ನವದೆಹಲಿ (ಮೇ.1): ನವದೆಹಲಿ: ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಪ್ರಕಟವಾದ ಎರಡು ಹೇಳಿವೆ. ಟುಡೇಸ್ ಚಾಣಕ್ಯ ಹಾಗೂ ನ್ಯೂಸ್ 18 ಸಮೀಕ್ಷೆಯಲ್ಲೂ ಕೂಡ ಬಂಗಾಳದಲ್ಲಿ ಬಿಜೆಪಿ ತನ್ನ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:55 PM (IST) May 01
19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ, ಪತ್ನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಏನಿದು ಪ್ರಕರಣ
10:29 PM (IST) May 01
ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವಿನ ಮರಣೋತ್ತರ ಪರೀಕ್ಷಾ ವರದಿ ಹಾಗೂ ತನಿಖೆ ಬೇರೆ ಕತೆ ಹೇಳುತ್ತಿದೆ.
08:39 PM (IST) May 01
ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ, ಆಪರೇಷನ್ ಥಿಯೇಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಫೋಟೋ ಕ್ಲಿಕ್ ಮಾಡಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯ ಯುವತಿ ಫೋಟೋ ಹರಿದಾಡಿದೆ.
07:11 PM (IST) May 01
07:05 PM (IST) May 01
ಸಾಮಾನ್ಯವಾಗಿ ನಟಿಯರು ತಮ್ಮ ದೇಹದ ಮೇಲಿನ ಸಣ್ಣ ಕಲೆಗಳನ್ನೂ ಮುಚ್ಚಿಡಲು ಮೇಕಪ್ ಮೊರೆ ಹೋಗುತ್ತಾರೆ. ಆದರೆ ರಾಜಶ್ರೀ ಅವರ ಧೈರ್ಯವೇ ಬೇರೆ! ಶಸ್ತ್ರಚಿಕಿತ್ಸೆಯ ನಂತರ ತಮ್ಮ ದೇಹದ ಮೇಲಾದ ಗಾಯದ ಗುರುತುಗಳನ್ನು ಯಾವುದೇ ಸಂಕೋಚವಿಲ್ಲದೆ ಜಗತ್ತಿಗೆ ತೋರಿಸಿದ್ದಾರೆ.
06:42 PM (IST) May 01
ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ, ಮತ ಎಣಿಕಿಗೆ ಕೇವಲ ಮೂರು ದಿನ ಮಾತ್ರ ಬಾಕಿ. ಕೆಲ ಸಮೀಕ್ಷೆಗಳು ವಿಜಯ್ ಪಕ್ಷ ಅಧಿಕಾರಕ್ಕೆ ಬರವು ಸೂಚನೆ ನೀಡಿದ ಬೆನ್ನಲ್ಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
06:25 PM (IST) May 01
ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಪ್ರಮುಖ ಆಕರ್ಷಣೆಯಾಗಿದ್ದರೂ, ಟ್ರೋಲ್‌ಗೆ ಒಳಗಾಗುತ್ತಾರೆ. ವೈರಲ್ ಆದ ವಿಡಿಯೋವೊಂದರಲ್ಲಿ, ಸಿಎಸ್‌ಕೆ ಅಭಿಮಾನಿಯೊಬ್ಬ ಗುಜರಾತ್ ಟೈಟಾನ್ಸ್ ಚಿಯರ್‌ಲೀಡರ್‌ನ ಮೇಕಪ್ ಬಗ್ಗೆ ಕಾಮೆಂಟ್ ಮಾಡಿದಾಗ, ಆಕೆ ಹೇಗೆತಿರುಗೇಟು ನೀಡಿದಳು ನೋಡಿ.
06:25 PM (IST) May 01
ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸ ಇದೆ. ಈ ಹಿಂದೆ ನಟ, ನಿರ್ದೇಶಕ ಎಂ.ಜಿ. ರಾಮಚಂದ್ರನ್, ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯ ಆಳಿದ್ರು. ನಂತರ ಜಯಲಲಿತಾ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿದ್ರು.
05:57 PM (IST) May 01
ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ, ಮೇ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಪ್ರತಿ ತಿಂಗಳು ನಿಮಗೆ ಬರುತ್ತಿದ್ದ ಸ್ಯಾಲರಿ ಕಡಿಮೆಯಾಗಲಿದೆ.
05:56 PM (IST) May 01
04:57 PM (IST) May 01
ಈ ಕಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಮಾಯಾನಗರಿ ಮುಂಬೈವರೆಗೂ ಹಬ್ಬಿದೆ. ಆದಿತ್ಯ ಧರ್ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ವಿರುದ್ಧ ಕೇಸ್ ಹಾಕಿದ್ದಾರೆ. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು "ಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಅವಹೇಳನಕಾರಿ ಮಾತು ಆಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.
04:50 PM (IST) May 01
ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು , ಎಲ್ಲೆಂದರಲ್ಲಿ ಹಾವು ಕಾಣಿಸಿಕೊಳ್ಳುತ್ತಿದೆ. ದಿಢೀರ್ ಹಾವಿನ ಸಂಕಷ್ಟ ಕಾಣಿಸಿಕೊಳ್ಳಲು ಕಾರಣವೇನು?
04:14 PM (IST) May 01
'ಕೇನ್ಸ್‌ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ.
04:10 PM (IST) May 01
ಸ್ಲೋ ಮಾಡಬೇಕಿಲ್ಲ, ಟೋಲ್ ಗೇಟ್ ಇಲ್ಲ, ಭಾರತದ ಮೊದಲ ANPR ಟೋಲ್ ಪ್ಲಾಜಾ ಆರಂಭ, ಎಷ್ಟೇ ವೇಗವಾಗಿ ಸಾಗಿದರೂ ಇಲ್ಲಿ ಆಟೋಮ್ಯಾಟಿಕ್ ಆಗಿ ಟೋಲ್ ಹಣ ಕಡಿತಗೊಳ್ಳಲಿದೆ. ಏನಿದು ಹೊಸ ವ್ಯವಸ್ಥೆ?
03:34 PM (IST) May 01
ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ, ಗಿಲ್ ವಿಕೆಟ್ ಪತನವನ್ನು ಕೊಹ್ಲಿ ಸಂಭ್ರಮಿಸಿದ ಪರಿಯಲ್ಲೇ ರಹಸ್ಯ ಒಂದು ಅಡಗಿತ್ತು. ಇದೀಗ ಗಿಲ್ ಪೋಸ್ಟ್‌ನಿಂದ ಸಾಬೀತಾಗಿದೆ.
02:53 PM (IST) May 01
02:33 PM (IST) May 01
02:10 PM (IST) May 01
'ಧುರಂಧರ್ 2' ಬಿಡುಗಡೆಯಾಗಿ 6 ವಾರಗಳಾದರೂ ಚಿತ್ರಮಂದಿರಗಳು ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಇಷ್ಟು ದೊಡ್ಡ ಸಕ್ಸಸ್ ಬಳಿಕ ಆ ಚಿತ್ರದ ನಿರ್ದೇಶಕರಾದ ಆದಿತ್ಯ ಧರ್ ಅವರು ಸಂಪೂರ್ಣವಾಗಿ ಬದಲಾಗಿಹೋಗಿದ್ದಾರಾ? ಈ ಬಗ್ಗೆ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ಹೇಳಿರೋದೇನು?
12:54 PM (IST) May 01
ಸ್ಟ್ರಾಂಗ್ ರೂಂಗಳನ್ನು ತೆರೆಯುವಲ್ಲಿ ಅಕ್ರಮ ನಡೆದಿದೆ ಎಂದು ಟಿಎಂಸಿ ಸಂಸದೆ ಡೋಲಾ ಸೇನ್ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ನಡೆದುಕೊಂಡಿದೆ ಎಂದು ಅವರು ದೂರಿದ್ದಾರೆ.
12:51 PM (IST) May 01
ಮೇ 1 ರಿಂದ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕ ನಿಷೇಧ, ಸಿಲಿಂಡರ್ ಬುಕ್ಕಿಂಗ್‌ಗೆ ಕಠಿಣ ನಿಯಮಗಳು, ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಂತಹ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
12:08 PM (IST) May 01
09:45 AM (IST) May 01
ಮತ ಎಣಿಕೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಇವಿಎಂಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪಕ್ಷವಾದ ಟಿಎಂಸಿ ಅನುಮಾನಾಸ್ಪದ
09:22 AM (IST) May 01
09:08 AM (IST) May 01
ಅಣ್ವಸ್ತ್ರ ಮಾತುಕತೆಗೆ ಒಪ್ಪದ ಇರಾನ್ ಮೇಲೆ ಚುಟುಕು ಆದರೆ ಭರ್ಜರಿ ದಾಳಿ ನಡೆಸಲು ಅಮೆರಿಕ ಯೋಜಿಸುತ್ತಿದೆ. ಅಧ್ಯಕ್ಷ ಟ್ರಂಪ್ ಈ ದಾಳಿಗೆ ಸಜ್ಜಾಗಿದ್ದು, ಇರಾನ್ ಅನ್ನು ಮಾತುಕತೆಗೆ ಸೆಳೆಯುವ ಉದ್ದೇಶ ಹೊಂದಿದ್ದಾರೆ.
08:54 AM (IST) May 01
Jp Morgan Chase: ಪ್ರತಿಷ್ಠಿತ ಜೆಪಿ ಮೋರ್ಗನ್ ಕಂಪೆನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಲೋರ್ನಾ ಹಜ್ದಿನಿ (Lorna Hajdini) ಅವರ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಲೋರ್ನಾ ಜೊತೆಗೆ ನಡೆಸಿದ ಮೆಸೇಜ್ ಸ್ಕ್ರೀನ್‌ಶಾಟ್ ಕೂಡ ವೈರಲ್ ಆಗ್ತಿದೆ.
08:30 AM (IST) May 01
08:02 AM (IST) May 01
ಮೇ ತಿಂಗಳ ಆರಂಭದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹993 ರಷ್ಟು ಹೆಚ್ಚಿಸಲಾಗಿದೆ, ಇದರಿಂದ ದೆಹಲಿಯಲ್ಲಿ ಅದರ ಬೆಲೆ ₹3,071.50 ಕ್ಕೆ ತಲುಪಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
07:46 AM (IST) May 01
ಪಶ್ಚಿಮ ಬಂಗಾಳ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಗೆಲುವಿನ ಮುನ್ಸೂಚನೆ ನೀಡಿವೆ. ಟುಡೇಸ್ ಚಾಣಕ್ಯ ಮತ್ತು ನ್ಯೂಸ್ 18 ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
07:36 AM (IST) May 01
ಇರಾನ್‌ನ ಸಂಭಾವ್ಯ ದಾಳಿಗೆ ಪ್ರತಿಯಾಗಿ, ಅಮೆರಿಕವು ತನ್ನ ಅತ್ಯಾಧುನಿಕ ಮತ್ತು ಹಿಂದೆಂದೂ ಬಳಸದ 'ಡಾರ್ಕ್ ಈಗಲ್' ದೂರಸಾಮರ್ಥ್ಯದ ಕ್ಷಿಪಣಿಯನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ.
07:36 AM (IST) May 01
ಭಾರತಕ್ಕೆ ಬೇಕಾಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್, ಪಾಕಿಸ್ತಾನದ ಬಹಾವಲ್‌ಪುರದಲ್ಲಿ ನಿಗೂಢ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಕಳೆದ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿರುವ ಸರಣಿಯಲ್ಲಿ ಇದು ಮೂರನೇ ಪ್ರಕರಣವಾಗಿದೆ.
07:35 AM (IST) May 01
ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ, ಇರಾನ್ ತನ್ನ ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್‌ಗೆ ಹೊಸ ಎಚ್ಚರಿಕೆ ನೀಡಿದೆ. ಶತ್ರುಗಳಿಗೆ 'ಹಾರ್ಟ್ ಅಟ್ಯಾಕ್' ಉಂಟುಮಾಡುವಂತಹ ನಿಗೂಢ ಅಸ್ತ್ರವನ್ನು ಶೀಘ್ರದಲ್ಲೇ ಬಳಸುವುದಾಗಿ ಇರಾನ್‌ನ ನೌಕಾಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.