ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ, ಗೇರ್ ಬದಲಿಸುವ ಕಿರಿಕಿರಿಯಿಲ್ಲದ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ತೀವ್ರಗೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಾಹನ ತಯಾರಕ ಸಂಸ್ಥೆಗಳು ಭಾರತೀಯ ಕಾರು ಪ್ರಿಯರಿಗಾಗಿಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ಪರಿಚಯಿಸಿವೆ.
ದಿನದಿಂದ ದಿನಕ್ಕೆ ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ (ಟ್ರಾಫಿಕ್) ಹೆಚ್ಚಾಗುತ್ತಿದ್ದು, ಗೇರ್ ಬದಲಿಸುವ ಕಿರಿಕಿರಿಯಿಲ್ಲದೆ ಸುಲಭವಾಗಿ ಚಾಲನೆ ಮಾಡಬಹುದಾದ ಆಟೋಮ್ಯಾಟಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರಗೊಂಡಿದೆ. ಭಾರತೀಯ ಕಾರು ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ವಾಹನ ತಯಾರಕ ಸಂಸ್ಥೆಗಳು ₹7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯ ಹಾಗೂ ಮೈಲೇಜ್ ನೀಡುವ 8 ಪ್ರಮುಖ ಆಟೋಮ್ಯಾಟಿಕ್ ಕಾರುಗಳನ್ನು ಪರಿಚಯಿಸಿವೆ.
1. ಮಾರುತಿ ಆಲ್ಟೊ ಕೆ10 AGS (ಬೆಲೆ: ₹4.95 ಲಕ್ಷ)
ಸಣ್ಣ ಮತ್ತು ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚರಿಸಲು ಆಲ್ಟೊ ಕೆ10 ಅತ್ಯಂತ ಸೂಕ್ತ. 1.0-ಲೀಟರ್ K10C ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು, 24.9 ಕಿಮೀ/ಲೀ ಪ್ರಭಾವಶಾಲಿ ಮೈಲೇಜ್ ನೀಡುತ್ತದೆ. ಕ್ಯಾಬಿನ್‌ನಲ್ಲಿ 7-ಇಂಚಿನ ಟಚ್‌ಸ್ಕ್ರೀನ್, ಕೀಲೆಸ್ ಎಂಟ್ರಿ ಹಾಗೂ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ABS ಮತ್ತು ಇಬಿಡಿ ಸೌಲಭ್ಯಗಳಿವೆ.
2. ಮಾರುತಿ ಎಸ್-ಪ್ರೆಸ್ಸೊ AGS (ಬೆಲೆ: ₹5.20 ಲಕ್ಷ)
ಮಿನಿ-SUV ಮಾದರಿಯ ಎತ್ತರದ ಬಾಕ್ಸಿ ವಿನ್ಯಾಸ ಹೊಂದಿರುವ ಎಸ್-ಪ್ರೆಸ್ಸೊ, 180 mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. 1.0-ಲೀಟರ್ ಡ್ಯುಯಲ್‌ಜೆಟ್ ಎಂಜಿನ್ ಹೊಂದಿದ್ದು, ಸುಮಾರು 25.3 ಕಿಮೀ/ಲೀ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಡ್ಯುಯಲ್ ಏರ್‌ಬ್ಯಾಗ್‌ಗಳು, ESP ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಇದರ ಪ್ರಮುಖ ಸುರಕ್ಷತಾ ಅಂಶಗಳು.
3. ಮಾರುತಿ ವ್ಯಾಗನ್ ಆರ್ AGS (ಬೆಲೆ: ₹5.54 ಲಕ್ಷ)
ವಿಶಾಲವಾದ ಕ್ಯಾಬಿನ್ ಮತ್ತು ಹೆಚ್ಚಿನ ಹೆಡ್‌ರೂಮ್ ಬಯಸುವ ಕುಟುಂಬಗಳಿಗೆ ವ್ಯಾಗನ್ ಆರ್ ಹೇಳಿ ಮಾಡಿಸಿದ ಕಾರು. 1.0-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, 24.4 ರಿಂದ 25.1 ಕಿಮೀ/ಲೀ ಮೈಲೇಜ್ ನೀಡುತ್ತದೆ. 6 ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ ದೊಡ್ಡ ಬೂಟ್ ಸ್ಪೇಸ್ ಇದರಲ್ಲಿದೆ.
4. ಮಾರುತಿ ಸೆಲೆರಿಯೊ AGS (ಬೆಲೆ: ₹5.60 ಲಕ್ಷ)
ಆಕರ್ಷಕ 3D ವಿನ್ಯಾಸದ ಸೆಲೆರಿಯೊ, ಭಾರತದಲ್ಲೇ ಅತ್ಯಧಿಕ ಪೆಟ್ರೋಲ್ ಮೈಲೇಜ್ ನೀಡುವ ಆಟೋಮ್ಯಾಟಿಕ್ ಕಾರು ಎನಿಸಿಕೊಂಡಿದೆ. 1.0-ಲೀಟರ್ K10C ಎಂಜಿನ್‌ನೊಂದಿಗೆ ಲಭ್ಯವಿರುವ ಈ ಕಾರು ಬರೋಬ್ಬರಿ 26.68 kmpl ಮೈಲೇಜ್ ನೀಡುತ್ತದೆ. ವಿಶಾಲ ಒಳಾಂಗಣ, ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಹಾಗೂ ಹಿಲ್-ಹೋಲ್ಡ್ ಸೌಲಭ್ಯಗಳನ್ನು ಇದು ಹೊಂದಿದೆ.
5. ಟಾಟಾ ಟಿಯಾಗೊ AMT (ಬೆಲೆ: ₹5.65 ಲಕ್ಷ)
ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಗ್ರಾಹಕರಿಗೆ 4-ಸ್ಟಾರ್ GNCAP ರೇಟಿಂಗ್ ಹೊಂದಿರುವ ಟಿಯಾಗೊ ಸೂಕ್ತ ಆಯ್ಕೆ. 1.2-ಲೀಟರ್ ರೆವೊಟ್ರಾನ್ ಎಂಜಿನ್ ಹೊಂದಿರುವ ಈ ಕಾರು 19.5 ರಿಂದ 20 ಕಿಮೀ/ಲೀ ಮೈಲೇಜ್ ನೀಡುತ್ತದೆ. 8-ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದರ ಪ್ಲಸ್ ಪಾಯಿಂಟ್.
6. ಹುಂಡೈ ಗ್ರ್ಯಾಂಡ್ ಐ10 ನಿಯೋಸ್ AMT (ಬೆಲೆ: ₹6.35 ಲಕ್ಷ)
ಸ್ಪೋರ್ಟಿ ಹಾಗೂ ಯುರೋಪಿಯನ್ ಶೈಲಿಯ ವಿನ್ಯಾಸ ಹೊಂದಿರುವ ಈ ಕಾರು ಪ್ರೀಮಿಯಂ ಅನುಭವ ನೀಡುತ್ತದೆ. 1.2-ಲೀಟರ್ ಕಪ್ಪಾ ಎಂಜಿನ್ ಹೊಂದಿದ್ದು, 20.1 ಕಿಮೀ/ಲೀ ಮೈಲೇಜ್ ನೀಡುತ್ತದೆ. 8-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಚಾರ್ಜರ್, 6 ಏರ್‌ಬ್ಯಾಗ್‌ಗಳು ಮತ್ತು TPMS ಸೌಲಭ್ಯಗಳು ಇದರಲ್ಲವೆ.
7. ನಿಸ್ಸಾನ್ ಮ್ಯಾಗ್ನೈಟ್ EZ-Shift (ಬೆಲೆ: ₹6.60 ಲಕ್ಷ)
ಬೋಲ್ಡ್ SUV ಲುಕ್ ಬಯಸುವವರಿಗೆ 205 mm ಅತ್ಯಧಿಕ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಮ್ಯಾಗ್ನೈಟ್ ಉತ್ತಮ ಆಯ್ಕೆ. 1.0-ಲೀಟರ್ ಎಂಜಿನ್ ಹೊಂದಿರುವ ಈ ಕಾರು 19.7 ಕಿಮೀ/ಲೀ ಮೈಲೇಜ್ ನೀಡುತ್ತದೆ. ವೈರ್‌ಲೆಸ್ ಕಾರ್‌ಪ್ಲೇ, ಟ್ರಾಕ್ಷನ್ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಪ್ರಮುಖ ಸೌಲಭ್ಯಗಳಾಗಿವೆ.
8. ಟಾಟಾ ಪಂಚ್ AMT (ಬೆಲೆ: ₹6.80 ಲಕ್ಷ)
5-ಸ್ಟಾರ್ GNCAP ಸುರಕ್ಷತಾ ರೇಟಿಂಗ್ ಪಡೆದಿರುವ ಅತ್ಯಂತ ಜನಪ್ರಿಯ ಮೈಕ್ರೋ SUV ಪಂಚ್. 1.2-ಲೀಟರ್ ಎಂಜಿನ್ ಹೊಂದಿದ್ದು, 18.8 ಕಿಮೀ/ಲೀ ಮೈಲೇಜ್ ನೀಡುತ್ತದೆ. 90-ಡಿಗ್ರಿ ತೆರೆಯುವ ಬಾಗಿಲುಗಳು, ಕೂಲ್ಡ್ ಗ್ಲೋವ್‌ಬಾಕ್ಸ್ ಹಾಗೂ ಕ್ರೂಸ್ ಕಂಟ್ರೋಲ್ ಸೌಲಭ್ಯಗಳು ಈ ಕಾರಿನಲ್ಲಿದ್ದು, ಸುರಕ್ಷಿತ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.


