ಕಟಿಹಾರದಲ್ಲಿ ಪ್ರಯಾಣಿಕರ ಬಸ್ ಭೀಕರ ಅಪಘಾತ, 10 ಸಾವು, 25 ಮಂದಿಗೆ ಗಂಭೀರ ಗಾಯ, ಅತೀ ವೇಗದಲ್ಲಿದ್ದ ಬಸ್, ಎದುರಿನಿಂದ ಬಂದ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 

ಪಾಟ್ನಾ (ಏ.12) ಪ್ರಯಾಣಿಕರ ಬಸ್ ಹಾಗೂ ಪಿಕ್ ಅಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಪ್ರಯಾಣಿಕರು ಮೃತಪಟ್ಟ ಘಟನೆ ನಡೆದಿದೆ. ಅತೀ ವೇಗದಿಂದ ಬಂದ ಬಸ್, ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿದೆ. ಭಾರಿ ಶಬ್ದ ಕೇಳಿಸದ ಕಾರಣ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. 10 ಮಂದಿ ಸ್ಥಳಕ್ಕೆ ಮೃತಪಟ್ಟರೆ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಲ ಘಟನೆ ಬಿಹಾರದ ಕಟಿಹಾರ್‌ನಲ್ಲಿ ಸಂಭವಿಸಿದೆ. ಕೊರ್ಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಅತೀ ವೇಗದ ಕಾರಣ ಅಪಘಾತ

ರಾಷ್ಟ್ರೀಯ ಹೆದ್ದಾರಿ 31ರಲ್ಲಿ ಅತೀ ವೇಗವಾಗಿ ಬಸ್ ಪ್ರಯಾಣಿಕರ ಹೊತ್ತು ಸಾಗಿತ್ತು. ಬಸ್ ವೇಗವಾಗಿದ್ದ ಕಾರಣ ಬಾಸಗಡ ಚೌಕ್ ಬಳಿಯ ಸಣ್ಣ ತಿರುವಿನಲ್ಲಿ ಬಸ್ ರಸ್ತೆಯ ಎಡಭಾಗದಲ್ಲಿ ಟರ್ನ್ ಮಾಡಲು ಸಾಧ್ಯವಾಗಲಿಲ್ಲ. ಅತೀ ವೇಗದ ಕಾರಣ ಬಸ್ ಬಲಭಾಗಕ್ಕೆ ತೆರಳಿದೆ. ಎದುರಿನಿಂದ ತಮ್ಮ ಪಾಡಿಗೆ ಬರುತ್ತಿದ್ದ ಪಿಕ್ ಅಪ್ ವಾಹನಕ್ಕೆ ಬಸ್ ಡಿಕ್ಕಿಯಾಗಿದೆ. ಬಸ್ ವೇಗವಾಗಿದ್ದ ಕಾರಣ ಅಪಘಾತದ ತೀವ್ರತೆ ಹೆಚ್ಚಾಗಿದೆ. ಅಪಘಾತದ ಶಬ್ದ ಸ್ಖಳೀಯ ಗ್ರಾಮಗಳಿಗೆ ಕೇಳಿಸಿದೆ. ಹೀಗಾಗಿ ಗ್ರಾಮಸ್ಥರು ಹೆದ್ದಾರಿ ಬಳಿ ಓಡಿ ಬಂದಿದ್ದಾರೆ.

ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸ್ಥಳೀಯ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೊರ್ಹಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಪಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ರಕ್ಷಣಾ ಕಾರ್ಯಾಚರಣೆ ಮೂಲಕ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕೆಲ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಸ್ ಚಾಲಕ ಅತೀ ವೇಗವಾಗಿ ಚಾಲನೆ ಮಾಡಿದ್ದ ಕಾರಣವೇ ಅಪಘಾತ ಸಂಭವಿಸಿದೆ ಎಂದಿದ್ದಾರೆ. ತನಿಖೆ ಆರಂಭಗೊಂಡಿದೆ. ಇತ್ತ ಬಸ್‌ನಲ್ಲಿದ್ದ ಪ್ರಯಾಣಿಕರ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಒಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಹಲವರು ಬಸ್ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೇ ವೇಳೆ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೂ ಆಗ್ರಹಿಸಿದ್ದಾರೆ.

Scroll to load tweet…