ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ದಿನ ಬೆಳಗಾದರೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಸನದ ಅರಿಸಿಕೇರಿ ಮಠದ ಕೋಡಿಮಠದ ಶಿವಾನಂದ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ಯುಗಾದಿವರೆಗೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಲುಮತದ ಜನರ ಕೈಗೆ ಅಧಿಕಾರ ಸಿಕ್ಕರೆ ಅವರಿಂದ ಅಧಿಕಾರ ಪಡೆಯುವುದು ಕಷ್ಟ. ಸದ್ಯ ರಾಜರ ಭಂಡಾರ (ಬಜೆಟ್) ಆಗಬೇಕು. ಹಾಲುಮತದ ಹಕ್ಕ-ಬುಕ್ಕರು ಹಾಲುಮತ ಸಮಾಜದ ಪ್ರಮುಖರಿದ್ದರು, ವಿಜಯನಗರ ಸಾಮ್ರಾಜ್ಯ ಕಟ್ಟಿದ್ದರು. ಛತ್ರಪತಿ ಶಿವಾಜಿ ಕೂಡ ಹಾಲಮತದವರು, ಕಾಶಿ ವಿಶ್ವನಾಥದ ರಾಣಿ ಅಹಿಲ್ಯಾ ಬಾಯಿ ಅದೇ ಸಮಾಜದವರಾಗಿದ್ದರು. ಹೀಗಾಗಿ ಈ ಸಮಾಜ ಪ್ರಾಚೀನ ಮತ್ತು ದೈವೀಕ ಶಕ್ತಿಯುಳ್ಳ ಸಮಾಜವಾಗಿದೆ. ಸಿದ್ದರಾಮಯ್ಯ ಕೂಡ ಹಾಲುಮತ ಸಮಾಜದ ಮೊಟ್ಟ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಸಾಧ್ಯವಿದೆ ಎಂದು ಭವಿಷ್ಯ ನುಡಿದಿದ್ದಾರೆ.

09:12 AM (IST) Jan 12
Bigg Boss Kannada Season 12 Episode: ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವಾರ ಪೂರ್ತಿ ಆಟದ ಬದಲು ಸೆಲೆಬ್ರೇಶನ್ ಇರುತ್ತದೆ. ಇಷ್ಟುದಿನ ಫಿಸಿಕಲ್ ಟಾಸ್ಕ್, ಲಕ್ಷುರಿ ಟಾಸ್ಕ್, ಮನೆ ಕೆಲಸ, ಅಟೆನ್ಶನ್, ಕಳಪೆ, ಉತ್ತಮ ಎಂದು ಸ್ಪರ್ಧಿಗಳು ಸ್ಪರ್ಧೆಯಲ್ಲಿದ್ದರು.
09:10 AM (IST) Jan 12
08:54 AM (IST) Jan 12
BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಿಡ್ ವೀಕ್ ರಾತ್ರೋ ರಾತ್ರಿ ಎಲಿಮಿನೇಶನ್ ಆಗುವುದು. ಯಾರು ಔಟ್ ಆಗ್ತಾರೆ ಎಂದು ಧನುಷ್ ಗೌಡ ಅವರು ದೊಡ್ಮನೆಯಲ್ಲಿ ಹೇಳಿದ್ದಾರೆ. ಹಾಗಾದರೆ ಅವರಾರು?
08:42 AM (IST) Jan 12
08:31 AM (IST) Jan 12
ವರದಾ-ಬೇಡ್ತಿ ನದಿ ಜೋಡಣೆ ಯೋಜನೆಗೆ ಹಾವೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದು, ಜನಜಾಗೃತಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ, ಉತ್ತರ ಕನ್ನಡದಲ್ಲಿ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶ ನಡೆದಿದೆ.
08:19 AM (IST) Jan 12
08:10 AM (IST) Jan 12
ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆಯಾಗಿ ಆತಂಕ ಸೃಷ್ಟಿಸಿವೆ. ಮತ್ತೊಂದೆಡೆ, ಎಐ ಬಳಸಿ ಅಶ್ಲೀಲತೆ ಪ್ರಸಾರ ಮಾಡಿದ ಆರೋಪದ ಮೇಲೆ ಎಕ್ಸ್ (ಟ್ವಿಟರ್) ತಪ್ಪೊಪ್ಪಿಕೊಂಡಿದೆ.
07:43 AM (IST) Jan 12
07:27 AM (IST) Jan 12
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಕನ್ನಡ, ತೆಲುಗು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದರು. ದೊಡ್ಮನೆಗೆ ಬಂದಿದ್ದ ರಾಶಿಕಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದು, ಅವರ ಪ್ರತಿಕ್ರಿಯೆ ಏನು?
07:10 AM (IST) Jan 12
Bigg Boss Kannada Season 12 Mallamma: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಈ ಸೀಸನ್‌ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಿದ್ದಾರೆ. ಮಲ್ಲಮ್ಮ ಕೂಡ ಬಂದಿದ್ದಾರೆ. ಪ್ರೋಮೋ ರಿಲೀಸ್ ಆಗಿದೆ.
07:07 AM (IST) Jan 12
ಇರಾನ್‌ನಲ್ಲಿನ ಆಂತರಿಕ ದಂಗೆಯನ್ನು ಮುಂದಿಟ್ಟುಕೊಂಡು ಅಮೆರಿಕವು ದಾಳಿಯ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದ್ದು, ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ.
06:58 AM (IST) Jan 12
ಬ್ಯಾನರ್ ಗಲಾಟೆ ವೇಳೆ ಮಾಜಿ ಸಚಿವ ಶ್ರೀರಾಮುಲು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅವರು, ಸ
06:22 AM (IST) Jan 12
ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣವು ಕೊಲೆಯೆಂದು ತನಿಖೆಯಿಂದ ದೃಢಪಟ್ಟಿದೆ. ಲೈಂ*ಗಿಕ ದೌರ್ಜನ್ಯಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ ಪಿಯುಸಿ ವಿದ್ಯಾರ್ಥಿ, ಆಕೆಯನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಮನೆಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ.
06:14 AM (IST) Jan 12