Published : Aug 19, 2026, 05:17 AM ISTUpdated : Aug 19, 2026, 11:47 PM IST

Karnataka Latest News Live: ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ - ಅನುಪಮಾ ಗೌಡ ವಿಶೇಷ ಸಂದರ್ಶನ

ಸಾರಾಂಶ

ಹುಬ್ಬಳ್ಳಿ-ಧಾರವಾಡ: ನಗರದಲ್ಲಿ ಆ. 26ರಂದು ನಡೆಯುವ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಡೆಯುವ ಸಾಮೂಹಿಕ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆ ನಿಷೇಧಿಸಬೇಕೆಂದು ಹು-ಧಾ ಅಂಜುಮನ್ ಸಂಸ್ಥೆಗಳ ವತಿಯಿಂದ ಮಂಗಳವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈದ್ ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಇತರ ಸಂಗೀತ ವಾದ್ಯಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಜು. 31ರಂದು ಸಭೆ ನಡೆಸಿ ಇಂತಹ ನಿರ್ಣಯ ಕೈಗೊಳ್ಳಲಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಚ್ಚುವುದರಿಂದ ರೋಗಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಸೌಂಡ್‌ ಸಿಸ್ಟಮ್‌ ಬಳಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಈ ವೇಳೆ ಅಂಜುಮನ್-ಏ-ಇಸ್ಲಾಂ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಉಪಾಧ್ಯಕ್ಷ ಬಾಷಾಸಾಬ್ ಅತ್ತಾರ, ಗೌರವ ಕಾರ್ಯದರ್ಶಿ ಬಶೀರ್ ಅಹ್ಮದ್ ಹಳ್ಳೂರ, ಸಹ ಕಾರ್ಯದರ್ಶಿ ರಫೀಕ್ ಬಂಕಾಪುರ, ಶಿಕ್ಷಣ ಮಂಡಳಿ ಸದಸ್ಯರಾದ ಇಲಿಯಾಸ್ ಮನಿಯಾರ್, ನವೀದ್ ಮುಲ್ಲಾ, ಬಶೀರ್ ಗುಡಮಾಲ್, ವಸೀಂ ಮೊಮಿನ್, ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ಮುದಸ್ಸರ್ ಖೋಜೆ, ಧಾರವಾಡ ಅಂಜುಮನ್ ಸಂಸ್ಥೆಯ ಬಶೀರ್ ಅಹ್ಮದ್ ಜಾಗಿರದಾರ, ಯಾಸೀನ್ ಹಾವೇರಪೇಟ, ರಫೀಕ್ ಶಿರಹಟ್ಟಿ, ಖೈರುದ್ದೀನ್ ಶೇಖ್, ಶಮಶುದ್ಧೀನ್ ಗಿಡದೂರ ಸೇರಿ ಹಲವರಿದ್ದರು.

11:47 PM (IST) Aug 19

ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ - ಅನುಪಮಾ ಗೌಡ ವಿಶೇಷ ಸಂದರ್ಶನ

ನಾನು ಹೋಸ್ಟ್‌ ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.

Read Full Story

10:57 PM (IST) Aug 19

ಶಿವರಾಜ್‌ಕುಮಾರ್ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್; ಈ ಪ್ಯಾನ್ ಇಂಡಿಯಾ ಸಿನಿಮಾದ ಸ್ಪೆಷಾಲಿಟಿ ಏನ್ ಗೊತ್ತಾ?

'ಕೂರ್ಮಾವತಾರ್' ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ದಂಡೇ ಇರಲಿದ್ದು, ಶಿವರಾಜ್‌ಕುಮಾರ್ ಜೊತೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್‌ಕುಮಾರ್, ಸಾಯಿ ಕುಮಾರ್ ಹೀಗೆ ದೊಡ್ಡ ತಾರಾಬಳಗ ಇದೆ.

Read Full Story

10:38 PM (IST) Aug 19

ಐಪಿಎಲ್‌ ಫೈನಲ್‌ ಬಳಿಕ ಬೆಂಗಳೂರಿಗೆ ತಪ್ಪಿದ ಮತ್ತೊಂದು ಪ್ರಮುಖ ಟೂರ್ನಿಯ ಫೈನಲ್‌!

ಪ್ರತಿಷ್ಠಿತ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

Read Full Story

10:32 PM (IST) Aug 19

Cars - 6 ಏರ್‌ಬ್ಯಾಗ್‌, ಭರ್ಜರಿ ಮೈಲೇಜ್‌, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌! ಆದರೆ ಇದರ ಬೆಲೆ ಕೇಳಿದ್ರೆ ನೀವು ನಂಬಲ್ಲ!

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ, ಗೇರ್ ಬದಲಿಸುವ ಕಿರಿಕಿರಿಯಿಲ್ಲದ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ತೀವ್ರಗೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಸಂಸ್ಥೆಗಳು ಭಾರತೀಯ ಕಾರು ಪ್ರಿಯರಿಗಾಗಿಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ಪರಿಚಯಿಸಿವೆ.

Read Full Story

10:18 PM (IST) Aug 19

ಹೆತ್ತ ಕರುಳನ್ನೇ ಕತ್ತು ಹಿಸುಕಿ ಕೊಂದ ತಾಯಿ.. ಪ್ರೀತಿಸಿ ಮದ್ವೆ ಆಗಿದ್ದ ಜೋಡಿಗೆ ಆಗಿದ್ದೇನು?

ಹಾಸನದ ಆಲೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವಿನ ಕತ್ತು ಹಿಸುಕಿ ಜೀವ ತೆಗೆದಿದ್ದಾಳೆ. ನಂತರ ತಾನೂ ಸಾವಿಗೆ ಶರಣಾಗಿದ್ದಾಳೆ. ಕಾರಣ ಮಾತ್ರ ನಿಗೂಢವಾಗಿದೆ.

Read Full Story

10:00 PM (IST) Aug 19

ಪವಿತ್ರಾ ಗೌಡಗೆ ದೊಡ್ಡ ಆಘಾತ - ಮಾಜಿ ಪತಿ ಸಂಜಯ್ ಸಿಂಗ್ ನಿಧನ

ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಮತ್ತೊಂದು ಆಘಾತ ಆಗಿದೆ. ಅವರ ಮಾಜಿ ಪತಿ ಸಂಜಯ್ ಸಿಂಗ್ ಏಳು ತಿಂಗಳ ಹಿಂದೆಯೇ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Read Full Story

09:28 PM (IST) Aug 19

‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್‌ ಇರುತ್ತವೆ?’ - ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ವಿನಯ್ ಗೌಡ ಎಡವಟ್ಟು? ಭರ್ಜರಿ ಟ್ರೋಲ್

‘ಅಗ್ನಿಪರೀಕ್ಷೆ’ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್‌ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ.

Read Full Story

09:15 PM (IST) Aug 19

ಡಾ. ವಿಷ್ಣುವರ್ಧನ್ 'ಅಮೃತ ಮಹೋತ್ಸವ' ಅಧಿಕೃತ ಲೋಗೋ ಅನಾವರಣ; 'ಈವೆಂಟ್' ಯಾವಾಗ, ಎಲ್ಲಿ?

ನಿರ್ದೇಶಕ ಡಾ.ರಾಜೇಂದ್ರ ಸಿಂಗ್ ಬಾಬು ಅವರು, ಡಾ. ವಿಷ್ಣುವರ್ಧನ್ ಅವರ ನೆನಪುಗಳನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರೊಂದಿಗೆ ಕೆಲಸ ಮಾಡಿದ ಎಲ್ಲ ನಿರ್ದೇಶಕರು, ನಟ-ನಟಿಯರು, ನಿರ್ಮಾಪಕರು ಹಾಗೂ ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

Read Full Story

09:06 PM (IST) Aug 19

‘ಲಕ್ಷ್ಮೀ ನಿವಾಸ’ ಖ್ಯಾತಿಯ ಮಾನಸ ಮನೋಹರ್ ಮಗನಿಗೆ ನಾಮಕರಣ - ಆ ಹೆಸರಿನಲ್ಲೇ ಅಡಗಿದೆ ಅಮ್ಮ-ಅಪ್ಪನ ಪ್ರೀತಿ!

Manasa Manohar Son: ಕನ್ನಡ ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ.

Read Full Story

08:49 PM (IST) Aug 19

ಬೆಂಗಳೂರಲ್ಲಿ ICU ರೋಗಿಗಳಿಗೆ ನಕಲಿ ಔ‍ಷಧಿ? 4.91 ಕೋಟಿ ರೂ. ಮೌಲ್ಯದ ಫೇಕ್ ಡ್ರಗ್ಸ್ ಜಪ್ತಿ!

ಬೆಂಗಳೂರಿನ ಬಿಡದಿಯಲ್ಲಿ 4.91 ಕೋಟಿ ರೂ. ಮೌಲ್ಯದ ಬೃಹತ್ ನಕಲಿ ಔಷಧಿ ಜಾಲ ಪತ್ತೆಯಾಗಿದ್ದು, ಐಸಿಯು ರೋಗಿಗಳಿಗೆ ನೀಡುವ ಔಷಧಿಗಳನ್ನೂ ನಕಲಿ ಲೇಬಲ್‌ನಡಿ ಮಾರಾಟ ಮಾಡುತ್ತಿರುವುದು ಬಯಲಾಗಿದೆ.

Read Full Story

08:37 PM (IST) Aug 19

Viral - ಪುರಾತನ ಮನುಷ್ಯರ ‘ಡಿನ್ನರ್ ಮೆನು’ ನೋಡಿ ವಿಜ್ಞಾನಿಗಳೇ ಕಂಗಾಲು! '3,000 ಮೂಳೆಗಳು' ಬಯಲು ಮಾಡಿದ ರಹಸ್ಯ!

ಇಸ್ರೇಲ್‌ನ ಕಾರ್ಮೆಲ್ ಪರ್ವತದ ಇಳಿಜಾರಿನಲ್ಲಿರುವ ಒಂದು ಪ್ರಾಚೀನ ಗುಹೆಯಲ್ಲಿ ಪತ್ತೆಯಾಗಿರುವ ಸರೀಸೃಪಗಳ ಮೂಳೆಗಳು ವಿಜ್ಞಾನಿಗಳನ್ನು ನಿಜಕ್ಕೂ ಕಂಗಾಲಾಗಿಸಿವೆ. ಸುಮಾರು 11,000 ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರು ಬರೀ ದೊಡ್ಡ ಪ್ರಾಣಿಗಳನ್ನು ಮಾತ್ರವಲ್ಲ, ಇವುಗಳನ್ನು ಆಹಾರವಾಗಿಸಿಕೊಂಡಿದ್ದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

08:07 PM (IST) Aug 19

ಕಿರಿಯ ನಟನಿಗೆ ‘ಸರ್’ ಎಂದ ಶಿವಣ್ಣ - ‘ನಿಮ್ಮ ಸ್ಥಾನವೇ ಬೇರೆ’ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಿಗರು

Shivarajkumar Viral Video: ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ.

Read Full Story

08:00 PM (IST) Aug 19

ಬೈರಮಂಗಲದ ವೃಷಾಭವತಿ ಸೇತುವೆಯ ಕೆಳಗೆ ಕಂತೆ ಕಂತೆ 500, 100ರ ನೋಟು ಪತ್ತೆ, ವೈರಲ್‌ ವಿಡಿಯೋದ ಅಸಲಿ ಸತ್ಯವೇನು?

ಬೈರಮಂಗಲದ ವೃಷಭಾವತಿ ನದಿ ಸೇತುವೆ ಕೆಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿ ಜನರಲ್ಲಿ ಕುತೂಹಲ ಮೂಡಿಸಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಅವು 'ಶಾಲಾ ಪ್ರಾಜೆಕ್ಟ್' ಉದ್ದೇಶಕ್ಕಾಗಿ ಬಳಸುವ ನಕಲಿ ನೋಟುಗಳೆಂದು ತಿಳಿದುಬಂದಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Read Full Story

07:49 PM (IST) Aug 19

'ನನ್ನ ಬದುಕನ್ನೇ ಬದಲಿಸಿದರು..' ಕೊಹ್ಲಿ ಬಗ್ಗೆ ಮುತ್ತಿನಂಥ ಮಾತು ಹೇಳಿದ ಪಿವಿ ಸಿಂಧು

ಆರ್‍‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಕಿಂಗ್ ವಿರಾಟ್ ಕೊಹ್ಲಿಯ ಸಹಾಯವನ್ನು ನೆನೆದಿದ್ದಾರೆ. ಕೊಹ್ಲಿ ಬಗ್ಗೆ ಅದೆಂಥ ಗೌರವ ಇಟ್ಟುಕೊಂಡಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

07:47 PM (IST) Aug 19

ಗ್ಲಾಮರ್‌ನಿಂದ ಆಧ್ಯಾತ್ಮಿಕತೆಯತ್ತ - ಕಾಮಾಕ್ಯ ದೇವಿ ದರ್ಶನ ಪಡೆದ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ!

ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿವೇದಿತಾ ಗೌಡ ಇದೀಗ ಆಧ್ಯಾತ್ಮಿಕ ಪ್ರವಾಸವೊಂದರ ಮೂಲಕ ಗಮನ ಸೆಳೆದಿದ್ದಾರೆ. ಈ ಆಧ್ಯಾತ್ಮಿಕ ಪಯಣದ ಅನುಭವವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Read Full Story

07:34 PM (IST) Aug 19

Viral; ತಮ್ಮ ಆಸೆ ಬದಿಗಿಟ್ಟು ಮಗನಿಗಾಗಿ ಬದುಕಿದ ಹೆತ್ತವರು; ಕೊನೆಗೆ ಮಗನಿಂದ ಅವರಿಗೆ ಸಿಕ್ಕಿದ್ದೇನು? ಕಣ್ಣೀರಾಗಿಸುವ ಕಥೆ!

ಕಂಟೆಂಟ್ ಕ್ರಿಯೇಟರ್ ಅಜಯ್ ಅಮರವಂಶಿ, ತಮ್ಮ ಪೋಷಕರ ತ್ಯಾಗಕ್ಕೆ ಕೃತಜ್ಞತೆಯಾಗಿ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಲೇಖನವು ಪೋಷಕರ ಭಾವುಕ ಪ್ರತಿಕ್ರಿಯೆ, ಮಗನ ಕೃತಜ್ಞತಾ ಭಾವ ಮತ್ತು ಈ ಹೃದಯಸ್ಪರ್ಶಿ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಪ್ರಶಂಸೆಯನ್ನು ವಿವರಿಸುತ್ತದೆ.

Read Full Story

07:22 PM (IST) Aug 19

'17 ಕಿ.ಮೀ ಪ್ರಯಾಣಕ್ಕೆ 2 ಗಂಟೆ..' ಬೆಂಗಳೂರು ಟ್ರಾಫಿಕ್‌ಗೆ ಕಂಗಾಲಾದ ಎಐ ಸ್ಟಾರ್ಟ್‌ಅಪ್‌ ಸಂಸ್ಥಾಪಕ!

ಉದ್ಯಮಿಯೊಬ್ಬರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಳಗ್ಗೆ 10:15ಕ್ಕೆ ಕಚೇರಿಗಳು ಖಾಲಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಸಾರಿಗೆ ಕಿರಿಕಿರಿಯು ಉದ್ಯೋಗಿಗಳ ಶಕ್ತಿ ಮತ್ತು ಉತ್ಪಾದಕತೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Read Full Story

07:01 PM (IST) Aug 19

ಮುಡಾ ಕೇಸ್‌ಗೆ ಟ್ವಿಸ್ಟ್! 1,100 ನಿವೇಶನಗಳ ಹಂಚಿಕೆ ರದ್ದು! ಸರ್ಕಾರಕ್ಕೆ 2 000 ಕೋಟಿ ಆಸ್ತಿ ಉಳಿಸಿದ ಯತೀಂದ್ರ

ಮುಡಾ 50:50 ಹಗರಣದಲ್ಲಿ ನಿಯಮ ಉಲ್ಲಂಘಿಸಿ ಹಂಚಿಕೆಯಾಗಿದ್ದ 1,100 ನಿವೇಶನಗಳನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ರದ್ದುಪಡಿಸಿದ್ದು, ಈ ಮೂಲಕ ಸರ್ಕಾರಕ್ಕೆ 2 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಿದ್ದಾರೆ. ಈಗಾಗಲೇ ನೋಂದಣಿಯಾಗಿರುವ ಕ್ರಯಪತ್ರಗಳನ್ನು ರದ್ದುಗೊಳಿಸಲು ಕಾನೂನು ಕ್ರಮ ಜರುಗಿಸುವಂತೆ ಹಾಗೂ ಹೊಸದಾಗಿ ಖಾತಾ ಮಾಡಿಕೊಡುವುದನ್ನು ತಕ್ಷಣವೇ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Read Full Story

06:50 PM (IST) Aug 19

ನೀರಿನಲ್ಲೇ ಚಿತ್ರೀಕರಣ ಮಾಡಿ ‘ಅಣ್ಣಯ್ಯ’ ತಂಡ ಪಟ್ಟ ಕಷ್ಟ ಎಷ್ಟು? - ಮಾರಿಗುಡಿ ಶಿವು ಪೋಸ್ಟ್ ವೈರಲ್

‘ಅಣ್ಣಯ್ಯ’ ಧಾರಾವಾಹಿ ತನ್ನ ಭಾವನಾತ್ಮಕ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ತಂಗಿಯರಿಗಾಗಿ ಎಲ್ಲವನ್ನೂ ಮಾಡುವ ಅಣ್ಣನ ಪಾತ್ರ ಹಾಗೂ ಅಣ್ಣ-ತಂಗಿಯರ ನಡುವಿನ ಬಾಂಧವ್ಯ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.

Read Full Story

06:30 PM (IST) Aug 19

Viral - ಪ್ರವಾಸದಲ್ಲಿ ಹುಟ್ಟಿದ ಪ್ರೀತಿ, ಮದುವೆ, ಮಗು; ಆದರೆ ಆ ದಂಪತಿಯ ಬಾಳಲ್ಲಿ ನಡೆದ ಘಟನೆ ಕೇಳಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ!

ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಮಹಿಳೆ, ತಮಿಳುನಾಡಿನ ಕಾರು ಚಾಲಕ ರಬೀಕ್‌ರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬದ ವಿರೋಧದ ನಡುವೆ ಒಂದಾದ ಈ ದಂಪತಿಗೆ ಮಗಳಿದ್ದಾಳೆ. ಆದರೆ ಮುಂದೆ ಆದ ಘಟನೆ ಕಣ್ಣಲ್ಲಿ ನೀರು ತರಸುತ್ತದೆ.

Read Full Story

06:13 PM (IST) Aug 19

‘ಬ್ರಿಡ್ಜರ್ಟನ್ ಮೀಟ್ಸ್ ಕರ್ನಾಟಕ’ - ನಟ ದುನಿಯಾ ವಿಜಯ್​ ಪುತ್ರಿ ಮೋನಿಷಾ ‘ಸೌತ್ ಇಂಡಿಯನ್ ಡ್ರೀಮ್’ ಲುಕ್ ವೈರಲ್!

‘ಸೌತ್ ಇಂಡಿಯನ್ ಡ್ರೀಮ್’ ಎಂಬ ಕಾನ್ಸೆಪ್ಟ್‌ನಲ್ಲಿ ಸಿದ್ಧಪಡಿಸಿಕೊಂಡಿರುವ ತಮ್ಮ ಲುಕ್‌ನ ಹಿಂದಿನ ಕಥೆಯನ್ನು ಮೋನಿಷಾ ಹಂಚಿಕೊಂಡಿದ್ದಾರೆ. ತಮ್ಮ ಈ ವಿಶೇಷ ಲುಕ್‌ಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story

05:54 PM (IST) Aug 19

ಕೇರಳ ಟು ನೇಪಾಳ! ಒಂದೇ ಚಕ್ರದ ಸೈಕಲ್‌ ತುಳಿದು 11,00 KM ಪ್ರಯಾಣ.. ಕಾರಣ ಗೊತ್ತಾದ್ರೆ ಸೆಲ್ಯೂಟ್ ಹೇಳ್ತೀರಾ!

ಇಲ್ಲೊಬ್ಬ ಬೈಕ್ ಸ್ಟಂಟರ್ ಒಂದೇ ಚಕ್ರದ ಸೈಕಲ್ ತುಳಿದು ಕೇರಳದಿಂದ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾನೆ. ಈತನ ಈ ನಿರ್ಧಾರದ ಹಿಂದೆ ಒಂದು ಬಲವಾದ ಉದ್ದೇಶ ಇದೆ. ಅದನ್ನು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ..

Read Full Story

05:33 PM (IST) Aug 19

ರಕ್ತಸಿಕ್ತ ಲುಕ್‌ನಲ್ಲಿ ದೊಡ್ಮನೆ ಕುಡಿ - ಕೈಯಲ್ಲಿ ಲಾಂಗ್, ಹೆಗಲ ಮೇಲೆ ಮೋನಿಷಾ - ‘ಸಿಟಿಲೈಟ್ಸ್’ ಮೇಕಿಂಗ್ ವಿಡಿಯೋ ವೈರಲ್

City Lights Kannada Movie: ದುನಿಯಾ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Read Full Story

05:14 PM (IST) Aug 19

‘ಹೌದು, ನಾನು ಹೆಮ್ಮೆಯ ಅಂಧಭಕ್ತೆ’ - ‘ಸೂರ್ಯವಂಶ’ ನಟಿಯ ಖಡಕ್ ಹೇಳಿಕೆ, ವೈರಲ್ ಆಯ್ತು ಇಶಾ ಕೊಪ್ಪಿಕರ್ ವಿಡಿಯೋ

ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಒಂದು ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಯಾವುದೇ ಮುಜುಗರವಿಲ್ಲದೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರುವ ನಟಿ..

Read Full Story

04:55 PM (IST) Aug 19

‘ಮಾತನಾಡೋದು ಸುಲಭ, ಮಾಡೋದು ಕಷ್ಟ’ - 'ರಾಧಾ ಮಿಸ್‌' ಶ್ವೇತಾ ಮಾತಿಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆ

ಕಿರುತೆರೆಯ ಮೂಲಕ ಗುರುತಿಸಿಕೊಂಡು, ಮಾಡೆಲಿಂಗ್ ಹಾಗೂ ನಟನೆಯಿಂದಲೂ ಗಮನ ಸೆಳೆದಿರುವ ಶ್ವೇತಾ ಪ್ರಸಾದ್ (Shwetha Prasad) ಇದೀಗ ತಮ್ಮ ಒಂದು ಪೋಸ್ಟ್‌ನಿಂದ ಸದ್ದು ಮಾಡುತ್ತಿದ್ದಾರೆ.

Read Full Story

04:51 PM (IST) Aug 19

ರಜೆಯಲ್ಲಿ ರ‍್ಯಾಪಿಡೋ ಓಡಿಸಿದ BBA ವಿದ್ಯಾರ್ಥಿ.. 3 ತಿಂಗಳ ಸಂಪಾದನೆ ಎಷ್ಟು ಗೊತ್ತಾ? ಇಲ್ಲೊಂದು ಪಾಠ ಇದೆ!

ಯಾರು ಎಷ್ಟು ದುಡಿಯುತ್ತಾರೋ ಗೊತ್ತಿಲ್ಲ. ಬೆಂಗಳೂರಲ್ಲಿ ಡೆಲಿವರಿ ಬಾಯ್ಸ್ ಮಾತ್ರ ಸಖತ್ ದುಡ್ಡು ಮಾಡ್ತಾರೆ ಅನ್ನೋರಿಗೇನೂ ಕಮ್ಮಿ ಇಲ್ಲ. ಅಂತವರು ಓದಲೇಬೇಕಾದ ಸ್ಟೋರಿ ಇದು.

Read Full Story

04:45 PM (IST) Aug 19

Kolar, Milk Price - ಪ್ರತಿ ಲೀಟರ್ ಹಾಲಿನ ಬೆಲೆ 10 ರೂಪಾಯಿ ಹೆಚ್ಚಿಸಿ, ರೈತರಿಂದ ಬೃಹತ್ ಪ್ರತಿಭಟನೆ

ಬರಗಾಲ ಮತ್ತು ಮೇವಿನ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಕೋಲಾರದ ರೈತರು, ಹಾಲಿನ ದರವನ್ನು ಲೀಟರ್‌ಗೆ 10 ರೂ. ಹಾಗೂ ಪ್ರೋತ್ಸಾಹಧನವನ್ನು 7 ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಈಗಿನ ದರ ಹಸುಗಳ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಕೆರಳಿಸಿದೆ.
Read Full Story

04:34 PM (IST) Aug 19

ಗಾಲೆ ಟೆಸ್ಟ್ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ WTC ಫೈನಲ್ ಕನಸಿಗೆ ಆನೆಬಲ; ಲಂಕಾ ಸೋಲಿಸಿದ ಭಾರತ ಈಗ ಎಷ್ಟನೇ ಸ್ಥಾನದಲ್ಲಿದೆ?

ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮಾನವ್ ಸುತಾರ್ ಅವರ 10 ವಿಕೆಟ್ ಪ್ರದರ್ಶನದಿಂದ ಗೆಲುವು ಸಾಧ್ಯವಾದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
Read Full Story

04:23 PM (IST) Aug 19

ಜಿಮ್ ಇಲ್ಲ, ಡಯಟ್ ಇಲ್ಲ.. ಯಶ್ ಪತ್ನಿ ರಾಧಿಕಾ ಫಿಟ್ ಆಗಿರಲು ಮಾಡೋ ಈ 3 ಅಭ್ಯಾಸಗಳೇ ಕಾರಣ!

ರಾಧಿಕಾ ಫಿಟ್ ಆಗಿರಲು ಪ್ರತಿದಿನ ಜಿಮ್‌ಗೆ ಹೋಗುವುದಿಲ್ಲ. ಅದೇ ರೀತಿ ಕಠಿಣ ಡಯಟ್ ಅಥವಾ ಕ್ರ್ಯಾಶ್ ಡಯಟ್ ಕೂಡ ಫಾಲೋ ಮಾಡುವುದಿಲ್ಲ. ಬದಲಿಗೆ ಸರಳವಾದ ಕೆಲವು ಅಭ್ಯಾಸಗಳನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಂಡಿದ್ದಾರೆ.

Read Full Story

04:21 PM (IST) Aug 19

ಬಿಗ್ ಬಾಸ್ 'ಅಗ್ನಿ ಪರೀಕ್ಷೆ'ಯಲ್ಲಿ ಸೆಲೆಕ್ಟ್ ಆಗೋರು ಎಷ್ಟು? ವೇಟಿಂಗ್‌ ಲಿಸ್ಟ್‌ನಲ್ಲಿ ಎಷ್ಟು, ಮನೆ ಒಳಗೆ ಹೋಗೋರು ಎಷ್ಟು ಮಂದಿ?

ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆ, ಹೊಸ ಮನೆ, ಹೊಸ ಸ್ಪರ್ಧಿಗಳು ಮತ್ತು ಈ ಸಲ ಅಗ್ನಿಪರೀಕ್ಷೆ ಗೆದ್ದು ಬಂದಿರೋ 'ಖತರ್ನಾಕ್' ಸ್ಪರ್ಧಿಗಳು.. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಮನೆ ರಣರಂಗವಾಗೋದಂತೂ ಗ್ಯಾರಂಟಿ! ಯಾರು ಆ ನಾಲ್ಕು ಜನ? ನಿಮ್ಮ ಫೇವರೆಟ್ ಯಾರು? ವಿವರಗಳಿಗೆ ನೋಡಿ..

Read Full Story

04:10 PM (IST) Aug 19

ಯಾದಗಿರಿಯಲ್ಲಿ ಹೆತ್ತ ತಂದೆಯಿಂದಲೇ ರಾಕ್ಷಸೀ ಕೃತ್ಯ.. ಇಬ್ಬರು ಮಕ್ಕಳನ್ನ ಕಾಲುವೆಗೆ ಎಸೆದು ಜೀವ ತೆಗೆದ ಅಪ್ಪ..

ಗಂಡ ಹೆಂಡತಿ ಜಗಳಲ್ಲಿ ಇಬ್ಬರು ಮಕ್ಕಳು ಬಲಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪಾಪಿ ಅಪ್ಪನೊಬ್ಬ ತನಿಗಿದ್ದ ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳನ್ನು ಹರಿಯುತ್ತಿರುವ ಕಾಲುವೆಗೆ ಎಸೆದಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

03:50 PM (IST) Aug 19

15 ಲಕ್ಷ ಗಿಡ ನೆಡುವ ಗಿನ್ನೆಸ್‌ ದಾಖಲೆ ಮಾಡಲು ಹೋಗಿ 12.5 ಕೋಟಿ ಖರ್ಚು ಮಾಡಿದ ಬಿಡಿಎ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಗಿನ್ನೆಸ್ ವಿಶ್ವ ದಾಖಲೆಗಾಗಿ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಅಭಿಯಾನಕ್ಕೆ ಬರೋಬ್ಬರಿ 12.5 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Read Full Story

02:59 PM (IST) Aug 19

Dasara Elephant 2026 - ಭೀಮನ ಅಭಿಮಾನಿಗಳಿಗೆ ನಿರಾಸೆ; ಅಭಿಮನ್ಯು ಯುಗಾಂತ್ಯ, ಅಂಬಾರಿ ರೇಸ್‌ನಲ್ಲಿರುವ 4 ಪ್ರಮುಖ ಆನೆಗಳು

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿದೆ. ಅಭಿಮನ್ಯು ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಆನೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತಿಮವಾಗಿ ಅಂಬಾರಿ ಹೊರಲಿರುವ ಆನೆಯನ್ನು ತಾಲೀಮಿನ ನಂತರ ಘೋಷಿಸಲಾಗುವುದು.
Read Full Story

02:34 PM (IST) Aug 19

ಪವಿತ್ರಾ ಗೌಡ ನನ್ನ ಮಗಳಿದ್ದಂತೆ, ನೋಡಲಾಗ್ತಿಲ್ಲ- ಜೈಲಿಗೆ ಹೋಗಿ ಬಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಹೇಳಿದ್ದೇನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಪವಿತ್ರಾ ಮಾನಸಿಕವಾಗಿ ಕುಗ್ಗಿದ್ದು, ಅವರ ಸ್ಥಿತಿ ನೋವು ತಂದಿದೆ ಎಂದು ನಾಗಲಕ್ಷ್ಮೀ ಭಾವುಕರಾಗಿ ನುಡಿದರು. ಇದೇ ವೇಳೆ ಅವರು ಜೈಲಿನಲ್ಲಿದ್ದ ಇತರೆ ಮಹಿಳಾ ಕೈದಿಗಳ ಯೋಗಕ್ಷೇಮವನ್ನೂ ವಿಚಾರಿಸಿದರು.
Read Full Story

01:21 PM (IST) Aug 19

ವಾಲ್ಮೀಕಿ ಹಗರಣ; 'ನಮ್ಮ ಸಮುದಾಯ ಗಮನಿಸುತ್ತಿದೆ, ಸುಮ್ನೆ ಬಿಡಲ್ಲ', ನಾಗೇಂದ್ರ ತಿರುಗೇಟು

ವಾಲ್ಮೀಕಿ ನಿಗಮ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ತಾನು ದಲಿತ ಸಮುದಾಯಕ್ಕೆ ಸೇರಿದವನಾದ್ದರಿಂದ ಮನುವಾದಿಗಳು ತನ್ನನ್ನು ಸಹಿಸುತ್ತಿಲ್ಲ ಮತ್ತು ಇದು ತನ್ನ ವಿರುದ್ಧದ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ. ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದು, ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದರೆ ಉತ್ತರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

01:06 PM (IST) Aug 19

Dog Protest - ನಾಯಿ ವೇಷದಲ್ಲಿ ಬಂದು ಅಧಿಕಾರಿಗೆ ದೂರು! ₹40 ಲಕ್ಷದ ಯೋಜನೆ ವಿರುದ್ಧ ವಿಭಿನ್ನ ಪ್ರತಿಭಟನೆ

ಖಾಂಡ್ವಾ ನಗರ ಪಾಲಿಕೆಯ ನಾಯಿ ಸಂತಾನಹರಣ ಯೋಜನೆಯಲ್ಲಿನ ಅವ್ಯವಹಾರಗಳನ್ನು ವಿರೋಧಿಸಿ, ವ್ಯಕ್ತಿಯೊಬ್ಬರು ನಾಯಿಯ ಮುಖವಾಡ ಧರಿಸಿ ಸಾರ್ವಜನಿಕ ಅಹವಾಲು ಸಭೆಗೆ ಹಾಜರಾದರು.
Read Full Story

01:05 PM (IST) Aug 19

ಕನ್ನಡದ ನಟ ಗ್ಲೋಬಲ್ ಸ್ಟಾರ್‌ ಆಗಿದ್ದು ಹೇಗೆ? ಈ ಸೀಕ್ರೆಟ್ ಹಿಂದಿನ 'ಮಹಾಮಂತ್ರ'ದ ಸ್ಟೋರಿ ಇಲ್ಲಿದೆ ನೋಡಿ!

ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನೇನು 7 ದಿನಗಳಷ್ಟೇ ಬಾಕಿ..! ಈ ಸಕ್ಸಸ್ ಸ್ಟೋರಿ ಹಿಂದಿನ ಮಹಾಮಂತ್ರದ ಸೀಕ್ರೆಟ್ ಇಲ್ಲಿದೆ ನೋಡಿ..

Read Full Story

12:10 PM (IST) Aug 19

Toxic Countdown Day 07 - ಟಾಕ್ಸಿಕ್ ಕೌಂಟ್‌ಡೌನ್ 07.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ನಿರೀಕ್ಷೆಗಳೇನು? ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ.

Read Full Story

11:14 AM (IST) Aug 19

Prahlad Meena IPS success story - ರೈಲ್ವೆ ಗ್ಯಾಂಗ್‌ಮನ್ ಆಗಿದ್ದವರು ಐಪಿಎಸ್ ಆದ್ರು!

ಕಡುಬಡತನದಲ್ಲಿ ಹುಟ್ಟಿ ರೈಲ್ವೆ ಗ್ಯಾಂಗ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಪ್ರಹ್ಲಾದ್ ಮೀನಾ, ತಮ್ಮ ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸತತ ವೈಫಲ್ಯಗಳ ನಡುವೆಯೂ ಛಲ ಬಿಡದೆ ಅಧ್ಯಯನ ಮಾಡಿ, ಐಪಿಎಸ್ ಅಧಿಕಾರಿಯಾಗುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story

10:08 AM (IST) Aug 19

25 ವರ್ಷಗಳ ಬಳಿಕ ದಂತ ವೈದ್ಯರ ಸಮ್ಮಿಲನ; 2001ರ ಬ್ಯಾಚ್‌ ವಿದ್ಯಾರ್ಥಿಗಳಿಗೆ ಸನ್ಮಾನ

ಬಾಗಲಕೋಟೆಯ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘದಲ್ಲಿ ಮತ್ತೆ ಒಂದಾದರು. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಬಾಗಲಕೋಟೆಯ ಶೈಕ್ಷಣಿಕ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story

More Trending News