ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತೇವೆಯೇ ವಿನಃ ಮೈತ್ರಿ ಮುರಿದುಬಿದ್ದಿಲ್ಲ ಎಂದು ಸಂಸದ ಡಾ। ಮಂಜುನಾಥ್ ಹೇಳಿದರು. ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಪ್ರಾಯಶ್ಚಿತ್ತ ಪಾದಯಾತ್ರೆ ಎಂದು ಶಾಸಕ ಬಾಲಕೃಷ್ಣ ಅವರು ಕರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಒತ್ತಾಯ ಮಾಡಿ ನಾವು ಸ್ವಾಧೀನಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆಗೆ ಸಿದ್ಧರಾಗಿದ್ದಾರೆ. ಫಲವತ್ತಾದ ರೈತರ ಭೂಮಿಯನ್ನು ಪಡೆಯಬಾರದು. ಹಿಂದೆ ಹಾರೋಹಳ್ಳಿ ಪ್ರಕರಣದಲ್ಲೂ ರೈತರು ಪ್ರತಿಭಟಿಸಿದ್ದರು. ಶೇ.80ರಷ್ಟು ರೈತರ ವಿರೋಧವಿದೆ. ಪ್ರಜಾಪ್ರಭುತ್ವದಲ್ಲಿ ರೈತರ ಒಟ್ಟಾರೆ ಅಭಿಪ್ರಾಯ ಪಡೆದು, ನಿರ್ಧಾರ ಕೈಗೊಳ್ಳಬೇಕು ಎಂದರು.
11:03 PM (IST) Aug 09
ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬಜೆಟ್ ಸ್ನೇಹಿ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ನಾಲ್ಕು ಜನಪ್ರಿಯ ಹಾಗೂ ಅಗ್ಗದ ಇವಿ ಕಾರುಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳನ್ನು ಈ ಸ್ಟೋರಿಯಲ್ಲಿ ನೀಡಲಾಗಿದೆ.
09:14 PM (IST) Aug 09
ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ, ಟೀಮ್‌ನ ಸಾಕಷ್ಟು ಜನರು ವೇದಿಕೆಯ ಮೇಲೆ ಮಾತನ್ನಾಡಿದ್ದಾರೆ. ಅವರಲ್ಲಿ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ವಾರು ಆಡಿರುವ ಮಾತು ಸಾಕಷ್ಟು ಜನರಿಗೆ ಅಚ್ಚರಿ ತಂದಿತು. ಅದರೆ, ಬಳಿಕ ಅವರು ಕೊಟ್ಟ ಕ್ಲಾರಿಟಿ ಏನು? ಈ ಸ್ಟೋರಿ ನೋಡಿ..
09:00 PM (IST) Aug 09
Toxic Trailer Reaction: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಬಿಡುಗಡೆಯಾದ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
08:06 PM (IST) Aug 09
ಬೆಂಗಳೂರಿನ ಯಲಹಂಕದಲ್ಲಿ ಡೆಲಿವರಿ ಬಾಯ್ ಬಸವರಾಜ್ ಮೇಲೆ ಹಿಂದಿ ಮಾತನಾಡುವ ಗುಂಪೊಂದು ಹಲ್ಲೆ ನಡೆಸಿದೆ. ತನಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ವಾಗ್ವಾದ ಬೆಳೆದು, ಯುವಕ-ಯುವತಿಯರ ತಂಡವು ಆತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದೆ.
07:51 PM (IST) Aug 09
Rukmini Vasanth: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್, ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
07:27 PM (IST) Aug 09
Gangavathi Voter List 2026: ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಒಟ್ಟು 24,988 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು..
07:13 PM (IST) Aug 09
Snake Myths and Facts: ಹಾವುಗಳು ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಪಡೆಯುವ ನೈಸರ್ಗಿಕ ಪ್ರಕ್ರಿಯೆಯನ್ನು ಪೊರೆ ಬಿಚ್ಚುವುದು ಅಥವಾ ಎಕ್ಡಿಸಿಸ್ (Ecdysis) ಎಂದು ಕರೆಯಲಾಗುತ್ತದೆ.
07:03 PM (IST) Aug 09
ಕೇವಲ ಅಮಿತಾಭ್ ಮಾತ್ರವಲ್ಲ, ಅಂದಿನ ಕಾಲದ ಮತ್ತೊಬ್ಬ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಇಷ್ಟೇ ಸಾಹಸಿಯಾಗಿದ್ದರು. 'ಕರ್ತವ್ಯ' ಚಿತ್ರದ ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರು ನಿಜವಾದ ಚಿರತೆಯ ಜೊತೆ ಯಾವುದೇ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದರು ಎಂದು ಮೋಹನ್ ನೆನಪಿಸಿಕೊಂಡಿದ್ದಾರೆ.
06:34 PM (IST) Aug 09
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾಗಾಗಿ ಯಶ್ ಪಡೆದಿದ್ದಾರೆ ಎನ್ನಲಾಗುತ್ತಿರುವ ಸಂಭಾವನೆಯ ಬಗ್ಗೆಯೂ ಚರ್ಚೆ ಜೋರಾಗಿದೆ.
06:12 PM (IST) Aug 09
‘ಟಾಕ್ಸಿಕ್’ ಸಿನಿಮಾಕ್ಕಾಗಿ ರಾಧಿಕಾ ಪಂಡಿತ್ ನೀಡಿದ ಕೊಡುಗೆಯೇನು? ಚಿತ್ರತಂಡದ ಹಲವು ಸದಸ್ಯರು ವೇದಿಕೆಯಲ್ಲಿ ಅವರ ತ್ಯಾಗವನ್ನು ನೆನಪಿಸಿಕೊಂಡಿದ್ದು, ಸ್ವತಃ ಯಶ್ ಕೂಡ ಪತ್ನಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
05:57 PM (IST) Aug 09
ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ, ಹೆಡ್ ಕೋಚ್ ಗೌತಮ್ ಗಂಭೀರ್ ಸ್ಟಾರ್ ಬೌಲರ್ ಬೌಲಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಲೆಂಗ್ತ್ ಎಸೆಯುತ್ತಿದ್ದುದನ್ನು ಕಂಡು, ಗಂಭೀರ್ ಬೌಂಡರಿ ಲೈನ್‌ಗೆ ಬಂದು ಪಿಚ್‌ಗೆ ತಕ್ಕಂತೆ 'ಫುಲರ್ ಲೆಂಗ್ತ್' ಎಸೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
05:51 PM (IST) Aug 09
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರುಕಿರಣ್..
05:30 PM (IST) Aug 09
Gangavathi Baby: ಜನಿಸಿದ ಕೇವಲ ಐದು ದಿನಗಳಲ್ಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡ ಕಿರಿಯ ಮಗುವೆಂಬ ಹೆಗ್ಗಳಿಕೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಅಂಚುರಿ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ.
05:28 PM (IST) Aug 09
'ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದ ನಟ ಯಶ್, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಮೂಲಕ ಜಾಗತಿಕ ನಟರಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಬಗ್ಗೆ ಯಶ್ ಹೇಳಿದ್ದೇನು? ನೋಡಿ..
05:15 PM (IST) Aug 09
Sunflower Seeds Benefits: ಬಾದಾಮಿ, ಗೋಡಂಬಿಯಂತೆ ಸೂರ್ಯಕಾಂತಿ ಬೀಜಗಳೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮಿತ ಪ್ರಮಾಣದಲ್ಲಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ..
04:54 PM (IST) Aug 09
ಪ್ರತಿದಿನ ನೆಲ ಒರೆಸುವುದು ಮನೆಯ ಸ್ವಚ್ಛತೆಯ ಪ್ರಮುಖ ಭಾಗ. ಆದರೆ ಕೆಲವೊಮ್ಮೆ ಚೆನ್ನಾಗಿ ಒರೆಸಿದ ಕೆಲವೇ ಗಂಟೆಗಳಲ್ಲಿ ನೆಲ ಮತ್ತೆ ಕೊಳೆಯಾಗಿ ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅಹಿತಕರ ವಾಸನೆಯೂ ಕಾಣಿಸಿಕೊಳ್ಳಬಹುದು.
04:33 PM (IST) Aug 09
ಪುರುಷರ ಶರ್ಟ್‌ಗಳಲ್ಲಿ ಸಾಮಾನ್ಯವಾಗಿ ಬಟನ್‌ಗಳು ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್‌ಗಳಲ್ಲಿ ಅವು ಎಡಭಾಗದಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಫ್ಯಾಷನ್ ಅಥವಾ ವಿನ್ಯಾಸದ ವಿಚಾರವಲ್ಲ.
04:25 PM (IST) Aug 09
ಕಳೆದ 16 ದಿನಗಳಿಂದ ನಡೆಯುತ್ತಿರುವ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆ ಮಹತ್ವದ ಘಟ್ಟ ತಲುಪಿದೆ. ಮೂಲಗಳ ಪ್ರಕಾರ, ಪರೀಕ್ಷೆ ರದ್ದು, ಸಿಐಡಿ ತನಿಖೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
04:17 PM (IST) Aug 09
ಹಾವು ಬೆನ್ನಟ್ಟಿದಾಗ ‘S’ ಆಕಾರದಲ್ಲಿ ಓಡಿದರೆ ಅದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತದೆ. ಆದರೆ ಇದಕ್ಕೆ ಯಾವುದೇ ಖಚಿತ ವೈಜ್ಞಾನಿಕ ಆಧಾರವಿಲ್ಲ.
04:06 PM (IST) Aug 09
ನಕಲಿ ಗುರುತಿನ ಚೀಟಿಯೊಂದಿಗೆ ಈಗಾಗಲೇ 25 ಮದುವೆಯಾಗಿ ಹಲವರಿಗೆ ಮೋಸ ಮಾಡಿದ ವ್ಯಕ್ತಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. ಸದ್ಯ ಶಾಸಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಮಡು ತನಿಖೆ ನಡೆಸಿದ್ದಾರೆ.
03:10 PM (IST) Aug 09
ಶ್ರೀಲಂಕಾ ಎದುರಿನ ಟೆಸ್ಟ್ ಸಿರೀಸ್ ನೋಡ್ತಿರುವ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಆಗಿದೆ. ನಾಯಕ ಶುಬ್ಮನ್ ಗಿಲ್ಲ ಸೇರಿ ಒಟ್ಟ 13 ಮಂದಿ ಆಟಗಾರರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.
02:37 PM (IST) Aug 09
02:07 PM (IST) Aug 09
ಆಗಸ್ಟ್ 13 ರಂದು ಕರ್ನಾಟಕ ಬಂದ್ ಆಗೋದು ಪಕ್ಕಾ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇವತ್ತು ನಡೆದ ಜಾಗಟೆ ಪ್ರತಿಭಟನೆ ವೇಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.
01:32 PM (IST) Aug 09
ಯಶ್ ಕರ್ನಾಟಕದ ಹೆಮ್ಮೆ, ಕನ್ನಡ ಸಿನಿಮಾ, ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತು ಈಗ ಟಾಕ್ಸಿಕ್ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದೆ. 'ಯಶ್ ಆಡಿರುವ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಮಾತಿನ ಅರ್ಥವೇನು? ನೋಡಿ..
12:40 PM (IST) Aug 09
12:21 PM (IST) Aug 09
11:41 AM (IST) Aug 09
ಇದೊಂದು ರೋಚಕ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಕಥಾನಾಯಕ ಇನ್‌ಸ್ಪೆಕ್ಟರ್ ಸರಣಿ ಕೊ*ಲೆಗಳ ರಹಸ್ಯವನ್ನು ವಿಚಿತ್ರ ಸುಳಿವುಗಳ ಮೂಲಕ ಹೇಗೆ ಭೇದಿಸುತ್ತಾನೆ ಎಂಬುದೇ ಕಥಾವಸ್ತು. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
11:32 AM (IST) Aug 09
ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಕೆಎಂಸಿಆರ್‌ಐ, ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿವೆ. ದೇಶದ 13 ರಾಜ್ಯಗಳು, ಕರ್ನಾಟಕದ 25 ಜಿಲ್ಲೆಗಳ ಮಕ್ಕಳ ಒಳಗೊಂಡ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂಬುದು ವಿಶೇಷ.
11:16 AM (IST) Aug 09
ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯೊಂದರಲ್ಲೇ 14,000 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಿದೆ. ಆದರೆ ಅರ್ಹರು ಬಿಪಿಎಲ್ ಕಾರ್ಡ್‌ನಿಂದ ವಂಚಿತರಾಗದಂತೆ ತಡೆಯಲು ಮತ್ತೊಂದು ಅವಕಾಶವನ್ನು ನೀಡಿದ್ದು, ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ.
10:45 AM (IST) Aug 09
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್‌ಎಸ್‌ಎಸ್ ಅನ್ನು ಕಾನೂನಿನ ವ್ಯಾಪ್ತಿಗೆ ತರುವುದಾಗಿ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯು ದೇಶಭಕ್ತಿಯ ಪ್ರಮಾಣಪತ್ರ ನೀಡುವುದನ್ನು ಪ್ರಶ್ನಿಸಿ, ಆರ್‌ಎಸ್‌ಎಸ್‌ಗೆ ಅಚ್ಚರಿಯಾಗುವಂತಹ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
10:42 AM (IST) Aug 09
ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಇವತ್ತು ಪಾದಯಾತ್ರೆ ಮಾಡ್ತಿವೆ. ಅದರ ರೂವಾರಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರ ಆರ್ಶೀವಾದವನ್ನೂ ಪಡೆದಿದ್ದಾರೆ. ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ತಂತ್ರದ ಪ್ರತಿಯಾಗಿ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.
09:59 AM (IST) Aug 09
09:22 AM (IST) Aug 09
ಪಾವಗಡ ತಾಲೂಕಿನಲ್ಲಿ ಅತ್ಯಂತ ವಿಷಾದನೀಯ ಘಟನೆ ನಡೆದಿದೆ. ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಹಾಸ್ಟೆಲ್‌ನ ಶೌಚಾಲಯದಲ್ಲಿ ಬಾಲಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಪೋಷಕರ ಕಣ್ಣೀರಿಗೆ ಕಾರಣವಾಗಿದೆ.
09:13 AM (IST) Aug 09
09:05 AM (IST) Aug 09
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪಾಪಿ ಪತಿ ಪತ್ನಿಯನ್ನ ಬರ್ಬರವಾಗಿ ಸಾಯಿಸಿ ಮೋರಿಗೆ ಎಸೆದಿದ್ದಾನೆ. ಅಷ್ಟಕ್ಕೂ ಇಬ್ಬರ ಮಧ್ಯೆ ಆಗಿದ್ದೇನು? ಈ ಸ್ಟೋರಿ ಓದಿ..
09:00 AM (IST) Aug 09
08:51 AM (IST) Aug 09
08:06 AM (IST) Aug 09
ಹೋರಾಟಗಾರ ಅಹಿಂಸಾ ಚೇತನ್ ಅವರು ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಬಿಡದಿ ಟೌನ್‌ಶಿಪ್ ಮತ್ತು ನೀಟ್ ವ್ಯವಸ್ಥೆ ಬಗ್ಗೆ ಹೇಳಿದ್ದೇನು?
07:35 AM (IST) Aug 09
ವಾಲ್ಮೀಕಿ ನಿಗಮ ಹಗರಣದಲ್ಲಿ ಜಾಮೀನು ಪಡೆದಿರುವ ಸಚಿವ ನಾಗೇಂದ್ರ, ಕೋರ್ಟ್ ಅನುಮತಿ ಇಲ್ಲದೆ ದೆಹಲಿಗೆ ಪ್ರವಾಸ ಕೈಗೊಂಡ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದ್ದು, ಷರತ್ತು ಉಲ್ಲಂಘನೆ ಸಾಬೀತಾದರೆ ಅವರ ಜಾಮೀನು ರದ್ದಾಗುವ, ಸಚಿವ ಸ್ಥಾನಕ್ಕೆ ಕುತ್ತು?
07:33 AM (IST) Aug 09