Jp Morgan Chase: ಪ್ರತಿಷ್ಠಿತ ಜೆಪಿ ಮೋರ್ಗನ್‌ ಕಂಪೆನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಲೋರ್ನಾ ಹಜ್ದಿನಿ (Lorna Hajdini) ಅವರ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಇದರ ಜೊತೆಗೆ ಲೋರ್ನಾ ಜೊತೆಗೆ ನಡೆಸಿದ ಮೆಸೇಜ್‌ ಸ್ಕ್ರೀನ್‌ಶಾಟ್‌ ಕೂಡ ವೈರಲ್‌ ಆಗ್ತಿದೆ. 

ಜೆಪಿ ಮೋರ್ಗನ್ ಚೇಸ್ (JPMorgan Chase) ಸಂಸ್ಥೆಯ ಎಕ್ಸಿಕ್ಯೂಟಿವ್‌ ಒಬ್ಬರು ತನ್ನ ಕೆಳಗಡೆ ಕೆಲಸ ಮಾಡುವ ಮ್ಯಾರೀಡ್‌ ಇಂಡಿಯನ್‌ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಮೊಕದ್ದಮೆ ಹೂಡಲಾಗಿದೆ.

Add Asianetnews Kannada as a Preferred SourcegooglePreferred

ಇಂಡಿಯನ್‌ ಮ್ಯಾರೀಡ್‌ ಪುರುಷನ ಮೇಲೆ ದೌರ್ಜನ್ಯ

ಜೆಪಿ ಮೋರ್ಗನ್ ಸಂಸ್ಥೆಯ ಸೀನಿಯರ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಲೋರ್ನಾ ಹಜ್ದಿನಿ (Lorna Hajdini) ಮೇಲೆ ಆರೋಪ ಮಾಡಲಾಗಿದೆ. ಈ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ. ಲೋರ್ನಾ ಹಜ್ದಿನಿ ಅವರು ತನಗೆ ಮಾದಕ ದ್ರವ್ಯ ನೀಡಿ ಲೈಂ*ಗಿಕವಾಗಿ ಕಿರುಕುಳ ನೀಡಿದ್ದಾರೆ, ಜನಾಂಗೀಯವಾಗಿ ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಸಂತ್ರಸ್ತರು ಏನು ಹೇಳಿದ್ರು?

ಸಂತ್ರಸ್ತ ಉದ್ಯೋಗಿ ಅವರು, ಲೋರ್ನಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡ್ಕೊಂಡು ನನಗೆ ಕಿರುಕುಳ ಕೊಡುತ್ತಿದ್ದರು. ಕೆಲಸದ ನೆಪ ಹೇಳಿಕೊಂಡು, ನನಗೆ ಖಾಸಗಿಯಾಗಿ ಭೇಟಿಯಾಗಿ ಎಂದು ಒತ್ತಾಯ ಮಾಡುತ್ತಿದ್ದರು, ಹಲವಾರು ಬಾರಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾರೆ. ಮಾನಸಿಕವಾಗಿ ಕೂಡ ನನಗೆ ಕಿರುಕುಳ ಕೊಟ್ಟಿದ್ದಾರೆ” ಹೇಳಿದ್ದಾರೆ.

ಈ ಆರೋಪಕ್ಕೆ ಸಂಸ್ಥೆಯು ಪ್ರತಿಕ್ರಿಯೆ ನೀಡಿದ್ದು, "ದೂರಿನ ಬಗ್ಗೆ ಆಂತರಿಕ ತನಿಖೆ ಮಾಡಿದ್ದೇವೆ, ದೂರಿನಲ್ಲಿರುವ ವಿಷಯದ ಬಗ್ಗೆ ಯಾವುದೇ ಆಧಾರವಿಲ್ಲ. ನಮ್ಮ ಸಂಸ್ಥೆಯು ಕೆಲಸಕ್ಕೆ ಬದ್ಧವಾಗಿದೆ" ಎಂದು ಹೇಳಿದೆ.

ಕೋರ್ಟ್‌ನಲ್ಲಿ ಏನಾಗಲಿದೆ?

ಕಾರ್ಪೋರೇಟ್‌ ಕಂಪೆನಿಯಲ್ಲಿ ಪುರುಷ ಉದ್ಯೋಗಿ ಮೇಲೆ ಮಹಿಳಾ ಉದ್ಯೋಗಿಯೇ ಲೈಂ*ಗಿಕವಾಗಿ ಹಿಂಸೆ ಕೊಟ್ಟಿದ್ದಾರೆ ಎನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. ಇನ್ನೊಂದು ಕಡೆ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಈ ವಿವಾದದ ಬೆನ್ನಲೇ 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ಲೋರ್ನಾಗೆ ಲಿಂಕ್ಡ್‌ಇನ್‌ನಲ್ಲಿ ಅನೇಕ ವರ್ಷಗಳಿಂದ ಕಾಂಟ್ಯಾಕ್ಟ್‌ ಅಲ್ಲಿದ್ದೇನೆ, ಕೆಲಸ ಬೇಕು ಎಂದು ಮೆಸೇಜ್‌ ಮಾಡಿದಾಗ ಅವರು ರೆಸ್ಯೂಮ್‌ ಕಳಿಸಿ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ, 'ಮರ್ರೆ ಹಿಲ್ ಗೈ' (Murray Hill Guy) ಎಂಬ ಹೆಸರಿನ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ತಾನು ಹಲವು ವರ್ಷಗಳಿಂದ ಲೋರ್ನಾ ಅವರೊಂದಿಗೆ ಲಿಂಕ್ಡ್‌ಇನ್‌ನಲ್ಲಿ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಕುತೂಹಲಕ್ಕಾಗಿ ಅವರು ಲೋರ್ನಾ ಅವರಿಗೆ ಒಂದು ಸಂದೇಶ ಕಳುಹಿಸಿದ್ದರು.