Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ, ಗಿಲ್ಲಿ ನಟ ಅವರು ಟ್ರೋಫಿ ಪಡೆಯಲಿ ಎಂದು ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಗೆ ಒಂದೇ ವಾರ ಬಾಕಿ ಉಳಿದಿದೆ. ಯಾರು ವಿನ್ ಆಗ್ತಾರೆ ಎಂಬ ಪ್ರಶ್ನೆ ಜೋರಿದೆ. ಈ ಮಧ್ಯೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಅವರು ಯಾರು ವಿನ್ ಆಗಬೇಕು ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಿರಿಕ್ ಕೀರ್ತಿ ಹೇಳಿದ್ದೇನು?
“ಯಾವತ್ತೂ ಬಿಗ್‌ಬಾಸ್ ಮನೆಯಲ್ಲಿ ಇಂತವರೇ ಗೆಲ್ಲಬೇಕು ಅಂತ ಹೇಳಿದವನಲ್ಲ... ಆದ್ರೆ ಈ ಹುಡುಗ ಮಾಡಿದ ಮೋಡಿಗೆ ಫಿದಾ ಆಗದವರು ಯಾರು..? ಬಿಗ್‌ಬಾಸ್ ಮನೆಯವರಿಗೆ ಗಿಲ್ಲಿ ಸಖತ್ ಸಿಲ್ಲಿ ಅನಿಸಿದ್ರೂ ಕೂಡ, ಹೊರಗೆ ಕೂತು ಅದೇ ಬಿಗ್ ಬಾಸ್ ನೋಡೋರಿಗೆ ಗಿಲ್ಲಿ ಕೊಟ್ಟ ಮನರಂಜನೆ ಅಷ್ಟಿಷ್ಟಲ್ಲ... ಗಿಲ್ಲಿಯ ಆನ್ ಸ್ಪಾಟ್ ಡೈಲಾಗ್ ಮೆಚ್ಚದವರ್ಯಾರು..? ರಕ್ಷಿತಾ ಶೆಟ್ಟಿ ಕೂಡ ರೇಸಲ್ಲಿ ಇದ್ದಾಳೆ...ಆದ್ರೆ ಗಿಲ್ಲಿ ಗೆಲುವಿನ ಹೆಬ್ಬಾಗಿಲಲ್ಲಿ ಆಲ್ರೆಡಿ ನಿಂತಿದ್ದಾನೆ... ಗೆದ್ದು ಬಾ ಗಿಲ್ಲಿ... ವೋಟ್ ಮಾಡೋದು ಮರೀಬೇಡಿ... ನಮ್ ಹುಡುಗ ಗೆಲ್ಲಬೇಕು…” ಎಂದು ಕಿರಿಕ್ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಸ್ಪರ್ಧಿಗಳ ಜೊತೆ ಜಗಳ
ಅಂದಹಾಗೆ ಗಿಲ್ಲಿ ನಟ ಅವರು ಆರಂಭದಿಂದ ಇಲ್ಲಿಯವರೆಗೆ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಈ ಬಾರಿ ಒನ್ ಮ್ಯಾನ್ ಶೋ ಎನ್ನೋ ರೇಂಜ್‌ಗೆ ಗಿಲ್ಲಿ ಮನರಂಜನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಬಂದ ಅತಿಥಿಗಳನ್ನು ಬಿಡದೆ ರೇಗಿಸಿದ್ದರು. ಇನ್ನು ಗಿಲ್ಲಿ ನಟ ಅವರು ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು, ರಿಷಾ ಗೌಡ ಜೊತೆ ಕೂಡ ಜಗಳ ಆಡಿದ್ದರು.
ಬೇಡದ ಪದಗಳ ಬಳಕೆ
ಆರಂಭದಲ್ಲಿ ಅಶ್ವಿನಿ ಗೌಡ ಅವರ ಕಾಲಿಗೆ ಬೀಳೋಕೆ ಹೋಗಿದ್ದ ಗಿಲ್ಲಿ ನಟ, ಈಗ ಅನೇಕ ಟಾಸ್ಕ್‌ಗಳಲ್ಲಿ ಸವಾಲು ಹಾಕುವಂತೆ ಮಾತನಾಡಿದ್ದೂ ಇದೆ, ಆಟವನ್ನು ಗೆದ್ದಿದ್ದೂ ಇದೆ. ಈ ಜಗಳದ ಮಧ್ಯೆ ಅಶ್ವಿನಿ ಗೌಡ, ಗಿಲ್ಲಿ ನಟನ ಮಧ್ಯೆ ಬೇಡದ ಪದಗಳು ಬಳಕೆಯಾಗಿದ್ದುಂಟು. ಗಿಲ್ಲಿ ನಟ ಅವರು ತೇಜೋವಧೆ ಮಾಡುವಂಥ ಪದಗಳನ್ನು ಬಳಸಿ ಕಾಮಿಡಿ ಮಾಡ್ತಾರೆ ಎಂಬ ಆರೋಪ ಇದೆ. ಹೀಗಿದ್ದಾಗಿಯೂ ಗಿಲ್ಲಿ ನಟ ಇಲ್ಲದಿದ್ದರೆ ಈ ಬಾರಿ ಬಿಗ್ ಬಾಸ್ ಇಲ್ಲ ಎನ್ನುವಷ್ಟರ ಮಟ್ಟಿಗೆ ರಂಜಿಸಿರೋದು ಸತ್ಯ.


