ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸ ಇದೆ. ಈ ಹಿಂದೆ ನಟ, ನಿರ್ದೇಶಕ ಎಂ.ಜಿ. ರಾಮಚಂದ್ರನ್, ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯ ಆಳಿದ್ರು. ನಂತರ ಜಯಲಲಿತಾ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿದ್ರು.
ಸಮೀಕ್ಷೆಯ ಲೆಕ್ಕಾಚಾರ ಉಲ್ಟಾ..? ವಿಜಯ್ ಗೆ ಗದ್ದುಗೆನಾ? ಸಿನಿ ರಂಗದ ಕಿಂಗ್ ರಾಜಕೀಯದಲ್ಲಿ ಕಿಂಗ್ ಮೇಕರ್ ಆಗ್ತಾರಾ?
ತಮಿಳುನಾಡು ಸಿಂಹಾಸದ ಮೇಲೆ ಇಡೀ ದೇಶದ ಕಣ್ಣು! ದ್ರಾವಿಡರ ನಾಡಿನ ಅಧಿಕಾರಕ್ಕಾಗಿ ದಳಪತಿ ಆಟ ಶುರು..! ವಿಜಯ್ಗೆ ಸಿಎಂ ಪಟ್ಟದ ಆಸೆ ಹುಟ್ಟಿಸಿದ ಆಕ್ಸಿಸ್ ಮೈ ಇಂಡಿಯಾ..!
ತಮಿಳುನಾಡು ಚುನಾವಣೆಯ ಫಲಿತಾಂಶ ಬರುವ ಮುನ್ನ, ರಾಜಕೀಯದ ರಣರಂಗದಲ್ಲಿ ವಜ್ರಖಚಿತ ಸಿಂಹಾಸನ ಯಾರ ಪಾಲಾಗುತ್ತೆ ಎನ್ನುವ ಲೆಕ್ಕಾಚಾರದ ಬೆಟ್ಟಿಂಗ್ ನಡೀತಾ ಇದೆ. ಎಕ್ಸಿಟ್ ಪೋಲ್ ಅಂಕಿ ಅಂಶ ಬಂದಾಗಿನಿಂದ ಎಲ್ಲರ ದೃಷ್ಟಿ ಈಗ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಮೇಲೆ ಬಿದ್ದಿದೆ. ಹಾಗಾದ್ರೆ ನಿಜವಾಗ್ಲು ವಿಜಯ್ಗೆ ಗದ್ದುಗೆ ಸಿಗುತ್ತಾ..? ಎಕ್ಸಿಟ್ ಪೋಲ್ ಹೇಳಿದ್ದು ಸುಳ್ಳಾಗುತ್ತಾ..? ನೋಡೋಣ ಬನ್ನಿ..
ದ್ರಾವಿಡರ ನಾಡಿನ ಅಧಿಕಾರಕ್ಕಾಗಿ ದಳಪತಿ ಆಟ ಶುರುನಾ?
ಈಗ ತಮಿಳು ನಾಡು ಸಿಕ್ಕಾಪಟ್ಟೆ ಬಿಸಿಯಾಗಿದೆ. ಸಿಎಂ ಪಟ್ಟದರಸ ಯಾರು ಅನ್ನೋ ಒಂದೇ ಒಂದು ಪ್ರಶ್ನೆ ಇಡೀ ದ್ರಾವಿಡರ ನಾಡನ್ನ ಆವರಿಸಿದೆ. ಇನ್ನೇನು ಮೂರು ದಿನ ಕಳೆದ್ರೆ ರಿಸಲ್ಟ್ ಬಂದೇ ಬಡಿತ್ತೆ. ಆದಾಗ್ಲೆ ಮುಂದಿನ ತಮಿಳು ನಾಡು ರಾಜಾಕಾರಣ ಯಾರ ಕೈಗೆ ಅನ್ನೋ ಹಣೆಬಹರ ಒಂದು ನೋಟ ಹೊರ ಬಿದ್ದಿದೆ. ಇದರಲ್ಲಿ ನಟ ದಳಪತಿ ವಿಜಯ್ಗೆ ಫುಲ್ ಮಾರ್ಕ್ಸ್ ಅಂತು ಬಂದಿಲ್ಲ..
ಹೌದು, ತಮಿಳುನಾಡಿನಲ್ಲಿ ಫಲಿತಾಂಶ ಬರುವ ಮುನ್ನ ಸದ್ಯ ಈ ಎಕ್ಸಿಟ್ ಪೋಲ್ ಬಹಿರಂಗವಾಗಿದೆ. ಈ ಭಾರಿಯೂ ಜನ ಡಿಎಂಕೆ ಪಕ್ಷಕ್ಕೆ ಭಾರಿ ಮನ್ನಣೆ ಕೊಟ್ಟಂತಿದೆ. ಕೇವಲ ಱಲಿಗಳಲ್ಲಿ ಮಾತ್ರ ವಿಜಯ್ ಗೆ ಜೈ ಎಂದು ತಮಿಳುನಾಡಿನ ಜನ ಕೈ ತೊಳೆದುಕೊಂಡಿದ್ದಾರೆ ಅನ್ನೋ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿದೆ.
ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ 118 ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಕೀರ್ತಿ ಪತಾಕೆಯನ್ನು ಹಾರಿಸಬೇಕಿದೆ. ಸದ್ಯ ''ಪೀಪಲ್ಸ್ ಪಲ್ಸ್'' ಎಕ್ಸಿಟ್ ಫೋಲ್ ಲೆಕ್ಕಾಚಾರದ ಪ್ರಕಾರ ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಪ್ರಕಾರ, 125ರಿಂದ 145 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಎಐಡಿಎಂಕೆಯು 65ರಿಂದ 80 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಹಾಗಾದ್ರೆ ವಿಜಯ್ ಕತೆ ಏನು..? ಅದೇ ಇಂಟ್ರೆಸ್ಟಿಂಗ್ ಆಗಿರೋದು..
ಸಿನಿಮಾ ರಂಗದ ಕಿಂಗ್ ರಾಜಕೀಯದಲ್ಲಿ ಕಿಂಗ್ ಮೇಕರ್ ಆಗ್ತಾರಾ..?
ಎಲ್ಲರಿಗೆ ಗೊತ್ತಿರುವಂತೆ ಹಲವರು ಈ ಬಾರಿ ವಿಜಯ್ ಈ ಚುನಾವಣೆಯ ಕಿಂಗ್ ಆಗ್ತಾರೆ ಎಂದು ಅಂದುಕೊಂಡಿದ್ರು. ಕಿಂಗ್ ಆಗದೇ ಇದ್ದರೂ ಕಿಂಗ್ ಮೇಕರ್ ಆಗುವುದು ಖಚಿತ ಅಂದಿದ್ರು. ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆ ವಿಜಯ್ ಪಾಲಿಗೆ ಮಾಡು ಇಲ್ಲ ಮಡಿ ಎಂಬಂತಾಗಿತ್ತು. ಪತ್ನಿ ಸಂಗೀತಾ ಬೇರೆ ತಿರುಗಿ ಬಿದ್ದಿದ್ರು. ಇದರಿಂದ ವಿಜಯ್ ಪೊಲಿಟಿಕಲ್ ಇಮೇಜ್ ಡ್ಯಾಮೇಜ್ ಆಯ್ತು ಎಂದು ಹಲವರು ಲೆಕ್ಕಾಚಾರ ಹಾಕಿದ್ರು. ವಿಜಯ್ ಹೆಚ್ಚೆಂದರೆ 10 ಕ್ಷೇತ್ರಗಳಲ್ಲಿ ಗೆದ್ದರೆ ಅದೇ ಹೆಚ್ಚು ಎನ್ನುವ ಕುಹುಕದ ಮಾತುಗಳನ್ನಾಡಿದ್ರು..
ವಿಜಯ್ಗೆ ಸಿಎಂ ಪಟ್ಟದ ಆಸೆ ಹುಟ್ಟಿಸಿದ ಆಕ್ಸಿಸ್ ಮೈ ಇಂಡಿಯಾ..!
'ಪೀಪಲ್ಸ್ ಪಲ್ಸ್' ಎಕ್ಸಿಟ್ ಪೋಲ್ ಪ್ರಕಾರ ವಿಜಯ್ ಸಾರಥ್ಯದ ಟಿವಿಕೆ ಪಕ್ಷ ಕೇವಲ 18 ರಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಭವಿಷ್ಯವಿದೆ. ತಮಿಳುನಾಡಿನಲ್ಲಿ ಹೆಚ್ಚಿನ ಅಭಿಪ್ರಾಯ ಸಂಗ್ರಹಗಳು ಡಿಎಂಕೆ ಸರ್ಕಾರ ರಚಿಸುತ್ತದೆ ಎಂದು ಭವಿಷ್ಯ ನುಡಿದಿವೆ. ಆದ್ರೆ ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ದಳಪತಿ ವಿಜಯ್ರ ಟಿವಿಕೆ ಪಕ್ಷ 98-120 ಸ್ಥಾನಗಳನ್ನು ಪಡೆಯಲಿದೆಯಂತೆ. ಡಿಎಂಕೆ 92-110 ಸ್ಥಾನಗಳನ್ನು ಪಡೆಯುತ್ತಾರೆ ಅಂತ ಹೇಳುತ್ತಿದೆ.
ತಮಿಳುನಾಡು ರಾಜಕೀಯದಲ್ಲಿ ಸೆಲೆಬ್ರಿಟಿ ಸಿಎಂ.. ವಿಜಯ್ಗೂ ಸಿಗುತ್ತಾ ಕುರ್ಚಿ..?
ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸ ಇದೆ. ಈ ಹಿಂದೆ ನಟ, ನಿರ್ದೇಶಕ ಎಂ.ಜಿ. ರಾಮಚಂದ್ರನ್, ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯ ಆಳಿದ್ರು. ನಂತರ ಜಯಲಲಿತಾ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿದ್ರು. ಕೇವಲ ನಟರಷ್ಟೇ ಅಲ್ಲದೆ, ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಐದು ಬಾರಿ ತಮಿಳುನಾಡು ಸಿಎಂ ಆದ್ರು.
ಸದ್ಯ ಎಕ್ಸಿಟ್ ಪೋಲ್‌ನಲ್ಲಿ ವಿಜಯ್ ರಾಜಕೀಯ ಭವಿಷ್ಯವನ್ನು ಬರೆಯಲಾಗಿದೆ. ವಿಜಯ್ ನಿಜಕ್ಕೂ ತಮಿಳುನಾಡಿನ ಕಿಂಗ್ ಆಗ್ತಾರಾ ..? ಅಥವಾ ಕಿಂಗ್ ಮೇಕರ್ ಆಗ್ತಾರಾ..? ಇಲ್ಲವಾದಲ್ಲಿ ಸೋತು ಮರಳಿ ಚಿತ್ರರಂಗಕ್ಕೆ ಬರುತ್ತಾರಾ..? ಎನ್ನುವುದಕ್ಕೆ ಉತ್ತರ ಮೇ 4ರಂದು ಸಿಗಲಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...


