ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ, ಇರಾನ್ ತನ್ನ ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್‌ಗೆ ಹೊಸ ಎಚ್ಚರಿಕೆ ನೀಡಿದೆ. ಶತ್ರುಗಳಿಗೆ 'ಹಾರ್ಟ್ ಅಟ್ಯಾಕ್' ಉಂಟುಮಾಡುವಂತಹ ನಿಗೂಢ ಅಸ್ತ್ರವನ್ನು ಶೀಘ್ರದಲ್ಲೇ ಬಳಸುವುದಾಗಿ ಇರಾನ್‌ನ ನೌಕಾಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಟೆಹ್ರಾನ್‌ (ಮೇ.1): ಉಭಯ ದೇಶಗಳ 2ನೇ ಸುತ್ತಿನ ಮಾತುಕತೆಯ ಸಾಧ್ಯತೆ ದೂರವಾಗಿ ಮತ್ತೆ ಯುದ್ಧದ ಕಾರ್ಮೊಡ ಆವರಿಸುತ್ತಿರುವ ಹೊತ್ತಿನಲ್ಲೇ ‘ಶತ್ರುಪಡೆಗಳು ತೀವ್ರ ಭಯಪಡುವ ಮತ್ತು ಅವರಿಗೆ ಹಾರ್ಟ್‌ಅಟ್ಯಾಕ್ ಉಂಟುಮಾಡಬಹುದಾದ ಅಸ್ತ್ರ ಬಳಕೆ’ ಮಾಡುವುದಾಗಿ ಇರಾನ್‌ ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಧಾನ ಮಾತುಕತೆಗೆ ಇರಾನ್‌ ಮುಂದಿಟ್ಟದ್ದ ಮೂರು ಹಂತದ ಚರ್ಚೆಯ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ್ದರು. ಜೊತೆಗೆ ಪರಮಾಣು ರಹಿತ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಸರಿಯಾದ ತಿಳುವಳಿಕೆ ಇರಾನ್‌ಗೆ ಇಲ್ಲ. ಅವರು ಆದಷ್ಟು ಬೇಗ ಬುದ್ಧಿವಂತರಾಗಿ ವರ್ತಿಸುವುದು ಒಳಿತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಮಷಿನ್‌ಗನ್‌ ಹಿಡಿದು ಬುಧವಾರವಷ್ಟೇ ಎಚ್ಚರಿಕೆ ನೀಡಿದ್ದರು.

ಅದಕ್ಕೆ ಗುರುವಾರ ತಿರುಗೇಟು ಇರಾನ್‌ ನೌಕಾಪಡೆಯ ಹಿರಿಯ ನೌಕಾಧಿಕಾರಿ ಶಹ್ರಮ್‌ ಇರಾನಿ, ‘ಶೀಘ್ರವೇ ನಾವು ಶತ್ರುಗಳನ್ನು ಅವರು ತೀವ್ರವಾಗಿ ಭಯಪಡುವ ಅಸ್ತ್ರದ ಮೂಲಕ ಕಟ್ಟಿಹಾಕಲಿದ್ದೇವೆ. ಅದು ಅವರ ಪಕ್ಕದಲ್ಲೇ ಇದೆ. ಈ ದಾಳಿಯಿಂದ ಅವರಿಗೆ ಹಾರ್ಟ್ಅಟ್ಯಾಕ್ ಆಗದೇ ಇರಲಿ ಎಂದು ನಾನು ಆಶಿಸುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ನೌಕೆಗಳಿಗೆ ಮುಚ್ಚುವ ಮೂಲಕ ನಮ್ಮನ್ನು ಆರ್ಥಿಕವಾಗಿ ಕಟ್ಟಿಹಾಕಿ ನಮ್ಮನ್ನು ಸಂಧಾನದ ವೇದಿಕೆಗೆ ಕರೆತರಬಹುದು ಎಂದು ಟ್ರಂಪ್‌ ಆಡಳಿತ ಯೋಜಿಸಿದೆ. ಆದರೆ ಅವರ ಇಂಥದ್ದೊಂದು ಆಲೋಚನೆ ಅವರದ್ದೇ ಮಿಲಿಟರಿ ವಲಯದಲ್ಲಿ ದೊಡ್ಡ ಜೋಕ್‌ ಆಗಿ ಹೊರೊಹಮ್ಮಿದೆ’ ಎಂದು ಹೇಳಿದ್ದಾರೆ.