19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ, ಪತ್ನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಏನಿದು ಪ್ರಕರಣ 

ಹೈದರಾಬಾದ್ (ಮೇ.01) ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗುತ್ತದ್ದಂತೆ ದುರಂತ ಘಟನೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಹೈದರಾಬಾದ್‌ನ 36 ವರ್ಷದ ಸಾಫ್ಟ್‌ವೇರ್ ಎಂಜಿನೀಯರ್ ದುರಂತ ಅಂತ್ಯ ಕಂಡ ಘಟನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಕೆರೆಗೆ ಹಾರಿ ಟೆಕ್ಕಿ ದುರಂತ ಅಂತ್ಯಕಂಡಿದ್ದಾನೆ. ಈತ ಬರೆದ 19 ಪುಟಗಳ ಡೆತ್ ನೋಟ್ ಸಾವಿನ ಹಿಂದಿನ ಕತೆ ಬಹಿರಂಗಪಡಿಸಿದೆ. ಪ್ರಮುಖವಾಗಿ ಈ ಡೆತ್ ನೋಟ್‌ನಲ್ಲಿ ತನ್ನ ಪತ್ನಿ ಹಲವು ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಸ್ಫೋಟಕ ಮಾಹಿತಿಯನ್ನು ಬರೆದಿಟ್ಟಿದ್ದಾನೆ.

Add Asianetnews Kannada as a Preferred SourcegooglePreferred

ಒಂದೂವೆರ ವರ್ಷ, ಮೂವರ ಜೊತೆ ಸಂಬಂಧ

ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಒಂದೂವರೆ ವರ್ಷದಿಂದ ತನ್ನ ಪತ್ನಿ ಮೂವರು ಬೇರೆ ಪುರುಷರೊಂದಿಗೆ ಸಂಬಂಧ ಹೊಂದಿದ್ದಳು ಎಂದು ಮೃತ ಟೆಕ್ಕಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧಗಳ ಬಗ್ಗೆ ತನಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಗೊತ್ತಾಗಿದ್ದು, ಇದರಿಂದ ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ. ಪತ್ನಿಯ ನಡೆ, ತನಗೆ ಮಾಡಿರುವ ಮೋಸದಿಂದ ತನಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್ ನೋಟ್‌ನಲ್ಲಿ ಹೇಳಿಕೊಂಡಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಡೆತ್ ನೋಟ್‌ನಲ್ಲಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಫೋನ್‌ಗಳು ಮತ್ತು ಆನ್‌ಲೈನ್ ಚಟುವಟಿಕೆ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಮೃತನ ಪೋಷಕರು ಹಾಗೂ ಕುಟುಂಬಸ್ಥರು , ಪತ್ನಿಯ ಮಾನಸಿಕ ಕಿರುಕುಳ, ಅಕ್ರಮ ಸಂಬಂಧಗಳಿಂದ ದುರಂತ ಅಂತ್ಯಕಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಎಲ್ಲಾ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣವು ಮತ್ತೊಮ್ಮೆ ಮಾನಸಿಕ ಆರೋಗ್ಯ, ಸಂಬಂಧಗಳಲ್ಲಿನ ಬಿಕ್ಕಟ್ಟು ಮತ್ತು ವೈಯಕ್ತಿಕ ಸಂಕಟವನ್ನು ಹೆಚ್ಚಿಸುವಲ್ಲಿ ಸೋಷಿಯಲ್ ಮೀಡಿಯಾದ ಪಾತ್ರದ ಬಗ್ಗೆ ಕಳವಳ ಮೂಡಿಸಿದೆ.