MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ

ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ

ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ, ಮೇ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಪ್ರತಿ ತಿಂಗಳು ನಿಮಗೆ ಬರುತ್ತಿದ್ದ ಸ್ಯಾಲರಿ ಕಡಿಮೆಯಾಗಲಿದೆ. 

2 Min read
Author : Chethan Kumar
Published : May 01 2026, 05:57 PM IST
Share this Photo Gallery
  • FB
  • TW
  • Linkdin
  • Whatsapp
16
ಹೊಸ ಲೇಬರ್ ಕೋಡ್ ಜಾರಿ
Image Credit : Freepik@stockimagefactorycom

ಹೊಸ ಲೇಬರ್ ಕೋಡ್ ಜಾರಿ

ಸ್ಯಾಲರಿ ಉದ್ಯೋಗಿಗಳು ಹೊಸ ಲೇಬರ್ ಕೋಡ್ ಕುರಿತು ಅರಿತುಕೊಳ್ಳಲೇಬೇಕು. ಹೊಸ ಕಾರ್ಮಿಕ ನಿಯಮದ ಪ್ರಕಾರ ಪ್ರತಿ ತಿಂಗಳು ವೇತನ ಪಡೆಯುವ ಉದ್ಯೋಗಿಗಳ ವೇತನದಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಉದ್ಯೋಗಿಗಳ ಮೂಲ ವೇತನ (ಬೇಸಿಕ್ ಸ್ಯಾಲರಿ), ಪಿಎಫ್, ಗ್ರಾಚ್ಯುಟಿ ಸೇರಿದಂತೆ ಹಲವು ಬದಲಾವಣೆಯಾಗಿದೆ. ಇಂದಿನಿಂದಲೇ (ಮೇ.01) ಹೊಸ ಕೋಡ್ ಜಾರಿಯಾಗಿದೆ.

26
ಮೂಲಕ ವೇತನ ಒಟ್ಟು ಸಿಟಿಸಿಯ ಶೇಕಡಾ 50ರಷ್ಟು
Image Credit : X

ಮೂಲಕ ವೇತನ ಒಟ್ಟು ಸಿಟಿಸಿಯ ಶೇಕಡಾ 50ರಷ್ಟು

ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ನಿಮಯದಲ್ಲಿ ತಿದ್ದುಪಡಿಯಿಂದ ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್ ಸಂಪೂರ್ಣ ಬದಲಾವಣೆಯಾಗುತ್ತಿದೆ. ಪ್ರಮುಖವಾಗಿ ಬೇಸಿಕ್ ಸ್ಯಾಲರಿಯಲ್ಲಿ ಭಾರಿ ಬದಲಾವಣಯಾಗುತ್ತದೆ. ಈ ಪೈಕಿ ಒಬ್ಬ ಉದ್ಯೋಗಿಯ ಮೂಲ ವೇತನ (Basic salary) ಆತನ ಒಟ್ಟು ಸಂಬಳದ (CTC) ಶೇಕಾಡ 50ರಷ್ಟಿರಬೇಕು.

Related Articles

Related image1
ಮೇಲ್ಜಾತಿ ಅಥವಾ 80 ಲಕ್ಷದ ವೇತನ: ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ
Related image2
ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ
36
ಭತ್ಯೆ ಹೆಚ್ಚು ಮಾಡಿ, ಮೂಲ ವೇತನ ಕಡಿಮೆ ಮಾಡುವ ಸಂಪ್ರದಾಯಕ್ಕೆ ಬ್ರೇಕ್
Image Credit : Getty

ಭತ್ಯೆ ಹೆಚ್ಚು ಮಾಡಿ, ಮೂಲ ವೇತನ ಕಡಿಮೆ ಮಾಡುವ ಸಂಪ್ರದಾಯಕ್ಕೆ ಬ್ರೇಕ್

ಹಲವು ಕಂಪನಿಗಳು ಮೂಲ ವೇತನ ಕಡಿಮೆ ನೀಡಿ, ಭತ್ಯೆಗಳನ್ನು ಹೆಚ್ಚು ಮಾಡುತ್ತದೆ. ಇದರ ಹಿಂದೆ ಹಲವು ಕಾರಣಗಳಿವೆ. ಆದರೆ ಹೊಸ ನಿಯಮದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ 50 ಸಾವಿರ ರೂಪಾಯಿ ಒಟ್ಟು ಸಿಟಿಸಿ ಆಗಿದ್ದರೆ, ಇದರಲ್ಲಿ ಮೂಲ ವೇತನ 25 ಸಾವಿರ ರೂಪಾಯಿ ಇರಬೇಕು. ಇದರಿಂದ ಉದ್ಯೋಗಿಯ ಪಿಎಫ್ ಮೊತ್ತ ಹೆಚ್ಚಾಗಲಿದೆ. ಗ್ರಾಚ್ಯುಟಿ ಮೊತ್ತ ಹೆಚ್ಚಾಗಲಿದೆ. ಇದು ಉದ್ಯೋಗಿಗೆ ಆರ್ಥಕ ಸೃಧೃಡತೆ ನೀಡಲಿದೆ.

46
ಟೇಕ್ ಹೋಮ್ ಸ್ಯಾಲರಿಯಲ್ಲಿ ವ್ಯತ್ಯಾಸ
Image Credit : Getty

ಟೇಕ್ ಹೋಮ್ ಸ್ಯಾಲರಿಯಲ್ಲಿ ವ್ಯತ್ಯಾಸ

ಈ ಮಹತ್ವದ ಬದಲಾವಣೆಯಿಂದ ಉದ್ಯೋಗಿಗಳ ಕೈಗೆ ಬರುವ ಸಂಬಳದಲ್ಲಿ ವ್ಯತ್ಯಾಸವಾಗಲಿದೆ. ಪ್ರಮುಖವಾಗಿ ವೇತನದಲ್ಲಿ ಪಿಎಫ್ ಮೊತ್ತ ಹೆಚ್ಚು ಕಡಿತಗೊಳ್ಳಲಿದೆ. ಪ್ರತಿ ತಿಂಗಳ ವೇತನದಲ್ಲಿ ಕಡಿತಗೊಂಡರೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲಿದೆ.

56
ಕೆಲಸದ ಸಮಯ, ರಜೆ ನಿಯಮ
Image Credit : Getty

ಕೆಲಸದ ಸಮಯ, ರಜೆ ನಿಯಮ

ಲೇಬರ್ ಕೋಡ್‌ನಲ್ಲಿ ಕೆಲಸದ ಸಮಯ, ರಜೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ನಿಯಮ ಸರಳೀಕರಣ ಮಾಡಲಾಗಿದೆ. ವಾರಕ್ಕೆ 5 ದಿನ ಕೆಲಸ 2 ರಜೆ, ವಾರಕ್ಕೆ 4 ದಿನ ಕೆಲಸ 3 ದಿನ ರಜೆ ನೀಡುವ ಆಯ್ಕೆಯನ್ನು ಕಂಪನಿಗಳು ಮಾಡಲು ಅವಕಾಶವಿದೆ. ಆದರೆ ವಾರದಲ್ಲಿ ಒಟ್ಟು ಕೆಲಸ 48 ಗಂಟೆ ಮೀರಬಾರದು.

66
ಯಾರಿಗೆ ಹೊರೆ?
Image Credit : Getty

ಯಾರಿಗೆ ಹೊರೆ?

ಕಂಪನಿಗಳು ಇದೀಗ ಉದ್ಯೋಗಿಗಳಿಗೆ ಮೀಸಲಿಡುವ ಒಟ್ಟು ಸಿಟಿಸಿ ಮೊತ್ತ ಹೆಚ್ಚಿಗೆ ಮಾಡಬೇಕು. ಪ್ರಮುಖವಾಗಿ ಉದ್ಯೋಗಿ ಹಾಗೂ ಕಂಪನಿ ನೀಡುವ ಪಿಎಫ್ ಮೊತ್ತ ಹೆಚ್ಚಾಗಲಿದೆ. ಕಂಪನಿಗಳಿಗೆ ಹೊರೆಯಾಗಲಿದೆ. ಆದರೆ ಈ ಮೊತ್ತವನ್ನು ಒಟ್ಟು ಸಿಟಿಸಿಯಲ್ಲಿ ಹಾಕಿ ಕಂಪನಿಗಳು ಜಾಣ ನಡೆ ಅನುಸರಿಸಲಿದೆ.

ಯಾರಿಗೆ ಹೊರೆ?

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರ್ಮಿಕ
ಕಾರ್ಮಿಕರ ದಿನಾಚರಣೆ
ಭಾರತ ಸುದ್ದಿ

Latest Videos
Recommended Stories
Recommended image1
ಎರಡೆರಡು ಗ್ಯಾಸ್ ಇದ್ದರೆ ಈ ಸುದ್ದಿನಾ ನೀವು ನೋಡ್ಲೇಬೇಕು, ಇವತ್ತಿನಿಂದಲೇ ಬಂದಿದೆ ಹೊಸ ನಿಯಮ!
Recommended image2
ಬೆಂಗಳೂರಿನಲ್ಲಿ ಅಮೆರಿಕದ ಸೆಮಿಕಂಡಕ್ಟರ್ ದೈತ್ಯ: ಅಪ್ಲೈಡ್ ಮೆಟೀರಿಯಲ್ಸ್‌ಗೆ 140 ಎಕರೆ ಜಮೀನು ನೀಡಲು ರಾಜ್ಯ ಸರ್ಕಾರ ಅಸ್ತು!
Recommended image3
ಗ್ಯಾಸ್ ದರ ದಿಢೀರ್ 3102 ರೂಗೆ ಏರಿಕೆ! ಆಹಾರ ಉದ್ಯಮಕ್ಕೆ ಹೊಡೆತ, ಜಿಎಸ್‌ಟಿ ದರ ಇಳಿಕೆಗೆ ಬೇಡಿಕೆ ಇಟ್ಟ ಹೊಟೇಲ್ ಸಂಘ
Related Stories
Recommended image1
ಮೇಲ್ಜಾತಿ ಅಥವಾ 80 ಲಕ್ಷದ ವೇತನ: ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ
Recommended image2
ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved