ಅಕ್ಕಿ ಇಲ್ಲದೆ 5 ಸೂಪರ್ ಹೆಲ್ದಿ ಮತ್ತು ಟೇಸ್ಟಿ ದೋಸೆ ಮಾಡಿ; ನೆನೆಸೋ-ರುಬ್ಬೋ ಚಿಂತೆಯೂ ಇಲ್ಲ
ಫುಡ್ ಡೆಸ್ಕ್: ಇಂದು ನಾವು ಅಕ್ಕಿ ಇಲ್ಲದೆ ಮಾಡುವ 5 ದೋಸೆ ರೆಸಿಪಿಗಳ (no rice dosa) ಬಗ್ಗೆ ಹೇಳ್ತೀವಿ. ಇವು ಆರೋಗ್ಯಕರ ಹಾಗೂ ರುಚಿಕರ. ಅಷ್ಟೇ ಅಲ್ಲ, ಇದನ್ನು ಮಾಡಲು ನೆನೆಸುವ, ರುಬ್ಬುವ ಮತ್ತು ಹುದುಗಿಸುವ ಚಿಂತೆಯೂ ಇರೋದಿಲ್ಲ.

ಹೆಸರುಕಾಳು ಮೊಳಕೆ ದೋಸೆ
ಮಕ್ಕಳು ಮೊಳಕೆ ಕಾಳುಗಳನ್ನು ಹಾಗೆ ತಿನ್ನಲ್ಲ, ಹಾಗಾಗಿ ಅವರಿಗೆ ಇಷ್ಟವಾಗುವ ಹಾಗೆ ದೋಸೆಯಲ್ಲಿ ಸೇರಿಸುವುದು ಉತ್ತಮ ಉಪಾಯ. ಇದನ್ನು ಮಾಡಲು, ಹೆಸರುಕಾಳು ಮೊಳಕೆಗಳನ್ನು ರುಬ್ಬಿ ಹಿಟ್ಟು ತಯಾರಿಸಿ. ಅದಕ್ಕೆ ಅರ್ಧ ಚಮಚ ಫ್ರೂಟ್ ಸಾಲ್ಟ್ ಸೇರಿಸಿ ದೋಸೆ ಮಾಡಿ. ಬೇಕಿದ್ದರೆ ಪನೀರ್ ಅಥವಾ ಇಷ್ಟದ ತರಕಾರಿ ಸ್ಟಫಿಂಗ್ ಮಾಡಬಹುದು.
ಮಿಕ್ಸ್ ಬೇಳೆ ದೋಸೆ
ಅಕ್ಕಿ ಬದಲು ಬೇರೆ ಬೇರೆ ಬಗೆಯ ಬೇಳೆಗಳಿಂದಲೂ ದೋಸೆ ಮಾಡಬಹುದು. ಇದಕ್ಕಾಗಿ ಹೆಸರು, ಉದ್ದು, ಮಸೂರ್, ಕಡಲೆ ಮತ್ತು ತೊಗರಿ ಬೇಳೆಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ, ಅದರಿಂದ ತೆಳುವಾದ ದೋಸೆಗಳನ್ನು ಮಾಡಿಕೊಳ್ಳಿ.
ರಾಗಿ ಸೆಟ್ ದೋಸೆ
ರಾಗಿ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅದರ ರುಚಿ ಕೆಲವರಿಗೆ ಇಷ್ಟವಾಗುವುದಿಲ್ಲ. ಮಕ್ಕಳು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಅದರಿಂದ ರುಚಿಕರವಾದ ದೋಸೆ ಮಾಡಬಹುದು. ಇದಕ್ಕಾಗಿ ರಾಗಿ ಹಿಟ್ಟನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ, ನಂತರ ಫ್ರೂಟ್ ಸಾಲ್ಟ್ ಮತ್ತು ಉಪ್ಪು ಸೇರಿಸಿ ದೋಸೆ ಮಾಡಿ.
ಉದ್ದು-ಜೋಳದ ದೋಸೆ
ಜೋಳದ ಹಿಟ್ಟು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಲು ದೋಸೆ ಮಾಡುವುದು ಉತ್ತಮ ಆಯ್ಕೆ. ಇದಕ್ಕಾಗಿ ಉದ್ದಿನ ಬೇಳೆಯನ್ನು ರುಬ್ಬಿ ಅದಕ್ಕೆ ಜೋಳದ ಹಿಟ್ಟನ್ನು ಸೇರಿಸಿ, ನಂತರ ಆರೋಗ್ಯಕರ ಮತ್ತು ರುಚಿಕರವಾದ ದೋಸೆ ಮಾಡಿ ತಿನ್ನಿ.
ಇದನ್ನೂ ಓದಿ: ಕೋಳಿ ಮಾಂಸದಲ್ಲಿ ಲೆಗ್ ಪೀಸೇ ಬೇಕು ಅಂತ ಎಲ್ರೂ ಪಟ್ಟು ಹಿಡಿಯೋದ್ಯಾಕೆ, ಅಲ್ಲೇ ಇರೋದು ಆ ಸೀಕ್ರೇಟ್!
ಓಟ್ಸ್ ದೋಸೆ
ಆರೋಗ್ಯಕರ ಜೀವನಶೈಲಿಗಾಗಿ ನಿಮ್ಮ ಡಯಟ್‌ನಲ್ಲಿ ಓಟ್ಸ್ ಸೇರಿಸಬೇಕು. ಇದು ತೂಕ ಇಳಿಸಲು ಮಾತ್ರವಲ್ಲ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಓಟ್ಸ್‌ನ ಸಪ್ಪೆ ರುಚಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಹಾಗಾಗಿ ನೀವು ಅದರಿಂದ ದೋಸೆ ಮಾಡಬಹುದು. ಇದಕ್ಕಾಗಿ ಹುರಿದ ಓಟ್ಸ್ ಪುಡಿ ಮಾಡಿ. ಅದಕ್ಕೆ ಮೊಸರು ಸೇರಿಸಿ ಸ್ವಲ್ಪ ಹೊತ್ತು ಬಿಡಿ, ನಂತರ ಫ್ರೂಟ್ ಸಾಲ್ಟ್ ಸೇರಿಸಿ ದೋಸೆ ಮಾಡಿ.
ಇದನ್ನೂ ಓದಿ: ದೋಸೆ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲಾಂದ್ರೆ ಕಾವಲಿಯಿಂದ ಮೇಲೆ ದೋಸೆಯೇ ಬರಲ್ಲ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.