Published : Sep 04, 2026, 06:43 AM ISTUpdated : Sep 04, 2026, 11:17 PM IST

National News Live: PM Kisan - ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?

ಸಾರಾಂಶ

ನವದೆಹಲಿ (ಸೆ.4): 2026-27ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಶೇ.7.8ರಷ್ಟು ದಾಖಲಾಗಿದೆ ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ, ಕೇಂದ್ರ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಸರ್ಕಾರವು ಜಿಡಿಪಿ ಪ್ರಗತಿ ದರ ವನ್ನು ಅಂದಾಜಿಸಿದ ಮಾನದಂಡವೇ ಸರಿಯಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕೂಡಾ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ವಾದ ಬೌದ್ಧಿಕ ನಕ್ಸಲಿಸಂಗೆ ಉದಾಹರಣೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌.

Punjab Farmers

11:17 PM (IST) Sep 04

PM Kisan - ಈ ಮಹಿಳಾ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ.. ಯಾಕೆ ಗೊತ್ತಾ?

ಪಿಎಂ ಕಿಸಾನ್ ಯೋಜನೆಯಡಿ ಮಹಿಳಾ ರೈತರು ಪ್ರಯೋಜನ ಪಡೆಯಲು, ಕೃಷಿ ಭೂಮಿ ಅವರ ಹೆಸರಿನಲ್ಲಿ ನೋಂದಣಿಯಾಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ, ಒಂದೇ ಕುಟುಂಬದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಯ ಲಾಭವನ್ನು ಏಕಕಾಲದಲ್ಲಿ ಪಡೆಯಲು ಸಾಧ್ಯವಿಲ್ಲ. ಅರ್ಹ ರೈತರಿಗೆ ವಾರ್ಷಿಕ ₹6,000 ಆರ್ಥಿಕ ಸಹಾಯವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
Read Full Story

11:01 PM (IST) Sep 04

9 ದಿನ ಬಳಿಕ ರಕ್ಷಿಸಿದ ನೇಪಾಳ ಕಾರ್ಮಿಕರ ಬದುಕಿಸಿದ ಶ್ರೀಕೃಷ್ಣ ಮಹಾಮಂತ್ರ, ಸಂಜಯ್ ಶಾ ಹೇಳಿದ್ದೇನು

ನೇಪಾಳ ಪ್ರವಾಹ ರಕ್ಷಣಾ ಕಾರ್ಯದಲ್ಲಿ ಬರೋಬ್ಬರಿ 9 ದಿನ ಬಳಿಕ ಇಬ್ಬರು ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲಾಗಿದೆ. ಜಗತ್ತಿಗೆ ಅಚ್ಚರಿಯಾಗಿತ್ತು. ಆದರೆ ಇವರು ಇಷ್ಟು ದಿನ ಬದುಕುಳಿದ ಹಿಂದಿನ ಘಟನೆಯನ್ನು ಕಾರ್ಮಿಕರೇ ಬಹಿರಂಗಪಡಿಸಿದ್ದಾರೆ

Read Full Story

11:00 PM (IST) Sep 04

ಗವರ್ನರ್ ಚುನಾವಣೆಗೆ ನಿಂತ 15 ವರ್ಷದ ಹುಡುಗ‌ ಡೀನ್ ರಾಯ್.. ನಿಯಮ ಏನು ಹೇಳುತ್ತದೆ?

ಅಮೆರಿಕದ ವರ್ಮಾಂಟ್ ರಾಜ್ಯದಲ್ಲಿ, 15 ವರ್ಷದ ಡೀನ್ ರಾಯ್ ಎಂಬ ಹುಡುಗ ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾನೆ. ರಾಜ್ಯದ ವಿಶಿಷ್ಟ ಸಂವಿಧಾನದ ನಿಯಮದಿಂದಾಗಿ ಇದು ಸಾಧ್ಯವಾಗಿದ್ದು, ತನಗೆ ಮತ ಹಾಕಲು ಅಧಿಕಾರವಿಲ್ಲದಿದ್ದರೂ ಯುವಜನರ ಧ್ವನಿಯನ್ನು ಪ್ರತಿನಿಧಿಸುವುದು ಅವರ ಮುಖ್ಯ ಗುರಿಯಾಗಿದೆ.
Read Full Story

10:44 PM (IST) Sep 04

ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್​ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ

ಅಬುಧಾಬಿಯಲ್ಲಿ ನಡೆದ ಅಂತರರಾಷ್ಟ್ರೀಯ ಬೇಟೆ ಮತ್ತು ಕುದುರೆ ಸವಾರಿ ಪ್ರದರ್ಶನದ ಹರಾಜಿನಲ್ಲಿ, "ಅಲ್ಟ್ರಾ ವೈಟ್ ಪ್ಯೂರ್ ಗೈರ್ ಗರ್ಮೌಶಾ" ಎಂಬ ಅಪರೂಪದ ಗಿಡುಗದ ಮರಿಯು ದಾಖಲೆಯ 1.5 ಮಿಲಿಯನ್ ದಿರ್ಹಮ್‌ಗೆ (ಸುಮಾರು 4 ಕೋಟಿ ರೂ.) ಮಾರಾಟವಾಗಿದೆ. ಅಬುಧಾಬಿಯ ಉದ್ಯಮಿಯೊಬ್ಬರು ತಮ್ಮ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಇದನ್ನು ಖರೀದಿಸಿದ್ದಾರೆ.
Read Full Story

10:38 PM (IST) Sep 04

ಮೆಟ್ರೋ ಒಂದು ಗಂಟೆಗೆ ಎಷ್ಟು ಗಳಿಸುತ್ತದೆ? ಈ ಹಣ ಎಲ್ಲಿಗೆ ಹೋಗುತ್ತದೆ?

ದೆಹಲಿ-NCR ಜೀವನಾಡಿಯಾದ ದೆಹಲಿ ಮೆಟ್ರೋ, ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಂದಾಗಿ ಗಂಟೆಗೆ 1 ಕೋಟಿಗೂ ಹೆಚ್ಚು ಗಳಿಸುತ್ತದೆ. ಈ ಆದಾಯವನ್ನು ಮೆಟ್ರೋ ಕಾರ್ಯಾಚರಣೆ, ನಿರ್ವಹಣೆ, ಮತ್ತು ವಿಸ್ತರಣಾ ಯೋಜನೆಗಳಿಗೆ ಬಳಸಲಾಗುತ್ತದೆ, ಹಾಗೂ ಉಳಿದ ಲಾಭವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಹಂಚಿಕೊಳ್ಳುತ್ತವೆ.

Read Full Story

10:08 PM (IST) Sep 04

ಮಕ್ಕಳಿಗೆ ಕತ್ತೆ ಹಾಲು ಯಾಕೆ ಕೊಡ್ತಾರೆ? ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ?

ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕಡಿಮೆ ಕೇಸಿನ್‌ನಂತಹ ವಿಶಿಷ್ಟ ಪೌಷ್ಟಿಕಾಂಶಗಳನ್ನು ಹೊಂದಿದೆ. ಆದರೆ, ಕ್ಯಾನ್ಸರ್‌ನಂತಹ ರೋಗಗಳನ್ನು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹಸಿ ಹಾಲಿನ ಸೇವನೆ ಅಪಾಯಕಾರಿ ಮತ್ತು ಮಕ್ಕಳಿಗೆ ನೀಡುವ ಮುನ್ನ ವೈದ್ಯರ ಸಲಹೆ ಅತ್ಯಗತ್ಯ.
Read Full Story

09:32 PM (IST) Sep 04

Film Etiquette - ಥಿಯೇಟರ್‌ನಲ್ಲಿ ಸಿನಿಮಾ ನೋಡ್ತೀರಾ? ಈ 10 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!

ಥಿಯೇಟರ್‌ನಲ್ಲಿ ಸಿನಿಮಾ ನೋಡುವಾಗ ಮೊಬೈಲ್ ಫೋನ್ ಬಳಕೆ, ಗಟ್ಟಿಯಾಗಿ ಮಾತಾಡುವುದು, ಮುಂದಿನ ಸೀಟಿಗೆ ಕಾಲು ತಾಗಿಸುವುದು, ಸ್ಪಾಯ್ಲರ್ ಕೊಡುವುದರಿಂದ ಹಿಡಿದು ಪಾಪ್‌ಕಾರ್ನ್ ತಿನ್ನುವವರೆಗೆ ಗಮನಿಸಬೇಕಾದ 10 ಪ್ರಮುಖ ಸಿನಿಮಾ ಶಿಷ್ಟಾಚಾರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
Read Full Story

09:24 PM (IST) Sep 04

1 ಲಕ್ಷ ರೂ. ಹೂಡಿಕೆಗೆ ಮೂರು ವರ್ಷದಲ್ಲಿ 2.5 ಲಕ್ಷ ವಾಪಸ್‌ - SBI ಸೇರಿ ಟಾಪ್‌ 5 Mutual Fund ಮಾಹಿತಿ

ಮ್ಯೂಚುವಲ್ ಫಂಡ್‌ಗಳಲ್ಲಿ ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. ಕಳೆದ ಮೂರು ವರ್ಷಗಳಲ್ಲಿ, ವಿಶೇಷವಾಗಿ ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಅತ್ಯಧಿಕ ಆದಾಯವನ್ನು ನೀಡಿವೆ, ₹1 ಲಕ್ಷದ ಹೂಡಿಕೆಯನ್ನು ₹2.5 ಲಕ್ಷಕ್ಕೂ ಅಧಿಕವಾಗಿ ಬೆಳೆಸಿವೆ. ಈ ಲೇಖನವು ಯುಟಿಐ, ಎಸ್‌ಬಿಐ, ಮತ್ತು ಆಕ್ಸಿಸ್‌ನಂತಹ ಟಾಪ್-5 ಉತ್ತಮ ಪ್ರದರ್ಶನ ನೀಡುವ ಫಂಡ್‌ಗಳನ್ನು ಪಟ್ಟಿಮಾಡುತ್ತದೆ.
Read Full Story

08:31 PM (IST) Sep 04

ಜನ್ಮಾಷ್ಟಮಿಗೆ ನಟ ರಾಮ್ ಚರಣ್ ಅವಳಿ ಮಕ್ಕಳ ಸ್ಪೆಷಲ್ ಸರ್ಪ್ರೈಸ್ - ಕೃಷ್ಣ-ರಾಧೆಯ ಲುಕ್ ವೈರಲ್

ನಟ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವರು 2026ರ ಜನ್ಮಾಷ್ಟಮಿಯನ್ನು ತಮ್ಮ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಅವಳಿ ಮಕ್ಕಳಾದ ಶಿವರಾಮ್ ಮತ್ತು ಅನ್ವೀರಾ ದೇವಿಗೆ ಕೃಷ್ಣ-ರಾಧೆಯ ವೇಷ ಹಾಕಿ ಖುಷಿಪಟ್ಟಿದ್ದಾರೆ. ಈ ಅಪರೂಪದ ಫ್ಯಾಮಿಲಿ ಫೋಟೋ ಈಗ ಆನ್‌ಲೈನ್‌ನಲ್ಲಿ ಎಲ್ಲರ ಮನಗೆದ್ದಿದೆ.

Read Full Story

07:05 PM (IST) Sep 04

ದೆಹಲಿ ಸೇರಿದಂತೆ ಹಲವೆಡೆ ಭಾರಿ ಮಳೆಯಿಂದ ವಿಮಾನ ಹಾರಟ ಸ್ಥಗಿತ, ರೆಡ್ ಅಲರ್ಟ್ ಘೋಷಣೆ

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನೀರು ತುಂಬಿ ಹೋಗಿದೆ. ವಿಮಾನ ಹಾರಾಟ ವ್ಯತ್ಯಯವಾಗಿದ್ದರೆ, ಇತ್ತ ಹವಾಮಾನ ಇಲಾಖೆ ಹಲವು ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

Read Full Story

06:45 PM (IST) Sep 04

ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್ ರೀತಿಯಲ್ಲಿ ಬೆಳೆಸಲು ಮಾಸ್ಟರ್ ಪ್ಲಾನ್! ಬಿಸಿಸಿಐ ಖಡಕ್ ಸೂಚನೆ

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಅವರನ್ನು ಸಚಿನ್ ತೆಂಡೂಲ್ಕರ್ ಅವರಂತೆ ದೀರ್ಘಕಾಲದ ಆಟಗಾರನನ್ನಾಗಿ ರೂಪಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಕೇವಲ 15ನೇ ವಯಸ್ಸಿಗೆ ದುಲೀಪ್ ಟ್ರೋಫಿ, ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಅವರ ಸಾಧನೆಗಳನ್ನು ಈ ಲೇಖನ ವಿವರಿಸುತ್ತದೆ.
Read Full Story

06:32 PM (IST) Sep 04

ಅಂಗಡಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಹುಡುಗಿ ಇಂದು ಸ್ಟಾರ್ ಹೀರೋಯಿನ್ - ಯಾರು ಈಕೆ?

ಒಂದು ಕಾಲದಲ್ಲಿ ತನ್ನ ಖರ್ಚಿಗಾಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಹುಡುಗಿ ಇಂದು ಸ್ಟಾರ್ ಹೀರೋಗಳ ಜೊತೆ ನಟಿಸಿ ಕೋಟ್ಯಂತರ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಅಂದಹಾಗೆ, ಆಕೆ ಬೇರೆ ಯಾರೂ ಅಲ್ಲ, ನಟಿ ಹಾಗೂ ಬಿಟೌನ್‌ನಲ್ಲಿ ಜನಪ್ರಿಯತೆ ಗಳಿಸಿರುವ ಮಹಿರಾ ಖಾನ್.

Read Full Story

04:51 PM (IST) Sep 04

ಅಡೋಬ್‌ ನೂತನ ಸಿಇಒ ಆಗಿ ಭಾರತೀಯ ಚಕ್ರವರ್ತಿ ನೇಮಕ, ಐಐಟಿ ವಾರಣಾಸಿಯಿಂದ ಸಿಲಿಕಾನ್‌ ಸಿಲಿಕಾನ್ ವ್ಯಾಲಿಯವರೆಗಿನ ಪಯಣ

ವಾರಣಾಸಿಯ ಐಐಟಿಯಲ್ಲಿ ಓದಿದ ಭಾರತೀಯ ಮೂಲದ ಅನಿಲ್ ಚಕ್ರವರ್ತಿ, ಅಡೋಬ್ ಸಂಸ್ಥೆಯ ನೂತನ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕಗೊಂಡಿದ್ದಾರೆ. ಶಂತನು ನಾರಾಯಣ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿರುವ ಅವರು, AI ಯುಗದಲ್ಲಿ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಮೂಲಕ ಅಡೋಬ್ ನೇತೃತ್ವ ವಹಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

04:47 PM (IST) Sep 04

140 kg ಡೆಡ್‌ಲಿಫ್ಟ್ ಮಾಡಿದ 21 ವರ್ಷದ ಸುಂದರಿ; ತನ್ನ ದೇಹ ತೂಕದ 3 ಪಟ್ಟು ಭಾರ ಎತ್ತಿದ ಕಿಯಾ ಕುನಾಲ್ ಬ್ಯಾನರ್ಜಿ ಯಾರು?

21 ವರ್ಷದ ಭಾರತೀಯ ಪವರ್‌ಲಿಫ್ಟರ್ ಕಿಯಾ ಕುನಾಲ್ ಬ್ಯಾನರ್ಜಿ, ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 140 ಕೆಜಿ ಡೆಡ್‌ಲಿಫ್ಟ್ ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ತನ್ನ ದೇಹದ ತೂಕವಾದ 45.70 ಕೆಜಿಗಿಂತ ಮೂರು ಪಟ್ಟು ಹೆಚ್ಚು ಭಾರ ಎತ್ತುವ ಮೂಲಕ ಇವರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತದ ಭವಿಷ್ಯದ ಪವರ್‌ಲಿಫ್ಟಿಂಗ್ ತಾರೆ ಎಂದು ಪ್ರಶಂಸಿಸಲ್ಪಡುತ್ತಿದ್ದಾರೆ.
Read Full Story

03:43 PM (IST) Sep 04

ಪ್ರತಿದಿನವೂ ಅನ್ನ ಜಾಸ್ತಿ ತಿಂತೀರಾ? ಬಿಳಿ ಅಕ್ಕಿ ಅನ್ನದಿಂದಾಗೋ 5 ಸಮಸ್ಯೆಗಳಿವು..!

ಮೂರು ಹೊತ್ತೂ ಬಿಳಿ ಅಕ್ಕಿ ಅನ್ನ ತಿನ್ನುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅನ್ನ ಇಲ್ಲದೆ ಊಟವೇ ಪೂರ್ಣವಾಗುವುದಿಲ್ಲ ಎನ್ನುವುದು ಹಲವರ ಮಾತು. ಆದರೆ, ಇದೇ ಅನ್ನವನ್ನು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ ಎನ್ನುತ್ತಾರೆ ತಜ್ಞರು.

Read Full Story

03:25 PM (IST) Sep 04

13 ವರ್ಷದ IT ಕೆಲಸಕ್ಕೆ ಗುಡ್‌ಬೈ - ಕಾಡಿನ ಹಾದಿ ಹಿಡಿದು ಲಕ್ಷ ಲಕ್ಷ ಗಳಿಸುತ್ತಿರುವ ಟೆಕ್ಕಿ!

13 ವರ್ಷಗಳ ಐಟಿ ವೃತ್ತಿ ತೊರೆದ ಹೈದರಾಬಾದ್‌ನ ಸಾಯಿ ಕಿರಣ್ ಭಾಗವತುಲ, ತಮ್ಮ ವನ್ಯಜೀವಿ ಪ್ರೀತಿಯನ್ನೇ 'ವೈಲ್ಡ್‌ಲೈಫ್ ವಿಸ್ಪರರ್ಸ್' ಎಂಬ ವಿಶಿಷ್ಟ ಉದ್ಯಮ ಕಟ್ಟಿದ್ದಾರೆ. ಈ ಸ್ಟಾರ್ಟ್‌ಅಪ್, ಪ್ರಾಣಿಗಳ ವರ್ತನೆಯಿಂದ ಕಾರ್ಪೊರೇಟ್ ಜಗತ್ತಿಗೆ ನಾಯಕತ್ವ , ತಂಡದ ಕೆಲಸದಂತಹ ಪಾಠಗಳನ್ನು ಕಲಿಸುತ್ತದೆ,

Read Full Story

02:48 PM (IST) Sep 04

ಜಿಮ್ ಇಲ್ಲ, ಡಯಟ್ ಇಲ್ಲ, 41ರಲ್ಲೂ ಎರಡು ಮಕ್ಕಳ ತಾಯಿ ನಯನತಾರಾ ಫಿಟ್‌ನೆಸ್ ಸೀಕ್ರೆಟ್ ಸಿಂಪಲ್ ಇದೆ ನೋಡಿ!

40 ವರ್ಷ ದಾಟಿದರೂ ನಯನತಾರಾ ಗ್ಲಾಮರ್ ಕಿಂಚಿತ್ತೂ ಕಡಿಮೆ ಆಗಿಲ್ಲ. ಯುವ ನಟಿಯರಿಗೆ ಪೈಪೋಟಿ ನೀಡುತ್ತಾ ಲೇಡಿ ಸೂಪರ್‌ಸ್ಟಾರ್ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಕಠಿಣ ಡಯಟ್, ಜಿಮ್ ವರ್ಕೌಟ್ ಇಲ್ಲದೆ ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಿಳಿಯೋಣ ಬನ್ನಿ.

Read Full Story

01:13 PM (IST) Sep 04

ಕರ್ಕಾಟಕದಲ್ಲಿ ಗುರು ಸಂಚಾರ; ಈ 5 ರಾಶಿಗಳಿಗೆ ಸಾಲದಿಂದ ಮುಕ್ತಿ, ಹಣ, ಉದ್ಯೋಗದಲ್ಲಿ ಭರ್ಜರಿ ಲಾಭ!

ಜ್ಯೋತಿಷ್ಯದಲ್ಲಿ ಗುರು ಗ್ರಹಕ್ಕೆ ವಿಶೇಷ ಸ್ಥಾನವಿದೆ. ಸದ್ಯ ಗುರು ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಅಕ್ಟೋಬರ್ 31ರವರೆಗೆ ಇಲ್ಲೇ ಇರಲಿದ್ದಾನೆ. ಈ ಸಂಚಾರದಿಂದ 'ವಿಪರೀತ ರಾಜಯೋಗ' ಉಂಟಾಗುತ್ತಿದ್ದು, ಕೆಲವು ರಾಶಿಗಳಿಗೆ ಭಾರಿ ಅದೃಷ್ಟ ತರಲಿದೆ. ಆ ರಾಶಿಗಳು ಯಾವುವು ನೋಡೋಣ.

Read Full Story

01:12 PM (IST) Sep 04

ರಾಜಕೀಯ ಗಡಿ ದಾಟಿ ಅದಾನಿ ಗ್ರೂಪ್ ವಿಸ್ತರಣೆ - ಬಿಜೆಪಿಯೇತರ ರಾಜ್ಯಗಳಲ್ಲೂ ₹5 ಲಕ್ಷ ಕೋಟಿಗೂ ಅಧಿಕ ಹೂಡಿಕೆ!

ಅದಾನಿ ಸಮೂಹವು ರಾಜಕೀಯ ಗಡಿಗಳನ್ನು ಮೀರಿ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ಆಡಳಿತವಿರುವ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ರಸ್ತೆ, ಬಂದರು, ಇಂಧನ ವಲಯಗಳಲ್ಲಿ ₹5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಹೂಡಿಕೆಗಳು ರಾಜ್ಯಗಳ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿವೆ.
Read Full Story

12:32 PM (IST) Sep 04

ಕಾಂಗ್ರೆಸ್‌ ಶಾಸಕನ ಮನೆ ಬಳಿ ಬಾಂಬ್‌ ಬ್ಲಾಸ್ಟ್‌, ಧರಿಸಿದ ಬಟ್ಟೆಯಲ್ಲೇ ಹೊರಗೋಡಿ ಬಂದ MLA

ಮಣಿಪುರದ ಕಾಂಗ್ರೆಸ್ ಶಾಸಕ ಹಾಗೂ ಸಿಎಲ್‌ಪಿ ನಾಯಕ ಕೇಲ್ಶಮ್ ಮೇಘಚಂದ್ರ ಸಿಂಗ್ ಅವರ ನಿವಾಸದ ಬಳಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಘಟನೆಯು ಅವರು ವಿಧಾನಸಭೆಯಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ಸರ್ಕಾರವನ್ನು ಟೀಕಿಸಿದ ಒಂದು ದಿನದ ನಂತರ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Read Full Story

12:23 PM (IST) Sep 04

ಫ್ಯಾನ್ ಧೂಳು ಹಿಡಿದಿದ್ದರೆ ಕರೆಂಟ್ ಬಿಲ್ ಹೆಚ್ಚಾಗುತ್ತಾ, ಸತ್ಯ ಏನು?

ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಸಂಗ್ರಹವಾದಾಗ ಗಾಳಿಯ ಹರಿವು ಕಡಿಮೆಯಾಗುತ್ತದೆ, ಇದರಿಂದ ಫ್ಯಾನ್ ಅನ್ನು ಹೆಚ್ಚಿನ ಸ್ಪೀಡ್‌ನಲ್ಲಿ ದೀರ್ಘಕಾಲ ಬಳಸಬೇಕಾಗಿ ಬಂದು ಪರೋಕ್ಷವಾಗಿ ಕರೆಂಟ್ ಬಿಲ್ ಹೆಚ್ಚಾಗಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡಲು ಫ್ಯಾನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರ ಜೊತೆಗೆ, ಅತ್ಯಂತ ಕಡಿಮೆ ವಿದ್ಯುತ್ ಬಳಸುವ ಬಿಎಲ್‌ಡಿಸಿ (BLDC) ತಂತ್ರಜ್ಞಾನದ ಫ್ಯಾನ್‌ಗಳನ್ನು ಬಳಸುವುದು ಸೂಕ್ತವಾಗಿದೆ.

Read Full Story

12:13 PM (IST) Sep 04

ಸೌಂದರ್ಯ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು? ಆ ನಟಿಗೂ 'ಮಿಸ್ ಯೂ' ಪದಕ್ಕೂ ಇರೋ ಕನೆಕ್ಷನ್ ಏನಂತೆ ಗೊತ್ತಾ?

ದಿವಂಗತ ನಟಿ ಸೌಂದರ್ಯ ಎಂದರೆ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಅಚ್ಚುಮೆಚ್ಚಿನ ಹೆಸರು. ಆದರೆ ಅರ್ಜುನ್ ಸರ್ಜಾ ಅವರಿಗೆ ಸೌಂದರ್ಯ ಕೇವಲ ಸಹನಟಿಯಲ್ಲ, ಅವರು ಆತ್ಮೀಯ ಗೆಳತಿ. ಇತ್ತೀಚಿನ ಸಂದರ್ಶನವೊಂದರಲ್ಲಿ ಸೌಂದರ್ಯ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ..

Read Full Story

11:49 AM (IST) Sep 04

ಇನ್‌ಸ್ಟಾಗ್ರಾಮ್‌ನಲ್ಲಿ ಬೆಳೆದ ಪ್ರೀತಿಗೆ ರಕ್ತಸಿಕ್ತ ಅಂತ್ಯ - 18 ತಿಂಗಳ ಬಳಿಕ ಹೆಂಡತಿಯ ಶವ ಬಿಟ್ಟು ಗಂಡ ಓಡಿದ್ದೇಕೆ?

ಝಾನ್ಸಿಯಲ್ಲಿ 27 ವರ್ಷದ ಶಿವಾನಿ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಘಟನೆಯ ನಂತರ ತಲೆಮರೆಸಿಕೊಂಡಿರುವ ಪತಿ ಯಶ್ ಠಾಕೂರ್ ಮೇಲೆಯೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Read Full Story

11:12 AM (IST) Sep 04

ಪಾಕಿಸ್ತಾನದ ಕರಾಚಿಯಲ್ಲಿ ಗಣೇಶೋತ್ಸವ! ಅಲ್ಲಿನ ಮರಾಠಿ ಕುಟುಂಬಕ್ಕಾಗಿ ಮುಸ್ಲಿಂ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಪಾಕಿಸ್ತಾನದ ಕರಾಚಿಯಲ್ಲಿ ಮುಸ್ಲಿಂ ಕಲಾವಿದನೊಬ್ಬ ಗಣೇಶ ಚತುರ್ಥಿಗಾಗಿ ಗಣಪತಿಯ ವಿಗ್ರಹಕ್ಕೆ ಬಣ್ಣ ಹಚ್ಚುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಧರ್ಮದ ಗಡಿಗಳನ್ನು ಮೀರಿದ ಈ ಭಾವೈಕ್ಯತೆಯ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story

11:12 AM (IST) Sep 04

ಭುವನೇಶ್ವರ್ ಕುಮಾರ್ ಮಾರಕ ದಾಳಿಗೆ ರಿಂಕು ಸಿಂಗ್ ಪಡೆ ಧೂಳೀಪಟ..! 4 ಓವರ್ 10 ರನ್ 4 ವಿಕೆಟ್ RCB ವೇಗಿ

ಯುಪಿ ಟಿ20 ಲೀಗ್‌ನ ಕ್ವಾಲಿಫೈಯರ್-1 ಪಂದ್ಯದಲ್ಲಿ, ನಾಯಕ ಭುವನೇಶ್ವರ್ ಕುಮಾರ್ ತಮ್ಮ ಮಾರಕ ಬೌಲಿಂಗ್ ಪ್ರದರ್ಶನದಿಂದ ಲಖನೌ ಫಾಲ್ಕನ್ಸ್ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಕೇವಲ 10 ರನ್‌ ನೀಡಿ 4 ವಿಕೆಟ್‌ ಪಡೆದ ಭುವಿ, ರಿಂಕು ಸಿಂಗ್ ನಾಯಕತ್ವದ ಮೀರತ್ ಮೆವರಿಕ್ಸ್ ವಿರುದ್ಧ 145 ರನ್‌ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿದರು.

Read Full Story

10:42 AM (IST) Sep 04

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

ಪ್ರಖ್ಯಾತ ಜಾವಾ, ಯೆಜ್ಡಿ ಬೈಕ್‌ಗಳ ತಯಾರಕ 'ಕ್ಲಾಸಿಕ್ ಲೆಜೆಂಡ್ಸ್' ಸಂಸ್ಥೆಯು 'ಇಂಡಿಯನ್ ಸೂಪರ್ ಗೇಮಿಂಗ್ ಲೀಗ್ 2026' ಜೊತೆ ಕೈಜೋಡಿಸಿದೆ. ಈ ಸಹಭಾಗಿತ್ವದ ಮೂಲಕ, ಬೈಕ್ ರೈಡಿಂಗ್ ಮತ್ತು ವಿಡಿಯೋ ಗೇಮಿಂಗ್ ಲೋಕವನ್ನು ಒಂದುಗೂಡಿಸಿ, ಹೊಸ ತಲೆಮಾರಿನ ಗೇಮರ್‌ಗಳನ್ನು ತಲುಪುವುದು ಕಂಪನಿಯ ಉದ್ದೇಶವಾಗಿದೆ.
Read Full Story

10:07 AM (IST) Sep 04

ಹೈಕೋರ್ಟ್‌ನಲ್ಲಿ ತಮಿಳು ಪ್ರಧಾನ ಭಾಷೆ - ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮದ್ರಾಸ್ ಹೈಕೋರ್ಟ್‌ನ ಕಲಾಪಗಳಲ್ಲಿ ತಮಿಳು ಭಾಷೆಯನ್ನು ಪ್ರಧಾನ ಭಾಷೆಯನ್ನಾಗಿ ಮಾಡಲು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ತಂತ್ರಜ್ಞಾನದ ಬೆಳವಣಿಗೆಯನ್ನು ಉಲ್ಲೇಖಿಸಲಾಗಿದೆ.

Read Full Story

09:17 AM (IST) Sep 04

ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಿ, ರಾಜ್ಯಗಳಿಗೆ ಸಚಿವ ನಿತಿನ್‌ ಗಡ್ಕರಿ ಮನವಿ

ದೇಶಾದ್ಯಂತ ಖಾಸಗಿ ದ್ವಿಚಕ್ರ ವಾಹನಗಳನ್ನು 'ಬೈಕ್ ಟ್ಯಾಕ್ಸಿ'ಗಳಾಗಿ ಬಳಸಲು ಅನುಮತಿ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ಈ ಯೋಜನೆಯಿಂದ 8 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

Read Full Story

09:08 AM (IST) Sep 04

10 ಸೆಕೆಂಡ್‌ಗಳ ರೀಲ್‌... 9 ವರ್ಷಗಳ ಹುಡುಕಾಟಕ್ಕೆ ಕೊನೆ ಹಾಡಿತು ವಿಡಿಯೋದಲ್ಲಿನ ಆ ವಿಶಿಷ್ಟ ನಗು!

ಸ್ವಾತಂತ್ರ್ಯ ದಿನದಂದು ವೈರಲ್ ಆದ 10 ಸೆಕೆಂಡ್‌ಗಳ ವಿಡಿಯೋವೊಂದು, ಒಂಬತ್ತು ವರ್ಷಗಳ ಹಿಂದೆ ಜಾರ್ಖಂಡ್‌ನಿಂದ ಕಾಣೆಯಾಗಿದ್ದ ಯಾಸಿನ್ ಶೇಖ್ ಎಂಬ ಯುವಕ. ಮತ್ತೆ ಕುಟುಂಬಕ್ಕೆ ಸೇರಿದ. ಕೇರಳದ ಆರೈಕೆ ಕೇಂದ್ರದಲ್ಲಿ 'ರಶೀದ್' ಹೆಸರಿನಲ್ಲಿದ್ದ ಅವನನ್ನು ಪತ್ತೆಹಚ್ಚಿದ್ದು ಆ ಹತ್ತು ಸೆಕೆಂಡ್‌ಗಳ ವಿಡಿಯೋ..

Read Full Story

08:51 AM (IST) Sep 04

ಅಕ್ರಮ ಶುಲ್ಕ ವಸೂಲಿಗೆ ದೇಶದ 100 ಟೋಲ್‌ಗಳಲ್ಲಿ ಅಕ್ರಮ ಅಪ್ಲಿಕೇಶನ್‌

ದೇಶಾದ್ಯಂತ 100 ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ಅಕ್ರಮವಾಗಿ ಶುಲ್ಕ ವಸೂಲಿ ಮಾಡಲು ಎರಡು ಅನಧಿಕೃತ ಆ್ಯಪ್‌ಗಳನ್ನು ಬಳಸಲಾಗುತ್ತಿತ್ತು. ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ಈ ಕೋಟ್ಯಂತರ ರೂಪಾಯಿಗಳ ವಂಚನೆ ಬೆಳಕಿಗೆ ಬಂದಿದೆ.
Read Full Story

08:49 AM (IST) Sep 04

ಸದ್ಯಕ್ಕೆ ರೋಹಿತ್‌ ಶರ್ಮಾ ನಿವೃತ್ತಿ ಆಗಲ್ಲ, ವಿವಿಎಸ್ ಲಕ್ಷ್ಮಣ್‌ಗೆ ಹೊಸ ಹುದ್ದೆಯೂ ಇಲ್ಲ!

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ ಶರ್ಮಾ ಅವರ ನಿವೃತ್ತಿ ಮತ್ತು ವಿವಿಎಸ್ ಲಕ್ಷ್ಮಣ್‌ಗಾಗಿ ಹೊಸ ಕ್ರಿಕೆಟ್‌ ಡೈರೆಕ್ಟರ್‌ ಹುದ್ದೆ ಸೃಷ್ಟಿಸುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇದೇ ವೇಳೆ, ಮಹತ್ವದ ಸಭೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಗೈರುಹಾಜರಾಗಿದ್ದು, ಮಂಡಳಿಯೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
Read Full Story

08:05 AM (IST) Sep 04

GSLV-F17 Launch - ಇಸ್ರೋ ಮತ್ತೊಂದು ಮೈಲಿಗಲ್ಲು, GSLV-F17 ರಾಕೆಟ್ ಉಡಾವಣೆ ಯಶಸ್ವಿ, ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!

ಶ್ರೀಹರಿಕೋಟಾ:ಇಸ್ರೋ(ISRO) ಮತ್ತೊಂದು ಸಾಧನೆ ಮಾಡಿದ್ದು, ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2:55 ಸುಮಾರಿಗೆ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV ರಾಕೆಟ್ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

Read Full Story

07:06 AM (IST) Sep 04

ಜಿಡಿಪಿ ಬೆಳವಣಿಗೆ - ಕಾಂಗ್ರೆಸ್‌-ಬಿಜೆಪಿ ನಡುವೆ ಭಾರೀ ಜಟಾಪಟಿ

2026-27ರ ಮೊದಲ ತ್ರೈಮಾಸಿಕದ ಶೇ.7.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸರ್ಕಾರ ಘೋಷಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರದ ಆಧಾರ ವರ್ಷವನ್ನು ಬದಲಿಸಿದ್ದೇ ಈ ವಿವಾದಕ್ಕೆ ಕಾರಣವಾಗಿದ್ದು, ಇದು ತಪ್ಪು ಲೆಕ್ಕಾಚಾರ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಆರೋಪಿಸಿವೆ.

Read Full Story

More Trending News