಬರುವುದಿಲ್ಲ ಎಂದು ಪಟ್ಟು ಹಿಡಿದು ಹೈಕಮಾಂಡ್ ಭೇಟಿಗಾಗಿ ದೆಹಲಿಗೂ ಹೋಗಿದ್ದರು. ಮತ್ತೊಂದೆಡೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದರಿಂದ ಈ ಬಿಕ್ಕಟ್ಟು ಮತ್ತಷ್ಟು ಜಟಿಲವಾಗಿತ್ತು. ಆದರೆ ನಿನ್ನೆ ಖಾಸಗಿ ಹೋಟೆಲ್‌ನಲ್ಲಿ ಸುರ್ಜೇವಾಲಾ ಅವರು ಕೃಷ್ಣಬೈರೆಗೌಡರನ್ನು ಕರೆಸಿ ನಡೆಸಿದ ಸುದೀರ್ಘ ಸಂಧಾನ ಮಾತುಕತೆ ಕೊನೆಗೂ ಸಫಲವಾಗಿದ್ದು, ಸಚಿವರು ಮುನಿಸು ಬಿಟ್ಟು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

Related Articles

Related image1
ಬೆಂಗಳೂರು ರಸ್ತೆಯಲ್ಲಿ ಮತ್ತೊಮ್ಮೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ, ಅಡ್ಡಾದಿಡ್ಡಿ ಓಡಾಟ!
Related image2
ಬೆಂಗಳೂರು ಉಪನಗರ ರೈಲು: ಸೋಲದೇವನಹಳ್ಳಿ 26 ಎಕರೆ ಜಾಗದಲ್ಲಿ 200 ಕೋಟಿ ರು. ವೆಚ್ಚದಲ್ಲಿ ನಿರ್ವಹಣಾ ಘಟಕ
37
 ಅಧಿಕಾರ ವಹಿಸಿಕೊಂಡ ತಕ್ಷಣವೇ ಸಭೆ
Image Credit : Asianet News

ಅಧಿಕಾರ ವಹಿಸಿಕೊಂಡ ತಕ್ಷಣವೇ ಸಭೆ

ಜಿಬಿಎ ಕೇಂದ್ರ ಕಚೇರಿಗೆ ಆಗಮಿಸಿದ ನೂತನ ಸಚಿವ ಕೃಷ್ಣಬೈರೆಗೌಡ ಅವರನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೂಗುಚ್ಚ ನೀಡಿ ಅತ್ಯಂತ ಆದರದಿಂದ ಬರಮಾಡಿಕೊಂಡರು. ಅಧಿಕಾರ ವಹಿಸಿಕೊಂಡ ತಕ್ಷಣವೇ ಸಚಿವರು ಜಿಬಿಎ ವ್ಯಾಪ್ತಿಯ ಎಲ್ಲಾ ಹಿರಿಯ ಅಧಿಕಾರಿಗಳ ಪರಿಚಯ ಮಾಡಿಕೊಂಡರು. ಈ ಮೊದಲ ಉನ್ನತ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಜಿಬಿಎ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆಗಳ ಆಯುಕ್ತರುಗಳು ಹಾಗೂ ಈ ಐದೂ ಪಾಲಿಕೆಗಳ ಮುಖ್ಯ ಇಂಜಿನಿಯರ್‌ಗಳು ಭಾಗವಹಿಸಿದ್ದರು.

47
ಕಾಮಗಾರಿಗಳ ಪ್ರಗತಿ ಪರಿಶೀಲನೆ ಮತ್ತು ಇ-ಖಾತಾ ಚರ್ಚೆ
Image Credit : Social Media

ಕಾಮಗಾರಿಗಳ ಪ್ರಗತಿ ಪರಿಶೀಲನೆ ಮತ್ತು ಇ-ಖಾತಾ ಚರ್ಚೆ

ಮೊದಲ ಸಭೆಯಲ್ಲೇ ಆಡಳಿತಾತ್ಮಕವಾಗಿ ಅತ್ಯಂತ ಆಕ್ಟಿವ್ ಆಗಿ ಕಾಣಿಸಿಕೊಂಡ ಸಚಿವರಿಗೆ ಜಿಬಿಎ ಮುಖ್ಯ ಆಯುಕ್ತರು ಬೆಂಗಳೂರಿನ ಐದು ನಗರ ಪಾಲಿಕೆಗಳ ಸದ್ಯದ ಚಿತ್ರಣ ಮತ್ತು ಆಡಳಿತದ ಸ್ವರೂಪದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಗರದಲ್ಲಿ ಇದುವರೆಗೆ ಆಗಿರುವ ಕಾಮಗಾರಿಗಳು ಹಾಗೂ ಸದ್ಯ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ಸಚಿವರು ಪಡೆದುಕೊಂಡರು. ಪ್ರಮುಖವಾಗಿ ನಗರದಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗಳು, ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವರು ಸುದೀರ್ಘ ಚರ್ಚೆ ನಡೆಸಿದರು. ಇದರೊಂದಿಗೆ ನಗರದ ಕಂದಾಯ ವಸೂಲಾತಿ ಪ್ರಗತಿ, ಬಾಕಿ ಇರುವ ತೆರಿಗೆಯ ವಸೂಲಿಗೆ ಕೈಗೊಂಡಿರುವ ಕ್ರಮಗಳು ಮತ್ತು ಸಾರ್ವಜನಿಕರಿಗೆ ಅತ್ಯಂತ ಪ್ರಮುಖವಾಗಿರುವ ಇ-ಖಾತಾ ವಿತರಣೆ ಎಷ್ಟು ಪ್ರಮಾಣದಲ್ಲಿ ಆಗಿದೆ ಹಾಗೂ ಇ-ಖಾತಾಕ್ಕಾಗಿ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ಸಂಖ್ಯೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಸಂಗ್ರಹಿಸಿದರು.

57
ರಾಜಕಾಲುವೆ ಕಾಮಗಾರಿಗಳ ವಿಳಂಬಕ್ಕೆ ಇಂಜಿನಿಯರ್‌ಗಳಿಗೆ ತರಾಟೆ
Image Credit : our own

ರಾಜಕಾಲುವೆ ಕಾಮಗಾರಿಗಳ ವಿಳಂಬಕ್ಕೆ ಇಂಜಿನಿಯರ್‌ಗಳಿಗೆ ತರಾಟೆ

ಇದೇ ಸಭೆಯಲ್ಲಿ ಬೆಂಗಳೂರಿನ ಸದ್ಯದ ಪ್ರಮುಖ ಸಮಸ್ಯೆಯಾದ ಮಳೆ ಮತ್ತು ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರು ಗಂಭೀರವಾಗಿ ಚರ್ಚಿಸಿದರು. ನಗರದ ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಗಳ ವಿಳಂಬದ ಬಗ್ಗೆ ಇಂಜಿನಿಯರ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ನಗರದಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಮೋರಿ ನೀರೆಲ್ಲ ರಸ್ತೆಗೆ ಹರಿಯುತ್ತದೆ, ಈ ಬಗ್ಗೆ ಇದುವರೆಗೆ ನೀವು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಗರದಲ್ಲಿ ಮಳೆ ಬಂದಾಗ ರಾಜಕಾಲುವೆ ನೀರು ರಸ್ತೆಗೆ ಬಂದು ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ನೇರವಾಗಿ ಸಂಬಂಧಪಟ್ಟ ಇಂಜಿನಿಯರ್‌ಗಳೇ ಹೊಣೆಗಾರರಾಗಬೇಕಾಗುತ್ತದೆ ಮತ್ತು ಅಂತಹ ಇಂಜಿನಿಯರ್‌ಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಟು ಎಚ್ಚರಿಕೆ ನೀಡಿದರು.

67
ಒಂಬತ್ತು ವರ್ಷಗಳ ನಂತರ ಬೆಂಗಳೂರಿಗೆ ಸ್ಥಳೀಯ ಶಾಸಕರ ಸಾರಥ್ಯ
Image Credit : Asianet News

ಒಂಬತ್ತು ವರ್ಷಗಳ ನಂತರ ಬೆಂಗಳೂರಿಗೆ ಸ್ಥಳೀಯ ಶಾಸಕರ ಸಾರಥ್ಯ

ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ಪವರ್ ಸೆಂಟರ್ ಆಗಿರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಸಾರಥ್ಯ ವಹಿಸಿಕೊಳ್ಳಲು ಸಚಿವರಲ್ಲಿ ಯಾವಾಗಲೂ ಭಾರಿ ಪೈಪೋಟಿ ಇರುತ್ತದೆ. ಆದರೆ ಕಳೆದ ಹಲವು ಸರ್ಕಾರಗಳಲ್ಲಿ ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳ ಸಚಿವರೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದ ಇತಿಹಾಸವಿತ್ತು. ಹಿಂದೆ ಸರ್ವಜ್ಞ ನಗರದ ಶಾಸಕರಾಗಿದ್ದ ಕೆ.ಜೆ. ಜಾರ್ಜ್ ಅವರ ನಂತರ ಸುಮಾರು ಒಂಬತ್ತು ವರ್ಷಗಳ ಕಾಲ ಬೆಂಗಳೂರಿನ ಸ್ಥಳೀಯ ಶಾಸಕರಿಗೆ ಈ ಇಲಾಖೆಯ ಉಸ್ತುವಾರಿ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು, ಆ ಬಳಿಕ ತುಮಕೂರು ಜಿಲ್ಲೆಯವರಾದ ಜಿ. ಪರಮೇಶ್ವರ್ ಅವರು ಬೆಂಗಳೂರು ಉಸ್ತುವಾರಿಯಾಗಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಶಿವಮೊಗ್ಗ ಜಿಲ್ಲೆಯವರಾದ ಬಿ.ಎಸ್. ಯಡಿಯೂರಪ್ಪ ಅವರೇ ಈ ಖಾತೆಯನ್ನು ನಿರ್ವಹಿಸಿದ್ದರು ಮತ್ತು ಕಳೆದ ಮೂರು ವರ್ಷಗಳಿಂದ ರಾಮನಗರ ಜಿಲ್ಲೆಯವರಾದ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು.

77
ಸುದೀರ್ಘ ಸಂಪ್ರದಾಯಕ್ಕೆ ಕೃಷ್ಣಬೈರೆಗೌಡ ಬ್ರೇಕ್
Image Credit : Asianet News

ಸುದೀರ್ಘ ಸಂಪ್ರದಾಯಕ್ಕೆ ಕೃಷ್ಣಬೈರೆಗೌಡ ಬ್ರೇಕ್

ಇದೀಗ ಹೊರ ಜಿಲ್ಲೆಯವರೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತಿದ್ದ ಸುದೀರ್ಘ ಸಂಪ್ರದಾಯಕ್ಕೆ ಕೃಷ್ಣಬೈರೆಗೌಡ ಅವರು ಬ್ರೇಕ್ ಹಾಕಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಮತ್ತು ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸೇರಿ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೃಷ್ಣಬೈರೆಗೌಡ ಅವರಿಗೆ ಬೆಂಗಳೂರಿನ ನಾಡಿಮಿಡಿತ, ಭೌಗೋಳಿಕ ಪರಿಸ್ಥಿತಿ ಮತ್ತು ಇಲ್ಲಿನ ನೈಜ ನಾಗರಿಕ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನವಿದೆ. ಹೀಗಾಗಿ ಬೆಂಗಳೂರಿನ ಇಂಚಿಂಚು ಮಾಹಿತಿ ಇರುವ ಸ್ಥಳೀಯ ನಾಯಕರೊಬ್ಬರಿಗೆ ಸಿಟಿಯ ಉಸ್ತುವಾರಿ ಸಿಕ್ಕಿರುವುದು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡಲಿಗೆ ಎಂಬ ಆಶಯ ಸಾರ್ವಜನಿಕ ವಲಯದಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು ಮಹಾನಗರ
ಕರ್ನಾಟಕ ಸುದ್ದಿ
ಕೃಷ್ಣ ಬೈರೇಗೌಡ

Latest Videos
Recommended Stories
Recommended image1
Farmers: ಶುಂಠಿ, ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ದಾಖಲೆ ಸಲ್ಲಿಸಲು ಸರ್ಕಾರದಿಂದ ಸೂಚನೆ
Recommended image2
Bengaluru: ಕಾಲ್ಗೆಜ್ಜೆ ಸದ್ದು, ಉಲ್ಟಾ ಆಗಿ ಕಾಣುವ ಮಹಿಳೆಯ ನೆರಳು..ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ‘ಮಹಿಳೆ’ ಯಾರು?
Recommended image3
ಕರಾವಳಿ ರೈಲ್ವೆಗೆ ಕಾಯಕಲ್ಪ: ಕೇಂದ್ರದಿಂದ ಮಂಗಳೂರು ರೈಲು ನಿಲ್ದಾಣ ಪುನರಾಭಿವೃದ್ಧಿ ಮಾಸ್ಟರ್‌ ಪ್ಲಾನ್‌
Related Stories
Recommended image1
ಬೆಂಗಳೂರು ರಸ್ತೆಯಲ್ಲಿ ಮತ್ತೊಮ್ಮೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ, ಅಡ್ಡಾದಿಡ್ಡಿ ಓಡಾಟ!
Recommended image2
ಬೆಂಗಳೂರು ಉಪನಗರ ರೈಲು: ಸೋಲದೇವನಹಳ್ಳಿ 26 ಎಕರೆ ಜಾಗದಲ್ಲಿ 200 ಕೋಟಿ ರು. ವೆಚ್ಚದಲ್ಲಿ ನಿರ್ವಹಣಾ ಘಟಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved