- Home
- Entertainment
- Movie Reviews
- ಇದು ಕನ್ನಡದ ಆಕ್ಷನ್ & ಸಸ್ಪೆನ್ಸ್ ಸಿನ್ಮಾ; ವಿಚಿತ್ರ ಸುಳಿವು, ಸರಣಿ ಕೊ*ಲೆಯ ಚಲನಚಿತ್ರ
ಇದು ಕನ್ನಡದ ಆಕ್ಷನ್ & ಸಸ್ಪೆನ್ಸ್ ಸಿನ್ಮಾ; ವಿಚಿತ್ರ ಸುಳಿವು, ಸರಣಿ ಕೊ*ಲೆಯ ಚಲನಚಿತ್ರ
ಇದೊಂದು ರೋಚಕ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಕಥಾನಾಯಕ ಇನ್‌ಸ್ಪೆಕ್ಟರ್ ಸರಣಿ ಕೊ*ಲೆಗಳ ರಹಸ್ಯವನ್ನು ವಿಚಿತ್ರ ಸುಳಿವುಗಳ ಮೂಲಕ ಹೇಗೆ ಭೇದಿಸುತ್ತಾನೆ ಎಂಬುದೇ ಕಥಾವಸ್ತು. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದು ಕನ್ನಡದ ಸಿನಿಮಾ
ಕೆಲವೊಮ್ಮೆ ಅದ್ಭುತ ಕಥೆಯ ಸಿನಿಮಾಗಳು ಥಿಯೇಟರ್‌ಗೆ ಯಾವಾಗ ಬಂದು ಹೋಯ್ತು ಅನ್ನೋದೇ ಗೊತ್ತಾಗಲ್ಲ. ಮನೆಯಲ್ಲಿ ಕುಳಿತು OTT ಆಪ್ ತೆರೆದು ಸಿನಿಮಾ ನೋಡಿದಾಗ ಇಂತಹ ಫಿಲಂ ಥಿಯೇಟರ್‌ನಲ್ಲಿಯೇ ನೋಡಬೇಕಿತ್ತು ಎಂದು ಅನ್ನಿಸುತ್ತದೆ. ಈ ಚಿತ್ರ 20ನೇ ಫೆಬ್ರವರಿ 2026ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. '
ವಿಭಿನ್ನ ಕೊ*ಲೆ ಮತ್ತು ವಿಚಿತ್ರ ಸುಳಿವು
ಶಿವಮೊಗ್ಗ ನೆಲೆಸಿರುವ ಪೊಲೀಸ್ ಅಧಿಕಾರಿಯೊಬ್ಬ ಸಾಲು ಸಾಲು ಕೊ*ಲೆ ಪ್ರಕರಣಗಳನ್ನು ಭೇದಿಸುವಲ್ಲಿ ನಿರತನಾಗಿರುತ್ತಾನೆ. ಪ್ರತಿಯೊಂದು ಕೊ*ಲೆಯೂ ವಿಭಿನ್ನವಾಗಿ ನಡೆಯುತ್ತಿರುತ್ತದೆ. ಹಾಗೆಯೇ ಪ್ರತಿಯೊಂದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗೆ ವಿಚಿತ್ರವಾದ ಸುಳಿವು ನೀಡುತ್ತದೆ. ಈ ಸುಳಿವುಗಳು ಚಿತ್ರದ ಕಥೆಗೆ ರೋಚಕ ತಿರುವುಗಳನ್ನು ನೀಡುತ್ತದೆ. ಹಾಗಾದ್ರೆ ಈ ಚಿತ್ರದ ಹೆಸರು ಏನು ಎಂದು ನೋಡೋಣ ಬನ್ನಿ.
ಮುಂದುವರಿದ ಸಿನಿಮಾ
ಕನ್ನಡದ ಚಿನ್ನಾರಿ ಮುತ್ತ ಖ್ಯಾತಿನ ನಟ ವಿಜಯ ರಾಘವೇಂದ್ರ ನಟನೆಯ Second Case of Seetharam ಸಿನಿಮಾ ಇದೇ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಇದು Seetharam Benoy Case No. 18 ಸಿನಿಮಾದ ಮುಂದುವರಿದ ಭಾಗವಾಗಿದೆ. ಈ ಸಿನಿಮಾದ 2021ರಲ್ಲಿ ಬಿಡುಗಡೆಯಾಗಿತ್ತು. ಇನ್‌ಸ್ಪೆಕ್ಟರ್ ಸೀತಾರಾಮ್ ಎದುರಿಸುವ ಮತ್ತು ಆತ ಹೇಗೆ ತನಿಖೆ ನಡೆಸುತ್ತಾನೆ ಎಂಬುವುದೇ ಸಿನಿಮಾದ ಕಥೆಯಾಗಿದೆ. ಹಾವೇರಿಯಿಂದ ಆನೆಗದ್ದೆ ಎಂಬ ಗ್ರಾಮದಲ್ಲಿ ಸಿನಿಮಾ ಆರಂಭವಾಗುತ್ತದೆ.
ಸೀತಾರಾಮ್ ಜಾಣತನ
ಇನ್‌ಸ್ಪೆಕ್ಟರ್ ಸೀತಾರಾಮ್ ಎಲ್ಲಾ ವಿಚಿತ್ರ ಮತ್ತು ನಿಗೂಢ ಪ್ರಕರಣಗಳನ್ನು ಹೇಗೆ ಭೇದಿಸುತ್ತಾನೆ? ಕೊ*ಲೆಗಾರ ಒಬ್ಬನೆನಾ ಅಥವಾ ಬೇರೆ ಬೇರೆನಾ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಮೊದಲ ಭಾಗದಲ್ಲಿ ಸೀತಾರಾಮ್ ಓರ್ವ ನಿಷ್ಠಾವಂತ ಎಂದು ತೋರಿಸಲಾಗಿತ್ತು. ಮುಂದುವರಿದ ಸಿನಿಮಾದಲ್ಲಿ ಸೀತಾರಾಮ್ ಜಾಣತನವನ್ನು ವೀಕ್ಷಿಸಬಹುದು.
ಭಾನುವಾರ ಫ್ರೀಯಾಗಿದ್ರೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ನೋಡಿ
ದೇವಿ ಪ್ರಸಾದ್ ಶೆಟ್ಟಿ ಕಥೆ ಬರೆದು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಸಾಗರ್ ಪುರಾಣಿಕ್, ಉಷಾ ಭಂಡಾರಿ ಸೇರಿದಂಯೆ ಹಲವು ಕಲಾವಿದರ ತಂಡವನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ತೋರಿಸಿರುವ ಆನೆಗದ್ದೆ ಎಂಬ ಗ್ರಾಮ ಸಂಪೂರ್ಣ ಕಾಲ್ಪನಿಕವಾದದ್ದು, ತೆರೆಮೇಲೆ ಅದ್ಭುತವಾಗಿ ಮೂಡಿ ಬಂದಿದೆ. ಈ ಭಾನುವಾರ ಫ್ರೀಯಾಗಿದ್ರೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

