MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Health
  • ಪೋಷಕರೇ ಈ ಶಾಕಿಂಗ್ ವರದಿ ಕಡೆಗಣಿಸಬೇಡಿ: ಮಕ್ಕಳ ಹೃದಯಾಘಾತಕ್ಕೆ ಇದೇ ಕಾರಣ! 13 ರಾಜ್ಯಗಳ ಅಧ್ಯಯನದಲ್ಲಿ ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ!

ಪೋಷಕರೇ ಈ ಶಾಕಿಂಗ್ ವರದಿ ಕಡೆಗಣಿಸಬೇಡಿ: ಮಕ್ಕಳ ಹೃದಯಾಘಾತಕ್ಕೆ ಇದೇ ಕಾರಣ! 13 ರಾಜ್ಯಗಳ ಅಧ್ಯಯನದಲ್ಲಿ ಹೊರಬಿತ್ತು ಬೆಚ್ಚಿಬೀಳಿಸುವ ಮಾಹಿತಿ!

ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಹುಬ್ಬಳ್ಳಿಯ ಕೆಎಂಸಿಆರ್‌ಐ, ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸಿವೆ. ದೇಶದ 13 ರಾಜ್ಯಗಳು, ಕರ್ನಾಟಕದ 25 ಜಿಲ್ಲೆಗಳ ಮಕ್ಕಳ ಒಳಗೊಂಡ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂಬುದು ವಿಶೇಷ.

2 Min read
Author : Kannadaprabha News | Kannada Prabha
Published : Aug 09 2026, 11:32 AM IST
Share this Photo Gallery
  • FB
  • TW
  • Linkdin
  • Whatsapp
16
ಮಕ್ಕಳಲ್ಲಿ ಹೃದಯಾಘಾತ! ಕಾರಣವೇನು?
Image Credit : Asianet News

ಮಕ್ಕಳಲ್ಲಿ ಹೃದಯಾಘಾತ! ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹುಬ್ಬಳ್ಳಿಯ ಕೆಎಂಸಿಆರ್‌ಐನ ಬಹುವಿಭಾಗೀಯ ಸಂಶೋಧನಾ (ಎಂಆರ್‌ಯು) ಘಟಕ ಈ ಹಿಂದೆ ಧಾರವಾಡ ಜಿಲ್ಲೆಯಾದ್ಯಂತ ಸಂಶೋಧನಾ ಅಧ್ಯಯನ ಕೈಗೊಂಡಿತ್ತು. ಬಳಿಕ, ಇದೇ ಅಧ್ಯಯನದ ಆಧಾರದ ಮೇಲೆ ಕೆಎಂಸಿಆರ್‌ಐ, ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜೊತೆ ಜಂಟಿಯಾಗಿ ದೇಶದ 13 ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಈ ಸಂಬಂಧ ಸಂಶೋಧನಾ ಅಧ್ಯಯನ ನಡೆಸಿದ್ದು, ಅಧ್ಯಯನದ ವೇಳೆ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ದೇಶದಲ್ಲಿ ಈ ರೀತಿಯ ಅಧ್ಯಯನ ನಡೆದಿದ್ದು ಇದೇ ಮೊದಲು ಎಂಬುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಟಗಳಿಂದ ಮಕ್ಕಳು ದೂರವಿರುವುದೇ ಹೃದಯಾಘಾತಕ್ಕೆ ಕಾರಣವೇ?
Image Credit : Getty

ಆಟಗಳಿಂದ ಮಕ್ಕಳು ದೂರವಿರುವುದೇ ಹೃದಯಾಘಾತಕ್ಕೆ ಕಾರಣವೇ?

ಮಕ್ಕಳು ಆಟೋಟಗಳಿಂದ ದೂರ ಇರುವುದರಿಂದ ಕಾಣಿಸಿಕೊಳ್ಳುವ ಬೊಜ್ಜು, ಹದಿಹರೆಯದ ವಯಸ್ಸಿನಲ್ಲೇ ಧೂಮಪಾನ-ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುವುದು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂಬ ಸಂಗತಿ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.

Related Articles

Related image1
ಹಬ್ಬದ ಸಂಭ್ರಮದಲ್ಲಿದ್ದ 17 ವರ್ಷದ ಬಾಲಕನಿಗೆ ಹೃದಯಾಘಾತ; ದುರಂತ ಸಾವು!
Related image2
10ಕಿ.ಮೀ ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು!
36
13 ರಾಜ್ಯ, ರಾಜ್ಯದ 25 ಜಿಲ್ಲೆ ಆಯ್ಕೆ:
Image Credit : Getty

13 ರಾಜ್ಯ, ರಾಜ್ಯದ 25 ಜಿಲ್ಲೆ ಆಯ್ಕೆ:

ಅಧ್ಯಯನದ ವೇಳೆ ರಾಜ್ಯದ 25 ಜಿಲ್ಲೆ, ದೇಶದ 13 ರಾಜ್ಯಗಳ 8 ರಿಂದ 30ರ ಪ್ರಾಯದ 347 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದವರೂ ಇದ್ದಾರೆ. ಇವರೆಲ್ಲರ ಹೃದಯದ ರಕ್ತನಾಳದ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಚಯಾಪಚಯ ವೈಪರೀತ್ಯ ಮತ್ತು ರಕ್ತನಾಳಗಳ ಒಳಪದರ ಹಾನಿಯ ಆರಂಭಿಕ ಲಕ್ಷಣಗಳು ಇವರಲ್ಲಿ ಕಂಡು ಬಂದಿವೆ. ಇವೆಲ್ಲ ಹೃದಯಾಘಾತಕ್ಕೆ ಕಾರಣವಾಗುವ ಪ್ರಕ್ರಿಯೆಗಳಾಗಿವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

46
ಶೇ.70ರಷ್ಟು ಮಕ್ಕಳು ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವ!
Image Credit : Getty

ಶೇ.70ರಷ್ಟು ಮಕ್ಕಳು ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವ!

ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ.70ರಷ್ಟು ಮಕ್ಕಳು ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವವಿರುವುದು ಬಯಲಾಗಿದೆ. ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುವುದು, ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್‌ ಫುಡ್ ಸೇವನೆಯಿಂದ ಅವರಲ್ಲಿನ ಎಂಡೋಥೀಲಿಯಂ, ಅಂದರೆ ಅಪಧಮನಿಯ ಒಳಪದರು ಹಾಳಾಗುತ್ತಿರುವುದು ಕಂಡು ಬಂದಿದೆ. ಹೈಪರ್ಹೋಮೋಸಿಸ್ಟಿನೆಮಿಯಾ ಲಕ್ಷಣದಲ್ಲಿ ಹೆಚ್ಚಳ, ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್ ಎಸ್-ಸಿಆರ್‌ಪಿ) ಹದಿಹರೆಯದವರಲ್ಲಿ ಶೇ.28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ತಲುಪಿದೆ ಎಂದು ಅಧ್ಯಯನ ತಿಳಿಸಿದೆ. ರಕ್ತದ ಒಳಪದರು ಹಾಳಾದರೆ 10-15 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ,‌ ಕಿಡ್ನಿ ಸಮಸ್ಯೆ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚಿರುತ್ತದೆ ಎಂಬುದು ಬೆಳಕಿಗೆ ಬಂದಿದೆ.

56
ಯಾವ ವಯಸ್ಸಿನ ಮಕ್ಕಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚು?
Image Credit : Getty

ಯಾವ ವಯಸ್ಸಿನ ಮಕ್ಕಳಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚು?

8 ರಿಂದ 14 ವರ್ಷದ ಶಾಲಾ ಮಕ್ಕಳು ಹಾಗೂ 18 ರಿಂದ 30 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಎರಡು ಹಂತಗಳಲ್ಲಿ ಅಧ್ಯಯನ ಮಾಡಲಾಗಿದೆ. ಶಾಲಾ ಮಕ್ಕಳಲ್ಲಿ ಶೇ.70ಕ್ಕಿಂತ ಹೆಚ್ಚು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.75ಕ್ಕಿಂತ ಹೆಚ್ಚು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳು ಕಂಡು ಬಂದಿವೆ.

66
ಕೆಎಂಸಿಆರ್‌ಐನ ಎಂಆರ್‌ಯು ನೋಡಲ್ ಅಧಿಕಾರಿ ಹೇಳಿದ್ದೇನು?
Image Credit : Getty

ಕೆಎಂಸಿಆರ್‌ಐನ ಎಂಆರ್‌ಯು ನೋಡಲ್ ಅಧಿಕಾರಿ ಹೇಳಿದ್ದೇನು?

ವರದಿ ಸಲ್ಲಿಸಲು ಸಿದ್ಧತೆ:

ಈ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರಕ್ಕೂ ಸಲ್ಲಿಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ಜಿಲ್ಲಾಡಳಿತ ಸಭೆ ಕರೆದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜತೆ ಚರ್ಚಿಸಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದೆ.

ಪರಿಹಾರವೇನು?:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಸಿಆರ್‌ಐನ ಎಂಆರ್‌ಯು ನೋಡಲ್ ಅಧಿಕಾರಿ ಡಾ.ರಾಮ ಕೌಲಗುಡ್, ಇದು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದ್ದು, ಆಹಾರ ಪದ್ಧತಿ ಬದಲಿಸಬೇಕಿದೆ. ಮಕ್ಕಳ ಚಟುವಟಿಕೆ ಕಡಿಮೆಯಾಗಿದ್ದು, ಮಾನಸಿಕ ಒತ್ತಡಕ್ಕೆ ‌ಕಾರಣವಾಗಲಿದೆ.‌ ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅವರಿಗೆ ಮೊಬೈಲ್ ಬಳಕೆ ಮಿತಗೊಳಿಸಬೇಕು. ಮಕ್ಕಳಿಗೆ ಪೋಷಕರು ಅಂಕ ಪಡೆಯಲು ಒತ್ತಡ ಹಾಕುವುದರಿಂದ ಸರಿಯಾದ ನಿದ್ದೆ ಇಲ್ಲದೆ ಇರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿಕ್ಕಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಒಂದು ಸಂಶೋಧನೆ ಮಾಡಲಾಗಿತ್ತು. ಇದೇ ಅಧ್ಯಯನದ ಆಧಾರದ ಮೇಲೆ ದೇಶಾದ್ಯಂತ ‌ಅಧ್ಯಯನ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು. ಅಧ್ಯಯನಕ್ಕೆ ಹಲವು ವೈದ್ಯಕೀಯ ಕಾಲೇಜುಗಳು ಸಾಥ್ ನೀಡಿದ್ದವು.

-ಡಾ। ರಾಮ ಕೌಲಗುಡ್, ಎಂಆರ್‌ಯು ನೋಡಲ್ ಅಧಿಕಾರಿ ಕೆಎಂಸಿಆರ್‌ಐ.

ವರದಿ: ಶಿವಾನಂದ ಗೊಂಬಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಹೃದಯಾಘಾತ
ಮಕ್ಕಳು
ಪೋಷಕರು
ಕರ್ನಾಟಕ ಸುದ್ದಿ
 

Latest Videos
Recommended Stories
Recommended image1
ಹಿಂದಿನ ಕಾಲದಲ್ಲಿ ಸ್ನಾನ ಮಾಡದೇ ಅಡುಗೆ ಮಾಡುತ್ತಿರಲಿಲ್ಲ.. ಈ ಪದ್ಧತಿ ಹಿಂದಿದೆ ಭಾರೀ ಬಲವಾದ ಕಾರಣ!
Recommended image2
ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬೇಡಿ.. ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಿರಬಹುದು!
Recommended image3
ಇದು ಅಜ್ಜಿ ಹೇಳಿದ ಸೀಕ್ರೆಟ್.. ಹುಣಸೆಹಣ್ಣು ಕಪ್ಪಾಗಿ ಹಾಳಾಗದಂತೆ ಕಾಪಾಡಲು ಹೀಗೆ ಮಾಡಿ ಇಡಿ!
Related Stories
Recommended image1
ಹಬ್ಬದ ಸಂಭ್ರಮದಲ್ಲಿದ್ದ 17 ವರ್ಷದ ಬಾಲಕನಿಗೆ ಹೃದಯಾಘಾತ; ದುರಂತ ಸಾವು!
Recommended image2
10ಕಿ.ಮೀ ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved