ಕಳೆದ ಎರಡು ವರ್ಷಗಳಲ್ಲಿ, ಬಿಎಂಟಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಒತ್ತುವರಿಯಾಗಿದ್ದ 165 ಎಕರೆ ಭೂಮಿಯನ್ನು ಮರುವಶಕ್ಕೆ ಪಡೆದಿದೆ. ಪೊಲೀಸ್ ಮತ್ತು ಕಂದಾಯ ಇಲಾಖೆಗಳ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದೆಯೂ ಈ ಕ್ರಮ ಮುಂದುವರಿಯಲಿದೆ.

ಬೆಂಗಳೂರು: ಕಳೆದೆರಡು ವರ್ಷಗಳಲ್ಲಿ ಬಿಎಂಟಿಸಿಯು ವಿಶೇಷ ಕಾರ್ಯಾಚರಣೆ ನಡೆಸಿ ನಿಗಮಕ್ಕೆ ಸೇರಿದ 165 ಎಕರೆ ಭೂಮಿಯನ್ನು ಒತ್ತುವರಿದಾರರಿಂದ ತೆರವು ಮಾಡಿ ಮರುವಶಕ್ಕೆ ಪಡೆದಿದೆ. ಬಿಎಂಟಿಸಿಯು ತನ್ನ ಅಧೀನದಲ್ಲಿರುವ ಸ್ಥಿರಾಸ್ತಿಗಳನ್ನು ಸಂರಕ್ಷಿಸಲು ಮತ್ತು ಅಕ್ರಮ ಒತ್ತುವರಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಕಳೆದೆರಡು ವರ್ಷಗಳಲ್ಲಿ ಪೊಲೀಸ್‌ ಮತ್ತು ಕಂದಾಯ ಇಲಾಖೆ ಸಹಕಾರದೊಂದಿಗೆ ಬಿಎಂಟಿಸಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ 165 ಎಕರೆ ಭೂಮಿಯನ್ನು ಮರುವಶಕ್ಕೆ ಪಡೆದಿದೆ.

40 ಜನರ ವಿರುದ್ಧ ಕಾನೂನು ಕ್ರಮ

ನಿಗಮಕ್ಕೆ ಸೇರಿದ ದಾಖಲೆಗಳು, ಕಂದಾಯ ದಾಖಲೆಗಳು ಮತ್ತು ಸ್ಥಳ ಪರಿಶೀಲನೆ ಆಧಾರದಲ್ಲಿ ಒತ್ತುವರಿ ಗುರುತಿಸಿ ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ, ನಿಗಮದ ಭೂಮಿ ಒತ್ತುವರಿ ಮಾಡಿಕೊಂಡಿದ್ದಕ್ಕೆ ಒಟ್ಟು 10 ಪ್ರಕರಣಗಳನ್ನು ದಾಖಲಿಸಲಾಗಿದ್ದು, 40 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ

ಎಲ್ಲೆಲ್ಲಿ ಭೂಮಿ ವಶಕ್ಕೆ?

ಮಂಡೂರು ಬಳಿಯ ಹಂಚರಹಳ್ಳಿ, ದಾಸನಪುರದ ಹುಚ್ಚನಪಾಳ್ಯ, ಹೊಸಕೋಟೆಯ ಹಿರಂಡಹಳ್ಳಿ, ಹೆಸರಘಟ್ಟದ ತೋಟಗೆರೆ, ಭೈರತಿ ಹಾಗೂ ಕಣ್ಣೂರು ಸೇರಿದಂತೆ ಇನ್ನಿತರ ಕಡೆಗಳಲ್ಲಾಗಿದ್ದ ಬಿಎಂಟಿಸಿ ಆಸ್ತಿಯ ಒತ್ತುವರಿ ತೆರವು ಮಾಡಲಾಗಿದೆ. ಮುಂದೆಯೂ ಬಿಎಂಟಿಸಿ ಆಸ್ತಿ ಒತ್ತುವರಿ ತಡೆಗೆ ಹಾಗೂ ಈಗಾಗಲೇ ಆಗಿರುವ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳಲು ನಿಗಮ ಮುಂದಾಗಿದೆ ಎಂದು ನಿಗಮ ತಿಳಿಸಿದೆ.

ಇದನ್ನೂ ಓದಿ: HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌