LIVE NOW
Published : Apr 12, 2026, 07:45 AM ISTUpdated : Apr 12, 2026, 11:13 PM IST

India news live: ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನುಚ್ಚುನೂರು! ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ಶುಭ್‌ಮನ್ ಗಿಲ್!

ಸಾರಾಂಶ

ಜಾಮ್‌ನಗರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ನೇತೃತ್ವದ ಗುಜರಾತಿನ ಜಾಮ್ ನಗರದಲ್ಲಿರುವ ವನತಾರಾ ವನ್ಯಜೀವಿ ಪುನರ್ವಸತಿ ಕೇಂದ್ರವು ವನ್ಯ ಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ವಿಶ್ವದ ಮೊದಲ ಸಮಗ್ರ ಜಾಗತಿಕ ವಿವಿ ಸ್ಥಾಪಿಸುವುದಾಗಿ ಘೋಷಿಸಿದೆ. ವಿವಿಯು ಪದವಿ ಪೂರ್ವ, ಸ್ನಾತಕೋತ್ತರ, ಫೆಲೋಶಿಪ್ ಮತ್ತು ಇತರ ವಿಶೇಷ ತರಬೇತಿಗಳನ್ನು ನೀಡುತ್ತದೆ. ಇವುಗಳಲ್ಲಿ ವನ್ಯಜೀವಿ ಔಷಧ ಮತ್ತು ಶಸ್ತ್ರಚಿಕಿತ್ಸೆ, ಪೋಷಣೆ, ತಳಿಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ ಇತ್ಯಾದಿ ಸೇರಿವೆ. ವನ್ಯ ಜೀವಿ ಆರೈಕೆಯಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Shubman Gill

11:13 PM (IST) Apr 12

ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನುಚ್ಚುನೂರು! ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ಶುಭ್‌ಮನ್ ಗಿಲ್!

ಶುಭಮನ್ ಗಿಲ್ ಐಪಿಎಲ್‌ನಲ್ಲಿ 4000 ರನ್ ಪೂರೈಸಿದ ಅತಿ ಕಿರಿಯ ಆಟಗಾರನಾಗಿ, ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕನ ಆಟವಾಡಿದ ಅವರು, ಅರ್ಧಶತಕ ಸಿಡಿಸಿ ಗುಜರಾತ್ ಟೈಟನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
Read Full Story

10:18 PM (IST) Apr 12

ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ

 'ದೀದಿ ಕೆ ಬಖ್ರಿ' ಎಂಬ ಯೋಜನೆ ಮಹಿಳೆಯರ ಬದುಕನ್ನೇ ಬದಲಿಸುತ್ತಿದೆ. ತರಕಾರಿ, ಮೀನು, ಕೋಳಿ ಸಾಕಣೆಯಂತಹ ಕೆಲಸಗಳಿಂದ ಅವರು ಪ್ರತಿ ತಿಂಗಳು 20-25 ಸಾವಿರ ರೂಪಾಯಿ ಸಂಪಾದಿಸುತ್ತಿದ್ದಾರೆ. ಈ ಯಶಸ್ಸಿನ ಕಥೆಯನ್ನು ತಿಳಿಯೋಣ ಬನ್ನಿ.

Read Full Story

09:32 PM (IST) Apr 12

ಅಮೆರಿಕ ಕಂಡೀಷನ್ ಒಪ್ಪಿಕೊಳ್ಳಲಿಲ್ಲವಾ ಇರಾನ್? ಮತ್ತೆ ನೀವೇ ಬರಬೇಕು ನಾನಲ್ಲ ಎಂದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅನ್ನು ಒಂದೇ ದಿನದಲ್ಲಿ ನಾಶಮಾಡುವುದಾಗಿ ಎಚ್ಚರಿಸಿದ್ದಾರೆ. ಮಾತುಕತೆ ವಿಫಲವಾದ ಬೆನ್ನಲ್ಲೇ ಈ ಹೇಳಿಕೆ ಬಂದಿದ್ದು, ಹಾರ್ಮುಝ್ ಜಲಸಂಧಿಗೆ ಅಮೆರಿಕದ ಯುದ್ಧನೌಕೆಗಳು ಪ್ರವೇಶಿಸಿರುವುದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಹೆಚ್ಚಿಸಿದೆ.
Read Full Story

08:51 PM (IST) Apr 12

ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗ ಹೊತ್ತಿ ಉರಿದ ಐವರು ಮದುವೆಗೆ ತೆರಳುತ್ತಿದ್ದವರ ಕಾರ್

ಮದುವೆಗೆ ತೆರಳುತ್ತಿದ್ದ ಐವರು ಪ್ರಯಾಣಿಸುತ್ತಿದ್ದ ಕಾರೊಂದು ಚಲಿಸುತ್ತಿದ್ದಂತೆಯೇ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Read Full Story

07:54 PM (IST) Apr 12

Soundarya Assets - ಆ ರಹಸ್ಯ ಯಾರಿಗೂ ಗೊತ್ತಿಲ್ಲ - ನಟಿ ಸೌಂದರ್ಯ ಆಸ್ತಿ ಎಲ್ಲಿ ಹೋಯ್ತು?

ಖ್ಯಾತ ಹಾಸ್ಯನಟ ಬಾಬು ಮೋಹನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು, ಸುಮಾರು 3 ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ.

Read Full Story

07:49 PM (IST) Apr 12

ಕುಂಭಮೇಳದ ಮೊನಾಲಿಸಾ ನಿಗೂಢ ಕಣ್ಮರೆ! ಹುಡುಕಿ ಕೊಡಿ ಎಂದ ಪತಿ ಫರ್ಮಾನ್​ ಖಾನ್ - ಎಲ್ಲಿ ಹೋದಳು ಬಾಲೆ

ಕುಂಭಮೇಳದಲ್ಲಿ ವೈರಲ್ ಆಗಿದ್ದ ರುದ್ರಾಕ್ಷಿ ಬೆಡಗಿ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್‌ನನ್ನು ಮದುವೆಯಾಗಿದ್ದರು. ಪತಿಯ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ಬೆನ್ನಲ್ಲೇ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Read Full Story

07:45 PM (IST) Apr 12

ಇರಾನ್ ಜೊತೆಗಿನ ಮಾತುಕತೆ ವಿಫಲ - ಕೆರಳಿದ ಟ್ರಂಪ್‌ನಿಂದ ಶಾಕಿಂಗ್ ಘೋಷಣೆ, ಇಡೀ ವಿಶ್ವವೇ ಸ್ತಬ್ಧ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರ್ಮೋಜ್ ಜಲಸಂಧಿ ಮೂಲಕ ಸಾಗುವ ಹಡಗುಗಳನ್ನು ತಡೆಯಲು ನೌಕಾಪಡೆಗೆ ಆದೇಶಿಸಿದ್ದಾರೆ. ಇರಾನ್‌ನ ಕಾನೂನುಬಾಹಿರ ಸುಂಕ ವಸೂಲಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಜಾಗತಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
Read Full Story

07:16 PM (IST) Apr 12

ಮಾತೃಭೂಮಿ ರಿಲೀಸ್‌ಗೆ ಸಂಕಷ್ಟ! ಶೇ. 40ರಷ್ಟು ಸಲ್ಮಾನ್ ಖಾನ್ ಸಿನಿಮಾ ಮತ್ತೆ ಶೂಟಿಂಗ್ ಮಾಡಿದ್ದೇಕೆ?

ಸಲ್ಮಾನ್ ಖಾನ್ ಅವರ ಮಾತೃಭೂಮಿ ಚಿತ್ರದ ದೊಡ್ಡ ಅಪ್‌ಡೇಟ್ ಬಂದಿದೆ. ಮೊದಲು 'ಬ್ಯಾಟಲ್ ಆಫ್ ಗಲ್ವಾನ್' ಎಂದು ಹೆಸರಿಡಲಾಗಿತ್ತು. ಆದರೆ ನಂತರ, ಇದರ ಶೀರ್ಷಿಕೆಯನ್ನು 'ಮಾತೃಭೂಮಿ' ಎಂದು ಬದಲಾಯಿಸಲಾಯಿತು.

Read Full Story

07:07 PM (IST) Apr 12

ಕುಂಭಮೇಳ ವೈರಲ್ ಹುಡುಗಿ ಮದುವೆ ವಯಸ್ಸಿನ ವಿವಾದದಲ್ಲಿ ಹೊಸ ತಿರುವು! ಕೇರಳ ಪೊಲೀಸರ ತನಿಖೆ

ಕುಂಭಮೇಳದ ಫೋಟೋದಿಂದ ವೈರಲ್ ಆಗಿದ್ದ ಹುಡುಗಿಯ ಮದುವೆ ವಿವಾದಕ್ಕೆ ತಿರುಗಿದೆ. ಆಕೆ ಅಪ್ರಾಪ್ತೆ ಎಂದು ರಾಷ್ಟ್ರೀಯ ಆಯೋಗ ಹೇಳಿದರೆ, ಮದುವೆಗೆ ನೀಡಿದ್ದ ಆಧಾರ್ ಕಾರ್ಡ್ ಅಸಲಿ ಎಂದು ಕೇರಳ ಪೊಲೀಸ್ ವರದಿ ತಿಳಿಸಿದೆ. ಈ ವಯಸ್ಸಿನ ಗೊಂದಲದಿಂದಾಗಿ ಆಕೆಯ ಪತಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
Read Full Story

06:57 PM (IST) Apr 12

ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡಿದ್ರೆ ಸಿಗತ್ತೆ 24 ಲಕ್ಷ ರೂ. ಸಂಬಳ - ಇದೊಂದು ಕ್ವಾಲಿಫಿಕೇಷನ್​ ಇದ್ರೆ ಸಾಕು ನೋಡಿ

ಮುಖೇಶ್ ಅಂಬಾನಿ ಮನೆಯಲ್ಲಿ ರೊಟ್ಟಿ ಮಾಡುವ ಬಾಣಸಿಗನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳವಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅತಿಥಿಗಳಿಗಾಗಿ ದಿನಕ್ಕೆ ಸುಮಾರು 4,000 ರೊಟ್ಟಿಗಳನ್ನು ತಯಾರಿಸುವುದೇ ಈ ಭಾರೀ ಸಂಬಳಕ್ಕೆ ಕಾರಣವಾಗಿದೆ.
Read Full Story

05:56 PM (IST) Apr 12

'ಬಾವ ಮಾತ್ರ ಅಲ್ಲ, ನನ್ನ ನಿಜವಾದ ಅಣ್ಣ'.. ವಿಜಯ್ ದೇವರಕೊಂಡಗೆ 'ಬ್ರದರ್' ಸ್ಥಾನ ನೀಡಿದ ರಶ್ಮಿಕಾ ತಂಗಿ ಶಿಮನ್!

ವಿಜಯ್ ದೇವರಕೊಂಡ ಅವರನ್ನು ಕಂಡರೆ ಶಿಮನ್‌ಗೆ ಎಲ್ಲಿಲ್ಲದ ಪ್ರೀತಿ. ‘ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ನನ್ನ ಬ್ರದರ್-ಇನ್-ಲಾ (ಬಾವ). ಆದರೆ ಅವರು ನನಗೆ ನನ್ನ ಸ್ವಂತ ಅಣ್ಣನಂತೆಯೇ ಕಾಣುತ್ತಾರೆ. ನಿಮ್ಮಂತಹ ಒಬ್ಬ ಅಣ್ಣನನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು. ನೀವು ಬರಿ ಬಾವ ಅಲ್ಲ, ನನ್ನ ನಿಜವಾದ ಅಣ್ಣ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story

05:44 PM (IST) Apr 12

ಆಶಾ ಭೋಸ್ಲೆ ಎಂಬ ನಿರ್ಭಿಡೆಯ ಅದ್ಭುತ ಗಾಯಕಿ - ತನ್ನದೇ ಶೈಲಿಯಲ್ಲಿ ಬದುಕಿದ ಗಾನ ಗಂಧರ್ವಿ!

“ದುನಿಯಾ ನೇ ಹಮ್ ಕೋ ದಿಯಾ ಕ್ಯಾ ?…. ದುನಿಯಾ ಸೇ ಹಮ್ ನೇ ಲಿಯಾ ಕ್ಯಾ ? ಹಮ್ ಸಬ್ ಕಿ ಪರವಾ ಕರೇ ಕ್ಯೂ ? ಸಬನೆ ಹಮರಾ ಕೀಯಾ ಕ್ಯಾ ???? (ಈ ಜಗತ್ತು ನನಗೇನು ಕೊಟ್ಟಿದೆ? ಈ ಜಗತ್ತಿನಿಂದ ನಾನೇನು ಪಡೆದೆ?

Read Full Story

05:21 PM (IST) Apr 12

ವಿಜಯ್ ಜನ ನಾಯಗನ್ ಸಿನಿಮಾ ಸೀನ್‌ ಲೀಕ್‌ - ಬೇಸರದಿಂದ ನಟಿ ಮಮಿತಾ ಬೈಜು ಹೇಳಿದ್ದೇನು?

ರಾಜಕೀಯಕ್ಕೆ ಬರುವ ಮುನ್ನ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ 'ಜನ ನಾಯಗನ್' ರಿಲೀಸ್ ತಡವಾಗಿದೆ. ಇದರ ನಡುವೆಯೇ ಸಿನಿಮಾದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.

Read Full Story

05:08 PM (IST) Apr 12

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು - ನಟಿ ಐಶ್ವರ್ಯಾ ಭಾಸ್ಕರನ್ ನೋವಿನ ಮಾತು

ತಮ್ಮ ಮೆನೋಪಾಸ್ ದಿನಗಳಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ನಟಿ ಐಶ್ವರ್ಯಾ ಭಾಸ್ಕರನ್ ಮುಕ್ತವಾಗಿ ಮಾತನಾಡಿದ್ದಾರೆ. ಆ ದಿನಗಳು ಒಂದು ರೀತಿ ಟ್ರಾಮಾ ಆಗಿತ್ತು ಎಂದಿದ್ದಾರೆ.

Read Full Story

04:49 PM (IST) Apr 12

'ಅದು ತಿಳಿದೇ ನಡೆದಿದ್ದು' - ನಟಿ ಮಂಜು ವಾರಿಯರ್‌ಗೆ ಬಲವಂತವಾಗಿ ಮುತ್ತಿಟ್ಟ ಅಭಿಮಾನಿ ಹೇಳಿದ್ದೇನು?

ನಟಿ ಮಂಜು ವಾರಿಯರ್‌ ಅವರಿಗೆ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ಬಲವಂತವಾಗಿ ಮುತ್ತಿಟ್ಟ ಘಟನೆ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Read Full Story

04:37 PM (IST) Apr 12

Asha Bhosle Networth - ಪ್ರಸಿದ್ಧ ಗಾಯಕಿ ಮಾತ್ರವಲ್ಲ ವಿದೇಶದಲ್ಲಿ ಯಶಸ್ವಿ ಉದ್ಯಮಿಯೂ ಹೌದು! ನಿವ್ವಳ ಆಸ್ತಿ ಎಷ್ಟು?

92ನೇ ವಯಸ್ಸಿನಲ್ಲಿ ನಿಧನರಾದ ಗಾಯಕಿ ಆಶಾ ಭೋಸ್ಲೆ, ಎಂಟು ದಶಕಗಳ ಸಂಗೀತ ಪಯಣದಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಗಾಯನ, ಜಾಗತಿಕ ಸಂಗೀತ ಕಚೇರಿಗಳು, 'ಆಶಾ'ಸ್' ರೆಸ್ಟೋರೆಂಟ್ ಸರಣಿ ಮತ್ತು ರಿಯಲ್ ಎಸ್ಟೇಟ್ ಮೂಲಕ ಅವರು ಸುಮಾರು 250 ಕೋಟಿ ರೂಪಾಯಿಗಳಷ್ಟು ಅಪಾರ ಸಂಪತ್ತನ್ನು ಗಳಿಸಿದ್ದರು.
Read Full Story

04:31 PM (IST) Apr 12

ಹೊಸ ನಾಟಕಕ್ಕೂ ಮುನ್ನ ಖಾಲಿ ಆಡಿಟೋರಿಯಂನಲ್ಲಿ ಅನುಪಮ್ ಖೇರ್ - ಏನಿದು 'ಸ್ಟ್ರೇಂಜ್/ಸ್ಕ್ಯಾರಿ' ಫೀಲಿಂಗ್?

ತಮ್ಮ ಹೊಸ ನಾಟಕ 'ಜಾನೆ ಪೆಹಚಾನೆ ಅಂಜಾನೆ'ಯ ವರ್ಲ್ಡ್ ಪ್ರೀಮಿಯರ್‌ಗೆ ಒಂದು ದಿನ ಮುಂಚೆ, ನಟ ಅನುಪಮ್ ಖೇರ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಸಮಯದಲ್ಲಿ ತಮಗಾಗುತ್ತಿರುವ ಭಾವನೆಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ.

Read Full Story

04:17 PM (IST) Apr 12

ಅನಂತ್ ಅಂಬಾನಿ ಬರ್ತ್‌ಡೇ - 'ಬಬಮ್ ಬಮ್' ಹಾಡಿಗೆ ಶಾರುಖ್, ಸಲ್ಮಾನ್ ಭರ್ಜರಿ ಡ್ಯಾನ್ಸ್! ವಿಡಿಯೋ ವೈರಲ್

ಅನಂತ್ ಅಂಬಾನಿ ತಮ್ಮ ಹುಟ್ಟುಹಬ್ಬವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಈ ಪಾರ್ಟಿಗೆ ಬಾಲಿವುಡ್‌ನ ದೊಡ್ಡ ತಾರೆಯರ ದಂಡೇ ಆಗಮಿಸಿತ್ತು. ಈ ಸಂಭ್ರಮದ ಕ್ಷಣಗಳು ವೈರಲ್ ಆಗಿವೆ.

Read Full Story

04:16 PM (IST) Apr 12

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗುತ್ತಿದೆ. ಇದರ ನಡುವೆ ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದಿದೆ

Read Full Story

04:15 PM (IST) Apr 12

ಇಡ್ಲಿ, ದೋಸೆ ಹುಟ್ಟಿದ್ದೇ ಕರ್ನಾಟಕದಲ್ಲಿ - 3-9ನೇ ಶತಮಾನದ ಪುಸ್ತಕದಲ್ಲಿರೋ ರೋಚಕ ಸ್ಟೋರಿ ಕೇಳಿ

ಇಡ್ಲಿ ಮತ್ತು ದೋಸೆ ಇಂಡೋನೇಷ್ಯಾದಿಂದ ಬಂದ ತಿನಿಸುಗಳಲ್ಲ, ಬದಲಿಗೆ ಇವುಗಳ ತವರು ನಮ್ಮ ಕರ್ನಾಟಕ. 9ನೇ ಶತಮಾನದ 'ವಡ್ಡಾರಾಧನೆ'ಯಲ್ಲಿ ಇಡ್ಲಿಯ ಉಲ್ಲೇಖವಿದ್ದರೆ, 3ನೇ ಶತಮಾನದ 'ಮಾನಸೋಲ್ಲಾಸ' ಕೃತಿಯಲ್ಲಿ ದೋಸೆಯ ಬಗ್ಗೆ ಹೇಳಲಾಗಿದೆ. ಜೊತೆಗೆ, ಉಪ್ಪಿಟ್ಟಿನ ಹುಟ್ಟಿನ ಹಿಂದಿರುವ ವಿಭಿನ್ನ ಇತಿಹಾಸವನ್ನೂ ಈ ಲೇಖನ ವಿವರಿಸುತ್ತದೆ.
Read Full Story

04:07 PM (IST) Apr 12

ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್ - ವಿಜಯ್ 'ಜನ ನಾಯಕನ್' ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ!

ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲದೆ, ರಜನಿಕಾಂತ್, ಕಮಲ್ ಹಾಸನ್, ಸೂರ್ಯ ಮತ್ತು ಚಿರಂಜೀವಿ ಅವರಂತಹ ದಿಗ್ಗಜ ನಟರು ಕೂಡ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ಅನಧಿಕೃತವಾಗಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ.

Read Full Story

03:49 PM (IST) Apr 12

ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ - ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು

ಭಾರತೀಯರ ಮನೆಗಳು ಮತ್ತು ದೇಗುಲಗಳಲ್ಲಿ ಸುಮಾರು 50 ಸಾವಿರ ಟನ್ ಚಿನ್ನವಿದ್ದು, ಇದರ ಮೌಲ್ಯ 830 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಈ ಅಪಾರ ಸಂಪತ್ತು ವಿಶ್ವದ ಹಲವು ದೇಶಗಳ ಜಿಡಿಪಿಗಿಂತ ಹೆಚ್ಚಾಗಿದೆ.

Read Full Story

03:39 PM (IST) Apr 12

Post Office Scheme - ದಿನಕ್ಕೆ ₹300 ಉಳಿಸಿ, 10 ವರ್ಷದಲ್ಲಿ ₹15 ಲಕ್ಷ ನಿಮ್ಮದಾಗಿಸಿಕೊಳ್ಳಿ!

ಇತ್ತೀಚೆಗೆ ಹಣ ಉಳಿತಾಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರದ ಸಂಸ್ಥೆಗಳು ಹಲವು ಉತ್ತಮ ಯೋಜನೆಗಳನ್ನು ತರುತ್ತಿವೆ. ಅಂತಹ ಯೋಜನೆಗಳಲ್ಲಿ ಪೋಸ್ಟ್ ಆಫೀಸ್‌ನ ರೆಕರಿಂಗ್ ಡೆಪಾಸಿಟ್ (RD) ಸ್ಕೀಮ್ ಕೂಡ ಒಂದು.

 

Read Full Story

03:16 PM (IST) Apr 12

ಡಾ.ರಾಜ್ ಕುಮಾರ್ ಸಿನಿಮಾ ಸೇರಿ ಕನ್ನಡ ಸಿನಿಮಾಗಳಲ್ಲಿ ಜಮಮನಗೆದ್ದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್

ಡಾ.ರಾಜ್ ಕುಮಾರ್ ಸಿನಿಮಾ ಸೇರಿ ಕನ್ನಡ ಸಿನಿಮಾಗಳಲ್ಲಿ ಜಮಮನಗೆದ್ದ ಆಶಾ ಭೋಸ್ಲೆ, ಇಲ್ಲಿದೆ ಲಿಸ್ಟ್, ಸ್ಯಾಂಡಲ್‌ವುಡ್‌ನಲ್ಲಿ ಆಶಾ ಭೋಸ್ಲೆ ಮೋಡಿ ಮಾಡಿದ್ದಾರೆ. ಕನ್ನಡಿಗರ ಮನಗೆದ್ದ ಹಾಡುಗಳು ಯಾವುದು

 

Read Full Story

03:11 PM (IST) Apr 12

ಆಶಾ ಪ್ರೇಮಿ ಜತೆ ಓಡಿ ಹೋಗಿದ್ದಕ್ಕೆ ವರ್ಷಗಳ ಕಾಲ ಸಿಟ್ಟಾಗಿದ್ದ ಲತಾ ಮಂಗೇಶ್ಕರ್, ಮುಖ ನೋಡದೆ ಒಟ್ಟಿಗೆ ಹಾಡಿದ ಸಹೋದರಿಯರು!

ಸಂಗೀತ ದಿಗ್ಗಜರಾದ ಆಶಾ ಭೋಸ್ಲೆ ಮತ್ತು ಲತಾ ಮಂಗೇಶ್ಕರ್ ಅವರ ಸಹೋದರ ಸಂಬಂಧದ ಅಪರೂಪದ ಕಥೆಯನ್ನು ಈ ಲೇಖನ ವಿವರಿಸುತ್ತದೆ. ಬಾಲ್ಯದ ಆತ್ಮೀಯತೆ, ಮದುವೆಯಿಂದ ಉಂಟಾದ ಬಿರುಕು, ಸಂಗೀತ ಕ್ಷೇತ್ರದ ಪೈಪೋಟಿ ಮತ್ತು ಕೊನೆಗೆ ಗಟ್ಟಿಗೊಂಡ ಬಾಂಧವ್ಯದ ಕುರಿತು ಇದು ಬೆಳಕು ಚೆಲ್ಲುತ್ತದೆ.
Read Full Story

03:01 PM (IST) Apr 12

ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ - ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ - ವೀಡಿಯೋ

ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ತಂದೆಯೊಬ್ಬ ತನ್ನ ಪುಟ್ಟ ಮಗನನ್ನು ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರುವಂತೆ ಪ್ರೇರೇಪಿಸಿದ್ದಾನೆ. ಅಪ್ಪನ ಮೇಲೆ ನಂಬಿಕೆಯಿಟ್ಟು ಮಗು ಕೆಳಗೆ ಹಾರಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

02:45 PM (IST) Apr 12

ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ

ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದ ಗಾಯಕಿ, ಆಶಾ ಭೋಸ್ಲೆ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಅಶಾ ಭೋಸ್ಲೆ ಜೊತೆ ನಡೆಸಿದ ಮಾತುಕತೆಗಳನ್ನು ನೆನಪಿಸಿಕೊಂಡಿದ್ದಾರೆ.

 

Read Full Story

02:40 PM (IST) Apr 12

16 ವಯಸ್ಸಿಗೆ ಓಡಿ ಹೋಗಿ ಮದುವೆಯಾದ ಆಶಾ ಭೋಸ್ಲೆ ವಿಚ್ಚೇದನ, ಅಫೇರ್, ಎರಡನೇ ಮದುವೆ, ಮಕ್ಕಳ ಸಾವು! ಗಾಯಕಿಯ ಆ ದಿನಗಳು

92ನೇ ವಯಸ್ಸಿಗೆ ನಿಧನರಾದ ಗಾಯಕಿ ಆಶಾ ಭೋಸ್ಲೆ ಅವರ ಜೀವನವು ಏರುಪೇರುಗಳಿಂದ ಕೂಡಿತ್ತು. ಎರಡು ಮದುವೆ, ಒಂದು ಪ್ರೇಮ ಸಂಬಂಧ, ಹಾಗೂ ಇಬ್ಬರು ಮಕ್ಕಳ ಅಕಾಲಿಕ ಮರಣದಂತಹ ವೈಯಕ್ತಿಕ ಸಂಕಷ್ಟಗಳ ನಡುವೆಯೂ, ಅವರು ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.
Read Full Story

02:40 PM (IST) Apr 12

ಆಶಾ ಭೋಸ್ಲೆ ಹೆಸರಿನಲ್ಲಿರೋ ಗಿನ್ನೆಸ್ ದಾಖಲೆ ಕೇಳಿದ್ರೆ ನಿಜಕ್ಕೂ ಭಾರತೀಯರಿಗೆ ಹೆಮ್ಮೆ ಆಗುತ್ತೆ!

92ನೇ ವಯಸ್ಸಿನಲ್ಲಿ ಆಶಾ ಭೋಸ್ಲೆ ಅವರ ನಿಧನವು ಒಂದು ಅಸಾಧಾರಣ ಸಂಗೀತ ಪಯಣದ ಅಂತ್ಯವನ್ನು ಸೂಚಿಸುತ್ತದೆ. ತಲೆಮಾರುಗಳನ್ನೇ ತನ್ನ ಕಂಠದಿಂದ ಮೋಡಿ ಮಾಡಿದ ಅವರು, ಬಹುಮುಖ ಪ್ರತಿಭೆ, ಉತ್ಸಾಹ ಮತ್ತು ಸಾರ್ವಕಾಲಿಕ ಹಾಡುಗಳ ಸಾಟಿಯಿಲ್ಲದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ.
Read Full Story

01:52 PM (IST) Apr 12

ನೋವಿನಲ್ಲೇ ಕಳೆದ ಮೊದಲ ಮದುವೆ ದಿನಗಳ ಬಗ್ಗೆ ಆಶಾ ದೀದಿ ಹೀಗೆ ಹೇಳಿದ್ರು

ಖ್ಯಾತ ಗಾಯಕಿ ಆಶಾ ಭೋಸ್ಲೆ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಅದ್ಭುತ ಸಂಗೀತದ ಮೂಲಕ ಅಚ್ಚಳಿಯದ ಪರಂಪರೆ ಬಿಟ್ಟು ಹೋಗಿದ್ದಾರೆ. ಒಮ್ಮೆ ತಮ್ಮ ನೋವಿನ ಮೊದಲ ಮದುವೆ ಬಗ್ಗೆ ಅವರು ಹೇಳಿಕೊಂಡಿದ್ದರು.

Read Full Story

01:37 PM (IST) Apr 12

ಸಂಗೀತ ಲೋಕದ ಆಶಾಕಿರಣ ಅಸ್ತಂಗತ, ಆಶಾ ಭೋಸ್ಲೆ ಯಾರು? ವೈಯಕ್ತಿಕ ಜೀವನ, ಸಾಧನೆ, ಲೆಕ್ಕವಿಲ್ಲದ ಪ್ರಶಸ್ತಿ!

ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಂಟು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಅವರು, ಪದ್ಮ ವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
Read Full Story

01:05 PM (IST) Apr 12

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಆಸ್ಪತ್ರೆ ದಾಖಲಾಗಿದ್ದ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಆಶಾ ಭೋಸ್ಲೆ ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

Read Full Story

12:34 PM (IST) Apr 12

ಟ್ರಿಸ್ಟಿನ್ ಸ್ಟಬ್ಸ್‌ಗೆ ಗ್ಲೌಸ್ ಬದಲಿಸಲು ಅಂಪೈರ್ ಬಿಡಲಿಲ್ಲ ಯಾಕೆ? ಐಪಿಎಲ್ ನಿಯಮ ಏನು ಹೇಳುತ್ತೆ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಬಹಳ ರೋಚಕವಾಗಿತ್ತು. ಈ ಪಂದ್ಯದ ವೇಳೆ ಐಪಿಎಲ್‌ನ ಒಂದು ಕುತೂಹಲಕಾರಿ ನಿಯಮದ ಬಗ್ಗೆ ಚರ್ಚೆ ಶುರುವಾಗಿದೆ.
Read Full Story

12:26 PM (IST) Apr 12

US-Iran Talks - ಮುರಿದುಬಿದ್ದ ಮಾತುಕತೆ; ವಿಶ್ವದ ಆರ್ಥಿಕತೆಗೆ ಕಾದಿದೆಯಾ ದೊಡ್ಡ ಕಂಟಕ?

ಅಮೆರಿಕ ಮತ್ತು ಇರಾನ್ ನಡುವಿನ 'ಇಸ್ಲಾಮಾಬಾದ್ ಮಾತುಕತೆ' ವಿಫಲಗೊಂಡಿದ್ದು, ಜಾಗತಿಕ ಆರ್ಥಿಕ ದುರಂತದ ಭೀತಿ ಎದುರಾಗಿದೆ. ತಜ್ಞ ರಾಬಿಂದರ್ ಸಚ್‌ದೇವ್ ಪ್ರಕಾರ, 'ಎರಡೂ ದೇಶಗಳು ಕಠಿಣ ನಿಲುವು ತಳೆದಿವೆ'. ಇದು ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಯುದ್ಧದ ಸಾಧ್ಯತೆಯನ್ನೂ ಹೆಚ್ಚಿಸಿದೆ.
Read Full Story

12:05 PM (IST) Apr 12

Udit Raj - ಇಸ್ಲಾಮಾಬಾದ್ ಮಾತುಕತೆ ವಿಫಲ, ಯುದ್ಧ ಶುರುವಾಗಬಹುದು ಎಂದು ಎಚ್ಚರಿಸಿದ ಕಾಂಗ್ರೆಸ್ ನಾಯಕ!

ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುರಿದುಬಿದ್ದಿದೆ. ಇದರಿಂದ ಜಾಗತಿಕವಾಗಿ ಗಂಭೀರ ಪರಿಣಾಮಗಳಾಗಬಹುದು ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಎಚ್ಚರಿಸಿದ್ದಾರೆ. ಪಾಕಿಸ್ತಾನದ ಈ ನಡೆ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದೂ ಅವರು ಟೀಕಿಸಿದ್ದಾರೆ. 2\

Read Full Story

11:53 AM (IST) Apr 12

ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ

ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ, ಅತೀ ವೇಗದಲ್ಲಿದ್ದ ಬಸ್, ಎದುರಿನಿಂದ ಬಂದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

 

Read Full Story

11:25 AM (IST) Apr 12

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು

ಮದುವೆ ಮರುದಿನವೇ ಭೀಕರ ಅಪಘಾತ, ನವ ಜೋಡಿ ಸೇರಿ ಕುಟುಂಬದ ನಾಲ್ವರ ದುರಂತ ಸಾವು, ಮದುವೆ ಮರು ದಿನ ಮನೆಗೆ ತೆರಳುವಾಗ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದುರಂತ ಅಂದರೆ ಈ ಮಡಿದವ ನಾಲ್ವರ ಪೈಕಿ ಸಂಬಂಧಿಗೆ ಇನ್ನೆರಡೇ ದಿನದಲ್ಲಿ ಎಂಗೇಜ್‌ಮೆಂಟ್ ನಡೆಯಬೇಕಿತ್ತು.

Read Full Story

11:24 AM (IST) Apr 12

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು

US-Iran peace talks Islamabad: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ನಡೆಸುತ್ತಿವೆ.ಈ ಮಾತುಕತೆಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಅಮೆರಿಕಾದ ಎಫ್-16 ವಿಮಾನಗಳು ಬೆಂಗಾವಲು ಒದಗಿಸಿದ ವೀಡಿಯೋಗಳು ವೈರಲ್ ಆಗಿವೆ.

Read Full Story

10:52 AM (IST) Apr 12

15ರ ಹುಡುಗನಿಗೆ ಈ ರೇಂಜ್‌ಗೆ ಸಂಬಳಾನ? ವೈಭವ್ ಸೂರ್ಯವಂಶಿ ಕಳೆದ 4 ಮ್ಯಾಚ್‌ಗಳಿಂದ ಗಳಿಸಿದ ದುಡ್ಡು ಎಷ್ಟು?

ಐಪಿಎಲ್ 2026ರಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಸುದ್ದಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಇವರು, ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧ ಆಡಿದ ಇನ್ನಿಂಗ್ಸ್ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

Read Full Story

09:19 AM (IST) Apr 12

ಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ

ಕಳೆದ ವರ್ಷದ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು 13,000 ಸೈನಿಕರು ಮತ್ತು ಯುದ್ಧ ವಿಮಾನಗಳನ್ನು ಒಳಗೊಂಡ ಮಿಲಿಟರಿ ತುಕಡಿಯನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ಈ ನಿಯೋಜನೆಯು ಉಭಯ ದೇಶಗಳ ನಡುವಿನ ಜಂಟಿ ಮಿಲಿಟರಿ ಸಹಕಾರ ಮತ್ತು ರಕ್ಷಣಾ ಬಲವರ್ಧನೆಯ ಉದ್ದೇಶವನ್ನು ಹೊಂದಿದೆ.
Read Full Story

More Trending News