ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಪ್ರಮುಖ ಆಕರ್ಷಣೆಯಾಗಿದ್ದರೂ, ಟ್ರೋಲ್‌ಗೆ ಒಳಗಾಗುತ್ತಾರೆ. ವೈರಲ್ ಆದ ವಿಡಿಯೋವೊಂದರಲ್ಲಿ, ಸಿಎಸ್‌ಕೆ ಅಭಿಮಾನಿಯೊಬ್ಬ ಗುಜರಾತ್ ಟೈಟಾನ್ಸ್ ಚಿಯರ್‌ಲೀಡರ್‌ನ ಮೇಕಪ್ ಬಗ್ಗೆ ಕಾಮೆಂಟ್ ಮಾಡಿದಾಗ, ಆಕೆ ಹೇಗೆತಿರುಗೇಟು ನೀಡಿದಳು ನೋಡಿ.
ಐಪಿಎಲ್‌ನಲ್ಲಿ ಕ್ರಿಕೆಟಿಗರಿಗೆ ಹುರಿದುಂಬಿಸುವ ಸಲುವಾಗಿ ಅಭಿಮಾನಿಗಳು ಸಾಕಾಗಲ್ಲ ಎಂದು ಅಂದಚೆಂದದ ವಿದೇಶಿ ಬೆಡಗಿಯರನ್ನು ಕರೆತರುವ ಸಂಪ್ರದಾಯ ಬಂದು ದಶಕಗಳೇ ಕಳೆದಿವೆ. ಪ್ರತಿ ಬೌಂಡರಿ, ವಿಕೆಟ್ ಹಾಗೂ ಗೆಲುವಿನ ಸಂಭ್ರಮವನ್ನು ಹೆಚ್ಚಿಸಲು ಚಿಯರ್ ಲೀಡರ್ಸ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರು ಪಂದ್ಯದುದ್ದಕ್ಕೂ ನೃತ್ಯ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತು ಆಟಗಾರರನ್ನು ಹುರಿದುಂಬಿಸುತ್ತಾರೆ. ಇವರನ್ನು ನೋಡಿದರೆ ಕ್ರೀಡಾಪಟುಗಳಿಗೆ ಉತ್ತೇಜನ ಬರುತ್ತದೆ ಎನ್ನುವುದು ಇದರ ಹಿಂದಿರುವ ಕಾನ್ಸೆಪ್ಟ್. ಇವರಲ್ಲಿ ಹೆಚ್ಚಿನವರು ವಿದೇಶಿ ವೃತ್ತಿಪರ ನರ್ತಕರೇ ಆಗಿರುತ್ತಾರೆ. ತುಂಡುಡುಗೆ ತೊಟ್ಟು ಇವರು ಕುಣಿಯುತ್ತಿದ್ದರೆ ಕ್ರಿಕೆಟ್ ಆಡುವವರಿಗೆ ಉತ್ಸಾಹ ಬರುತ್ತದೋ ಬಿಡುತ್ತದೋ ಗೊತ್ತಿಲ್ಲ, ಏಕೆಂದರೆ ಅವರು ತಮ್ಮ ಆಟದಲ್ಲಿಯೇ ಮಗ್ನರಾಗಿರುತ್ತಾರೆ, ಗೆಲುವು ಅವರ ಗುರಿಯಾಗಿರುತ್ತದೆ. ಆದರೆ ಈ ಬೆಡಗಿಯರನ್ನು ನೋಡಿ ಕ್ರಿಕೆಟ್ ವೀಕ್ಷಕರಿಗಂತೂ ರೋಮಾಂಚನ ಆಗುವುದು ಖಂಡಿತ.
ಟ್ರೋಲಿಗರೇ ಹೆಚ್ಚು
ಈ ಚಿಯರ್ಲೀಡರ್ಸ್ಗಳ ಮೇಕಪ್, ತುಂಡುಡುಗೆಯಿಂದಾಗಿ ಇವರನ್ನು ಟ್ರೋಲ್ ಮಾಡುವವರು ಸಾಕಷ್ಟು ಇದ್ದಾರೆ. ಅಸಭ್ಯ ಕಮೆಂಟ್ ಮಾಡುವವರಿಗೂ ಕಡಿಮೆ ಏನಿಲ್ಲ. ಅದೇ ರೀತಿ ಈ ಬಾರಿಯೂ ನಡೆದಿದ್ದು, ಅದರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಮೇಕಪ್ ಜಾಸ್ತಿಯಾಯ್ತು
ಚೆನ್ನೈ ಸೂಪರ್ ಕಿಂಗ್ಸ್ (CKS) ಅಭಿಮಾನಿ ಮತ್ತು ಚಿಯರ್‌ಲೀಡರ್ ನಡುವಿನ ಘಟನೆ ಇದಾಗಿದೆ. ಇದರಲ್ಲಿ ಸಿಎಸ್‌ಕೆ ಜೆರ್ಸಿ ಧರಿಸಿದ ಪುರುಷ ಅಭಿಮಾನಿ ಗುಜರಾತ್ ಟೈಟಾನ್ಸ್ (ಜಿಟಿ) ಚಿಯರ್‌ಲೀಡರ್ ಅನ್ನು ನೋಡಿ ನೀವು ಏಂಜಲ್ ರೀತಿ ಕಾಣಿಸುತ್ತೀರಿ ಎಂದಿದ್ದಾನೆ. ಮೊದಲಿಗೆ ಆಕೆಗೆ ಅದು ಡಾನ್ಸರ್ ಎಂದು ಎನ್ನಿಸಿದೆ. ಕೊನೆಗೆ ಏಂಜಲ್ ರೀತಿ ಎಂದಾಗ ಸಹಜವಾಗಿ ಹೊಗಳಿದ್ದಕ್ಕೆ ಖುಷಿಯಾಗಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಈ ಅಭಿಮಾನಿ ಮೇಕಪ್ ಜಾಸ್ತಿಯಾಯ್ತು ಎಂದಿದ್ದಾನೆ.
ಮೊದಲು ಹಲ್ಲುಜ್ಜಪ್ಪಾ
ಅದಕ್ಕೆ, ಆ ಬೆಡಗಿಗೆ ತುಸು ಕೋಪ ಬಂದ ಹಾಗೆ ಕಂಡಿದೆ. ಈ ಅಭಿಮಾನಿ ಬಹುಶಃ ನೀವು ಸಹಜವಾಗಿ ಸುಂದರ ಆಗಿದ್ದೀರಿ, ಮೇಕಪ್ ಯಾಕೆ ಓವರ್ ಮಾಡಿದ್ದು ಎಂದು ಕೇಳಿದ್ನೋ ಅಥವಾ ಉದ್ದೇಶಪೂರ್ವಕವಾಗಿ ಕೆಜಿಗಟ್ಟಲೆ ಮೇಕಪ್ ಮಾಡಿಕೊಂಡದ್ದು ಯಾಕೆ ಕೇಳಿದ್ನೋ ಗೊತ್ತಿಲ್ಲ. ಅದು ಆಕೆಗೆ ಕೋಪ ತರಿಸಿದೆ. ಏಂಜೆಲ್ ಎಂದಾಗ ಖುಷಿಪಟ್ಟವಳು, ಸ್ವಲ್ಪ ಸಿಡಿಮಿಡಿಗೊಂಡು, ಮೊದಲು ನಿನ್ನ ಹಲ್ಲನ್ನು ಸರಿಯಾಗಿ ಉಜ್ಜು ಎಂದಿದ್ದಾಳೆ! ಇದನ್ನು ಕೇಳಿ ಸಿಕೆಎಸ್ ಫ್ಯಾನ್ ಸುಸ್ತಾಗಿದ್ದಾನೆ. ಇದರ ವಿಡಿಯೋ ತಮಾಷೆಯ ರೀತಿಯಲ್ಲಿ ವೈರಲ್ ಆಗುತ್ತಿದೆ. ValenceCricket ಎನ್ನುವ ಖಾತೆಯಲ್ಲಿ ಇದನ್ನು ಶೇರ್ ಮಾಡಲಾಗಿದೆ.


